Author: editor.udayarashmi@gmail.com

ಸಿಂದಗಿ: ನಗರದ ಮಂದಾರ ಪಬ್ಲಿಕ್ ಸ್ಕೂಲ್ ಹಾಗೂ ನ್ಯಾಶನಲ್ ಹಿರಿಯ ಪ್ರಾಥಮಿಕ ಶಾಲೆಯ ಆಶ್ರಯದಲ್ಲಿ ಫೆ.೨೪ ಶನಿವಾರದಂದು ಸಾಯಂಕಾಲ ೪ಗಂಟೆಗೆ ವಿಜಯಪುರ ರಸ್ತೆಯ ಮಾಂಗಲ್ಯ ಭವನದಲ್ಲಿ ಮಂದಾರ ಸಿರಿ ಉತ್ಸವ ಹಾಗೂ ಆದರ್ಶ ಶಿಕ್ಷಕ ಪ್ರಶಸ್ತಿ ಸಮಾರಂಭ ಜರುಗುವುದು ಎಂದು ಕಾರ್ಯಕ್ರಮದ ಸಂಚಾಲಕ ಅಭಿಷೇಕ ಚೌಧರಿ ತಿಳಿಸಿದ್ದಾರೆ.ಈ ಕಾರ್ಯಕ್ರಮದಲ್ಲಿ ಸಿಂದಗಿ ಆದಿಶೇಷ ಮಠದ ನಾಗರತ್ನ ವೀರರಾಜೇಂದ್ರ ಸ್ವಾಮಿಜಿ ಸಾನಿಧ್ಯ ವಹಿಸುವರು. ಆದರ್ಶ ವಿದ್ಯಾಲಯದ ಪ್ರಾಚಾರ್ಯ ಎಸ್.ಕೆ.ಬಿರಾದಾರ ಸಭೆ ಅಧ್ಯಕ್ಷತೆ ವಹಿಸುವರು. ಕ್ಷೇತ್ರ ಶಿಕ್ಷಣಾಧಿಕಾರಿ ಆರೀಫ್ ಬಿರಾದಾರ ಕಾರ್ಯಕ್ರಮ ಉದ್ಘಾಟಿಸುವರು. ಅಲ್ಪಸಂಖ್ಯಾತ ಮುರಾರ್ಜಿ ವಸ್ತಿ ಶಾಲೆಯ ಪ್ರಾಚಾರ್ಯ ಸಿದ್ದಪ್ಪ ಕಾರಿಮುಂಗಿ, ಕಾವ್ಯ ಶಿಕ್ಷಣ ಸಂಸ್ಥೆ ಮುಖ್ಯಸ್ಥ ಚಂದ್ರಶೇಖರ ನಾಗರಬೆಟ್ಟ, ದೈಹಿಕ ಶಿಕ್ಷಕ ಸಂಗನಗೌಡ ಹಚಡದ, ಎಸ್‌ಪಿ ಡೆವಲಪರ್ಸ್ನ ಸಲೀಂ ಮರ್ತೂರ, ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಆರ್.ಎಚ್.ಬಿರಾದಾರ ಸಿಆರ್‌ಪಿ ಸಿ.ಎನ್.ಸಿರಕನಳ್ಳಿ. ಎನ್‌ಪಿಎಸ್ ಅಧ್ಯಕ್ಷ ಶಿವಕುಮಾರ ಕಲ್ಲೂರ ಅತಿಥಿಗಳಾಗಿ ಭಾಗವಹಿಸುವರು ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ಸಿಂದಗಿ: ಜಿಲ್ಲೆಯ ಐದು ಶಾಲೆಗಳಲ್ಲಿ ಗಣಿಹಾರ ಆಯ್ಕೆ ಮಾಡಿಕೊಂಡಿದ್ದು ಸಂತಸ. ಪ್ರಸಕ್ತ ಸಾಲಿನ ಶೈಕ್ಷಣಿಕ ವರ್ಷದಿಂದ ರಾಜ್ಯದ ಎಲ್ಲಾ ಸರ್ಕಾರಿ ಮತ್ತು ಅನುದಾನ ಶಾಲೆ ಮಕ್ಕಳಿಗೆ ಬಹು ಪೌಷ್ಟಿಕಾಂಶವುಳ್ಳ ರಾಗಿ ಮಾಲ್ಟ ಹೆಲ್ತ್ ಮಿಕ್ಸ್ ವಿತರಿಸುವ ಸರ್ಕಾರದ ಕಾರ್ಯ ಶ್ಲಾಘನೀಯ ಎಂದು ಕ್ಷೇತ್ರ ಸಮನ್ವಯಾಧಿಕಾರಿ ಆಯ್.ಎಸ್.ಟಕ್ಕೆ ಹೇಳಿದರು.ತಾಲೂಕಿನ ಗಣಿಹಾರ ಗ್ರಾಮದ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಶ್ರೀ ಸತ್ಯ ಸಾಯಿ ಅನ್ನಪೂರ್ಣ ಟ್ರಸ್ಟ್ ಹಾಗೂ ಕೆಎಂಎಫ್ ಸಹಭಾಗಿತ್ವದಲ್ಲಿ ಸರಕಾರದ ಮಧ್ಯಾಹ್ನ ಉಪಹಾರ ಯೋಜನೆ ಅಡಿಯಲ್ಲಿ ಹಮ್ಮಿಕೊಂಡ ರಾಗಿ ಹೆಲ್ತ್ ಮಿಕ್ಸ್ ವಿತರಣೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಈಗಾಗಲೇ ವಾರಕ್ಕೆ ಮೂರು ದಿನ ಮೊಟ್ಟೆ, ಬಾಳೆಹಣ್ಣು ಕೊಡುವ ಕಾರ್ಯಕ್ರಮ, ಹಾಲು ವಿತರಿಸುವ ಕಾರ್ಯಕ್ರಮ ನಿರಂತರವಾಗಿ ನಡೆದಿದ್ದು, ಈಗ ಅತ್ಯಂತ ಪೌಷ್ಟಿಕವಾದ ರಾಗಿ ಮಾಲ್ಟ್ ಕೊಡುವ ಕಾರ್ಯಕ್ರಮ ಇಂದಿನಿಂದ ಶುರುವಾಗಿದೆ. ಇದರಿಂದ ಮಕ್ಕಳ ಮಾನಸಿಕ ಮತ್ತು ದೈಹಿಕ ಆರೋಗ್ಯ ವೃದ್ಧಿಯಾಗುತ್ತದೆ ಎಂದರು .ಇದೇ ಸಂದರ್ಭದಲ್ಲಿ ಮಧ್ಯಾಹ್ನ ಉಪಹಾರ ಯೋಜನೆಯ ಪ್ರಭಾರಿ ಸಹನಿರ್ದೇಶಕ ಎಂ.ಬಿ.ಯಡ್ರಾಮಿ ಮಾತನಾಡಿ,…

