Author: editor.udayarashmi@gmail.com

ಇಂಡಿಯಲ್ಲಿ ಗಾಣಿಗ ಸಮಾಜದ ಮುಖಂಡರಿಂದ ಆಗ್ರಹ ಉದಯರಶ್ಮಿ ದಿನಪತ್ರಿಕೆ ಇಂಡಿ: ಅಥಣಿ ಶಾಸಕ ಲಕ್ಷ್ಮಣ ಸವದಿ ಹಾಗೂ ಇಂಡಿ ಶಾಸಕರಾದ ಯಶವಂತರಾಯಗೌಡ ಪಾಟೀಲ ಅವರಿಗೆ ಸಚಿವ ಸ್ಥಾನ ನೀಡುವಂತೆ ಆಗ್ರಹಿಸಿ ಗಾಣಿಗ ಸಮಾಜದ ಮುಖಂಡರು ಬುಧವಾರ ಪತ್ರಿಕಾಗೋಷ್ಠಿ ನಡೆಸಿ ಮನವಿ ಮಾಡಿಕೊಂಡರು.ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಗಾಣಿಗ ಸಮಾಜದ ತಾಲೂಕಾ ಅಧ್ಯಕ್ಷ ಎ.ಎಸ್. ಗಾಣಿಗೇರ ಮಾತನಾಡಿ, ಗಾಣಿಗ ಸಮುದಾಯದ ರಾಜ್ಯಮಟ್ಟದ ನಾಯಕರು ಹಾಗೂ ಬೆಳಗಾವಿಯ ಹಿರಿಯ ಶಾಸಕರಾದ ಲಕ್ಷ್ಮಣ ಸವದಿ ಅವರು ಕಾಂಗ್ರೆಸ್ ಪಕ್ಷಕ್ಕೆ ಬಂದಿದ್ದರ ಪರಿಣಾಮವಾಗಿ ಬೆಳಗಾವಿ, ವಿಜಯಪುರ, ಬಾಗಲಕೋಟೆ, ಚಿಕ್ಕೋಡಿ ಭಾಗಗಳಲ್ಲಿ ೨೫ಕ್ಕೂ ಹೆಚ್ಚು ಸ್ಥಾನವನ್ನು ಕಾಂಗ್ರೇಸ್ ಪಕ್ಷ ಗೆಲ್ಲಲು ಸಾಧ್ಯವಾಗಿದೆ. ಬಿಜೆಪಿ ತೊರೆದು ಕಾಂಗ್ರೇಸ್ ಸೇರುವ ಸಂದರ್ಭದಲ್ಲಿ ಡಿ.ಕೆ. ಶಿವಕುಮಾರ ಅವರು ನಮ್ಮ ಸರಕಾರ ರಚನೆಯಾಗುವ ಸಂದರ್ಭದಲ್ಲಿ ಉನ್ನತ ಸ್ಥಾನಮಾನ ನೀಡುವುದಾಗಿ ತಿಳಿಸಿದ್ದರು. ಹೀಗಾಗಿ ಈಗ ಅವರು ಕೊಟ್ಟ ಮಾತಿನಂತೆ ನಡೆದುಕೊಂಡು ಅವರನ್ನು ಬರುವ ಸಂಪುಟ ಪುನರ್ ರಚನೆ ಸಂದರ್ಭದಲ್ಲಿ ಸಚಿವ ಸ್ಥಾನ ನೀಡಬೇಕು ಎಂದು ಆಗ್ರಹಿಸಿದರು.ಇಂಡಿ ಮತಕ್ಷೇತ್ರದ ಶಾಸಕರಾದ ಯಶವಂತರಾಯಗೌಡ…

