ಸಿಂದಗಿ: ಕಾರ್ಯಕ್ರಮದ ಸ್ವರೂಪ ಮತ್ತು ತಾಲೂಕಿನಾದ್ಯಂತ ಕನ್ನಡಾಭಿಮಾನಿಗಳನ್ನು ಸಮ್ಮೇಳನಕ್ಕೆ ಆಹ್ವಾನಿಸುವ ಉದ್ದೇಶದಿಂದ ರಥದೊಂದಿಗೆ ಪ್ರಚಾರಕರನ್ನು ಕಳುಹಿಸಲಾಗುತ್ತಿದೆ. ತಾಲೂಕಿನ ವಿವಿಧ ಹೋಬಳಿ ಭಾಗಗಳಲ್ಲಿ ರಥವು ಸಂಚರಿಸಲಿದೆ ಎಂದು ಕಸಾಪ ಗೌರವಾಧ್ಯಕ್ಷ ಮಹಾಂತೇಶ ಪಟ್ಟಣಶೆಟ್ಟಿ ಹೇಳಿದರು.
ತಾಲೂಕಿನಾದ್ಯಂತ ಇರುವ ಪರಿಷತ್ತಿನ ೮೦೦ಕ್ಕೂ ಅಧಿಕ ಸದಸ್ಯರುಗಳಿಗೆ ಆಹ್ವಾನ ಪತ್ರಿಕೆ ಅಂಚೆ ಮೂಲಕ ಕಳುಹಿಸಿಕೊಡಲಾದ್ದು, ಸಮ್ಮೇಳನಾಧ್ಯಕ್ಷರಿಗೆ, ಗಣ್ಯರಿಗೆ ತಲುಪಿಸಿ ಅಧಿಕೃತ ಆಹ್ವಾನ ನೀಡಲಾಗುತ್ತಿದೆ ಎಂದು ಕಸಾಪ ತಾಲೂಕಾಧ್ಯಕ್ಷ ಶಿವಾನಂದ ಬಡಾನೂರ ತಿಳಿಸಿದರು.
ಇದೇ ಸಂದರ್ಭದಲ್ಲಿ ಅಶೋಕ ಗಾಯಕವಾಡ, ಸಿದ್ದಲಿಂಗ ಕಿಣಗಿ, ಪಂಡಿತ ಯಂಪೂರೆ ಸೇರಿದಂತೆ ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು ಹಾಗೂ ಕನ್ನಡಾಭಿಮಾನಿಗಳು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

