Author: editor.udayarashmi@gmail.com

ಚಿಮ್ಮಡ: ಗ್ರಾಮದಲ್ಲಿ ಕಾಂಗ್ರೆಸ್ ಪಕ್ಷದ ಗ್ರಾಮ ಘಟಕದ ನೂತನ ಕಾರ್ಯಾಲಯ ಶ್ರೀಗಳಿಂದ ವೀಶೇಷ ಪೂಜೆ ನಡೆಸುವ ಮೂಲಕ ಲೋಕಾರ್ಪಣೆ ಗೊಳಿಸಲಾಯಿತು.ಗ್ರಾಮದ ಬಸ್ ನಿಲ್ದಾನದ ಪಕ್ಕದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಕಾಂಗ್ರೆಸ್ ಪಕ್ಷದ ಗ್ರಾಮ ಘಟಕದ ಕಾರ್ಯಾಲಯದ ಲೋಕಾರ್ಪಣೆಯನ್ನು ಸ್ಥಳಿಯ ವಿರಕ್ತಮಠದ ಶ್ರೀ ಪ್ರಭು ಮಹಾಸ್ವಾಮಿಗಳು ನೆರವೇರಿಸಿದರು.ಗ್ರಾಮದ ಪ್ರಮುಖರಾದ ಅಣ್ಣಪ್ಪಗೌಡ ಪಾಟೀಲ, ಬಿ.ಎಸ್. ಪಾಟೀಲ, ಗುರಪ್ಪಾ ಬಳಗಾರ, ಕಾಂಗ್ರಸ್ ಗ್ರಾಮ ಘಟಕದ ಅಧ್ಯಕ್ಷ ಉಮೇಶ ಪೂಜಾರಿ, ಅಶೋಕ ಧಡೂತಿ, ದುಂಡಪ್ಪಾ ಪಾಟೀಲ, ಶಿವಪ್ಪಾ ನಾಗನೂರ, ಮಲ್ಲಿಕಾರ್ಜುನ ಬಳಗಾರ, ಗ್ರಾ.ಪಂ. ಸದಸ್ಯ ಬಾಳಪ್ಪ ಗಡೆಪ್ಪನವರ, ಶ್ರೀಶೈಲ ಮಠಪತಿ, ಪ್ರವೀಣ ಪೂಜಾರಿ, ರವಿ ದೊಡವಾಡ, ಇಮಾಮ ಯಾದವಾಡ, ಮಹಾಲಿಂಗ ಬಳಗಾರ, ಪಿರಸಾಬ ನದಾಫ, ಸಲೀಮ ಸರಕಾವಸ ಸೇರಿದಂತೆ ಹಲವಾರು ಜನ ಪ್ರಮುಖರು ಆಗಮಿಸಿದ್ದರು.