Read More

ಉದಯರಶ್ಮಿ ದಿನಪತ್ರಿಕೆ ತಾಳಿಕೋಟೆ: ತಾಲೂಕಿನ ಫೀರಾಪೂರ ಗ್ರಾಮದ ರೈತ ದೇವಪ್ಪ ರಾಯಪ್ಪ ಹಾಲನ್ನವರ ೩೭ ಸಾಲದ ಬಾಧೆಯಿಂದ ಬುಧುವಾರರಂದು ಮುಂಜಾನೆ ೯ ಗಂಟೆಯ ಸುಮಾರಿಗೆ ಊರ ಮುಂದಿನ ತನ್ನ ಜಮೀನಿನಲ್ಲಿಯ ಗಿಡಕ್ಕೆ ನೇಣು ಬೀಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.ಜಮೀನಿನ ಸಾಗುವಳಿಗಾಗಿ ಹಾಗೂ ವಯಸ್ಸಾದ ನಮ್ಮ ಅತ್ತೆಯ ಚಿಕಿತ್ಸೆಯ ಸಲುವಾಗಿ ಕೊಡಗಾನೂರ ಎಸ್.ಬಿ.ಐ ಬ್ಯಾಂಕಿನಲ್ಲಿ ೨೬೦೦೦/- ರೂ. ಬೆಳೆಸಾಲ ಹಾಗೂ ಊರಲ್ಲಿ ಕೈಗಡ ಅಂತಾ ೫ ಲಕ್ಷ ರೂ ಸಾಲ ಮಾಡಿಕೊಂಡಿದ್ದು ಕಳೆದ ಎರಡು ಮೂರು ವರ್ಷದಿಂದ ಸರಿಯಾಗಿ ಬೆಳೆ ಬಾರದ ಕಾರಣ ಮಾಡಿದ ಸಾಲವನ್ನ ತಿರಿಸಲಾಗದೆ ಸಾಲಕ್ಕೆ ಮನನೊಂದು ಊರ ಮುಂದಿನ ತಮ್ಮದೇ ಹೊಲದಲ್ಲಿನ ಶಂಕೇಶ್ವರ ಗಿಡಕ್ಕೆ ಲುಂಗಿಯಿಂದಾ ನೇಣುಬೀಗಿದಿಕೊಂಡು ಆತ್ಮಹತ್ಯೆ ಮಾಡಿದ್ದಾನೆಂದು ಮೃತ ದೇವಪ್ಪನ ಪತ್ನಿ ಸುಶಿಲಮ್ಮ ಹಾಲನ್ನವರ ತಾಳಿಕೋಟೆ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ.

