ವಿಜಯಪುರ: ಭಾರತೀಯ ಎಲ್ಲಾಭಾಷೆಗಳ ಮೂಲವು ಒಂದೇ, ಎಲ್ಲಾ ಭಾಷೆಗಳು ಒಂದಡೆಯಿಂದಲೇ ಜನ್ಯವಾಗಿ ಆಯಾಪ್ರದೇಶ, ವಾತಾವರಣ, ರಾಜಕೀಯ, ಧಾರ್ಮಿಕ ಅನುಗುಣವಾಗಿ ಮರ‍್ಪಾಡುಗಳಾಗಿವೆ ಎಂದು ಕರ್ನಾಟಕ ಇತಿಹಾಸ ಅಕಾಡೆಮಿ ಅಧ್ಯಕ್ಷರಾದ ದೇವರಕೊಂಡಾರೆಡ್ಡಿ ಹೇಳಿದರು.
ಶನಿವಾರ ನಗರ ಕುಮುದಬೇನ್ ದರ್ಬಾರ್ ವಿದ್ಯಾಲಯದಲ್ಲಿ ನಡೆದ, ಅಭಾಸಾಪ ಹಾಗೂ ಮಂಥನಆಯೋಜನೆಯ ಉಪನ್ಯಾಸ ಕಾರ‍್ಯಕ್ರಮದಲ್ಲಿ ಮಾತಾಡಿದ ಅವರು, ಭಾರತದಲ್ಲಿ ಬರವಣಿಗೆ ಪ್ರಾರಂಭವಾಗಿದ್ದು ಅಶೋಕನ ಕಾಲದಲ್ಲಿ. ಅಲ್ಲಿಯವರಿಗೆ ಬರವಣಿಗೆಯೇ ನಮ್ಮ ದೇಶದಲ್ಲಿ ಇರಲಿಲ್ಲ. ಇತಿಹಾಸ ಅಧ್ಯಯನ ದೃಷ್ಟಿಕೋನದಿಂದ ಶಾಸನಗಳು ಅತ್ಯಂತ ಸ್ಪಷ್ಟ ಇತಿಹಾಸವನ್ನು ಹೇಳುತ್ತವೆ ಎಂದು ವಿವರಿಸಿದ ಅವರು, ಸರ್ಕಾರ ಅಥವಾ ಪ್ರಾಚ್ಯವಸ್ತು ಇಲಾಖೆಯನ್ನು ದೂರುವ ಬದಲು ನಿಮ್ಮನಿಮ್ಮ ಊರುಗಳಲ್ಲಿನ ಐತಿಹಾಸಿಕ ಪರಂಪರೆ ಸ್ಮಾರಕ, ದೇವಾಲಯಗಳನ್ನು ಸಂರಕ್ಷಣೆ ಮಾಡಿಕೊಳ್ಳುವಂತೆ ಕರೆ ಕೊಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಭಾಸಾಪ ಜಿಲ್ಲಾಧ್ಯಕ್ಷ ನಾರಾಯಣ ಬಾಬಾನಗರ ವಹಿಸಿದ್ದರು. ಕಾರ್ಯಕ್ರಮ ನಿರೂಪಣೆ ಸುಭಾಷ್ ಕನ್ನೂರು , ಸ್ವಾಗತ ಪರಿಚಯ ಶ್ರೀರಂಗ ಕುಲಕರ್ಣಿ, ವಂದನಾರ‍್ಪಣೆ ಮಾಡಿದರು. ಬಸವರಾಜ ದಂಡವತೆ, ಶ್ರೀಧರ “ವಂದೇ ಮಾತರಂ” ಗೀತೆ ಹಾಡಿದರು.
ಕಾರ್ಯಕ್ರಮಲ್ಲಿ ಜಿ.ಆರ್ ಕುಲಕರ್ಣಿ, ಎ.ಎಲ್ ಆಲೂರು, ಉಮೇಶ ಕಾರಜೋಳ, ಪ್ರೊ. ಆನಂದ ಕುಲಕರ್ಣಿ, ಶರಣು ಹೀರಾಪುರ, ವಿನೋದ ಮಣೂರ, ಬಲವಂತ ಕುಲಕರ್ಣಿ, ಶ್ರೀಶ ಹುಟಗಿ, ಶ್ರೀರಂಗ ಪುರಾಣಿಕ, ಈರಣ್ಣ ಬಿರಾದಾರ, ಸಂತೋಷ ಕಳಿಗುಡ್ಡ, ರಮೇಶ ಉಳ್ಳಾಗಡ್ಡಿ, ರೋಘತ್ತಮ ಅರ್ಜುಣಗಿ, ಮಯೂರ ತಿಳಗೂಳಕರ, ಕೇಶವ ಕುಲಕರ್ಣಿ, ಸತೀಶ ಪಾಟೀಲ, ರಾಹುಲ್ ರೋಹಿಡೆಕರ ಮುಂತಾದ ಇತಿಹಾಸ ಆಸಕ್ತರು ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

