ಆಲಮಟ್ಟಿ: ಉದ್ಯಾನದ ಕೂಲಿ ಕಾರ್ಮಿಕರ ಸಮಸ್ಯೆಗೆ ಸಚಿವ ಶಿವಾನಂದ ಪಾಟೀಲ ಸ್ಪಂದಿಸಿದ್ದು, ದೂರವಾಣಿಯ ಮೂಲಕ ಕೆಬಿಜೆಎನ್ ಎಲ್ ಎಂಡಿ ಅವರಿಗೆ ಉದ್ಯಾನ ನಿರ್ಹಣೆಯ ಟೆಂಡರ್ ಮುಂದೂಡಲು ಸೂಚಿಸಿದ್ದು, ವಿಧಾನ ಮಂಡಲ ಅಧಿವೇಶನದ ನಂತರ ಕಾರ್ಮಿಕರ ಸಮಸ್ಯೆಗೆ ಕಾಯಂ ಪರಿಹಾರ ಒದಗಿಸಲಾಗುವ ಭರವಸೆ ನೀಡಿದ್ದಾರೆ.
ಬೆಂಗಳೂರಿಗೆ ತೆರಳಿ ಸಚಿವರಿಗೂ ಧರಣಿನಿರತರು ಗುರುವಾರ ಮನವಿ ಸಲ್ಲಿಸಿದರು.
ಟೆಂಡರ್ ಮುಂದೂಡಿದ ಬಗ್ಗೆ ಧರಣಿ ಸ್ಥಳಕ್ಕೆ ಗುರುವಾರ ಭೇಟಿ ನೀಡಿದ ಸೂಪರಿಂಟೆಂಡಿಂಗ್ ಎಂಜಿನಿಯರ್ ಡಿ. ಬಸವರಾಜ, ಉಪ ಅರಣ್ಯ ಸಂರಕ್ಷಣಾಧಿಕಾರಿ ರಾಜಣ್ಣ ನಾಗಶೆಟ್ಟಿ, ವಲಯ ಅರಣ್ಯಾಧಿಕಾರಿ ಮಹೇಶ ಪಾಟೀಲ ತಿಳಿಸಿ, ಧರಣಿ ಹಿಂಪಡೆಯಲು ಕೋರಿದರು. ನಿಡಗುಂದಿ ಸಿಪಿಐ ಶರಣಗೌಡ ಗೌಡರ ಇದ್ದರು.
ಉದ್ಯಾನದ ನಿರ್ವಹಣೆ ಕಾಮಗಾರಿಯನ್ನು ಟೆಂಡರ್ ಕರೆದಿದ್ದರಿಂದ ಕಳೆದ 22 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದ 300 ಕ್ಕೂ ಅಧಿಕ ಕಾರ್ಮಿಕರು ಕೆಲಸ ಕಳೆದುಕೊಳ್ಳುವ ಭೀತಿ ಆವರಿಸಿತ್ತು. ಹೀಗಾಗಿ ಅವರು ಫೆ. 12 ರಿಂದ ಇಲ್ಲಿಯ ಮುಖ್ಯ ಎಂಜಿನಿಯರ್ ಕಚೇರಿ ಎದುರು ಅಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸುತ್ತಿದ್ದರು.
ಹೀಗಾಗಿ ಧರಣಿಯನ್ನು ತಾತ್ಕಾಲಿಕವಾಗಿ ಹಿಂದಕ್ಕೆ ಪಡೆಯಲಾಗಿದೆ ಎಂದು ಎಐಯುಟಿಯುಸಿಯ ಜಿಲ್ಲಾ ಮುಖಂಡ ಮಲ್ಲಿಕಾರ್ಜುನ ಎಚ್.ಟಿ. ತಿಳಿಸಿದರು.
ದ್ಯಾಮಣ್ಣ ಬಿರಾದಾರ, ಬಸು ಚಲವಾದಿ ವಾಲಿಕಾರ, ಸಂಗಣ್ಣ ಯರನಾಳ ,ಅನಿತಾ ಜಾದವ ಮೀನಾಕ್ಷಿ ರಾಠೋಡ ,ಯಲ್ಲವ್ವ ಮೇಟಿ, ರಮೇಶ ಅಕ್ಕಿ,ಗುರಲಿಂಗಪ್ಪಗೌಡರ,ಮಕಬೂಲ್ ಬಾಗವಾನ ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

