Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಸಿಂದಗಿ: ಮಹಾವಿದ್ಯಾಲಯದ ಸಭಾಭವನದಲ್ಲಿ ನ.೧೭ ಮತ್ತು ೧೮ರಂದು ಅಂತರ್ ಕಾಲೇಜು ಮಟ್ಟದ್ ಏಕವಲಯ ಕುಸ್ತಿ ಪಂದ್ಯಾವಳಿ ಹಾಗೂ ಆಯ್ಕೆಯ ಪ್ರಕ್ರಿಯೆ ಜರುಗಲಿದೆ ಎಂದು ಕ್ರೀಡಾ ಕೂಟದ ಸಂಘಟನಾ ಕಾರ್ಯದರ್ಶಿ, ದೈಹಿಕ ನಿರ್ದೇಶಕ ಡಾ.ಅಂಬರೀಶ ಬಿರಾದಾರ ತಿಳಿಸಿದರು.ನಗರದ ಸಿ.ಎಂ ಮನಗೂಳಿ ಮಹಾವಿದ್ಯಾಲಯದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳಗಾವಿಯ ರಾಣಿ ಚನ್ಮಮ್ಮ ವಿಶ್ವವಿದ್ಯಾಲಯ ಸಹಯೋಗದಲ್ಲಿ ಸಿ.ಎಮ್. ಮನಗೂಳಿ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಮಹಾವಿದ್ಯಾಲಯದ ವತಿಯಿಂದ ಬಾಗಲಕೋಟ, ಚಿಕ್ಕೋಡಿ, ಬೆಳಗಾವಿ ಹಾಗೂ ವಿಜಯಪುರ ಜಿಲ್ಲೆಗಳು ಸೇರಿ ನಾಲ್ಕು ವಲಯದ ಪುರುಷ ಮತ್ತು ಮಹಿಳೆಯರ ಏಕವಲಯ ಕುಸ್ತಿ ಪಂದ್ಯಾವಳಿ ಜರುಗಲಿದೆ. ಈ ಪಂದ್ಯಾವಳಿಯಲ್ಲಿ ೫೫ ಕೆ.ಜಿ ಯಿಂದ ೧೨೦ ಕೆ.ಜಿ ವರೆಗಿರುವ ೧೫೦ಕ್ಕೂ ಹೆಚ್ಚು ಪುರುಷ ಮತ್ತು ಮಹಿಳಾ ಕ್ರೀಡಾಪಟುಗಳು ಭಾಗವಹಿಸುವ ನಿರಿಕ್ಷೇಯಿದೆ ಎಂದರು.ಈ ವೇಳೆ ಕ್ರೀಡಾ ಕೂಟದ ಸಂಘಟನಾ ಕಾರ್ಯದರ್ಶಿ, ದೈಹಿಕ ನಿರ್ದೇಶಕ ಡಾ.ಅಂಬರೀಶ ಬಿರಾದಾರ ಮಾತನಾಡಿ, ೧೭ರಂದು ನಡೆಯಲಿರುವ ಕಾರ್ಯಕ್ರಮವನ್ನು ಶಾಸಕರು ಹಾಗೂ ಸಂಸ್ಥೆಯ ಅಧ್ಯಕ್ಷರಾದ ಅಶೋಕ ಮನಗೂಳಿ ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು…
ಸಿಂದಗಿ: ಗೋವು ಸಮೃದ್ಧಿಯ ಸಂಕೇತ. ಮನೆಗಳಲ್ಲಿ ಗೋವುಗಳು ಇರುವುದರಿಂದ ನೂರಾರು ರೋಗ ರೂಜಿನಗಳು ದೂರವಾಗುತ್ತವೆ. ಇದು ವೈಜ್ಞಾನಿಕವಾಗಿ ಸತ್ಯವಾಗಿದೆ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.ಪಟ್ಟಣದ ಸಂಗಮೇಶ್ವರ ದೇವಸ್ಥಾನದಲ್ಲಿ ಮಂಗಳವಾರ ತಾಲೂಕು ಆಡಳಿತ ವತಿಯಿಂದ ಹಮ್ಮಿಕೊಂಡಿ ಗೋ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಗೋವಿಗೆ ಆಹಾರವನ್ನುಣಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಗೋವು ಐಶ್ವರ್ಯ ಮತ್ತು ಮೋಕ್ಷದ ಪ್ರತೀಕವಾಗಿದೆ. ಗೋವಿನ ಪೂಜೆ ಅನಾದಿಕಾಲದಿಂದಲೂ ನಮ್ಮ ದೇಶದಲ್ಲಿ ಮಾಡುತ್ತಾ ಬಂದಿದ್ದಾರೆ. ಗೋಪೂಜೆ ಮಾಡುವುದು ನಮ್ಮೆಲ್ಲರ ಕರ್ತವ್ಯವಾಗಬೇಕು. ಗೋವಿನ ದೇಹದಲ್ಲಿ ಅನೇಕ ದೇವತೆಗಳು ವಾಸ ಮಾಡಿರುತ್ತಾರೆ ಎಂಬ ಪ್ರತೀತಿ ಇದೆ. ನಮ್ಮ ಹಿರಿಯರು ಗೋವುಗಳನ್ನ ಸಾಕುವ ಮೂಲಕ ನಮಗೆಲ್ಲ ಒಂದು ಸಂಸ್ಕೃತಿಯನ್ನು ಕಲಿಸಿದ್ದಾರೆ ಆ ಪರಂಪರೆ ಮುಂದುವರೆಯಬೇಕು ಎಂದು ಹೇಳಿದರು.ಈ ವೇಳೆ ತಹಶೀಲ್ದಾರ್ ಪ್ರದೀಪಕುಮಾರ್ ಹಿರೇಮಠ ಮಾತನಾಡಿದರು. ವೇದಿಕೆಯ ಮೇಲೆ ಪಶು ವೈದ್ಯಾಧಿಕಾರಿ ಡಾ. ಮಾರುತಿ ತಡಲಗಿ ಇದ್ದರು.ಕಾರ್ಯಕ್ರಮದಲ್ಲಿ ಎಸ್.ಎಂ ಬಿರಾದಾರ, ರಾಜಶೇಖರ ಹೆಬ್ಬಾಳ ಸೇರಿದಂತೆ ತಾಲೂಕಾಡಳಿತ ಇಲಾಖೆಯ ಸಿಬ್ಬಂದಿಗಳು ಇದ್ದರು.
ಬಸವನಬಾಗೇವಾಡಿ: ಪಟ್ಟಣ ಸೇರಿದಂತೆ ತಾಲೂಕಿನಲ್ಲಿ ಬೆಳಕಿನ ಹಬ್ಬ ದೀಪಾವಳಿಯ ಪಾಡ್ಯ ಆಚರಣೆ ಮಂಗಳವಾರ ಜನರು ಮಾಡುತ್ತಿದ್ದರೆ ಪುರಸಭೆ ಪೌರಕಾರ್ಮಿಕರು ರಸ್ತೆಯ ಬದಿಯಲ್ಲಿ ಬಿದ್ದಿರುವ ಕಸವನ್ನು ಸಂಗ್ರಹಿಸುವ ಕಾಯಕದಲ್ಲಿ ತೊಡಗಿರುವುದು ಕಂಡುಬಂದಿತ್ತು. ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಹೆಚ್ಚು ಕಸ ಸಂಗ್ರಹವಾಗಿದೆ.ಸೋಮವಾರ ಒಂದು ಟ್ರ್ಯಾಕ್ಟರ್ ಬಾಳೆದೆಲೆಯ ಮೂರು ಟನ್ವರೆಗೆ , ಮಂಗಳವಾರ ಒಂದು ಟ್ರ್ಯಾಕ್ಟರ್, ಎರಡು ಟಿಪ್ಪರ್ ಬಾಳೆದಿಂಡು ಸೇರಿ ೧೦ ಟನ್ವರೆಗೆ ಕಸ ಸಂಗ್ರಹವಾಗಿದೆ. ದೀಪಾವಳಿ ಹಬ್ಬದ ಎರಡು ದಿನಗಳಲ್ಲಿ ಅಂದಾಜು ೧೩ ಟನ್ ಕಸ ಸಂಗ್ರಹವಾಗಿದೆ. ನಮ್ಮ ಸಿಬ್ಬಂದಿಗಳು ಸಂಗ್ರಹಿಸಿದ ಕಸವನ್ನು ಘನ್ಯತಾಜ್ಯ ಘಟಕಕ್ಕೆ ತಂದ ನಂತರ ಅದನ್ನು ಹಸಿ,ಒಣ ಕಸ ಎಂದು ಬೇರ್ಪಡಿಸಿ ಅದನ್ನು ಕೊಳೆಯಿಸಿ ಗೊಬ್ಬರ ಮಾಡಲಾಗುತ್ತದೆ. ಬುಧವಾರ ಅಂದಾಜು ಒಂದು ಟ್ಯಾಕ್ಟರನ್, ಮೂರು ಟಿಪ್ಪರ್ ಬಾಳೆದಿಂಡು ಸೇರಿದಂತೆ ೧೫ ಟನ್ ವರೆಗೂ ಕಸ ಸಂಗ್ರಹವಾಗಬಹುದು ಎಂದು ಪುರಸಭೆ ಕಿರಿಯ ಆರೋಗ್ಯ ಸಹಾಯಕ ಮಹೇಶ ಹಿರೇಮಠ ಪತ್ರಿಕೆಗೆ ಮಾಹಿತಿ ನೀಡಿದರು.