Read More

ಸಿಂದಗಿ: ಕಾರ್ಯಕ್ರಮದ ಸ್ವರೂಪ ಮತ್ತು ತಾಲೂಕಿನಾದ್ಯಂತ ಕನ್ನಡಾಭಿಮಾನಿಗಳನ್ನು ಸಮ್ಮೇಳನಕ್ಕೆ ಆಹ್ವಾನಿಸುವ ಉದ್ದೇಶದಿಂದ ರಥದೊಂದಿಗೆ ಪ್ರಚಾರಕರನ್ನು ಕಳುಹಿಸಲಾಗುತ್ತಿದೆ. ತಾಲೂಕಿನ ವಿವಿಧ ಹೋಬಳಿ ಭಾಗಗಳಲ್ಲಿ ರಥವು ಸಂಚರಿಸಲಿದೆ ಎಂದು ಕಸಾಪ ಗೌರವಾಧ್ಯಕ್ಷ ಮಹಾಂತೇಶ ಪಟ್ಟಣಶೆಟ್ಟಿ ಹೇಳಿದರು.ತಾಲೂಕಿನಾದ್ಯಂತ ಇರುವ ಪರಿಷತ್ತಿನ ೮೦೦ಕ್ಕೂ ಅಧಿಕ ಸದಸ್ಯರುಗಳಿಗೆ ಆಹ್ವಾನ ಪತ್ರಿಕೆ ಅಂಚೆ ಮೂಲಕ ಕಳುಹಿಸಿಕೊಡಲಾದ್ದು, ಸಮ್ಮೇಳನಾಧ್ಯಕ್ಷರಿಗೆ, ಗಣ್ಯರಿಗೆ ತಲುಪಿಸಿ ಅಧಿಕೃತ ಆಹ್ವಾನ ನೀಡಲಾಗುತ್ತಿದೆ ಎಂದು ಕಸಾಪ ತಾಲೂಕಾಧ್ಯಕ್ಷ ಶಿವಾನಂದ ಬಡಾನೂರ ತಿಳಿಸಿದರು.ಇದೇ ಸಂದರ್ಭದಲ್ಲಿ ಅಶೋಕ ಗಾಯಕವಾಡ, ಸಿದ್ದಲಿಂಗ ಕಿಣಗಿ, ಪಂಡಿತ ಯಂಪೂರೆ ಸೇರಿದಂತೆ ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು ಹಾಗೂ ಕನ್ನಡಾಭಿಮಾನಿಗಳು ಇದ್ದರು.