Read More

ವಿಜಯಪುರ: ಭಾರತೀಯ ಎಲ್ಲಾಭಾಷೆಗಳ ಮೂಲವು ಒಂದೇ, ಎಲ್ಲಾ ಭಾಷೆಗಳು ಒಂದಡೆಯಿಂದಲೇ ಜನ್ಯವಾಗಿ ಆಯಾಪ್ರದೇಶ, ವಾತಾವರಣ, ರಾಜಕೀಯ, ಧಾರ್ಮಿಕ ಅನುಗುಣವಾಗಿ ಮರ‍್ಪಾಡುಗಳಾಗಿವೆ ಎಂದು ಕರ್ನಾಟಕ ಇತಿಹಾಸ ಅಕಾಡೆಮಿ ಅಧ್ಯಕ್ಷರಾದ ದೇವರಕೊಂಡಾರೆಡ್ಡಿ ಹೇಳಿದರು.ಶನಿವಾರ ನಗರ ಕುಮುದಬೇನ್ ದರ್ಬಾರ್ ವಿದ್ಯಾಲಯದಲ್ಲಿ ನಡೆದ, ಅಭಾಸಾಪ ಹಾಗೂ ಮಂಥನಆಯೋಜನೆಯ ಉಪನ್ಯಾಸ ಕಾರ‍್ಯಕ್ರಮದಲ್ಲಿ ಮಾತಾಡಿದ ಅವರು, ಭಾರತದಲ್ಲಿ ಬರವಣಿಗೆ ಪ್ರಾರಂಭವಾಗಿದ್ದು ಅಶೋಕನ ಕಾಲದಲ್ಲಿ. ಅಲ್ಲಿಯವರಿಗೆ ಬರವಣಿಗೆಯೇ ನಮ್ಮ ದೇಶದಲ್ಲಿ ಇರಲಿಲ್ಲ. ಇತಿಹಾಸ ಅಧ್ಯಯನ ದೃಷ್ಟಿಕೋನದಿಂದ ಶಾಸನಗಳು ಅತ್ಯಂತ ಸ್ಪಷ್ಟ ಇತಿಹಾಸವನ್ನು ಹೇಳುತ್ತವೆ ಎಂದು ವಿವರಿಸಿದ ಅವರು, ಸರ್ಕಾರ ಅಥವಾ ಪ್ರಾಚ್ಯವಸ್ತು ಇಲಾಖೆಯನ್ನು ದೂರುವ ಬದಲು ನಿಮ್ಮನಿಮ್ಮ ಊರುಗಳಲ್ಲಿನ ಐತಿಹಾಸಿಕ ಪರಂಪರೆ ಸ್ಮಾರಕ, ದೇವಾಲಯಗಳನ್ನು ಸಂರಕ್ಷಣೆ ಮಾಡಿಕೊಳ್ಳುವಂತೆ ಕರೆ ಕೊಟ್ಟರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಭಾಸಾಪ ಜಿಲ್ಲಾಧ್ಯಕ್ಷ ನಾರಾಯಣ ಬಾಬಾನಗರ ವಹಿಸಿದ್ದರು. ಕಾರ್ಯಕ್ರಮ ನಿರೂಪಣೆ ಸುಭಾಷ್ ಕನ್ನೂರು , ಸ್ವಾಗತ ಪರಿಚಯ ಶ್ರೀರಂಗ ಕುಲಕರ್ಣಿ, ವಂದನಾರ‍್ಪಣೆ ಮಾಡಿದರು. ಬಸವರಾಜ ದಂಡವತೆ, ಶ್ರೀಧರ “ವಂದೇ ಮಾತರಂ” ಗೀತೆ ಹಾಡಿದರು.ಕಾರ್ಯಕ್ರಮಲ್ಲಿ ಜಿ.ಆರ್ ಕುಲಕರ್ಣಿ, ಎ.ಎಲ್ ಆಲೂರು, ಉಮೇಶ…

Read More

ವಿಜಯಪುರ: ರೋಟರಿ ದಿನಾಚರಣೆಯ ಅಂಗವಾಗಿ ನಗರದ ಸಂಜೀವಿನಿ ಶಿಕ್ಷಣ ಸಂಸ್ಥೆ ಮತ್ತು ರೋಟರಿ ಕ್ಲಬ್ ಆಫ್ ಬಿಜಾಪುರ್ ಉತ್ತರ ಹಾಗು ಜಿಲ್ಲಾ ರಕ್ತ ಕೇಂದ್ರ ಜಿಲ್ಲಾ ಆಸ್ಪತ್ರೆ ವಿಜಯಪುರ ಇವರ ಸಂಯುಕ್ತ ಆಶ್ರಯದಲ್ಲಿ ಇತ್ತೀಚೆಗೆ ಸಂಜೀವಿನಿ ಫಾರ್ಮೆಸಿ ಕಾಲೇಜಿನಲ್ಲಿ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಯಿತು.ರಕ್ತದಾನ ಶಿಬಿರದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ನಗರಾಭಿವೃದ್ಧಿ ಪ್ರಾಧಿಕಾರ ಆಯುಕ್ತರಾದ ರಾಜಶೇಖರ್ ಡಂಬಳ್ ಮಾತನಾಡಿ, ವಿಶ್ವದಲ್ಲಿ ಪೋಲಿಯೋ ನಿರ್ಮೂಲನಕ್ಕಾಗಿ ರೋಟರಿ ಸಂಸ್ಥೆಯ ಕೊಡುಗೆ ಅಪಾರವಾಗಿದ್ದು, ಸಂಸ್ಥೆ ಅನೇಕ ಸಾಮಾಜಿಕ ಕಾರ್ಯಗಳನ್ನು ಹಮ್ಮಿಕೊಂಡು ಸಮಾಜ, ದೇಶದ ಅಭಿವೃದ್ದಿಯಲ್ಲಿ ತನ್ನದೇ ಆದ ವಿಶಿಷ್ಟ ಕೊಡುಗೆ ನೀಡಿದೆ. ರಕ್ತದಾನ ಅತ್ಯಂತ ಶ್ರೇಷ್ಠವಾದ ದಾನವಾಗಿದ್ದು, ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು, ಸಾರ್ವಜನಿಕರು ರಕ್ತದಾನ ಮಾಡುವ ಮೂಲಕ ಸ್ವಸ್ಥ ಸುಂದರ ಸಮಾಜ ನಿರ್ಮಾಣದಲ್ಲಿ ಕೈ ಜೋಡಿಸಬೇಕು ಎಂದು ಹೇಳಿದರು.ಜಿಲ್ಲಾ ಆಸ್ಪತ್ರೆ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಶಿವಾನಂದ ಮಾಸ್ತಿಹೊಳಿ ರಕ್ತದಾನದ ಬಗ್ಗೆ ಜಾಗೃತಿ ಮೂಡಿಸಿದರು.ಸಂಜೀವಿನಿ, ಫಾರ್ಮಸಿ, ನರ್ಸಿಂಗ್ ಮತ್ತು ಪ್ಯಾರಾಮೆಡಿಕಲ್ ವಿಧ್ಯಾರ್ಥಿಗಳು ರಕ್ತದಾನ ಮಾಡಿದರು.ಸಂಸ್ಥೆಯ ಅಧ್ಯಕ್ಷ ಡಾ.ಸಿದ್ದಪ್ಪ ಸೊನ್ನದ…