ಬಸವನಬಾಗೇವಾಡಿ: ಪಟ್ಟಣ ಸೇರಿದಂತೆ ತಾಲೂಕಿನಲ್ಲಿ ಜನರು ಮಂಗಳವಾರ ಬೆಳಕಿನ ಹಬ್ಬ ದೀಪಾವಳಿಯ ಬಲಿಪಾಡ್ಯ ಹಬ್ಬವನ್ನು ಆಚರಣೆ ಮಾಡಿದರು. ಬೆಳಗ್ಗೆ ಬೇಗನೆ ಎದ್ದು ಸ್ನಾನಾದಿ ಕ್ರಿಯೆಯಾದ ನಂತರ ಪ್ರತಿಯೊಂದು ಮನೆಯಲ್ಲಿ ದೀಪಾವಳಿ ಪಾಡ್ಯದಂದು ಸಂಪ್ರದಾಯದಂತೆ ಸಹೋದರಿಯರು ತಮ್ಮ ಸಹೋದರರಿಗೆ ಆರತಿ ಬೆಳಗಿದರು.ಪಾಡ್ಯ ಪೂಜೆ ನೆರವೇರಿದ ನಂತರ ಮನೆ ಮುಂದೆ ಪಾಂಡವರ ಪೂಜೆ ಮಾಡುವುದು ಹಿಂದಿನಿಂದ ನಡೆದುಕೊಂಡು ಬಂದ ಸಂಪ್ರದಾಯ. ಸಂಪ್ರದಾಯದಂತೆ ಪಟ್ಟಣ ಸೇರಿದಂತೆ ತಾಲೂಕಿನಲ್ಲಿ ಜನರು ತಮ್ಮ ಮನೆಗಳ ಮುಂದೆ ಪಾಂಡವರನ್ನು, ಗುಳ್ಳವ್ವರನ್ನು ಸೆಗಣಿಯಿಂದ ಮಾಡಿದ್ದು ಕಂಡುಬಂದಿತ್ತು. ಪಾಡ್ಯದಿನದಂದು ಜನರು ಕುಟುಂಬ ಸದಸ್ಯರೊಂದಿಗೆ ತಮ್ಮ ಇಷ್ಟದೇವರ ದೇವಸ್ಥಾನಕ್ಕೆ ತೆರಳಿ ದರ್ಶನ ಪಡೆದುಕೊಂಡರು. ವಿವಿಧ ದೇವಸ್ಥಾನಗಳಲ್ಲಿ ಹೆಚ್ಚು ಜನರು ದೇವರ ದರ್ಶನ ಪಡೆದುಕೊಂಡರು.ಪಾಂಡವರು ಅಜ್ಞಾತವಾಸ ಮುಗಿಸಿ ನಂತರ ಬನ್ನಿ ಗಿಡದಲ್ಲಿ ಅಡಗಿಸಿಟ್ಟಿದ್ದ ಆಯುಧಗಳನ್ನು ಪಾಡ್ಯದ ದಿನ ತೆಗೆದುಕೊಂಡು ಬಂದಿದ್ದರ ವಿಜಯೋತ್ಸವದ ಸಂಕೇತವಾಗಿ ಮನೆಯ ಮುಂದೆ ಪಾಡವರು ಕೌರವರನ್ನು ಸಂಹಾರ ಮಾಡಿದ ಚಿತ್ರ ಬಿಂಬಿಸುವಂತೆ ಸಗಣಿಯಿಂದ ಗೊಂಬೆಗಳನ್ನು ಮಾಡಿ ಹೂವುಗಳಿಂದ ಅಲಂಕರಿಸಿ ಪೂಜೆ ಮಾಡಲಾಗುತ್ತಿದೆ ಎಂದು…
