ಸಿಂದಗಿ: ಸಮಾಜದ ಓರೆ ಕೋರೆಗಳನ್ನು ಬಲ್ಲವರಾಗಿದ್ದ ಸೇವಾಲಾಲ್ ಅವರು ಪ್ರತಿಯೊಂದು ವಿಚಾರವನ್ನು ಸಮರ್ಥವಾಗಿ ವಿಶ್ಲೇಷಣೆ ಮಾಡಿ ಅದರಿಂದಾಗುವ ಅಪಾಯವನ್ನು ಜನರಿಗೆ ತಿಳಿಹೇಳುತ್ತಿದ್ದರು ಎಂದು ತಾಲೂಕು ದಂಡಾಧಿಕಾರಿ ಪ್ರದೀಪಕುಮಾರ ಹಿರೇಮಠ ಹೇಳಿದರು.
ಪಟ್ಟಣದ ತಾಲೂಕು ಆಡಳಿತ ಸೌಧದಲ್ಲಿ ಗುರುವಾರ ಹಮ್ಮಿಕೊಂಡ ಸಂತ ಸೇವಾಲಾಲ್ ಜಯಂತಿ ಅಚರಣೆ ಮಾಡಲಾಯಿತು. ಈ ವೇಳೆ ತಾಲೂಕು ದಂಡಾಧಿಕಾರಿ ಪ್ರದೀಪಕುಮಾರ ಹಿರೇಮಠ ಸಂತ ಸೇವಾಲಾಲ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಈ ವೇಳೆ ಡಾ.ಅನಿಲ ನಾಯಕ್, ಮಾಜಿ ಕಸಾಪ ತಾಲೂಕಾಧ್ಯಕ್ಷ ಚಂದ್ರಶೇಖರ ದೇವರೆಡ್ಡಿ, ಗ್ರೇಡ್ ೨ ತಹಶೀಲ್ದಾರ್ ಇಂದ್ರಾಬಾಯಿ ಬಳಗಾನೂರ, ನಿಖಿಲ ಖಾನಾಪೂರ, ಸುನಂದಾ ಯಂಪುರೆ, ಸೇರಿದಂತೆ ಇತರೆ ಅಧಿಕಾರಿಗಳು, ಸಮಾಜದ ಮುಖಂಡರು ಸೇರಿದಂತೆ ಅನೇಕರು ಇದ್ದರು.
ತಾಲೂಕು ಸಾರ್ವಜನಿಕ ಆಸ್ಪತ್ರೆ: ತಾಲೂಕ ಸಾರ್ವಜನಿಕ ಆಸ್ಪತ್ರೆ ಸಿಂದಗಿಯಲ್ಲಿ ೨೮೫ನೆಯ ಶ್ರೀ ಸಂತ ಸೇವಾಲಾಲರ ಜಯಂತಿ ಆಚರಿಸಲಾಯಿತು.
ಈ ವೇಳೆ ಪ್ರಯೋಗಾಲಯ ತಾಂತ್ರಿಕ ಅಧಿಕಾರಿ ರಾಜಶೇಖರ್ ನರಗೋದಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ದಂತ ವೈದ್ಯ ಡಾ.ರಮೇಶ್ ರಾಠೋಡ ಆಪ್ತಸಮಾಲೋಚಕ ಎಂ.ಪಿ.ಸಾಗರ್ ಶುಶ್ರೂಷಕಿ ಅಧಿಕಾರಿ ವಿದ್ಯಾ ಹಿರೇಪಟ್, ದೇವಮ್ಮ ಕೊಣ್ಣೂರ್, ಭೀಮಾಶಂಕರ, ಆಯುಷ್ ವೈದ್ಯಾಧಿಕಾರಿ ಡಾ.ಮಹಾಂತೇಶ ಹಿರೇಮಠ, ಡಾ.ಮೌನೇಶ ಬಡಿಗೇರ, ರಾಯಣ್ಣ ಸೊನ್ನಳ್ಳಿ, ಡಿ.ಡಿ ಮಾಳಸಿದ್ದ, ಸುರೇಶ್ ಪಾಟೀಲ್, ಆಪ್ತ ಸಮಾಲೋಚಕ ಸಾಯಬಣ್ಣ ಗಣಜಲಿ, ಕ್ಷಯ ರೋಗ ವಿಭಾಗದ ಶಶಿದರ ಕೊಡತ್ತಗಿರಿ, ಅಶೋಕ್ ಕಡಲಗೊಂಡ್, ದುಂಡಪ್ಪ ಕುಂಬಾರ, ಶಂಕರಲಿಂಗ ಮಾನೇಗರ, ಸುನೀಲ ನೇಮಶೆಟ್ಟಿ ಸೇರಿದಂತೆ ಆಸ್ಪತ್ರೆಯ ಸಿಬ್ಬಂದಿಗಳು ಇದ್ದರು.
ಸಾಸಾಬಾಳ ಗ್ರಾಮ: ತಾಲೂಕಿನ ಸಾಸಾಬಾಳ ತಾಂಡಾ ಹಾಗೂ ಡಂಬಳದಲ್ಲಿ ಸಂತ ಸೇವಾಲಾಲ್ ಜಯಂತಿ ಕಾರ್ಯಕ್ರಮವನ್ನು ಆಚರಣೆ ಮಾಡಲಾಯಿತು. ಈ ವೇಳೆ ಸಂತ ಸೇವಾಲಾಲ್ ಮಹಾರಾಜರ ಮೆರವಣಿಗೆ ಹಾಗೂ ಕುಂಭ ಮೇಳ ಜರುಗಿತು. ಸಂತೋಷ ಪಾಟೀಲ ಡಂಬಳ ಸೇರಿದಂತೆ ಗ್ರಾಮದ ಹಿರಿಯರು, ಸಮಾಜದ ಮುಖಂಡರು ಸೇರಿದಂತೆ ಅನೇಕರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

