ವಿಜಯಪುರ: ಅಂದಾಜು ೪೦ ವರ್ಷ ವಯಸ್ಸಿನ ವ್ಯಕ್ತಿಯ ಶವ ಪತ್ತೆಯಾಗಿರುವ ಕುರಿತು ರೇಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪತ್ತೆಯಾದ ಅಪರಿಚಿತ ವ್ಯಕ್ತಿಯ ವಾರಸುದಾರರ ಪತ್ತೆಗೆ ರೇಲ್ವೆ ಪೊಲೀಸರು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಅಪರಿಚಿತ ವ್ಯಕ್ತಿಯು ಅಂದಾಜು ೪೦ ರಿಂದ ೪೫ ವರ್ಷ ವಯಸ್ಸಿನವಾಗಿದ್ದು, ೫.೫ ಅಡಿ ಎತ್ತರ, ಗೋದಿಗೆಂಪು ಮೈಬಣ್ಣ, ತೆಳ್ಳನೆಯ ಮೈಕಟ್ಟು, ಕೋಲುಮುಖ, ನೇರವಾಗಿ ಮೂಗು, ತಲೆಯಲ್ಲಿ ೧ ಇಂಚು ಬಿಳಿ-ಕಪ್ಪು ಬಣ್ಣದ ಮಿಶ್ರಿತ ಕೂದಲು, ಕುರುಚಲ ದಾಡಿ, ಮೀಸೆವುಳ್ಳವನಾಗಿದ್ದು, ಬಲಗೈ ಭುಜದ ಹತ್ತಿರ ತೋಳಿನ ಮೇಲೆ ರೌಂಡಾಕಾರದ ಚಕ್ರದ ಮದ್ಯ ಓಂ ಆಕಾರದ ಅಚ್ಛೆ ಗುರುತು, ಬಲಗೈ ರಟ್ಟೆಯ ಮೇಲೆ ತ್ರಿಶೂಲ ಮತ್ತು ಢಮರುಘ ಚಿತ್ರದ ಅಚ್ಚೆ ಗುರುತು ಹಾಕಿಕೊಂಡಿದ್ದಾನೆ. ಕಿವಿಯ ಅಲೆಗಳು ತೂತು ಇರುತ್ತದೆ. ಮೈಮೇಲೆ ಬಿಳಿ ಬಣ್ಣದ ತುಂಬು ತೋಳಿನ ರೆಡಿಮೆಡ್ ಅಂಗಿ, ಬಿಳಿ ಬಣ್ಣದ ಚಾಕಲೇಟ್ ದಡಿಯ ಲುಂಗಿ-ಪಂಚೆ, ಕೊರಳಲ್ಲಿ ಕಪ್ಪು ದಾರ ಧರಿಸಿದ್ದು, ಸೊಂಟದಲ್ಲಿ ಕೇಸರಿ ಬಣ್ಣದ ಉಡದಾರ, ಬಲಗಾಲಿನಲ್ಲಿ ಕಪ್ಪು ಬಣ್ಣದ ದಾರ ಧರಿಸಿದ್ದಾನೆ. ಈ ಚಹರೆಪಟ್ಟಿಯುಳ್ಳ ವ್ಯಕ್ತಿಯ ಕುರಿತು ಅಥವಾ ವಾರಸುದಾರರ ಕುರಿತು ಸಾರ್ವಜನಿಕರಿಗೆ ಮಾಹಿತಿ ದೊರೆತಯಲ್ಲಿ ಆರಕ್ಷಕ ಉಪನಿರೀಕ್ಷಕರು ರೇಲ್ವೆ ಪೊಲೀಸ್ ಠಾಣೆ ವಿಜಯಪುರ ದೂ: ೦೮೩೫೨-೨೫೦೮೮೩, ರೈಲ್ವೆ ಪೊಲೀಸ್ ಕಂಟ್ರೋಲ್ ರೂಂ ದೂ: ೦೮೦-೨೨೮೭೧೨೯೧ ಸಂಖ್ಯೆಗೆ ಮಾಹಿತಿ ಒದಗಿಸುವಂತೆ ಪ್ರಕಟಣೆಯಲ್ಲಿ ಕೋರಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment
