ಚಿಮ್ಮಡ: ಗ್ರಾಮದಲ್ಲಿ ಕಾಂಗ್ರೆಸ್ ಪಕ್ಷದ ಗ್ರಾಮ ಘಟಕದ ನೂತನ ಕಾರ್ಯಾಲಯ ಶ್ರೀಗಳಿಂದ ವೀಶೇಷ ಪೂಜೆ ನಡೆಸುವ ಮೂಲಕ ಲೋಕಾರ್ಪಣೆ ಗೊಳಿಸಲಾಯಿತು.
ಗ್ರಾಮದ ಬಸ್ ನಿಲ್ದಾನದ ಪಕ್ಕದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಕಾಂಗ್ರೆಸ್ ಪಕ್ಷದ ಗ್ರಾಮ ಘಟಕದ ಕಾರ್ಯಾಲಯದ ಲೋಕಾರ್ಪಣೆಯನ್ನು ಸ್ಥಳಿಯ ವಿರಕ್ತಮಠದ ಶ್ರೀ ಪ್ರಭು ಮಹಾಸ್ವಾಮಿಗಳು ನೆರವೇರಿಸಿದರು.
ಗ್ರಾಮದ ಪ್ರಮುಖರಾದ ಅಣ್ಣಪ್ಪಗೌಡ ಪಾಟೀಲ, ಬಿ.ಎಸ್. ಪಾಟೀಲ, ಗುರಪ್ಪಾ ಬಳಗಾರ, ಕಾಂಗ್ರಸ್ ಗ್ರಾಮ ಘಟಕದ ಅಧ್ಯಕ್ಷ ಉಮೇಶ ಪೂಜಾರಿ, ಅಶೋಕ ಧಡೂತಿ, ದುಂಡಪ್ಪಾ ಪಾಟೀಲ, ಶಿವಪ್ಪಾ ನಾಗನೂರ, ಮಲ್ಲಿಕಾರ್ಜುನ ಬಳಗಾರ, ಗ್ರಾ.ಪಂ. ಸದಸ್ಯ ಬಾಳಪ್ಪ ಗಡೆಪ್ಪನವರ, ಶ್ರೀಶೈಲ ಮಠಪತಿ, ಪ್ರವೀಣ ಪೂಜಾರಿ, ರವಿ ದೊಡವಾಡ, ಇಮಾಮ ಯಾದವಾಡ, ಮಹಾಲಿಂಗ ಬಳಗಾರ, ಪಿರಸಾಬ ನದಾಫ, ಸಲೀಮ ಸರಕಾವಸ ಸೇರಿದಂತೆ ಹಲವಾರು ಜನ ಪ್ರಮುಖರು ಆಗಮಿಸಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