Read More

ಕಲಕೇರಿ: ಸಂತರು, ಮಹಾಂತರ ತತ್ವ ವಚನಗಳನ್ನು ತಿಳಿದುಕೊಳ್ಳುವುದರ ಜೊತೆಗೆ ನಿರಂತರ ಕಾಯಕ ಯೋಗಿಗಳಾಗಬೇಕು. ನಕಾರಾತ್ಮಕ ಪರಿವರ್ತನೆಯ ಬದಲು ಇಂತಹ ಮಹಾತ್ಮರ ಆಚರಣೆಯ ಮೂಲಕ ಸಕಾರಾತ್ಮಕ ಪರಿವರ್ತನೆಯಾಗಬೇಕು ಎಂದು ಕಲಕೇರಿ ಗುರುಮರುಳಾರಾಧ್ಯರ ಹಿರೇಮಠದ ಸಿದ್ದರಾಮ ಶೀವಾಚಾರ್ಯರು ಹೇಳಿದರು.ಸ್ಥಳಿಯ ಗ್ರಾಮದ ಶ್ರೀಗರು ವೀರಘಂಟೈ ಮಡಿವಾಳೇಶ್ವರ ದೇವಸ್ಥಾನ ಆವರಣದಲ್ಲಿ ಬುಧವಾರ ಸಂಜೆ ಶಿವಯೋಗಿ ಶ್ರೀ ಸಿದ್ಧರಾಮೇಶ್ವರರ ೮೫೨ ನೇ ಜಯಂತ್ಯೋತ್ಸವ ಹಾಗೂ ಶ್ರೀ ಭವಾನಿ ಕಂಪ್ಯೂಟರ್ ತರಬೇತಿ ಸಂಸ್ಥೆಯ ೨೦ ನೇ ವಾರ್ಷಿಕೋತ್ಸವ ಸಮಾರಂಭ ಮತ್ತು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಕರುನಾಡ ರತ್ನ ಪ್ರಶಸ್ತಿ ಪ್ರಧಾನ ಹಾಗೂ ಬಾಲ ಪ್ರತಿಭಾ ಪುರಸ್ಕಾರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ದಲಿತ ವಿಧ್ಯಾರ್ಥಿ ಪರಿಷತ್ತಿನ ರಾಜ್ಯಾದ್ಯಕ್ಷ ಶ್ರೀನಾಥ ಪೂಜಾರಿ, ಎಐಸಿಸಿ ಸದಸ್ಯೆ ಶ್ರೀದೇವಿ ಉತ್ಲಾಸರ ಸಿಧ್ರಾಮೇಶ್ವರರ ಭಾವಚಿತ್ರಕ್ಕೆ ಪೂಜೆಯನ್ನು ಸಲ್ಲಿಸಿ ಮಾತನಾಡಿ, ೧೨ ಶತಮಾನದ ಶ್ರೇಷ್ಠ ವಚನಕಾರರಲ್ಲಿ ಒಬ್ಬರಾದ ಶಿವಯೋಗಿ ಸಿದ್ಧರಾಮೇಶ್ವರರು ಕಪಿಲ ಸಿದ್ಧರಾಮೇಶ್ವರ ಎಂಬ ಅಂಕಿತನಾಮದಿಂದ ಅನೇಕ ವಚನಗಳನ್ನು ಬರೆದು ಕಾಯಕವೇ ಕೈಲಾಸವೆಂಬ ಸಿದ್ಧಾಂತವನ್ನು…