Read More

ಉದಯರಶ್ಮಿ ದಿನಪತ್ರಿಕೆ ತಾಳಿಕೋಟೆ: ಮುದ್ದೇಬಿಹಾಳ ಮತಕ್ಷೇತ್ರದ ಶಾಸಕರಾಗಿರುವ ಸಿ.ಎಸ್.ನಾಡಗೌಡ(ಅಪ್ಪಾಜಿ) ಅವರಿಗೆ ಈ ಭಾರಿ ಸಚೀವ ಸ್ಥಾನ ಹಂಚಿಕೆಯಲ್ಲಿ ಕ್ಯಾಬಿನೇಟ್ ದರ್ಜೆಯ ಸಚೀವ ಸ್ಥಾನಮಾನ ನೀಡಬೇಕೆಂದು ತಾಳಿಕೋಟೆಯ ಮುಸ್ಲಿಂ ಧಾರ್ಮಿಕ ಮುಖಂಡ ಸೈಯದ ಶಕೀಲ್‌ಹ್ಮದ ಖಾಜಿ ಅವರು ಕಾಂಗ್ರೇಸ್ ಹೈಕಮಾಂಡಗೆ ಒತ್ತಾಯಿಸಿದ್ದಾರೆ.ಶಾಸಕ ಸಿ.ಎಸ್.ನಾಡಗೌಡ (ಅಪ್ಪಾಜಿ) ಅವರು ಕಳೆದ ೫೦ ವರ್ಷಗಳಿಂದ ನಿಷ್ಠಾವಂತ ಸಕ್ರೀಯ ಕಾರ್ಯಕರ್ತರಾಗಿ ಅಲ್ಲದೇ ರಾಜ್ಯದ ಮುತ್ಸದ್ದಿ ರಾಜಕಾರಣಿಗಳಲ್ಲಿಯೇ ಮೊದಲಿಗರಾಗಿ ಗುರುತಿಸಿಕೊಂಡಿದ್ದಾರೆ, ಕಾಂಗ್ರೇಸ್ ಪಕ್ಷದ ತತ್ವಸಿದ್ದಾಂತಗಳಿಗೆ ಬದ್ದರಾಗಿ ಕಾಂಗ್ರೇಸ್ ಪಕ್ಷವನ್ನು ಬೇರುಮಟ್ಟದಿಂದ ಗಟ್ಟಿಗೊಳಿಸಲು ಶ್ರಮಿಸಿದಂತವರಾಗಿದ್ದಾರೆ ಶಾಸಕ ಅಪ್ಪಾಜಿ ನಾಡಗೌಡರು ೬ ಬಾರಿ ಶಾಸಕರಾಗಿ ಆಯ್ಕೆಗೊಂಡಿದ್ದಾರೆ. ಅವರ ಹಿರಿತನದಲ್ಲಿ ಬೆರಳೆಣಿಕೆಯಷ್ಟು ಜನರು ಉಳಿದುಕೊಂಡಿದ್ದರೂ ಕೂಡಾ ಅವರ ಹಿರಿತನವನ್ನು ಕಡೆಗಣಿಸದೇ ಕೇವಲ ಒಂದು ಭಾರಿ ಎರಡು ಭಾರಿ ಶಾಸಕರಾದವರಿಗೆ ಸಚೀವಸ್ಥಾನ ನೀಡುವದರೊಂದಿಗೆ ಮಣಿಹಾಕುವದು ಎಷ್ಟು ಸರಿ ಎಂದು ಪ್ರಶ್ನಿಸಿರುವ ಖಾಜಿ ಅವರು ಶಾಸಕ ಅಪ್ಪಾಜಿ ನಾಡಗೌಡರು ಸಚೀವಸ್ಥಾನ ನಿಭಾಯಿಸಬಲ್ಲ ಎಲ್ಲ ಸಾಮರ್ಥ್ಯವೂ ಇದೆ ಅಲ್ಲದೇ ರಾಜಕೀಯವಾಗಿ ಸಾಕಷ್ಟು ಅನುಭವವನ್ನು ಹೊಂದಿದಂತಹ ನಾಯಕರಾಗಿ ಗುರುತಿಸಿಕೊಂಡಿದ್ದಾರೆ. ಕಾರಣ…

Read More

ಉದಯರಶ್ಮಿ ದಿನಪತ್ರಿಕೆ ಕಲಕೇರಿ: ಗ್ರಾಮದಲ್ಲಿರುವ ಭಾರತ ಸರ್ಕಾರದ ಅನುಧಾನಿತ ವಸತಿ ಶಾಲೆಯಾದ ಶ್ರೀ ಸಿದ್ದಾರ್ಥ ವಸತಿ ಶಾಲೆಗೆ ೨೦೨೬-೨೭ ನೇ ಸಾಲಿಗೆ ಪರಿಶಿಷ್ಟ ಜಾತಿಯ ೧ ರಿಂದ ೧೦ ನೇ ತರಗತಿಯ ವಿಧ್ಯಾರ್ಥಿ,ವಿಧ್ಯಾರ್ಥಿನಿಯರಿಗೆ ಪ್ರವೇಶಾತಿ ಪ್ರಾರಂಭಗೊಂಡಿದ್ದು, ದಿನಾಂಕ ೨೦-೦೬-೨೦೨೬ ವರೆಗೂ ಅರ್ಜಿ ಸಲ್ಲಿಸಲು ಅವಕಾಶವನ್ನು ಕಲ್ಪಿಸಲಾಗಿದ್ದು ಹೆಚ್ಚಿನ ಮಾಹಿತಿಗಾಗಿ ಪ್ರಾಚಾರ್ಯರು ಶ್ರೀ ಸಿದ್ದಾರ್ಥ ವಸತಿ ಶಾಲೆ ಅಸ್ಕಿ ರೋಡ ಇವರನ್ನು ಸಂಪರ್ಕಿಸುವAತೆ ತಿಳಿಸಿದೆ. ಮೋನಂ ೯೦೦೮೧೯೩೦೪೩-೮೯೭೦೪೫೫೭೩೪೭-೦೮೪೨೪೨೭೩೧೪೩