Read More

ಖೈನೂರಲ್ಲಿ ಡಾ.ವಿಶ್ವರಾಧ್ಶ ಶ್ರೀ ಹೇಳಿಕೆ | ಮಡಿವಾಳೇಶ್ವರ ಪುರಾಣ ಪ್ರಾರಂಭೋತ್ಸವಕ್ಕೆ ಚಾಲನೆ ಬ್ರಹ್ಮದೇವನಮಡು: ಪ್ರತಿಯೊಬ್ಬರೂ ಜೀವನದಲ್ಲಿ ಮಾನವೀಯ ಮೌಲ್ಶಗಳನ್ನು ಅಳವಡಿಸಿಕೊಂಡಾಗ ಬದುಕು ಸಾಥ೯ಕವಾಗುತ್ತದೆ ಎಂದು ಮಾಗಣಗೇರಿಯ ಬೃಹನ್ಮಠದ ಶಿವಾಚಾಯ೯ ರತ್ನ ಪ್ರಶಸ್ತಿ ಪುರಸ್ತ್ರತ ಡಾ.ವಿಶ್ವರಾಧ್ಶ ಶಿವಾಚಾಯ೯ರು ಹೇಳಿದರು.ಸಿಂದಗಿ ತಾಲೂಕಿನ ಸುಕ್ಷೇತ್ರ ಖೈನೂರ ಗ್ರಾಮದ ಗೊಲ್ಲಾಳೇಶ್ವರ ಜಾತ್ರೆ ಹಾಗೂ ಮಹಾಶಿವರಾತ್ರಿ ಅಂಗವಾಗಿ ಶನಿವಾರ ರಾತ್ರಿ ಹಮ್ಮಿಕೊಂಡಿದ್ದ ಕಡಕೋಳ ಮಡಿವಾಳೇಶ್ವರ ಪುರಾಣ ಪ್ರಾರಂಭೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು.ಪುರಾಣ ಪ್ರವಚನ ಆಲಿಸುವುದರಿಂದ ಮನಸ್ಸಿಗೆ ನೆಮ್ಮದಿ ಲಭಿಸುತ್ತದೆ. ಸಮಾಜದ ಉದ್ದಾರಕ್ಕಾಗಿ ಶ್ರಮಿಸಿದ ಮಹಾಪುರಷರ ಜೀವನ ಚರಿತ್ರೆ ತಿಳಿಯಲು ಎಲ್ಲರೂ ಮುಂದಾಗಬೇಕು. ಬದುಕಿನಲ್ಲಿ ದಾನ-ಧಮ೯ ಮಾಡುವ ಮನೋಭಾವ ಬೆಳಿಸಿಕೊಳ್ಳಬೇಕು ಎಂದರು.ಯಡ್ರಾಮಿ ತಾಲೂಕಿನ ಕಡಕೋಳ ಮಡಿವಾಳೇಶ್ವರ ಮಹಾ ಮಠದ ಡಾ.ರುದ್ರಮುನಿ ಶಿವಾಚಾಯ೯ರು ಮಾತನಾಡಿ, ತಾಯಂದಿರು,ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವ ಜತೆಗೆ ಸಂಸ್ಕಾರ, ಸಂಸ್ಕ್ರತಿ ಕಲಿಸಬೇಕು ಎಂದರು. ಜೇವಗಿ೯ ತಾಲೂಕಿನ ಸೊನ್ನ ವಿರಕ್ತಮಠದ ಡಾ.ಶಿವಾನಂದ ಶಿವಾಚಾಯ೯ರು, ಸ್ಥಳಿಯ ಹಿರೇಮಠದ ಶಾಂತಯ್ಶ ಸ್ವಾಮೀಜಿ, ಪ್ರಮುಖರಾದ ಗೊಲ್ಲಾಳಪ್ಪಗೌಡ ಬಿರಾದಾರ, ಗುರುಸಿದ್ದಪ್ಪ ಸಾಹುಕಾರ, ನಾನಾಗೌಡ ಪಾಟೀಲ,…

