ಬ್ರಹ್ಮದೇವನಮಡು: ಖಾಸಗಿ ಶಾಲೆಗಳ ಹಾವಳಿ ಹೆಚ್ಚಾಗಿನಿಂದ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಹಾಜರಾತಿ ಕಡಿಮೆಯಾಗಿ ರಾಜ್ಯದಲ್ಲಿ ಸುಮಾರು ೨೮೦೦ ಸರಕಾರಿ ಶಾಲೆಗಳು ಸಂಪೂರ್ಣವಾಗಿ ಮುಚ್ಚುವ ಹಂತ ತಲುಪಿದೆ, ಜಿಲ್ಲಾ ಶಿಕ್ಷಣ ಅಧಿಕಾರಿಗಳು ಅನಧಿಕೃತ ಕೋಚಿಂಗ್ ಶಾಲೆಗಳನ್ನು ಮುಚ್ಚಿಸಲು ಮುಂದಾಗದೆ ಇದ್ದಲ್ಲಿ ಉಗ್ರ ಹೋರಾಟ ಕೈಗೊಳ್ಳುವುದು ಅನಿವಾರ್ಯವಾಗುತ್ತದೆ ಎಂದು ದಲಿತ ಯುವ ಮುಖಂಡ ಪಿಂಟು ಹೊಸಮನಿ ಎಚ್ಚರಿಕೆ ನೀಡಿದ್ದಾರೆ.
ಈ ಕುರಿತು ಗುರುವಾರ ಪತ್ರಿಕಾ ಹೇಳಿಕೆ ನೀಡಿರುವ ಅವರು, ಸಾಸಾಬಾಳ ಎಚ್.ಎಸ್ .ಪಿ ಶಾಲೆಯಲ್ಲಿ ಸುಮಾರು ಎರಡು ನೂರು ವಿದ್ಯಾರ್ಥಿಗಳ ಹಾಜರಾತಿ ಇದ್ದು, ಅದರಲ್ಲಿ ಬಹುತೇಕ ವಿದ್ಯಾರ್ಥಿಗಳು ಗ್ರಾಮದ ಅನಧಿಕೃತ ಕೋಚಿಂಗ್ ಸೆಂಟರೊಂದರಲ್ಲಿ ಓದುತ್ತಿದ್ದಾರೆ ವಿದ್ಯಾರ್ಥಿಗಳು ಸರಕಾರದ ಮೂಲ ಸೌಕರ್ಯದಿಂದ ವಂಚಿತರಾಗುತ್ತಿದ್ದಾರೆ. ಕೂಡಲೇ ಕೋಚಿಂಗ್ ಸೆಂಟರ್ ಬಂದ ಮಾಡಿಸಿ ಸರಕಾರಿ ಶಾಲೆಗಳು ಬೆಳೆಯಲು ಕೈ ಜೋಡಿಸಿ ಎಂದು ತಾಲೂಕ ಶಿಕ್ಷಣ ಅಧಿಕಾರಿಗಳಿಗೆ ಮನವಿ ಮಾಡಿದರೂ ಪ್ರಯೋಜನೆಯಾಗಿಲ್ಲ. ಕೂಡಲೆ ಡಿ ಡಿ ಪಿ ಐ ಅವರು ಮುತುವರ್ಜಿ ವಹಿಸಿ ಅನಧಿಕೃತ ಕೋಚಿಂಗ್ ಸೆಂಟರಗಳನ್ನು ಬಂದ ಮಾಡಿಸಬೇಕು ಎಂದು ಆಗ್ರಹಿಸಿದ್ದಾರೆ.
ಮಕ್ಕಳ ಹಾಜರಿಯು ಕೇವಲ ಪುಸ್ತಕದಲ್ಲಿ ಸೀಮಿತವಾಗಿ ಖಾಸಗಿ ಕೋಚಿಂಗ ಸೆಂಟರನಲ್ಲಿ ಶಿಕ್ಷಣ ಪಡೆಯುತ್ತಿದ್ದರಿಂದ ಸರಕಾರದ ಬಿಸಿ ಊಟ ಸೇರಿದಂತೆ ದಿನಸಿ ವಸ್ತುಗಳು ದುರುಪಯೋಗವಾಗುತ್ತಿವೆ. ಸಾಸಾಬಾಳ ಗ್ರಾಮದಲ್ಲಿ ಅನಧಿಕೃತ ಖಾಸಗಿ ಶಾಲೆ ಬಂದ್ ಮಾಡಿ ಸರಕಾರಿ ಶಾಲೆಗೆ ಪ್ರೋತ್ಸಾಹ ನೀಡದಿದ್ದರೆ ಡಿಡಿಪಿಐ ಕಚೇರಿಯ ಎದುರು ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment

