Subscribe to Updates
Get the latest creative news from FooBar about art, design and business.
Author: editor.udayarashmi@gmail.com
ವಿಜಯಪುರ: ನಗರದ ಬಳಿಯ ಅರಕೇರಿ ಗ್ರಾಮದ ಹತ್ತಿರ ನಿರ್ಮಾಣವಾಗುತ್ತಿರುವ ನೂತನ ಕೇಂದ್ರ ಕಾರಾಗೃಹದ ಕಾಮಗಾರಿ ಸ್ಥಳಕ್ಕೆ ಶುಕ್ರವಾರ ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.ನೂತನ ಕೇಂದ್ರ ಕಾರಾಗೃಹಕ್ಕೆ ಭೂತನಾಳ ಕೆರೆಯಿಂದ ನೀರಿನ ಸೌಲಭ್ಯವನ್ನು ಒದಗಿಸುವ ೬೫೦.೦೦ ಲಕ್ಷಗಳ ಅಂದಾಜು ವೆಚ್ಚದ ಪ್ರಸ್ತಾವನೆ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡ ಅವರು, ನೂತನ ಕೇಂದ್ರ ಕಾರಾಗೃಹದ ಕಾಮಗಾರಿಗಳ ಎಲ್ಲ ವಿಭಾಗಗಳ ವೀಕ್ಷಣೆ ನಡೆಸಿ, ಕಾರಾಗೃಹದ ಹೊರವೃತ್ತದ ಸುತ್ತುವರಿಗೆ ತೆರಳಿ ಭದ್ರತಾ ಗೋಡೆಯನ್ನು ವೀಕ್ಷಿಸಿದರು.ಈ ಸಂದರ್ಭದಲ್ಲಿ ಕಾರಾಗೃಹ ಇಲಾಖೆಯ ಅಧಿಕಾರಿಗಳು ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು, ಅಭಿಯಂತರರು ಉಪಸ್ಥಿತರಿದ್ದರು.
ಜಿಪಂ ಉಪ ಕಾರ್ಯದರ್ಶಿ ವಿಜಯಕುಮಾರ ಆಜೂರ ಅಭಿಮತ ವಿಜಯಪುರ: ಗ್ರಾಮ ನಗರ ಸ್ವಚ್ಛತೆಯನ್ನು ಹೆಚ್ಚಿಸುವಲ್ಲಿ ಪೌರಕಾರ್ಮಿಕರ ಪಾತ್ರ ಅನನ್ಯವಾಗಿದ್ದು, ಸಮಾಜದಲ್ಲಿ ಪೌರ ಕಾರ್ಮಿಕರಿಗೆ ಗೌರವ ನೀಡುವುದು ಪ್ರತಿ ನಾಗರಿಕನ ಕರ್ತವ್ಯ ಎಂದು ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ವಿಜಯಕುಮಾರ ಆಜೂರ ಹೇಳಿದರು.ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ, ನಗರಭಿವೃದ್ಧಿ ಕೋಶ ಹಾಗೂ ಸಮಾಜ ಕಲ್ಯಾಣ ಇಲಾಖೆ ವಿಜಯಪುರ ವತಿಯಿಂದ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ಹಮ್ಮಿಕೊಂಡ ಪೌರಕಾರ್ಮಿಕರಿಗೆ ಇ.ಎಸ್.ಐ, ಪಿಎಫ್ ವಿಮೆ, ಸ್ವಚ್ಛತೆ ಮತ್ತು ಆರೋಗ್ಯ ಕುರಿತು ಅರಿವು ಮೂಡಿಸುವ ಒಂದು ದಿನದ ಕಾರ್ಯಗಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ಪೌರಕಾರ್ಮಿಕರ ಗೌರವಕ್ಕೆ ಕುಂದು ಬಾರದಂತೆ ನಡೆದುಕೊಳ್ಳಬೇಕು. ಅವರು ನಿರ್ವಹಿಸುವ ಕಾರ್ಯ ಅನನ್ಯವಾಗಿದೆ. ಸ್ವಚ್ಛ ಸುಂದರ ನಗರವನ್ನಾಗಿಸುವಲ್ಲಿ ಅವರು ನಿರ್ವಹಿಸುವ ಕಾರ್ಯ ಮಹತ್ತರವಾಗಿದೆ. ಅದರಂತೆ, ಪೌರಕಾರ್ಮಿಕರು ಸಹ ತಮ್ಮ ವೈಯಕ್ತಿಕ ಆರೋಗ್ಯದ ಕುರಿತು ನಿಗಾವಹಿಸಿ, ತಮ್ಮ ಆರೋಗ್ಯ ಕಾಪಾಡಿಕೊಳ್ಳಬೇಕು. ತಮ್ಮ ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸಿ,ಅವರನ್ನು ವಿದ್ಯಾವಂತರನ್ನಾಗಿ ಮಾಡಿ, ಉನ್ನತ ಹುದ್ದೆಗೇರಲು ಪ್ರೇರೇಪಿಸಬೇಕು ಎಂದು ಹೇಳಿದರು.ಮಹಾನಗರ…
ಬಸವನಬಾಗೇವಾಡಿ: ಸಹಜ ನಗೆ ಆರೋಗ್ಯಕರವಾಗುವ ಜೊತೆಗೆ ಮನಸ್ಸಿನ ಒತ್ತಡ ಕಡಿಮೆ ಮಾಡುತ್ತದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಸಹಜ ನಗೆಯನ್ನು ರೂಢಿ ಮಾಡಿಕೊಳ್ಳುವುದು ಉತ್ತಮ ಎಂದು ಕರ್ನಾಟಕ ರಾಜ್ಯೋತ್ಸವ ಪುರಸ್ಕ್ರತ ಮಕ್ಕಳ ಸಾಹಿತಿ ಪ.ಗು.ಸಿದ್ದಾಪೂರ ಹೇಳಿದರು.ಪಟ್ಟಣದ ಬಸವ ಭವನದಲ್ಲಿ ಕರ್ನಾಟಕ ರಾಜ್ಯ ನಗೆಯೋಗ ಕೂಟಗಳ ಒಕ್ಕೂಟ ಹಾಗೂ ಸ್ಥಳೀಯ ಬಸವೇಶ್ವರ ನಗೆಯೋಗ ಕೂಟದ ಸಹಯೋಗದಲ್ಲಿ ಎರಡು ದಿನಗಳ ಕಾಲ ಹಮ್ಮಿಕೊಂಡಿರುವ ರಾಜ್ಯ ಮಟ್ಟದ ೨೦ ನೇ ನಗೆ ಸಮ್ಮೇಳನದಲ್ಲಿ ಸನ್ಮಾನ ಸ್ವೀಕರಿಸಿದ ನಂತರ ಮಾತನಾಡಿದ ಅವರು, ಹೃದಯದಿಂದ ಬರುವುದೇ ನಿಜವಾದ ನಗೆ. ನಗೆಯಲ್ಲಿ ವ್ಯಂಗ್ಯ ನಗೆ, ಕುಹಕ ನಗೆ, ಅಪಹಾಸ್ಯ ನಗೆ ಉಂಟು. ಇವು ಇನ್ನೊಬ್ಬರಿಗೆ ನೋವು ಉಂಟು ಮಾಡುತ್ತವೆ. ಇಂತಹ ನಗೆ ಯಾರೂ ರೂಢಿಸಿಕೊಳ್ಳದೇ ಆರೋಗ್ಯಕರವಾದ ಸಹಜ ನಗೆ ರೂಢಿಸಿಕೊಂಡರೆ ಆರೋಗ್ಯದಿಂದ ಇರಲು ಸಾಧ್ಯ. ರಾಜರ ಕಾಲದಲ್ಲಿ ಕಲಾವಿದರೊಂದಿಗೆ ಹಾಸ್ಯ ಕಲಾವಿದರಿಗೂ ರಾಜಾಶ್ರಯ ನೀಡುತ್ತಿದ್ದರು ಎಂದ ಅವರು, ನಗೆಯಲ್ಲಿ ಹೊಗೆ ಇರಬಾರದು. ಇದು ಪ್ರತಿಯೊಬ್ಬರಲ್ಲಿ ಹಗೆ ಉಂಟು ಮಾಡುತ್ತದೆ. ಉತ್ತಮ ಆರೋಗ್ಯ…