Read More

ವಿಜಯಪುರದಲ್ಲಿ ಧಾತ್ರಿ ಸಮಗ್ರ ಹಾಲುಣಿಸುವಿಕೆಯ ಮಹತ್ವದ ಕಾರ್ಯಾಗಾರ ಉದ್ಘಾಟನೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಅವಧಿಗೂ ಮುನ್ನ ಶಿಶು ಜನನದಿಂದ ಅಮೃತಕ್ಕೆ ಸಮಾನವಾದ ಎದೆಹಾಲು ಲಭ್ಯವಾಗದಿದ್ದಲ್ಲಿ ಜಿಲ್ಲಾಸ್ಪತ್ರೆ ಆವರಣದಲ್ಲಿರುವ ಹಾಲಿನ ಬ್ಯಾಂಕ್ ಸೌಲಭ್ಯ ಪಡೆದುಕೊಳ್ಳಬೇಕು ಎಂದು ಜಿಲ್ಲಾಸ್ಪತ್ರೆ ಶಸ್ತ್ರ ಚಿಕಿತ್ಸಕ ಡಾ. ಶಿವಾನಂದ ಮಾಸ್ತಿಹೊಳಿ ಹೇಳಿದರು.ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾಸ್ಪತ್ರೆ, ಸಮಗ್ರ ಹಾಲುಣಿಸುವಿಕೆಯ ನಿರ್ವಹಣೆ ಕೇಂದ್ರ ಮತ್ತು ತಾಯಂದಿರ ಹಾಲಿನ ಬ್ಯಾಂಕ್ ಹಾಗೂ ಸುಶೇನಾ ಹೆಲ್ತ್ ಫೌಂಡೇಶನ್ ಹೈದ್ರಾಬಾದ ಇವರ ಸಹಯೋಗದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಾರ್ಯಾಲಯದ ಆರೋಗ್ಯ ಸೌಧ ಸಭಾ ಭವನದಲ್ಲಿ ಧಾತ್ರಿ ಸಮಗ್ರ ಹಾಲುಣಿಸುವಿಕೆಯ ಮಹತ್ವದ ಬಗ್ಗೆ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿಗಳು, ಹಿರಿಯ ಪ್ರಾಥಮಿಕ ಆರೋಗ್ಯ ಸುರಕ್ಷಣಾಧಿಕಾರಿಗಳು ಹಾಗೂ ನಗರ ಆರೋಗ್ಯ ಕೇಂದ್ರದ ಆಶಾ ಕಾರ್ಯಕರ್ತೆಯರಿಗೆ ಬುಧವಾರ ಹಮ್ಮಿಕೊಂಡಿದ್ದ ಒಂದು ದಿನದ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಆಗ ತಾನೇ ಜನಿಸಿದ ಶಿಶುವಿನ ತಾಯಿಯ ಎದೆಯಲ್ಲಿ ಹಾಲು ಉತ್ಪತ್ತಿಯಾಗದೇ ಇರುವ, ಅಗತ್ಯ…

Read More

ಉದಯರಶ್ಮಿ ದಿನಪತ್ರಿಕೆ ವರದಿ: ಎಸ್ ಎಮ್ ಇಟ್ಟಿಜಮಖಂಡಿ: ತಾಲೂಕಿನ ಹೂನ್ನೂರ, ಕಡಪಟ್ಟಿ ಹಾಗೂ ಜಮಖಂಡಿ ನಗರದ ಹೊರ ವಲಯದಲ್ಲಿ ಹಾದು ಹೋಗಿರುವ ಜಿ ಎಲ್ ಬಿ ಸಿ ಕೆನಾಲ್ ದಲ್ಲಿನ ಹೂಳು ತೆಗೆದರೂ ಕೂಡಾ ಹಲವು ಕಡೆ ಹೂಳು ಕೆನಾಲ್ ದಂಡೆಯಲ್ಲಿ ಉಳಿಸಿದ್ದು ಇದು ಮತ್ತೆ ಕೆನಾಲ್ ಪಾಲಾಗುವ ಬಗ್ಗೆ ಆತಂಕ ವ್ಯಕ್ತವಾಗಿದೆ.ಮತ್ತೆ ಹೂಳು ಕಾಲುವೆ ಸೇರಿದರೆ ಇದರಿಂದ ಹಲವು ಕಡೆ ನೀರು ರಸ್ತೆಯ ಮೇಲೆ ಬರುತ್ತದೆ ಇದರಿಂದ ಕಾಲುವೆಯ ಅಕ್ಕ ಪಕ್ಕ ಸಂಚರಿಸುವ ರೈತರಿಗೆ, ಸಾರ್ವಜನಿಕರಿಗೆ ಅನಾನುಕೂಲವಾಗುತ್ತದೆ. ಹಲವು ಕಡೆ ಹೂಳು ಹಾಗೂ ಮುಳ್ಳಿನ ಗಿಡಗಳನ್ನು ಕಡಿದು ಕಾಲುವೆ ಪಕ್ಕದಲ್ಲಿ ಹಾಗೆ ಬಿಡಲಾಗಿದೆ, ಮಳೆಗಾಲದಲ್ಲಿ ಗಾಳಿಯ ರಭಸಕ್ಕೆ ಮುಳ್ಳಿನ ಕಂಠಿಗಳು ರಸ್ತೆಯಲ್ಲಿ ಬಿದ್ದರೆ ವಾಹನ ಸವಾರರ ಗಾಡಿಗಳು ಪಂಚರ್ ಆಗುವ ಭೀತಿ ಆಗುತ್ತದೆ, ಕಾಲುವೆಯ ದಂಡೆಯ ಮೇಲೆ ಬಿಡಲಾದ ಹೂಳಿನಿಂದ ರಸ್ತೆಯು ಕೆಸರುಮಯವಾಗುತ್ತದೆ, ಹಾಗೆಯೇ ಕಾಲುವೆಯ ಪಾಲಾಗುತ್ತದೆ ಎಂದು ಸ್ಥಳೀಯ ನಿವಾಸಿ ಹೇಳುತ್ತಾರೆ. ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಹೂಳನ್ನು…

Read More

ಉದಯರಶ್ಮಿ ದಿನಪತ್ರಿಕೆ ಅಥಣಿ: ದೇಶದ ಅತ್ಯಂತ ಕಠಿಣ ಪರೀಕ್ಷೆಗಳಲ್ಲಿ ಒಂದಾದ ಐಎಫ್‌ಎಸ್‌ಸಿ ಪರೀಕ್ಷೆಯಲ್ಲಿ ದೇಶಕ್ಕೆ ಪ್ರಥಮ ಸ್ಥಾನದಲ್ಲಿ ಉತ್ತೀರ್ಣರಾದ ಅಥಣಿ ತಾಲೂಕಿನ ಸವದಿ ಗ್ರಾಮದ ಬಸವರಾಜ ಕೆಂಪವಾಡ ಅವರನ್ನು ತಾಲೂಕಾ ಆಡಳಿತದ ವತಿಯಿಂದ ಸೋಮವಾರ ಸನ್ಮಾನಿಸಿ ಸತ್ಕರಿಸಲಾಯಿತು.ಅಥಣಿ ತಹಶೀಲ್ದಾರ ಕಚೇರಿಯಲ್ಲಿ ನಡೆದ ಸರಳ ಸಮಾರಂಭದಲ್ಲಿ ತಾಲೂಕಾ ದಂಡಾಧಿಕಾರಿ ಹಾಗೂ ತಹಶೀಲ್ದಾರ ಸಿದರಾಯ ಬೋಸಗಿ ಹಾಗೂ ತಾಲೂಕಿನ ಎಲ್ಲ ಅಧಿಕಾರಿಗಳು ಸೇರಿ ಬಸವರಾಜ ಕೆಂಪವಾಡ ಅವರಿಗೆ ಸನ್ಮಾನಿಸಿ ಗೌರವಿಸಿದರು.ಈ ವೇಳೆ ಸನ್ಮಾನ ಸ್ವೀಕರಿಸಿ ಮಾತನಾಡಿದ ಬಸವರಾಜ ಕೆಂಪವಾಡ ಅವರು, ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಸರಿಯಾದ ಮಾರ್ಗದರ್ಶನ ಸಿಕ್ಕರೆ ಯುಪಿಎಸ್‌ಸಿ ಐಎಫ್‌ಎಸ್‌ಸಿ ಅಂತಹ ಪರೀಕ್ಷೆಗಳನ್ನು ಪಾಸ ಮಾಡುವುದು ಕಷ್ಟವಲ್ಲ ನನ್ನ ಯಶಸ್ಸಿಗೆ ನನ್ನ ತಂದೆ ತಾಯಿ ಗುರುಗಳು ಮತ್ತು ಅಥಣಿ ತಾಲೂಕಿನ ಜನರ ಆಶೀರ್ವಾದವೇ ಕಾರಣ ಸಾದ್ಯವಾದಷ್ಟು ಸಮಜಾಜಕ್ಕೆ ಒಳ್ಳೆದೆ ಮಾಡುವೆ ನಿಮ್ಮಂತ ಎಲ್ಲ ಹಿರಿಯ ಅಧಿಕಾರಿಗಳ ಮಾರ್ಗದರ್ಶನ ಪಡೆದು ಮುಂದೆ ಅರಣ್ಯ ಇಲಾಖೆಯಲ್ಲಿ ಒಳ್ಳೆಯ ಸೇವೆ ಸಲ್ಲಿಸುವ ಮೂಲಕ ಪರಿಸರ ಸಂರಕ್ಷಣೆಗೆ ನನ್ನ…