Read More

ವಿಜಯಪುರ: ಅಂದಾಜು ೪೦ ವರ್ಷ ವಯಸ್ಸಿನ ವ್ಯಕ್ತಿಯ ಶವ ಪತ್ತೆಯಾಗಿರುವ ಕುರಿತು ರೇಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪತ್ತೆಯಾದ ಅಪರಿಚಿತ ವ್ಯಕ್ತಿಯ ವಾರಸುದಾರರ ಪತ್ತೆಗೆ ರೇಲ್ವೆ ಪೊಲೀಸರು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.ಅಪರಿಚಿತ ವ್ಯಕ್ತಿಯು ಅಂದಾಜು ೪೦ ರಿಂದ ೪೫ ವರ್ಷ ವಯಸ್ಸಿನವಾಗಿದ್ದು, ೫.೫ ಅಡಿ ಎತ್ತರ, ಗೋದಿಗೆಂಪು ಮೈಬಣ್ಣ, ತೆಳ್ಳನೆಯ ಮೈಕಟ್ಟು, ಕೋಲುಮುಖ, ನೇರವಾಗಿ ಮೂಗು, ತಲೆಯಲ್ಲಿ ೧ ಇಂಚು ಬಿಳಿ-ಕಪ್ಪು ಬಣ್ಣದ ಮಿಶ್ರಿತ ಕೂದಲು, ಕುರುಚಲ ದಾಡಿ, ಮೀಸೆವುಳ್ಳವನಾಗಿದ್ದು, ಬಲಗೈ ಭುಜದ ಹತ್ತಿರ ತೋಳಿನ ಮೇಲೆ ರೌಂಡಾಕಾರದ ಚಕ್ರದ ಮದ್ಯ ಓಂ ಆಕಾರದ ಅಚ್ಛೆ ಗುರುತು, ಬಲಗೈ ರಟ್ಟೆಯ ಮೇಲೆ ತ್ರಿಶೂಲ ಮತ್ತು ಢಮರುಘ ಚಿತ್ರದ ಅಚ್ಚೆ ಗುರುತು ಹಾಕಿಕೊಂಡಿದ್ದಾನೆ. ಕಿವಿಯ ಅಲೆಗಳು ತೂತು ಇರುತ್ತದೆ. ಮೈಮೇಲೆ ಬಿಳಿ ಬಣ್ಣದ ತುಂಬು ತೋಳಿನ ರೆಡಿಮೆಡ್ ಅಂಗಿ, ಬಿಳಿ ಬಣ್ಣದ ಚಾಕಲೇಟ್ ದಡಿಯ ಲುಂಗಿ-ಪಂಚೆ, ಕೊರಳಲ್ಲಿ ಕಪ್ಪು ದಾರ ಧರಿಸಿದ್ದು, ಸೊಂಟದಲ್ಲಿ ಕೇಸರಿ ಬಣ್ಣದ ಉಡದಾರ, ಬಲಗಾಲಿನಲ್ಲಿ ಕಪ್ಪು ಬಣ್ಣದ…