ಮುದ್ದೇಬಿಹಾಳ: ಪಟ್ಟಣದ ಮಹೆಬೂಬ ನಗರದಲ್ಲಿರುವ ಸರ್ಕಾರಿ ಉರ್ದು ಪ್ರೌಢ ಶಾಲೆಯಲ್ಲಿ ಪಂಡಿತ್ ಜವಾಹರಲಾಲ್ ನೆಹರು ಅವರ ಜನ್ಮದಿನಾಚರಣೆಯನ್ನು ವಿದ್ಯಾರ್ಥಿಗಳು, ಶಿಕ್ಷಕರು ಕೇಕ್ ಕತ್ತರಿಸುವ ಮೂಲಕ ಆಚರಿಸಿ ಸಂಭ್ರಮಿಸಿದರು.ಈ ವೇಳೆ ಪ್ರಭಾರಿ ಮುಖ್ಯೋಪಾದ್ಯಾಯ ಎ.ಸಿ.ಕೆರೂರ ನೆಹರು ಅವರ ವ್ಯಕ್ತಿತ್ವ ಮತ್ತು ಸಾಧನೆಗಳ ಕುರಿತು ಮಾತನಾಡಿದರು.ಕೆ.ಎಸ್.ಚಟ್ಟಿ, ರೇಣುಕವ್ವ ಎಸ್.ಬಿ, ತಬಸ್ಸುಮ್ ಕಾಜಿ, ತಬಸುಮ್ ನಾಗರಬಾವಡಿ ಸೇರಿದಂತೆ ವಿದ್ಯಾರ್ಥಿಗಳು ಭಾಗಿಯಾಗಿದ್ದರು.ವಿದ್ಯಾರ್ಥಿಗಳಾದ ಹಬೀಬಾ ಮುಲ್ಲಾ, ಫರ್ನಾಜ ಇಲಕಲ್, ಅಲ್ಮಾಸ್ ಗುಡ್ನಾಳ, ಕುಮಾರಿ ಹಪ್ಸಸಾ ಬಿಜ್ಜರಗಿ ನಿರ್ವಹಿಸಿದರು.
ಮುದ್ದೇಬಿಹಾಳ: ಮಕ್ಕಳಿಗೆ ವಿದ್ಯೆ ಎಷ್ಟು ಮುಖ್ಯವೋ ಅದರಷ್ಟೇ ಕ್ರೀಡಾ ಮತ್ತು ಮನರಂಜನೆ ಚಟುವಟಿಕೆ ಕೂಡ ಮುಖ್ಯ ಎಂದು ವಿದ್ಯಾಭಾರತಿ ಶಾಲೆಯ ಸಂಸ್ಥಾಪಕ ಎನ್.ಎಸ್.ಹಿರೇಮಠ ಹೇಳಿದರು.ಪಟ್ಟಣದ ಹುಡ್ಕೋ ಬಡಾವಣೆಯ ಶಿರವಾಳ ಲೇಔಟ ನಲ್ಲಿರುವ ವಿದ್ಯಾಭಾರತಿ ಶಾಲೆಯಲ್ಲಿ ಮಕ್ಕಳ ದಿನಾಚರಣೆಯ ಅಂಗವಾಗಿ ಏರ್ಪಡಿಸಲಾಗಿದ್ದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಕಾರ್ಯಕ್ರಮದಲ್ಲಿ ಸ್ಪರ್ದೆ, ಹಾಡು, ಡಾನ್ಸ್, ಭರತನಾಟ್ಯ, ಡಿಸ್ಕೋ ಚೇರ್, ಕಾಲಾ ಚಸಮಾ, ಲಿಂಬೆಹಣ್ಣು ಚಾಲೆಂಜ್ ಸೇರಿದಂತೆ ಮತ್ತೀತರ ಆಟಗಳು ಮತ್ತು ಮನರಂಜನಾ ಕಾರ್ಯಕ್ರಮಗಳ ಮೂಲಕ ಮಕ್ಕಳ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ವಿವಿಧ ಸ್ಪರ್ದೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ವಿಶೇಷ ಬಹುಮಾನ ನೀಡಿ ಪ್ರೋತ್ಸಾಹಿಸಲಾಯಿತು.ಈ ವೇಳೆ ಶಾಲೆಯ ಎಲ್ಲ ವಿದ್ಯಾರ್ಥಿಗಳು, ಶಿಕ್ಷಕರು ಪಾಲ್ಗೊಂಡು ಸಂಭ್ರಮಿಸಿದರು.
ಮುದ್ದೇಬಿಹಾಳ: ಚಿಕ್ಕ ಮಕ್ಕಳಲ್ಲಿ ಅತಿಸಾರ ಭೇದಿ ಉಂಟಾದಲ್ಲಿ ಪಾಲಕರು ತಪ್ಪದೇ ಓ.ಆರ್.ಎಸ್ ದ್ರಾವಣ ಕುಡಿಸಬೇಕು. ಅತಿಯಾದ ಭೇದಿಯಿಂದ ಬಳಲುವ ಮಕ್ಕಳಿಗೆ ಜಿಂಕ್ ಮಾತ್ರೆ ನೀಡಬೇಕು ಎಂದು ತಾಲೂಕ ಆರೋಗ್ಯ ಅಧಿಕಾರಿ ಡಾ.ಸತೀಶ್ ತಿವಾರಿ ಹೇಳಿದರು.ಪಟ್ಟಣದ ಹೊರಪೇಟೆ ಗಲ್ಲಿಯಲ್ಲಿರುವ ತಾಲೂಕ ಆರೋಗ್ಯ ಅಧಿಕಾರಿಗಳ ಕಾರ್ಯಾಲಯದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆರೋಗ್ಯ ಒಂದು ಸಾಮಾಜಿಕ ಅರಿವಿನ ಆಂದೋಲನವನ್ನಾಗಿಸುವ ಪ್ರಯುಕ್ತ ನಡೆದ ತೀವ್ರ ಅತಿಸಾರ ನಿಯಂತ್ರಣ ಪಾಕ್ಷಿಕ ದರ್ಶಿಕೆ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಎಲ್ಲ ಅಂಗನವಾಡಿ ಕೇಂದ್ರಗಳಲ್ಲಿ, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ, ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಹಾಗೂ ಆಸ್ಪತ್ರೆಗಳಲ್ಲಿ ಓ.ಆರ್.ಎಸ್ ಜಿಂಕ್ ಮಾತ್ರೆಗಳ ಕಾರ್ನರ್ ತೆರೆಯಲಾಗಿದೆ. ನಿಮ್ಮ ಮಕ್ಕಳಲ್ಲಿ ಅತಿಯಾದ ಭೇದಿ ಕಂಡುಬಂದಲ್ಲಿ ಅವಶ್ಯಕವಾಗಿ ಭೇಟಿ ನೀಡಿ ಅತಿಸಾರ ಭೇದಿಯ ರೋಗ ಸ್ಪೋಟವನ್ನು ತಪ್ಪಿಸಿ, ಮನೆಯಲ್ಲಿ ಶುದ್ಧವಾಗಿ ತಯಾರಿಸಿದ ಅಹಾರವನ್ನು ತಿನ್ನಿರಿ, ಬೀದಿ ಬದಿಯ ಅಹಾರವನ್ನು ಸೇವಿಸದಂತೆ ಸಲಹೆ ನೀಡಿದರು.ನಗರ ಆರೋಗ್ಯ ನಿರೀಕ್ಷಣಾಧಿಕಾರಿ ಎಂ.ಎಸ್.ಗೌಡರ ಮಾತನಾಡಿದರು.ಇದೇ ವೇಳೆ ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತರಿಗೆ…
ಮುದ್ದೇಬಿಹಾಳ: ಪಟ್ಟಣದಲ್ಲಿ ಕೆಲವರು ತಮ್ಮ ದ್ವಿಚಕ್ರ ವಾಹನಗಳಿಗೆ ಅತಿಯಾಗಿ ಶಬ್ಧಮಾಡುವ ಸೈಲೆನ್ಸರ್ ಗಳನ್ನು ಅಳವಡಿಸಿ ಜನನಿಬಿಡ ಪ್ರದೇಶಗಳಲ್ಲಿ ವೇಗವಾಗಿ ತಿರುಗಾಡುತ್ತ ಕಿರಿಕಿರಿಯನ್ನುಂಟು ಮಾಡುತ್ತಿದ್ದವರಿಗೆ ಇಲ್ಲಿನ ಪಿಎಸ್‌ಐ ಸಂಜೀವ ತಿಪರೆಡ್ಡಿ ಶಾಕ್ ನೀಡಿದ್ದಾರೆ.