Read More

ಇಂಡಿ: ಪ್ರತಿ ಪಾಲಕರು ಅರ್ಥ ಮಾಡಿಕೊಳ್ಳಬೇಕು ಪ್ರಂಪಚದಲ್ಲಿರುವ ಪ್ರತಿ ಮಗು ಕೂಡಾ ಒಂದು ಬಲವಾದ ಪ್ರತಿಭೆ ಹೊತ್ತು ಬಂದಿರುತ್ತದೆ ಎಂದು ಸಾಹಿತಿ, ಶಿಕ್ಷಕ ದಶರಥ ಕೋರಿ ಹೇಳಿದರು.ಪಟ್ಟಣದ ಪ್ರತಿಷ್ಠಿತ ಎಸ್ ಎಸ್ ಪ್ಯಾರಾ ಮೆಡಿಕಲ್ ಕಾಲೇಜು ಹಾಗೂ ಎಕ್ಸಲೆಂಟ್ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವ ನಿಮತ್ಯವಾಗಿ ಹಮ್ಮಿಕೊಂಡಿರುವ ಪ್ರಯುಕ್ತ ಬಹುಮಾನ ವಿತರಣಾ ಸಂಭ್ರಮದಲ್ಲಿ ಪ್ರೇರಣಾದಾಯಕವಾಗಿ ಮಾತನಾಡಿದರು.ಜಗತ್ತು ಕಂಡ ಅತ್ಯದ್ಭುತ ವಿಜ್ಞಾನಿ ಥಾಮಸ್ ಆಲ್ವ ಎಡಿಸನ್ ಬಾಲ್ಯದಲ್ಲಿ ಕಲಿಯುವ ಸಂದರ್ಭದಲ್ಲಿ ಶಾಲಾ ಕಲಿಕೆಯಲ್ಲಿ ತುಂಬಾ ಹಿಂದುಳಿದ ವಿಧ್ಯಾರ್ಥಿಯಾಗಿದ್ದನು.ಆತನ ಶಿಕ್ಷಕರು ಆತನನ್ನು ಕಂಡು ಆತನ ತಾಯಿಗೆ ಪತ್ರ ಬರೆದು ನಿಮ್ಮ ಮಗನಿಗೆ ಶಾಲೆ ಬಿಡಿಸುವುದು ಒಳಿತು ಎಂದರು.ಶಾಲೆಯಲ್ಲಿ ಸಂಪೂರ್ಣವಾಗಿ ನಿರ್ಲಕ್ಷಿತವಾಗಿರುವ ಮಗುವನ್ನು ಕಂಡು ತಾಯಿ ತನ್ನ ಮಗನ ಕುರಿತು ಶಿಕ್ಷಕರು ನೀಡಿದ ಕಾಗದ ಬಗ್ಗೆ ಏನನ್ನೂ ಹೇಳದೆ, ಅದನ್ನು ಮುಚ್ಚಿಟ್ಟಳು. ನಂತರ ಮಗನಿಗೆ ನೀನು ಶಾಲೆಯಲ್ಲಿ ತುಂಬಾ ಜಾಣನಾಗಿರುವೆ.! ನಿನಗೆ ಶಾಲೆಯ ಅಗತ್ಯವಿಲ್ಲವೆಂದು ನಿಮ್ಮ ಶಿಕ್ಷಕರು ಹೇಳಿದ್ದಾರೆ.! ಎಂದು ಹೇಳಿ ಮನೆಯಲ್ಲಿ…

Read More

ವಿಜಯಪುರ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ಜಿಲ್ಲಾ ಘಟಕ ವಿಜಯಪುರ ಇವರ ಸಂಯುಕ್ತ ಆಶ್ರಯದಲ್ಲಿ ಫೆಬ್ರವರಿ.೨೯, ಮಾಚ್ ೧ ಹಾಗೂ ೨ರಂದು ನಗರದ ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಮೂರು ದಿನಗಳ ಕಾಲ ವಿಜಯಪುರ ಜಿಲ್ಲಾ ಮಟ್ಟದ ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಸ್ಪಧೆಗಳನ್ನು ಆಯೋಜಿಸಲಾಗಿದೆ.ಫೆ.೨೯ರ ಬೆಳಗ್ಗೆ ೧೦ ಗಂಟೆಗೆ ಕಾರ್ಯಕ್ರಮವನ್ನು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಲಭ್ಯ ಅಭಿವೃದ್ಧಿ ಸಚಿವರು ಹಾಗೂ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಎಂ.ಬಿ. ಪಾಟೀಲ ಉದ್ಘಾಟಿಸಲಿದ್ದಾರೆ.ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿಜಯಪುರ ನಗರ ಶಾಸಕರಾದ ಬಸನಗೌಡ ಆರ್. ಪಾಟೀಲ (ಯತ್ನಾಳ) ವಹಿಸಲಿದ್ದಾರೆ. ಜವಳಿ, ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವರಾದ ಶಿವಾನಂದ ಪಾಟೀಲ, ನವದೆಹಲಿಯಲ್ಲಿನ ಕರ್ನಾಟಕ ಸರ್ಕಾರದ ವಿಶೇಷ ಪ್ರತಿನಿಧಿ-೨ ಹಾಗೂ ವಿಧಾನ ಪರಿಷತ್ ಶಾಸಕ ಪ್ರಕಾಶ ಹುಕ್ಕೇರಿ, ಕರ್ನಾಟಕ ಸೋಪ್ಸ್ ಮತ್ತು ಡಿಟರ್ಜೆಂಟ್ ನಿಯಮಿತದ…

Read More

ವಿಜಯಪುರ: ಕೇಂದ್ರ ಸರ್ಕಾರದ ವಿವಿಧ ಯೋಜನೆಗಳ ೨೦೨೩-೨೪ನೇ ಸಾಲಿನ ದಿಶಾ ಪ್ರಗತಿ ಪರಿಶೀಲನಾ ಸಭೆಯನ್ನು ಸಂಸದ ರಮೇಶ ಜಿಗಜಿಗಣಿ ಅವರ ಅಧ್ಯಕ್ಷತೆಯಲ್ಲಿ ಇದೇ ಫೆ.೨೮ ರಂದು ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ೧೧ರ ಬದಲಿಗೆ ಮಧ್ಯಾಹ್ನ ೩ ಗಂಟೆಗೆ ನಿಗದಿಪಡಿಸಲಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಪ್ರಕಟಣೆ ತಿಳಿಸಿದೆ.