Read More

ಲೇಖನ – ಜಯಶ್ರೀ.ಜೆ. ಅಬ್ಬಿಗೇರಿಇಂಗ್ಲೀಷ್ ಉಪನ್ಯಾಸಕರುಬೆಳಗಾವಿಮೊ: ೯೪೪೯೨೩೪೧೪೨ ಉದಯರಶ್ಮಿ ದಿನಪತ್ರಿಕೆ ಡಾ ಕಲಾಂ ತಮಿಳುನಾಡಿನ ರಾಮೇಶ್ವರಂನ ಅತ್ಯಂತ ಬಡ ಕುಟುಂಬದಲ್ಲಿ ಹುಟ್ಟಿದರು. ಬಾಲ್ಯದಲ್ಲಿ ಪತ್ರಿಕೆ ಮಾರುತ್ತಿದ್ದರು. ಅವರು ಪೈಲೆಟ್ ಆಗಬೇಕೆಂದು ಕನಸು ಕಂಡಿದ್ದರು. ಆದರೆ ಪೈಲೆಟ್ ಸಂದರ್ಶನದಲ್ಲಿ ಇವರಿಗೆ ಸಿಕ್ಕಿದ್ದು ೯ ನೇ ಸ್ಥಾನ. ಆಯ್ಕೆಯಾಗಿದ್ದು ಕೇವಲ ೮ ಜನ ಮಾತ್ರ ಆಗ ಅವರು ಧೃತಿಗೆಡದೆ, ‘ನನಗಾಗಿ ವಿಧಿ ಬೇರೆ ದೊಡ್ಡ ಹಾದಿ ಸಿದ್ಧಪಡಿಸಿದೆ.’ ಎಂದು ಸಕಾರಾತ್ಮಕವಾಗಿ ಯೋಚಿಸಿದರು. ಅದೇ ಯೋಚನೆ ಅವರನ್ನು ‘ಇಂಡಿಯನ್ ಮಿಸೈಲ್ ಮ್ಯಾನ್ ‘(ಭಾರತದ ಕ್ಷಿಪಣಿ ತಂತ್ರಜ್ಞಾನದ ಪಿತಾಮಹ) ಮತ್ತು ಭಾರತದ ಜನಪ್ರಿಯ ರಾಷ್ಟ್ರಪತಿಯನ್ನಾಗಿ ಮಾಡಿತು. ಇದು ನಮ್ಮ ವಿಚಾರಗಳು ಹೇಗೆ ದೊಡ್ಡ ಬಾಗಿಲನ್ನು ತೆರೆಯುತ್ತವೆ ಎಂಬುದಕ್ಕೆ ಸಾಕ್ಷಿ.ಅದೃಷ್ಟವೆಂದರೆ?ಅದೃಷ್ಟ ಎನ್ನುವುದು ಕೇವಲ ಕಾಕತಾಳೀಯವಲ್ಲ. ಒಬ್ಬ ವ್ಯಕ್ತಿಯು ಸಕಾರಾತ್ಮಕ ದೃಷ್ಟಿಕೋನ ಹೊಂದಿದ್ದಾಗ, ಆತ ಸಂಕಷ್ಟಗಳಲ್ಲೂ ಅವಕಾಶವನ್ನು ಹುಡುಕುತ್ತಾನೆ. ಅದೇ ನಕಾರಾತ್ಮಕ ಚಿಂತಕನು ಉತ್ತಮ ಅವಕಾಶದಲ್ಲೂ ದೋಷವನ್ನೇ ಹುಡುಕುತ್ತಾನೆ. ನೀವು ನಿಮ್ಮ ವಿಚಾರಗಳನ್ನು ಸರಿಪಡಿಸಿಕೊಂಡಾಗ ಪರಿಸ್ಥಿತಿಗಳು ತಾವಾಗಿಯೇ ಸುಧಾರಿಸಲು ಆರಂಭಿಸುತ್ತವೆ.…