ಬಸವನಬಾಗೇವಾಡಿ: ಪಟ್ಟಣದ ಬಿ ಎಲ್ ಡಿ ಇ ಸಂಸ್ಥೆಯ ಬಸವೇಶ್ವರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಭಕ್ತ ಕನಕದಾಸರ ಜಯಂತಿಯನ್ನು ಗುರುವಾರ ಆಚರಿಸಲಾಯಿತು.ಜಯಂತಿಯಂಗವಾಗಿ ಭಕ್ತ ಕನಕದಾಸರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದ ನಂತರ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಎ.ವ್ಹಿ.ಸೂರ್ಯವಂಶಿ ಮಾತನಾಡಿದ ಅವರು, ಕನಕದಾಸರು ಇಡೀ ಮಾನವಕುಲಕ್ಕೆ ಸಾಮರಸ್ಯದ ಬೋಧನೆ ಮಾಡಿದ್ದಾರೆ. ಇವರ ಸಂದೇಶಗಳು ಸರ್ವಕಾಲಿಕ ಪ್ರಸ್ತುತವಾಗಿವೆ ಎಂದರು.ಪೂಜಾ ಕಾರ್ಯಕ್ರಮದಲ್ಲಿ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ರವೀಂದ್ರಗೌಡ ಕೆ., ನ್ಯಾಕ ಸಂಯೋಜಕ ಪ್ರೊ.ಸಿ.ಪಿ.ಧಡೇಕರ, ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ವೈ.ಬಿ.ನಾಯಕ, ವಿದ್ಯಾರ್ಥಿ ಒಕ್ಕೂಟದ ಮುಖ್ಯಸ್ಥ ಪ್ರೊ.ಡಿ.ಎಸ್.ಲಗಳಿ, ಐಕ್ಯೂಎಸಿ ಸಂಯೋಜಕ ಪ್ರೊ.ದಿಲೀಪಕುಮಾರ, ಡಾ.ಎಸ್.ಬಿ.ಜನಗೊಂಡ, ಎಂ.ಕೆ.ಯಾಧವ, ಪಿ.ಎಸ್.ಹೊರಕೇರಿ, ಎಂ.ಆರ್.ಮಮದಾಪೂರ, ಎಸ್.ಡಿ.ಹಣಮರೆಡ್ಡಿ, ಜೆ.ಎಸ್.ಡಾವಣಗೇರಿ ಎಸ್.ಜೆ.ಸೂರ್ಯವಂಶಿ ಇತರರು ಭಾಗವಹಿಸಿದ್ದರು.
ಬಸವನಬಾಗೇವಾಡಿ: ಪಟ್ಟಣದ ಬಿ ಎಲ್ ಡಿ ಇ ಸಂಸ್ಥೆಯ ಬಸವೇಶ್ವರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಬಿಎ ವಿಭಾಗದ ವಿದ್ಯಾರ್ಥಿ ವಿಜಯ ಮಾಳಗೊಂಡ ಅವರು ರಾಣಿ ಚನ್ನಮ್ಮ ವಿಶ್ವವಿದ್ಯಾಲಯವು ಕಳೆದ ಸೆಪ್ಟಂಬರ್-ಅಕ್ಟೋಬರ್-೨೦೨೩ ನಡೆಸಿದ ವಿಶ್ವವಿದ್ಯಾಲಯದ ೬ ನೇ ಸೆಮಿಸ್ಟರ್ ಪರೀಕ್ಷೆಯಲ್ಲಿ ಸಂಖ್ಯಾಶಾಸ್ತ್ರ ಪತ್ರಿಕೆ ೧ ಮತ್ತು ೨ ರಲ್ಲಿ ೧೦೦ ಕ್ಕೆ ೧೦೦ ಅಂಕ ಪಡೆಯುವ ಮೂಲಕ ಸಾಧನೆ ಮಾಡಿದ್ದಾರೆ. ಸಾಧನೆಗೈದ ವಿದ್ಯಾರ್ಥಿಗೆ ಸಂಸ್ಥೆಯ ಆಡಳಿತಾಧಿಕಾರಿ ಡಾ.ಆರ್.ಬಿ.ಕೋಟ್ನಾಳ, ಪ್ರಾಚಾರ್ಯ ಡಾ.ಎ.ವ್ಹಿ.ಸೂರ್ಯವಂಶಿ ಸಂಖ್ಯಾಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಪಿ.ಎಸ್.ಹೊರಕೇರಿ, ಸಿಬ್ಬಂದಿ ಹರ್ಷ ವ್ಯಕ್ತಪಡಿಸಿದ್ದಾರೆ ಎಂದು ಮಹಾವಿದ್ಯಾಲಯ ಪ್ರಕಟಣೆ ತಿಳಿಸಿದೆ.