Read More

ಕಾತ್ರಾಳದಲ್ಲಿ ಭಕ್ತ ಕನಕದಾಸ ಮತ್ತು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನೂತನ ಪುತ್ಥಳಿಯ ಉದ್ಘಾಟನೆ ವಿಜಯಪುರ: ಕನಕದಾಸರು ಭಕ್ತಿಯ ಮೂಲಕ ಮತ್ತು ಸಂಗೊಳ್ಳಿ ರಾಯಣ್ಣ ಸ್ವಾತಂತ್ರ್ಯ ಹೋರಾಟದ ಮೂಲಕ ಜನಮಾನಸದಲ್ಲಿ ಶಾಶ್ವತವಾಗಿ ನೆಲೆಸಿದ್ದಾರೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಹೇಳಿದ್ದಾರೆ.ಬಬಲೇಶ್ವರ ತಾಲೂಕಿನ ಕಾತ್ರಾಳ ಗ್ರಾಮದಲ್ಲಿ ಶ್ರೀ ಭಕ್ತ ಕನಕದಾಸ ಮತ್ತು ಶ್ರೀ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನೂತನ ಪುತ್ಥಳಿಯ ಉದ್ಘಾಟನೆ ನೆರವೇರಿಸಿದ ನಂತರ ಧರ್ಮಸಭೆಗೆ ಚಾಲನೆ ನೀಡಿ ಅವರು ಮಾತನಾಡಿದರು.ಬಸವಣ್ಣ, ಕನಕದಾಸ, ರಾಯಣ್ಣ, ಅಂಬೇಡ್ಕರ ಮಹಾಪುರುಷರು ಮತ್ತು ರಾಷ್ಟ್ರ ನಾಯಕರು. ಒಂದು ಸಮಾಜಕ್ಕೆ ಸೀಮಿತರಾದವರಲ್ಲ. ಹಾಲುಮತ ಅಪಾರ ದೈವಭಕ್ತಿ ಹೊಂದಿರುವ ಸಮಾಜವಾಗಿದೆ. ಭಕ್ತ ಕನಕದಾಸರು ಭಕ್ತಿಯಿಂದ ಕೃಷ್ಣನನ್ನು ಒಲಿಸಿಕೊಂಡಿದ್ದರು. ಸಂಗೊಳ್ಳಿ ರಾಯಣ್ಣ ಕಿತ್ತೂರು ಸಂಸ್ಥಾನದ ಉಳಿವಿಗಾಗಿ ರಾಣಿ ಚೆನ್ನಮ್ಮರ ಜೊತೆ ಬ್ರಿಟೀಷರ ವಿರುದ್ಧ ಹೋರಾಡಿ ಹುತಾತ್ಮರಾಗಿದ್ದಾರೆ. ಅವರ ತ್ಯಾಗ ಮತ್ತು ಆದರ್ಶಮಯ ಜೀವನ ನಮಗೆಲ್ಲರಿಗೂ ಮಾದರಿಯಾಗಿದೆ ಎಂದು ಅವರು…

Read More

ಭೂತನಾಳ-ಬಾಬಾನಗರ ಬಳಿ‌ ಸ್ಥಳ ಗುರುತಿಸಲು ಜಿಲ್ಲಾ ಉಸ್ತುವಾರಿ‌ ಸಚಿವ ಎಂ. ಬಿ. ಪಾಟೀಲ ಸೂಚನೆ ವಿಜಯಪುರ: ರಾಷ್ಟ್ರೀಯ ಹೆದ್ದಾರಿ ಅಭಿವೃದ್ದಿ ಪ್ರಾಧಿಕಾರ(NHAI)ದವರು ರಾಜ್ಯದ ಅರಣ್ಯ ಪ್ರದೇಶದಲ್ಲಿ ಹೆದ್ದಾರಿ‌ ಅಭಿವೃದ್ಧಿ ಕೈಗೊಂಡಿದ್ದು, ಈ ಹೆದ್ದಾರಿಯಿಂದ ಕಡಿಮೆಯಾಗುವ ಅರಣ್ಯ ಜಮೀನಿಗೆ ಬದಲಾಗಿ ವಿಜಯಪುರ ಜಿಲ್ಲೆಯಲ್ಲಿ ಕಂದಾಯ ಇಲಾಖೆ ಜಮೀನನ್ನು ಅರಣ್ಯ ಇಲಾಖೆಗೆ ಹಸ್ತಾಂತರಿಸಲು ಉದ್ದೇಶಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಭೂತನಾಳ ಮತ್ತು ಬಾಬಾನಗರ ಬಳಿ‌ 200 ಹೆಕ್ಚರ್ ಪ್ರದೇಶವನ್ನು ಗುರುತಿಸಲು ಹಾಗೂ ಈ ಪ್ರದೇಶದಲ್ಲಿ ಅರಣ್ಯ ಬೆಳೆಸುವ ಕುರಿತು ಸಮಗ್ರ ಯೋಜನೆ ರೂಪಿಸುವಂತೆ ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ‌ ಸಚಿವ ಎಂ. ಬಿ. ಪಾಟೀಲ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.ರವಿವಾರ ಭೂತನಾಳ ಕೆರೆಗೆ ಭೇಟಿ ನೀಡಿದ ಅವರು ಶತಮಾನದ ಹಿಂದೆ 1910 ಖ್ಯಾತ ಎಂಜಿನಿಯರ್ ಸರ್ ಎಂ. ವಿಶ್ವೇಶ್ವರಯ್ಯ ಉಸ್ತುವಾರಿಯಲ್ಲಿ ನಿರ್ಮಿಸಿದ ಮತ್ತು ಈಗ ನವೀಕರಣ ಮಾಡಲಾಗಿರುವ ಗೆಸ್ಟಹೌಸ್ ಗೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು.ಈ ಸಂದರ್ಭದಲ್ಲಿ ಅರಣ್ಯ…

Read More