Read More

ಇಂಡಿ ಮತಕ್ಷೇತ್ರದ ಕಾಂಗ್ರೆಸ್ ಪಕ್ಷದ ಪದಾಧಿಕಾರಿಗಳು, ಸರಕಾರದ ನಾಮ ನಿರ್ದೇಶಿತ ಸದಸ್ಯರ ಎಚ್ಚರಿಕೆ ಉದಯರಶ್ಮಿ ದಿನಪತ್ರಿಕೆ ಇಂಡಿ: ಬರುವ ಸಚಿವ ಸಂಪುಟದಲ್ಲಿ ಶಾಸಕ ಯಶವಂತರಾಯಗೌಡ ಪಾಟೀಲರಿಗೆ ಸಚಿವ ಸಂಪುಟದಲ್ಲಿ ಸ್ಥಾನ ನೀಡಬೇಕು ಇಲ್ಲದಿದ್ದರೆ ಪಕ್ಷದ ಎಲ್ಲ ಪದಾಧಿಕಾರಿಗಳು, ಸರಕಾರದ ನಾಮ ನಿರ್ದೇಶಿತ ಸದಸ್ಯರು ಸಾಮೂಹಿಕ ರಾಜಿನಾಮೆ ನೀಡುವದಾಗಿ ರಾಜ್ಯ ನಿಂಬೆ ಅಭಿವೃದ್ದಿ ಮಂಡಳಿ ಅಧ್ಯಕ್ಷ ಭೀಮಣ್ಣ ಕವಲಗಿ ಹೇಳಿದರು.ಅವರು ಮಂಗಳವಾರ ನಗರದ ಪ್ರವಾಸಿ ಮಂದಿರದಲ್ಲಿ ಬೃಹತ್ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಸಮಾವೇಶದ ನಂತರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.ಇಂಡಿ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಅಜೀತ ಧನಶೆಟ್ಟಿ ಮಾತನಾಡಿ ೧೯೯೪ ರಿಂದ ೨೦೧೩ ರ ವರೆಗೆ ಇಂಡಿ ಮತಕ್ಷೇತ್ರ ಕಾಂಗ್ರೆಸ ಪಕ್ಷದ ಸ್ಥಾನ ನಾಲ್ಕನೆಯ ಸ್ಥಾನದಲ್ಲಿತ್ತು. ಅದನ್ನು ಪ್ರಥಮ ಸ್ಥಾನಕ್ಕೆ ತಂದು ಜಿಪಂ ತಾಪಂ ಪುರಸಭೆ ಸೇರಿದಂತೆ ಎಲ್ಲ ಕಡೆ ಮುಂಚೂಣಿ ತಂದವರು ಯಶವಂತರಾಯಗೌಡ ಪಾಟೀಲರು ಎಂದರು.ಜಿಲ್ಲಾ ಗ್ಯಾರಂಟಿ ಯೋಜನೆ ಅಧ್ಯಕ್ಷ ಇಲಿಯಾಸ ಬೋರಾಮಣಿ ಮಾತನಾಡಿ ಇಂಡಿ ಮತಕ್ಷೇತ್ರಕ್ಕೆ ೧೯೫೭ ರಿಂದ ಒಮ್ಮೆಯೂ ಸಚಿವ…

Read More