ಸಿಂದಗಿ: ಪುರಾಣ ಎಂಬುದು ಪುಂಡರಗೋಷ್ಠಿಯಲ್ಲ, ಪುರಾಣ ಎಂದರೆ ಆಧ್ಯಾತ್ಮ ಶರಣರ ಬದುಕಿನ ಅರ್ಥ ತಿಳಿದುಕೊಂಡು ಅವರ ಹಾದಿಯಲ್ಲಿ ಸಾಗುವ ನಡೆ ಕಲಿಸುವ ಧರ್ಮದ ಪಾಠಶಾಲೆ ಇದಂತೆ ಅದಕ್ಕೆ ಶರಣರ ಸಂತರ ಸತ್ಪುರುಷರ ದಾರ್ಶನಿಕರ ಮಹಾತ್ಮರ ಚರಿತ್ರೆ ಆಲಿಸುವುದರಿಂದ ಜೀವನ ಪಾವನವಾಗುವುದು ಎಂದು ಪಂಚಮಸಾಲಿ ಸಮಾಜದ ತಾಲೂಕು ಅಧ್ಯಕ್ಷ ಎಂ.ಎಂ.ಹಂಗರಗಿ ಹೇಳಿದರು.ತಾಲೂಕಿನ ಮೋರಟಗಿ ಗ್ರಾಮದಲ್ಲಿ ಸಿದ್ದರಾಮೇಶ್ವರ ಜಾತ್ರಾ ನಿಮಿತ್ಯ ೧೪ ದಿನಗಳ ಪರ್ಯಂತ ಹಮ್ಮಿಕೊಂಡ ಜಗದ್ಗುರು ರೇವಣಸಿದ್ಧೇಶ್ವರ ಹಾಗೂ ಸೊನ್ನಲಗಿ ಶಿವಯೋಗಿ ಸಿದ್ಧರಾಮೇಶ್ವರ ಪುರಾಣ ಮಂಗಲ ಹಾಗೂ ಧರ್ಮಸಭೆಯಲ್ಲಿ ಮಾತನಾಡಿ, ಅವಿಭಕ್ತ ಕುಟುಂಬಗಳು ಮರೆಯಾಗಿ ಚಿಕ್ಕ ಚಿಕ್ಕ ಸಂಸಾರಗಳು ಉದ್ಭವಾಗುತ್ತೀರುವುದು ಸಂಬಂಧಗಳ ಬೆಲೆ ತಿಳಿಸಿ ರಕ್ತ ಸಂಬಂಧಗಳ ಅರ್ಥ ಭೋದಿಸುವ ಪಾವನ ಸ್ಥಳಗಳು ಧರ್ಮದ ದೇವಾಲಯಗಳು ಅತ್ತೆ ಮಾವ ಮೈದುನ ಸಹೋದರ ಸಹೋದರಿ ಪತಿ ಪತ್ನಿಯರ ಅಂತರಂಗದ ತೋಳಲಾಟ ಹೋಗಲಾಡಿಸುವ ದಿವ್ಯ ಶಕ್ತಿ ಶರಣರ ಜೀವನ ಚರಿತ್ರೆಯಲ್ಲಿ ಇರುವುದು ಇಂತಹ ಅದ್ಭುತ ಶಕ್ತಿ ಶರಣರ ಜೀವನ ಚರಿತ್ರೆಯಲ್ಲಿ ಇದೆ. ಧರ್ಮದ ರಕ್ಷಣ ಹಿರಿಯರ…
ಮುದ್ದೇಬಿಹಾಳ: ಕಲ್ಬುರ್ಗಿ ಜಿಲ್ಲೆ ಚಿತ್ತಾಪೂರ ತಾಲೂಕಿನ ಹಲಕರ್ಟಿ ಗ್ರಾಮದ ಶ್ರೀ ವೀರಭದ್ರೇಶ್ವರ ಜಾತ್ರಾ ಮಹೋತ್ಸವ ಲಕ್ಷಾಂತರ ಭಕ್ತರ ಮಧ್ಯೆ ಅದ್ಧೂರಿಯಾಗಿ ಜರುಗಿತು.ಡಿ೧ ರಂದು ರಾತ್ರಿ ಅಗ್ನಿ ಪ್ರವೇಶ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಮಧ್ಯರಾತ್ರ ೨ಗಂಟೆಗೆ ಪ್ರಾರಂಭವಾಗಿ ಮೊದಲು ಪುರವಂತರರು ಅಗ್ನಿಪ್ರವೇಶಿಸಿದರು. ಬೆಳಗಿನ ಜಾವ ೫ಗಂಟೆಯವರೆಗೆ ಯಾವುದೇ ತೊಂದರೆಯಿಲ್ಲದೇ ನೆರವೇರಿತು. ಸಂಜೆ ೭ ಗಂಟೆಗೆ ರಥೋತ್ಸವ ಜರುಗಿತು. ಭಕ್ತರು ಚಲಿಸುವ ರಥಕ್ಕೆ ಉತ್ತತ್ತಿ ಮತ್ತು ಬಾಳೆಹಣ್ಣು ಎಸೆದು ಭಕ್ತಿಯನ್ನು ಪ್ರದರ್ಶಿಸಿದರು.