Read More

ವಿಜಯಪುರ: ಅಂದಾಜು ೪೦ ವರ್ಷ ವಯಸ್ಸಿನ ವ್ಯಕ್ತಿಯ ಶವ ಪತ್ತೆಯಾಗಿರುವ ಕುರಿತು ರೇಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪತ್ತೆಯಾದ ಅಪರಿಚಿತ ವ್ಯಕ್ತಿಯ ವಾರಸುದಾರರ ಪತ್ತೆಗೆ ರೇಲ್ವೆ ಪೊಲೀಸರು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.ಅಪರಿಚಿತ ವ್ಯಕ್ತಿಯು ಅಂದಾಜು ೪೦ ರಿಂದ ೪೫ ವರ್ಷ ವಯಸ್ಸಿನವಾಗಿದ್ದು, ೫.೫ ಅಡಿ ಎತ್ತರ, ಗೋದಿಗೆಂಪು ಮೈಬಣ್ಣ, ತೆಳ್ಳನೆಯ ಮೈಕಟ್ಟು, ಕೋಲುಮುಖ, ನೇರವಾಗಿ ಮೂಗು, ತಲೆಯಲ್ಲಿ ೧ ಇಂಚು ಬಿಳಿ-ಕಪ್ಪು ಬಣ್ಣದ ಮಿಶ್ರಿತ ಕೂದಲು, ಕುರುಚಲ ದಾಡಿ, ಮೀಸೆವುಳ್ಳವನಾಗಿದ್ದು, ಬಲಗೈ ಭುಜದ ಹತ್ತಿರ ತೋಳಿನ ಮೇಲೆ ರೌಂಡಾಕಾರದ ಚಕ್ರದ ಮದ್ಯ ಓಂ ಆಕಾರದ ಅಚ್ಛೆ ಗುರುತು, ಬಲಗೈ ರಟ್ಟೆಯ ಮೇಲೆ ತ್ರಿಶೂಲ ಮತ್ತು ಢಮರುಘ ಚಿತ್ರದ ಅಚ್ಚೆ ಗುರುತು ಹಾಕಿಕೊಂಡಿದ್ದಾನೆ. ಕಿವಿಯ ಅಲೆಗಳು ತೂತು ಇರುತ್ತದೆ. ಮೈಮೇಲೆ ಬಿಳಿ ಬಣ್ಣದ ತುಂಬು ತೋಳಿನ ರೆಡಿಮೆಡ್ ಅಂಗಿ, ಬಿಳಿ ಬಣ್ಣದ ಚಾಕಲೇಟ್ ದಡಿಯ ಲುಂಗಿ-ಪಂಚೆ, ಕೊರಳಲ್ಲಿ ಕಪ್ಪು ದಾರ ಧರಿಸಿದ್ದು, ಸೊಂಟದಲ್ಲಿ ಕೇಸರಿ ಬಣ್ಣದ ಉಡದಾರ, ಬಲಗಾಲಿನಲ್ಲಿ ಕಪ್ಪು ಬಣ್ಣದ…

