ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ೨೦೨೬-೨೭ನೇ ಸಾಲಿನ ಆಯವ್ಯಯ ಮಂಡನೆ ಸೇರಿದಂತೆ ವಿವಿಧ ವಿಷಯಗಳ ಮೇಲೆ ಚರ್ಚೆ ಜರುಗುವುದರ ಮೂಲಕ ಪಟ್ಟಣ ಪಂಚಾಯಿತಿ ಸಾಮಾನ್ಯ ಸಭೆ ಜರುಗಿತು.
ಪಟ್ಟಣದ ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ಬೆಳಿಗ್ಗೆ ಆರಂಭಗೊಂಡ ಸಾಮಾನ್ಯ ಸಭೆಯಲ್ಲಿ ೨೦೨೬-೨೭ನೇ ಸಾಲಿನ ಅಯವ್ಯಯ ಕುರಿತು ಚರ್ಚೆ ಆರಂಭಗೊಂಡಿತು.
ಈ ಸಂದರ್ಭದಲ್ಲಿ ಸಿಬ್ಬಂದಿ ಎಸ್.ಪಿ.ಹಿರೇಮಠ ಮಾಹಿತಿ ನೀಡಿದರು.
ನಂತರ ಮೌಲಾನಾ ಆಜಾದ್ ಮಾದರಿ ಶಾಲೆಗೆ ನಿವೇಶನ ಮಂಜೂರು, ಉದ್ದಿಮೆ ಪರವಾನಿಗೆ ರದ್ದತಿ, ಕಟ್ಟಡ ಪರವಾನಿಗೆ ತೆಗೆದುಕೊಳ್ಳುವುದು. ಪಟ್ಟಣದ ಎಲ್ಲ ೧೭ ವಾರ್ಡುಗಳಲ್ಲಿಯ ದೇವಸ್ಥಾನಗಳ ಸರ್ವೇ ಹಾಗೂ ಉತಾರೆ ನೀಡುವ ಬಗ್ಗೆ ಹಾಗೂ ಅಮೃತ ಕಾಮಗಾರಿ ಕುರಿತು ಚರ್ಚೆ ಆರಂಭಗೊAಡಿತು.
ವಿವಿಧ ವಾರ್ಡಗಳಲ್ಲಿ ಅಮೃತ ಕಾಮಗಾರಿಗಾಗಿ ಭೂಮಿ ಅಗೆದು ಪುನಃ ಕಾಂಕ್ರಿಟ್ ಮಾಡದೇ ಇರುವುದು. ಹಾಗೂ ಮನೆಮನೆಗೆ ನೀರು ಬರುವ ಮುಂಚೆಯೇ ರಸ್ತೆ ನಿರ್ಮಿಸಿ ಅವೈಜ್ಞಾನಿಕ ಕಾಮಗಾರಿ ನಡೆದ ಬಗ್ಗೆ ಸುದೀರ್ಘ ಚರ್ಚೆ ಜರುಗಿತು.
ಪಟ್ಟಣದ ಹಿಂದುಳಿದ ವರ್ಗದ ಸ್ಮಶಾನದಲ್ಲಿ ಗಟಾರ ನಿರ್ಮಿಸಿದ್ದು , ಅಲ್ಲಿ ನಿಂತ ನೀರನ್ನು ಸ್ಥಳಾಂತರಿಸುವ ಕುರಿತು ಸೂಚಿಸಲಾಯಿತು . ವಾರ್ಡ ನಂ ೮ರಲ್ಲಿ ಗಟಾರ ನಿರ್ಮಾಣ ಕುರಿತು ಕ್ರಮ ಕೈಗೊಳ್ಳಲು ಚರ್ಚಿಸಲಾಯಿತು.
ಪಟ್ಟಣ ಪಂಚಾಯಿತಿ ಮಾಲಿಕತ್ವದ ವಾಣಿಜ್ಯ ಮಳಿಗೆ, ಭೂಬಾಡಿಗೆ ಕರ ವಸೂಲಿ ಮಾಡಿದ ಬಗ್ಗೆ ವಿವರಣೆ ಸಲ್ಲಿಸುವುದು ಹಾಗೂ ಇ ಆಸ್ತಿ ಪಾವತಿ ಹಾಗೂ ಮಾಹಿತಿ ನೀಡಲು ವಿಳಂಬವಾಗುತ್ತಿರುವ ಕುರಿತು ಅಗತ್ಯ ಕ್ರಮ ವಹಿಸಲು ಸದಸ್ಯರು ಸೂಚಿಸಿದರು.
ಸಭೆಯಲ್ಲಿ ಅಧ್ಯಕ್ಷೆ ಜಯಶ್ರೀ ದೇವಣಗಾಂವ, ಉಪಾಧ್ಯಕ್ಷ ರಮೇಶ ಮಸಬಿನಾಳ, ಮುಖ್ಯಾಧಿಕಾರಿ ಅಪ್ರೋಜ್ ಅಹ್ಮದ್ ಪಟೇಲ, ಸದಸ್ಯರಾದ ಶಾಂತಯ್ಯ ಜಡಿಮಠ, ಕಾಸುಗೌಡ ಬಿರಾದಾರ(ಜಲಕತ್ತಿ), ಗುರುರಾಜ್ ಗಡೇದ, ಬಶೀರ್ ಅಹ್ಮದ್ ಬೇಪಾರಿ, ಕಾಸು ಜಮಾದಾರ, ಮಂಗಳೇಶ ಕಡ್ಲೇವಾಡ, ಕಾಶೀನಾಥ ಬಜಂತ್ರಿ, ಸಿಂಧೂರ ಡಾಲೇರ, ಮಹಿಳಾ ಸದಸ್ಯರು ಹಾಗೂ ಮೂವರು ನಾಮ ನಿರ್ದೇಶಿತ ಸದಸ್ಯರು, ಸಿಬ್ಬಂದಿ ಇದ್ದರು.