ಅದಕ್ಕೂ ಮೊದಲು ನಡೆದ ಮದ್ದು ಸುಡುವ ಕಾರ್ಯಕ್ರಮ ಬಾನಂಗಳದ ಸೌಂದರ್ಯವನ್ನು ಇಮ್ಮಡಿಗೊಳಿತ್ತು.
ತನು ಫೌಂಡೇಶನ್‌ವತಿಯಿಂದ ಕನ್ನಡ ರಾಜ್ಯೋತ್ಸವ | ಸಾಧಕರಿಗೆ ‘ತನು ಕನ್ನಡ-ಮನ ಕನ್ನಡ ರಾಜ್ಯ ಪ್ರಶಸ್ತಿ’ ಪ್ರದಾನ ವಿಜಯಪುರ: ನಾವು ನವ್ಹೆಂಬರ್ ಕನ್ನಡಿಗರಾಗಬಾರದು, ನಿರಂತರ ಕನ್ನಡಿಗರಾಗಬೇಕು. ಕನ್ನಡವನ್ನು ನಾವೆಲ್ಲಾ ಮಾತನಾಡುತ್ತಾ, ಆಡಳಿತದಲ್ಲಿ ಅಳವಡಿಸಿಕೊಳ್ಳುವುದರ ಮೂಲಕ ಇಂದು ನಾವು ಕನ್ನಡವನ್ನು ಉಳಿಸಬೇಕಾಗಿದೆ ಎಂದು ಕಮಾಂಡೆಂಟ್ ಐಆರ್‌ಬಿ ಮುಖ್ಯಸ್ಥ ಎನ್.ಬಿ.ಮೆಳ್ಳೆಗಟ್ಟೆ ಹೇಳಿದರು.ನಗರದ ಶ್ರೀ ಕಂದಗಲ್ಲ ಹಣಮಂತರಾಯ ರಂಗಮಂದಿರದಲ್ಲಿ ನಡೆದ ತನು ಫೌಂಡೇಶನ್ ವಿಜಯಪುರದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ, ಕನ್ನಡ ರಾಜ್ಯೋತ್ಸವದ ಪ್ರಯುಕ್ತ ‘ಕನ್ನಡ ಸಿರಿಗನ್ನಡ’ ಕಾರ್ಯಕ್ರಮ ಹಾಗೂ ‘ತನು ಕನ್ನಡ ಮನ ಕನ್ನಡ’ ರಾಜ್ಯ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕನ್ನಡಕ್ಕಿರುವ ಶ್ರೀಮಂತಿಕೆ, ಅದರ ಸಂಸ್ಕೃತಿಗಿರುವ ತಾಕತ್ತು ಶಾಶ್ವತವಾಗಿದೆ. ಇಂಗ್ಲೀಷ್ ನ ವ್ಯಾಮೋಹ ಬಿಟ್ಟು ಕನ್ನಡಕ್ಕೆ ಆದ್ಯತೆ ಕೊಡಬೇಕು. ವ್ಯವಹಾರಕ್ಕಾಗಿ ಮಾತ್ರ ಬೇರೆ ಭಾಷೆ ಇರಲಿ, ಮನಸ್ಪೂರ್ವಕವಾಗಿ ಕನ್ನಡ ಮಾತ್ರ ಇರಲಿ ಎಂದು ತಿಳಿಸಿದರು.ಅನ್ಯಭಾಷಿಕರಿಗೆ ನಮ್ಮ ಕನ್ನಡ ಕಲಿಸುವ ಪರಿಪಾಠ ಆಗಬೇಕಿದೆ. ಕರ್ನಾಟಕದ ಏಕೀಕರಣದ ಮಹತ್ವವನ್ನು ನಾವು ಇಂದು ಅರಿಯುವುದು ಮಹತ್ವದ್ದಾಗಿದೆ. ಸಾಹಿತಿಗಳ ಬರಹಗಳನ್ನು…