Read More

ವಿಜಯಪುರ: ೨೦೨೩-೨೪ನೆ ಸಾಲಿನಲ್ಲಿ ಮುಖ್ಯಮಂತ್ರಿ ರೈತ ವಿದ್ಯಾನಿಧಿ ಕಾರ್ಯಕ್ರಮ ಹಾಗೂ ಭೂರಹಿತ ಕೃಷಿ ಕಾರ್ಮಿಕರ ವಿದ್ಯಾ ನಿಧಿ ಕಾರ್ಯಕ್ರಮದ ಅಡಿಯಲ್ಲಿ ವಿದ್ಯಾರ್ಥಿ ವೇತನ ಪಡೆಯಲು ಸಾಮಾನ್ಯ ವರ್ಗದ ವಿದ್ಯಾರ್ಥಿಗಳ ಪೋಷಕರ ಆದಾಯವು ೨.೫ ಲಕ್ಷ ಮೀರಿರಬಾರದು ಎಂಬ ಷರತ್ತು ವಿಧಿಸಿರುವುದರಿಂದ ಸಾಮಾನ್ಯ ವರ್ಗದಡಿ ಬರುವ ರೈತರ ಮಕ್ಕಳು ತಮ್ಮ ಪೋಷಕರ ಆದಾಯ ಪ್ರಮಾಣ ಪತ್ರವನ್ನು ಸಲ್ಲಿಸಲು ರಾಜ್ಯ ವಿದ್ಯಾರ್ಥಿ ವೇತನ ತಂತ್ರಾಂಶದ ಲಾಗಿನ್‌ನಲ್ಲಿ ಅವಕಾಶ ಕಲ್ಪಿಸಲಾಗಿದ್ದು, ಫೆ. ೨೯ ರ ರೊಳಗೆ ಪ್ರಮಾಣ ಪತ್ರ ಅಪಲೋಡ್ ಮಾಡುವಂತೆ ಜಂಟಿ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.೨೦೨೩-೨೦೨೪ ನೆ ಸಾಲಿನಲ್ಲಿ ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಹಾಗೂ ಇತರೆ ಇಲಾಖೆಗಳ ಯೊಜನೆ ಅಡಿಯಲ್ಲಿ ವಿದ್ಯಾರ್ಥಿ ವೇತನ ಪಡೆಯುತ್ತಿರುವ ವಿದ್ಯಾರ್ಥಿಗಳು ಮುಖ್ಯಮಂತ್ರಿ ವಿದ್ಯಾನಿಧಿ ಕಾರ್ಯಕ್ರಮ ಹಾಗೂ ಭೂರಹಿತ ಕೃಷಿ ಕಾರ್ಮಿಕರ ವಿದ್ಯಾನಿಧಿ ಕಾರ್ಯಕ್ರಮದಡಿಯಲ್ಲಿ ವಿದ್ಯಾರ್ಥಿ ವೇತನ ಪಡೆಯಲು ಅರ್ಹರಾಗುವುದಿಲ್ಲ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ವಿಜಯಪುರ: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ದ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದ ವತಿಯಿಂದ ಮೈಸೂರಿನ ವಿಜಯ ವಿಠ್ಠಲ ಶಿಕ್ಷಣ ಸಂಸ್ಥೆ ಸಹಯೋಗದಲ್ಲಿ ಪಿಯುಸಿ ನಂತರದ ವೃತ್ತಿಪರ ಉನ್ನತ ಶಿಕ್ಷಣಕ್ಕಾಗಿ ಕರ್ನಾಟಕ ಸರ್ಕಾರ ನಡೆಸಲಿರುವ ಸಾಮಾನ್ಯ ಪ್ರವೇಶ ಪರೀಕ್ಷೆಗೆ (ಕೆ – ಸಿಯಿಟಿ ಮತ್ತು ನೀಟ್) ೩೦ ದಿನಗಳ ತರಬೇತಿಯನ್ನು ಮೈಸೂರಿನ ಕೇಂದ್ರ ಕಚೇರಿಯಲ್ಲಿ ನಡೆಸಲು ನಿರ್ಧರಿಸಲಾಗಿದೆ.ಆಸಕ್ತ ವಿದ್ಯಾರ್ಥಿಗಳು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಆವರಣದಲ್ಲಿರುವ ಕರಾಮುವಿ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದ ಕಚೇರಿಯಲ್ಲಿ ಫೆ.೨೭ ರೊಳಗಾಗಿ ಹೆಸರು ನೋಂದಾಯಿಸಿಕೊಳ್ಳಬಹುದು. ಹೆಚ್ಚಿನ ಮಾಹಿತಿಗೆ ೦೮೨೧-೨೫೧೫೯೪೪ ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದು ಎಂದು ಕರಾಮುವಿ ಕುಲಸಚಿವ ಪ್ರೊ.ಕೆ.ಎಲ್.ಎನ್. ಮೂರ್ತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ವಿಜಯಪುರ: ೨೦೨೪ನೆ ಸಾಲಿನಲ್ಲಿ ಮಾರ್ಚ್ ತಿಂಗಳಲ್ಲಿ ಎಸೆಸೆಲ್ಸಿ ಪರೀಕ್ಷೆಗಳು ನಡೆಯುವುದರಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸಲು ಫೆ.೨೩ರಂದು ಸಂಜೆ ೬ ರಿಂದ ರಾತ್ರಿ ೮ ಗಂಟೆಯವರೆಗೆ ಎಸೆಸೆಲ್ಸಿ ವಿದ್ಯಾರ್ಥಿಗಳಿಗೆ ಇಂಗ್ಲೀಷ್ ವಿಷಯದ ಕುರಿತು ಫೋನ್ ಇನ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.ವಿದ್ಯಾರ್ಥಿಗಳು ೯೪೪೯೦೦೯೬೦೫, ೯೮೮೦೭೯೯೨೮೭, ೯೬೩೨೭೧೦೨೮೪, ೯೯೦೨೫೬೯೪೧೦, ೯೯೦೧೪೯೬೮೯೮, ೯೦೧೯೦೬೪೪೯೬, ೯೯೭೨೩೧೨೧೧೧, ೯೯೦೦೪೮೮೧೪೯, ೯೯೦೦೯೯೨೬೯೦ ಈ ಮೊಬೈಲ್ ಸಂಖ್ಯೆಗಳಿಗೆ ಕರೆ ಮಾಡಿ ಇಂಗ್ಲೀಷ್ ವಿಷಯದ ಕುರಿತು ಯಾವುದೇ ಸಮಸ್ಯೆಗಳು ಇದ್ದರೆ ಕರೆ ಮಾಡಿ ಸಮಸ್ಯೆ ಬಗೆಹರಿಸಿ ಕೊಳ್ಳಬಹುದು ಎಂದು ವಿಜಯಪುರ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಕಚೇರಿಯ ಪ್ರಕಟಣೆ ತಿಳಿಸಿದೆ.

