ವಿಜಯಪುರ: ಫೆ.೨೬ ಹಾಗೂ ಫೆ.೨೭ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಕರ್ನಾಟಕ ಸರ್ಕಾರದ ವತಿಯಿಂದ ಬೃಹತ್ ಉದ್ಯೋಗ ಮೇಳ ಹಮ್ಮಿಕೊಂಡಿದ್ದು, ಸದರಿ ಮೇಳದಲ್ಲಿ ಜಿಲ್ಲೆಯ ವಿಕಲಚೇತನರು ಭಾಗವಹಿಸಿ ಮೇಳದ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಅಧಿಕಾರಿ ರಾಜಶೇಖರ.ಹ. ಧೈವಾಡಿ ತಿಳಿಸಿದ್ದಾರೆ.
ಉದ್ಯೋಗ ಆಕಾಂಕ್ಷಿ ವಿಕಲಚೇತನರು ಉದ್ಯೋಗ ಮೇಳದಲ್ಲಿ ಭಾಗವಹಿಸಲು https://udyoga.skilconnet.kaushalkar.com/ಲಿಂಕ್ ನಲ್ಲಿ ತಮ್ಮ ಹೆಸರುಗಳನ್ನು ನೋಂದಾಯಿಸಿಕೊಳ್ಳಬೇಕು.
ಈ ಕುರಿತಂತೆ ಹೆಚ್ಚಿನ ಮಾಹಿತಿಗಾಗಿ ತಾಲೂಕಾ ಪಂಚಾಯತ ಕಾರ್ಯಾಲಯಗಳಲ್ಲಿ ಕಾರ್ಯಾನಿರ್ವಹಿಸುತ್ತಿರುವ ವಿವಿದೊದ್ದೇಶ ಪುನರ್ವಸತಿ ಕಾರ್ಯಕರ್ತರಾದ ರವಿ ರಾಠೋಡ ೯೦೩೫೫೫೩೩೩೭(ವಿಜಯಪುರ) , ಪರಶುರಾಮ ಭೋಸಲೆ ೯೯೭೨೪೪೧೪೬೪(ಇಂಡಿ), ಮುತ್ತುರಾಜ ಸಾತಿಹಾಳ ೯೯೮೦೦೧೯೬೩೫(ಸಿಂದಗಿ), ಎಸ್.ಡಿ. ಬಿರಾದಾರ ೮೭೨೨೧೩೫೬೬೦(ಬಸವನ ಬಾಗೇವಾಗೆವಾಡಿ) ಎಸ್.ಕೆ. ಘಾಟಿ ೯೭೪೦೬೮೨೯೭೯(ಮುದ್ದೇಬಿಹಾಳ) ಇವರನ್ನು ಹಾಗೂ ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಅಧಿಕಾರಿಗಳ(೦೮೩೫೨-೭೯೬೦೬೦)ಗೆ ಕಚೇರಿಗೆ ಬೇಟಿ ನೀಡಿ ಮಾಹಿತಿ ಪಡೆದುಕೊಳ್ಳಬಹುದು ಎಂದು ಪ್ರಕಟಣೆಯಲ್ಲಿ ಅವರು ತಿಳಿಸಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment
