ದೇವರಹಿಪ್ಪರಗಿ: ಸಮಾಜದ ಕಂದಾಚಾರಗಳನ್ನು ನಿರ್ಭೀತಿಯಿಂದ ತ್ರಿಪದಿಗಳ ರೂಪದಲ್ಲಿ ಕಟುಸತ್ಯವನ್ನು ಟೀಕಿಸಿದ ಕವಿ ಸರ್ವಜ್ಞ ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲೀಕಾರ ಹೇಳಿದರು.
ಪಟ್ಟಣದ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಮಂಗಳವಾರ ಕವಿ ಸರ್ವಜ್ಞನ ಜನ್ಮದಿನಾಚರಣೆ ಅಂಗವಾಗಿ ಸರ್ವಜ್ಞ ಕವಿಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದರು. ಎಲ್ಲವನ್ನು ತಿಳಿದ ಕವಿ ಸರ್ವಜ್ಞ. ಇವರು ವಾಸ್ತವಿಕವಾದಿ ಹಾಗೂ ತತ್ವಜ್ಞಾನಿಯಾಗಿ ಹದಿನಾರನೆಯ ಶತಮಾನದಲ್ಲಿ ಕಂಡಂತ ಸಮಾಜದ ಅಂಕುಡೊಂಕುಗಳನ್ನು ಜನಸಾಮಾನ್ಯರು ಸುಲಭವಾಗಿ ಅರಿಯುವಂತೆ ತಮ್ಮ ತ್ರಿಪದಿ ರೂಪದ ಬರಹಗಳ ಮೂ¯ಕ ತಿಳಿಸಿ ಸತ್ಯದರ್ಶನ ಮಾಡಿಸಿದರು ಎಂದರು.
ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕಾಧ್ಯಕ್ಷ ಜಿ.ಪಿ.ಬಿರಾದಾರ ಹಾಗೂ ಶಿಕ್ಷಕಿ ಶೋಭಾ ಕುಂಬಾರ ಮಾತನಾಡಿ, ಸರ್ವಜ್ಞನ ತ್ರಿಪದಿಗಳಲ್ಲಿ ನೈತಿಕ ಹಾಗೂ ಸಾಮಾಜಿಕ ನ್ಯಾಯವನ್ನು ಕಾಣಬಹುದಾಗಿದೆ ಎಂದರು.
ವಸತಿ ಶಾಲೆಯ ಪ್ರಾಚಾರ್ಯ ರೇಷ್ಮಾ ಜಾಧವ ಅಧ್ಯಕ್ಷತೆ ವಹಿಸಿದ್ದರು. ರಾಜಶೇಖರ ಕಂಬಾರ ಪ್ರಾಸ್ತಾವಿಕವಾಗಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ಮಹಿಳಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ವೈವಿಧ್ಯಮಯ ಜಾನಪದ ಕಾರ್ಯಕ್ರಮ ನೀಡಿದ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಲಾಯಿತು. ಹಾಗೂ ವಿದ್ಯಾರ್ಥಿಗಳ ಓದುವಿಕೆಗಾಗಿ ಕಸಾಪ ಜಿಲ್ಲಾ ಹಾಗೂ ತಾಲ್ಲೂಕು ಘಟಕಗಳ ವತಿಯಿಂದ ೫೦ ಪುಸ್ತಕಗಳನ್ನು ನೀಡಲಾಯಿತು.
ಎಂ.ಬಿ.ಓಡಗೇರ, ರಮೇಶ ತರಗಲಕಟ್ಟಿ, ಶ್ರೀಶೈಲ ನಾವಿ, ಮಧು, ಶ್ರೀಶೈಲ ನಾಯಕ, ಮಹೇಶ, ಶ್ರೀಶೈಲ ಉಮರಜ, ಲಕ್ಷ್ಮೀ ಹುಗ್ಗಿ, ರೇಖಾ ಎಚ್, ಸಂಜಯ ಗಚ್ಚಿನಕಟ್ಟಿ, ಶ್ರೀಕಾಂತ ರಜಪೂತ ಹಾಗೂ ವಿದ್ಯಾರ್ಥಿಗಳು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