Read More

ವಿಜಯಪುರ: ಫೆ.೨೬ ಹಾಗೂ ಫೆ.೨೭ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಕರ್ನಾಟಕ ಸರ್ಕಾರದ ವತಿಯಿಂದ ಬೃಹತ್ ಉದ್ಯೋಗ ಮೇಳ ಹಮ್ಮಿಕೊಂಡಿದ್ದು, ಸದರಿ ಮೇಳದಲ್ಲಿ ಜಿಲ್ಲೆಯ ವಿಕಲಚೇತನರು ಭಾಗವಹಿಸಿ ಮೇಳದ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಅಧಿಕಾರಿ ರಾಜಶೇಖರ.ಹ. ಧೈವಾಡಿ ತಿಳಿಸಿದ್ದಾರೆ.ಉದ್ಯೋಗ ಆಕಾಂಕ್ಷಿ ವಿಕಲಚೇತನರು ಉದ್ಯೋಗ ಮೇಳದಲ್ಲಿ ಭಾಗವಹಿಸಲು https://udyoga.skilconnet.kaushalkar.com/ಲಿಂಕ್ ನಲ್ಲಿ ತಮ್ಮ ಹೆಸರುಗಳನ್ನು ನೋಂದಾಯಿಸಿಕೊಳ್ಳಬೇಕು.ಈ ಕುರಿತಂತೆ ಹೆಚ್ಚಿನ ಮಾಹಿತಿಗಾಗಿ ತಾಲೂಕಾ ಪಂಚಾಯತ ಕಾರ್ಯಾಲಯಗಳಲ್ಲಿ ಕಾರ್ಯಾನಿರ್ವಹಿಸುತ್ತಿರುವ ವಿವಿದೊದ್ದೇಶ ಪುನರ್ವಸತಿ ಕಾರ್ಯಕರ್ತರಾದ ರವಿ ರಾಠೋಡ ೯೦೩೫೫೫೩೩೩೭(ವಿಜಯಪುರ) , ಪರಶುರಾಮ ಭೋಸಲೆ ೯೯೭೨೪೪೧೪೬೪(ಇಂಡಿ), ಮುತ್ತುರಾಜ ಸಾತಿಹಾಳ ೯೯೮೦೦೧೯೬೩೫(ಸಿಂದಗಿ), ಎಸ್.ಡಿ. ಬಿರಾದಾರ ೮೭೨೨೧೩೫೬೬೦(ಬಸವನ ಬಾಗೇವಾಗೆವಾಡಿ) ಎಸ್.ಕೆ. ಘಾಟಿ ೯೭೪೦೬೮೨೯೭೯(ಮುದ್ದೇಬಿಹಾಳ) ಇವರನ್ನು ಹಾಗೂ ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಅಧಿಕಾರಿಗಳ(೦೮೩೫೨-೭೯೬೦೬೦)ಗೆ ಕಚೇರಿಗೆ ಬೇಟಿ ನೀಡಿ ಮಾಹಿತಿ ಪಡೆದುಕೊಳ್ಳಬಹುದು ಎಂದು ಪ್ರಕಟಣೆಯಲ್ಲಿ ಅವರು ತಿಳಿಸಿದ್ದಾರೆ.

Read More