ಇಂಡಿ: ಪ್ರತಿ ಪಾಲಕರು ಅರ್ಥ ಮಾಡಿಕೊಳ್ಳಬೇಕು ಪ್ರಂಪಚದಲ್ಲಿರುವ ಪ್ರತಿ ಮಗು ಕೂಡಾ ಒಂದು ಬಲವಾದ ಪ್ರತಿಭೆ ಹೊತ್ತು ಬಂದಿರುತ್ತದೆ ಎಂದು ಸಾಹಿತಿ, ಶಿಕ್ಷಕ ದಶರಥ ಕೋರಿ ಹೇಳಿದರು.
ಪಟ್ಟಣದ ಪ್ರತಿಷ್ಠಿತ ಎಸ್ ಎಸ್ ಪ್ಯಾರಾ ಮೆಡಿಕಲ್ ಕಾಲೇಜು ಹಾಗೂ ಎಕ್ಸಲೆಂಟ್ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವ ನಿಮತ್ಯವಾಗಿ ಹಮ್ಮಿಕೊಂಡಿರುವ ಪ್ರಯುಕ್ತ ಬಹುಮಾನ ವಿತರಣಾ ಸಂಭ್ರಮದಲ್ಲಿ ಪ್ರೇರಣಾದಾಯಕವಾಗಿ ಮಾತನಾಡಿದರು.
ಜಗತ್ತು ಕಂಡ ಅತ್ಯದ್ಭುತ ವಿಜ್ಞಾನಿ ಥಾಮಸ್ ಆಲ್ವ ಎಡಿಸನ್ ಬಾಲ್ಯದಲ್ಲಿ ಕಲಿಯುವ ಸಂದರ್ಭದಲ್ಲಿ ಶಾಲಾ ಕಲಿಕೆಯಲ್ಲಿ ತುಂಬಾ ಹಿಂದುಳಿದ ವಿಧ್ಯಾರ್ಥಿಯಾಗಿದ್ದನು.
ಆತನ ಶಿಕ್ಷಕರು ಆತನನ್ನು ಕಂಡು ಆತನ ತಾಯಿಗೆ ಪತ್ರ ಬರೆದು ನಿಮ್ಮ ಮಗನಿಗೆ ಶಾಲೆ ಬಿಡಿಸುವುದು ಒಳಿತು ಎಂದರು.
ಶಾಲೆಯಲ್ಲಿ ಸಂಪೂರ್ಣವಾಗಿ ನಿರ್ಲಕ್ಷಿತವಾಗಿರುವ ಮಗುವನ್ನು ಕಂಡು ತಾಯಿ ತನ್ನ ಮಗನ ಕುರಿತು ಶಿಕ್ಷಕರು ನೀಡಿದ ಕಾಗದ ಬಗ್ಗೆ ಏನನ್ನೂ ಹೇಳದೆ, ಅದನ್ನು ಮುಚ್ಚಿಟ್ಟಳು. ನಂತರ ಮಗನಿಗೆ ನೀನು ಶಾಲೆಯಲ್ಲಿ ತುಂಬಾ ಜಾಣನಾಗಿರುವೆ.! ನಿನಗೆ ಶಾಲೆಯ ಅಗತ್ಯವಿಲ್ಲವೆಂದು ನಿಮ್ಮ ಶಿಕ್ಷಕರು ಹೇಳಿದ್ದಾರೆ.! ಎಂದು ಹೇಳಿ ಮನೆಯಲ್ಲಿ ಆತನಿಗೆ ಬೋಧನೆ ನೀಡಿ ಆತನನ್ನು ವಿಜ್ಞಾನದ ನೂರಾರು ಆವಿಷ್ಕಾರಗಳನ್ನು ಕಂಡು ಹಿಡಿಯಲು ಪ್ರೇರಣೆಯಾದಳು. ಹಾಗಾಗಿ ಪ್ರತಿ ಪಾಲಕರು ಅರ್ಥ ಮಾಡಿಕೊಳ್ಳಬೇಕು ಪ್ರಂಪಚದಲ್ಲಿರುವ ಪ್ರತಿ ಮಗು ಕೂಡಾ ಒಂದು ಬಲವಾದ ಪ್ರತಿಭೆ ಹೊತ್ತು ಬಂದಿರುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷ ಸಂತೋಷ ಕೆಂಭೋಗಿ ಮಾತನಾಡಿ, ಮಕ್ಕಳಲ್ಲಿ ಶಿಸ್ತು, ಸಮಯ ಪ್ರಜ್ಞೆ, ಸಂಶೋಧನಾ ಪ್ರಜ್ಞೆಯನ್ನು ಬೆಳೆಸಬೇಕು ಎಂದರು.
ಈ ಸಂದರ್ಭದಲ್ಲಿ ಪ್ಯಾರಾ ಮೆಡಿಕಲ್ ಕಾಲೇಜಿನ ಪ್ರಾಂಶುಪಾಲರಾದ ಸೌಮ್ಯ ರೂಗಿ ಪ್ರಾಧ್ಯಾಪಕರಾದ ಮಹಾಂತೇಶ ಪಾಟೀಲ ಶಿಕ್ಷಕರಾದ ಶ್ರೀಶೈಲ್ ಹೂಗಾರ ಅರುಣ ವಠಾರ ಶೃತಿ, ವಾಲಿಕಾರ ಶ್ವೇತಾ ದೋತ್ರೆ, ಶೋಭಾ ಸಾರವಾಡ ಹಾಜರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

