ಉದಯರಶ್ಮಿ ದಿನಪತ್ರಿಕೆ
ಇಂಡಿ: ವಿವಿಧ ಬೇಡಿಕೆಗಳ ಈಡೆರಿಕೆಗಾಗಿ ಕರ್ನಾಟಕ ರಾಜ್ಯ ಸರ್ಕಾರಿ ವೈದ್ಯಾಧಿಕಾರಿಗಳ ಸಂಘ ಮತ್ತು ಆರೋಗ್ಯ ಇಲಾಖೆಯ ಎಲ್ಲ ವೃಂದಗಳ ಸಂಘಗಳು ಶಾಸಕ ಯಶವಂತರಾಯಗೌಡ ಪಾಟೀಲರಿಗೆ ಶನಿವಾರ ಮನವಿ ಪತ್ರ ಸಲ್ಲಿಸಿದರು.
ನಮ್ಮ ಬೇಡಿಗಳು ಈಡೇರುವವರೆಗೆ ಮಾರ್ಚ ೧೧ ರಿಂದ ೧೫ ರವರೆಗೆ ಕಪ್ಪು ಪಟ್ಟಿ ಧರಿಸಿ ಹೊರರೋಗಿ ಸೇವೆ ನೀಡದೆ ಕೇವಲ ತುರ್ತು ಸೇವೆ ಮಾತ್ರ ಒದಗಿಸುತ್ತೇವೆ ಎಂದು ಮನವಿ ಪತ್ರದಲ್ಲಿ ತಿಳಿಸಿದ್ದಾರೆ.
ಅಲ್ಲಿಯವರೆಗೆ ನಮ್ಮ ಬೇಡಿಕೆ ಈಡೇರದಿದ್ದರೆ ದಿನಾಂಕ ೧೬ ರಿಂದ ಅನಿಷ್ಠಾವಧಿವರೆಗೆ ಕರ್ತವ್ಯಕ್ಕೆ ಗೈರು ಹಾಜರಾಗುವದರ ಮೂಲಕ ಮುಷ್ಕರ ಹಮ್ಮಿಕೊಳ್ಳಲಾಗುವದು ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ತಾಲೂಕು ಆರೋಗ್ಯ ಅಧಿಕಾರಿ ಡಾ|| ರಾಜೇಶ ಕೋಳೆಕರ, ಡಾ|| ಪ್ರಶಾಂತ ಧೂಮಗೊಂಡ, ಡಾ|| ಶಿವಯೋಗಿ ನಡಗಡ್ಡೆ , ಹಿರಿಯ ಆರೋಗ್ಯ ಸಿಬ್ಬಂದಿ ಎಸ್.ಆರ್.ಗೋಟ್ಯಾಳ, ಎಸ್.ಎಂ. ದರ್ಗಾ, ಸಂಜೀವ ಅಂಕಲಗಿ, ಬಸವರಾಜ ಪಾಟೀಲ,ನಿಮಂಲಾ ಜಾಧವ ಆಡಳಿತ ವೈದ್ಯಾಧಿಕಾರಿಗಳು, ಸಹ ವೈದ್ಯಾಧಿಕಾರಿಗಳು, ಎಲ್ಲಾ ವೃಂದದ ಅಧ್ಯಕ್ಷರು, ಪದಾಧಿಕಾರಿಗಳು, ಹಾಗೂ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬಸವರಾಜ ರಾಹೂರ ಹಾಗೂ ಚುನಾಯಿತ ಸದಸ್ಯರು ಮತ್ತು ಎನ್.ಪಿ.ಎಸ್.ನೌಕರರ ಸಂಘದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಹಾಜರಿದ್ದರು.