ಕಳೆದ ಕೆಲ ದಿನಗಳ ಹಿಂದೆಯೇ ಅತಿಯಾಗಿ ಶಬ್ಧಮಾಡುವ ಸೈಲೆನ್ಸ್ರ್ ಗಳನ್ನು ಕಳಚುವಂತೆ ಮಾಧ್ಯಮದ ಮೂಲಕ ಖಡಕ್ ಸೂಚನೆ ನೀಡಿದ್ದರೂ ಕ್ಯಾರೇ ಎನ್ನದ ದ್ವಿಚಕ್ರವಾಹನ ಸವಾರನೋರ್ವ ಯುವಕನನ್ನು ವಾಹನ ಸಮೇತ ಠಾಣೆಗೆ ತಂದು ಪಾಠ ಕಲಿಸಿ, ಶಬ್ಧಮಾಡುವ ಸೈಲೆನ್ಸ್ರ್ ನ್ನು ಕಳಚಿಸಿ, ದಂಡದ ಬಿಸಿ ಮುಟ್ಟಿಸಿದ್ದಾರೆ.ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇನ್ನೂ ಕೆಲ ಜೋರಾಗಿ ಶಬ್ಧಮಾಡುವ ವಾಹನಗಳು ಅಲ್ಲಲ್ಲಿ ಓಡಾಡುತ್ತಿದ್ದು ನಮ್ಮ ಸಿಬ್ಬಂದಿ ಅವರಿಗಾಗಿ ಶೋಧ ನಡೆಸಿದ್ದಾರೆ. ಆ ವಾಹನಗಳು ಸಿಕ್ಕಲ್ಲಿ ಯಾವ ಪ್ರಭಾವಕ್ಕೂ ಒಳಗಾಗದೇ ಠಾಣೆಗೆ ಕರೆತರುವಂತೆ ಸೂಚಿಸಿದ್ದೇನೆ. ಇನ್ಮುಂದೆ ಬರುವ ವಾಹನಗಳನ್ನು ನೇರವಾಗಿ ನ್ಯಾಯಾಲಯಕ್ಕೇ ಕಳಿಸುವುದಾಗಿ ತಿಳಿಸಿದರು.
ಬರ ಪರಿಸ್ಥಿತಿ ಹಾಗೂ ಬರ ನಿರ್ವಹಣೆ ಕುರಿತ ಸಭೆಯಲ್ಲಿ ಅಧಿಕಾರಿಗಳಿಗೆ ಸಚಿವ ಎಂ.ಬಿ.ಪಾಟೀಲ ಸೂಚನೆ ವಿಜಯಪುರ: ಜಿಲ್ಲೆಯಲ್ಲಿ ಬರ ಪರಿಸ್ಥಿತಿ ಇರುವುದರಿಂದ ಮುಂಬರುವ ದಿನಗಳಿಗೆ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಈಗಿನಿಂದಲೇ ಯೋಜನಾಬದ್ಧವಾಗಿ ಕುಡಿಯುವ ನೀರಿಗೆ ವಿಷಯದಲ್ಲಿ ವ್ಯವಸ್ಥಿತವಾಗಿ ಕರ್ತವ್ಯ ನಿರ್ವಹಿಸುವಂತೆ ಬೃಹತ್ ಮತ್ತು ಮದ್ಯಮ ಕೈಗಾರಿಕೆ ಹಾಗೂ ಮೂಲ ಸೌಲಭ್ಯ ಅಭಿವೃದ್ಧಿ ಸಚಿವರಾದ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಂ.ಬಿ ಪಾಟೀಲ ಅವರು ಅಧಿಕಾರಿಗಳಿಗೆ ಸೂಚಿಸಿದರು.ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಬರ ಪರಿಸ್ಥಿತಿ ಹಾಗೂ ಬರ ನಿರ್ವಹಣೆ ಕುರಿತು ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಈಗಾಗಲೇ ಎಲ್ಲ ತಾಲೂಕುಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕಾಗಿ ತಾಲೂಕು ಮಟ್ಟದಲ್ಲಿ ಟಾಸ್ಕ ಫೋರ್ಸ್ ಸಮಿತಿ ರಚಿಸಿದ್ದು, ಈ ಸಮಿತಿಯು ಕುಡಿಯುವ ನೀರಿನ ಸಮಸ್ಯೆ ಇದ್ದ ಗ್ರಾಮಗಳಲ್ಲಿ ತುರ್ತಾಗಿ ಟ್ಯಾಂಕರ ಮೂಲಕ ಕುಡಿಯುವ ನೀರು ಪೂರೈಸುವಂತೆಯೂ ಹಾಗೂ ಕುಡಿಯುವ ನೀರಿನ ಅಭಾವದ ಪ್ರಮಾಣವನ್ನು ಆದರಿಸಿ ಅಗತ್ಯವಿದ್ದಲ್ಲಿ ಖಾಸಗಿ ಬೋರವೆಲ್‌ಗಳನ್ನು ಗುರುತಿಸಿ…
ಜಿಲ್ಲಾ ಉಸ್ತುವಾರಿ ಸಚಿವರಿಂದ ಬರಪೀಡಿತ ಪ್ರದೇಶಗಳ ವೀಕ್ಷಣೆ-ಪರಿಶೀಲನೆ ವಿಜಯಪುರ: ಬೃಹತ್ ಮತ್ತು ಮದ್ಯಮ ಕೈಗಾರಿಕೆ ಹಾಗೂ ಮೂಲ ಸೌಲಭ್ಯ ಅಭಿವೃದ್ಧಿ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಂ.ಬಿ ಪಾಟೀಲ ಅವರು ಜಿಲ್ಲೆಯ ಬರಪೀಡಿತ ತಾಲೂಕು ವಿಜಯಪುರ, ಇಂಡಿ, ಚಡಚಣ, ದೇವರ ಹಿಪ್ಪರಗಿ, ಮುದ್ದೇಬಿಹಾಳ ಹಾಗೂ ಬಸವನ ಬಾಗೇವಾಡಿ ತಾಲೂಕಿನ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿ ಬರ ನಿರ್ವಹಣೆ ಕುರಿತು ಪರಿಶೀಲನೆ ಹಾಗೂ ಜನ- ಜಾನುವಾರು, ಕುಡಿಯುವ ನೀರು, ಮೇವಿನ ಪರಿಸ್ಥಿತಿ, ನರೇಗಾ ಯೋಜನೆ ಕಾಮಗಾರಿ, ಗ್ರಾಮೀಣ ಪ್ರದೇಶದವರಿಗೆ ಉದ್ಯೋಗ ಸೃಜನೆ ಸೇರಿದಂತೆ ಜಿಲ್ಲೆಯ ಬರ ಪರಿಸ್ಥಿತಿ ಕುರಿತು ವೀಕ್ಷಣೆ ಮಾಡಿ ಪರಿಶೀಲನೆ ನಡೆಸಿದರು.ರೇವಣಸಿದ್ದೇಶ್ವರ ಏತ ನೀರಾವರಿ ಕಾಮಗಾರಿಯ ಮುಳವಾಡ ಎರಡನೇ ಹಂತದ ಏತ ನೀರಾವರಿ ಕಾಮಗಾರಿಯ ತಿಡಗುಂದಿ ಹತ್ತಿರವಿರುವ ೪೮ಕಿ.ಮಿ. ಪ್ರಗತಿಯಲಿರುವ ಜಾಕ್‌ವೆಲ್ ಕಾಮಗಾರಿಯನ್ನು ವೀಕ್ಷಣೆ ಮಾಡಿ ಜಾಕ್‌ವೆಲ್‌ನಿಂದ ೧೯ ಕೆರೆಗಳು ತುಂಬಿ ಹೊರ್ತಿ, ಇಂಚಗೇರಿ, ಜಿಗಜಿವಣಿ, ಗುಂದವಾನ, ಸಾತಲಗಾಂವ್ ಹಾಗೂ ಸುತ್ತಮುತ್ತಲಿನ ಸುಮಾರು ೫೦ ಗ್ರಾಮಗಳಿಗೆ ಕುಡಿಯುವ…
