ಖೈನೂರಲ್ಲಿ ಡಾ.ವಿಶ್ವರಾಧ್ಶ ಶ್ರೀ ಹೇಳಿಕೆ | ಮಡಿವಾಳೇಶ್ವರ ಪುರಾಣ ಪ್ರಾರಂಭೋತ್ಸವಕ್ಕೆ ಚಾಲನೆ
ಬ್ರಹ್ಮದೇವನಮಡು: ಪ್ರತಿಯೊಬ್ಬರೂ ಜೀವನದಲ್ಲಿ ಮಾನವೀಯ ಮೌಲ್ಶಗಳನ್ನು ಅಳವಡಿಸಿಕೊಂಡಾಗ ಬದುಕು ಸಾಥ೯ಕವಾಗುತ್ತದೆ ಎಂದು ಮಾಗಣಗೇರಿಯ ಬೃಹನ್ಮಠದ ಶಿವಾಚಾಯ೯ ರತ್ನ ಪ್ರಶಸ್ತಿ ಪುರಸ್ತ್ರತ ಡಾ.ವಿಶ್ವರಾಧ್ಶ ಶಿವಾಚಾಯ೯ರು ಹೇಳಿದರು.
ಸಿಂದಗಿ ತಾಲೂಕಿನ ಸುಕ್ಷೇತ್ರ ಖೈನೂರ ಗ್ರಾಮದ ಗೊಲ್ಲಾಳೇಶ್ವರ ಜಾತ್ರೆ ಹಾಗೂ ಮಹಾಶಿವರಾತ್ರಿ ಅಂಗವಾಗಿ ಶನಿವಾರ ರಾತ್ರಿ ಹಮ್ಮಿಕೊಂಡಿದ್ದ ಕಡಕೋಳ ಮಡಿವಾಳೇಶ್ವರ ಪುರಾಣ ಪ್ರಾರಂಭೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು.
ಪುರಾಣ ಪ್ರವಚನ ಆಲಿಸುವುದರಿಂದ ಮನಸ್ಸಿಗೆ ನೆಮ್ಮದಿ ಲಭಿಸುತ್ತದೆ. ಸಮಾಜದ ಉದ್ದಾರಕ್ಕಾಗಿ ಶ್ರಮಿಸಿದ ಮಹಾಪುರಷರ ಜೀವನ ಚರಿತ್ರೆ ತಿಳಿಯಲು ಎಲ್ಲರೂ ಮುಂದಾಗಬೇಕು. ಬದುಕಿನಲ್ಲಿ ದಾನ-ಧಮ೯ ಮಾಡುವ ಮನೋಭಾವ ಬೆಳಿಸಿಕೊಳ್ಳಬೇಕು ಎಂದರು.
ಯಡ್ರಾಮಿ ತಾಲೂಕಿನ ಕಡಕೋಳ ಮಡಿವಾಳೇಶ್ವರ ಮಹಾ ಮಠದ ಡಾ.ರುದ್ರಮುನಿ ಶಿವಾಚಾಯ೯ರು ಮಾತನಾಡಿ, ತಾಯಂದಿರು,ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವ ಜತೆಗೆ ಸಂಸ್ಕಾರ, ಸಂಸ್ಕ್ರತಿ ಕಲಿಸಬೇಕು ಎಂದರು. ಜೇವಗಿ೯ ತಾಲೂಕಿನ ಸೊನ್ನ ವಿರಕ್ತಮಠದ ಡಾ.ಶಿವಾನಂದ ಶಿವಾಚಾಯ೯ರು, ಸ್ಥಳಿಯ ಹಿರೇಮಠದ ಶಾಂತಯ್ಶ ಸ್ವಾಮೀಜಿ, ಪ್ರಮುಖರಾದ ಗೊಲ್ಲಾಳಪ್ಪಗೌಡ ಬಿರಾದಾರ, ಗುರುಸಿದ್ದಪ್ಪ ಸಾಹುಕಾರ, ನಾನಾಗೌಡ ಪಾಟೀಲ, ನಿಂಗಣ್ಣ ಬಡಿಗೇರ, ಸಿದ್ದು ಬಿರಾದಾರ ಸೇರಿದಂತೆ ಮತ್ತಿತ್ತರಿದ್ದರು.

