ವಿಜಯಪುರ: ಸಂವಿಧಾನದ ಮಹತ್ವ ಹಾಗೂ ಆಶಯಗಳ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಹಮ್ಮಿಕೊಂಡ ಸಂವಿಧಾನ ಜಾಗೃತಿ ಜಾಥಾದ ಸ್ಥಬ್ಧಚಿತ್ರವು ಸಾಸನೂರ ಗ್ರಾಮಪಂಚಾಯಿತ್ ವ್ಯಾಪ್ತಿಯಲ್ಲಿ ಸಂಚರಿಸಿತು.
ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮದಲ್ಲಿ ಡಾ.ಬಿ.ಆರ್ ಅಂಬೇಡ್ಕರ್ ಅವರ ಸ್ತಬ್ಧಚಿತ್ರಕ್ಕೆ ಹೂವಿನ ಮಾಲಾರ್ಪಣೆ ಮಾಡಿ, ಸಂವಿಧಾನ ಪೀಠಿಕೆಯ ಭಿತ್ತಿಪತ್ರಗಳನ್ನು ಹಿಡಿದು, ಸ್ವಾಗತ ಕೋರಲಾಯಿತು.
ಇದೇ ವೇಳೆ ಶಾಲಾ ಮಕ್ಕಳಿಂದ ಸಂವಿಧಾನ ಪೀಠಿಕೆಯ ಪ್ರಮಾಣ ವಚನ ಬೋಧಿಸಲಾಯಿತು. ಸಾಸನೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ನಾಗರೀಕರು ಬೈಕ್ ಮೂಲಕ ರ‍್ಯಾಲಿ ನಡೆಸಿ ಗೌರವ ಸೂಚಿಸಿದರು. ವಿವಿಧ ಸಾಂಸ್ಕೃತಿಕ ತಂಡಗಳಿಂದ ಕಲಾ ಪ್ರದರ್ಶನ, ಶಾಲಾ ಮಕ್ಕಳಿಂದ ನೃತ್ಯಗಳು ನಡೆದವು.
ಈ ವೇಳೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಅನಸೂಬಾಯಿ ಹರಿಜನ ಮಾತನಾಡಿದರು.
ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಇಲಾಖೆ ಅಧಿಖಾರಿ ಉಮೇಶ ಲಮಾಣಿ, ಸಾಸನೂರ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಮಡಿವಾಳಮ್ಮ ದ್ಯಾಮಗೊಂಡ, ಸದಸ್ಯರಾದ ಸಂಗನಗೌಡ ಪಾಟೀಲ್, ಪ್ರಭು ಸೋಮನಾಳ, ಮಲ್ಲನಗೌಡ ನಾಡಗೌಡ, ಗಿರೀಶ್ ಜಲಪೂರ, ಕೆಂಚಪ್ಪ ದ್ಯಾಮಗೊಂಡ, ಎಸ್.ಡಿ. ಪತ್ತಾರ, ಆರ್.ಡಿ ದೇಸಾಯಿ, ರಾಮು ವಾಲೀಕಾರ, ಭೀಮಣ್ಣ ಚಬನೂರ, ವಿರುಪಾಕ್ಷಪ್ಪಗೌಡ ಹಯ್ಯಾಳ, ಪ್ರಭೂಗೌಡ ಚೌಧರಿ, ಬಿ.ಆರ್. ದೇವರೆಡ್ಡಿ, ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು
Subscribe to Updates
Get the latest creative news from FooBar about art, design and business.
Related Posts
Add A Comment