ಇಂಡಿ: ಈ ಭಾಗದ ಜನರ ಆಶೀರ್ವಾದದಿಂದ ಸತತ ೪೫ ವರ್ಷಗಳ ಕಾಲ ರಾಜಕಾರಣ ಮಾಡಿದ್ದೇನೆ. ಜಿಲ್ಲೆಗೆ ಒಂದು ಲಕ್ಷ ಕೋಟಿಗೂ ಅಧಿಕ ಅನುದಾನ ತಂದು ಅಭಿವೃಧ್ಧಿಪಡಿಸಿದ್ದೇನೆ ಎಂದು ಸಂಸದ ರಮೇಶ ಜಿಗಜಿಣಗಿ ಹೇಳಿದರು.ಅವರು ಶನಿವಾರ ಪಟ್ಟಣದ ಶಾಂತೇಶ್ವರ ಮಂಗಲ ಕಾರ್ಯಾಲಯದ ಆವರಣದಲ್ಲಿ ಭಾರತೀಯ ಜನತಾ ಪಾರ್ಟಿ ಇಂಡಿ ಮತ್ತು ಚಡಚಣ ಮಂಡಲದ ಹಿಂದುಳಿದ ವರ್ಗಗಳ ಮೋರ್ಚಾ ಸಭೆ, ಹಾಗೂ ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆಯ ಅರಿವು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಜಿಲ್ಲೆಗೆ ಎನ್‌ಟಿಪಿಸಿ, ವಿಮಾನ ನಿಲ್ದಾಣ, ನೀರಾವರಿ ಯೋಜನೆಗಳು, ರಸ್ತೆಗಳನ್ನು ಮೇಲ್ದರ್ಜೆಗೇರಿಸಿ ಅಭಿವೃಧ್ಧಿಪಡಿಸುವದು ಇಂತಹ ಹಲವು ಕಾರ್ಯವನ್ನು ಮಾಡಿದ ತೃಪ್ತಿ ನನಗಿದೆ. ಕೆಲವೊಬ್ಬರು ಅಂಗಿಯ ತೋಳು ಏರಿಸುತ್ತ, ಈ ಎಲ್ಲ ಕೆಲಸ ನಾ ಮಾಡೀನಿ, ನಾ ಮಾಡೀನಿ ಅಂತ ಹೇಳ್ಕೋತ್ ತಿರಗಾಡ್ತಾರ, ತಿರಗಾಡವ್ರು ತಿರಗಾಡಲಿ, ಜನರಿಗೆ ಎಲ್ಲಾ ಗೊತ್ತದ ಎಂದರು.೨೦೦೪ ರಲ್ಲಿ ರಾಮಕೃಷ್ಣ ಹೆಗಡೆ ಅವರ ಆರೋಗ್ಯ ವಿಚಾರಿಸಲು ಅವರ ಮನೆಗೆ ಹೋಗಿದ್ದೆ, ಆಗ ಅವರು ನನ್ನನ್ನು ಪಕ್ಕದಲ್ಲಿ ಕೂರಿಸಿ ರಮೇಶ ನಮ್ಮ ಪಾರ್ಟಿ…
ವಿಜಯಪುರ: ನಾಡಿನ ಮೇರು ಕಲಾವಿದ ಡಾಕ್ಟರ್ ವಿಷ್ಣುವರ್ಧನ್ ಅವರ ಪುಣ್ಯಭೂಮಿ ನಿರ್ಮಾಣ ಮಾಡುವ ಬಗ್ಗೆ ಇದೇ ಡಿಸೆಂಬರ್ 17ರಂದು ಬೆಂಗಳೂರಿನಲ್ಲಿ ಹೋರಾಟ ಮತ್ತು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ವಿಜಯಪುರ ಜಿಲ್ಲಾ ಘಟಕದ ವತಿಯಿಂದ ವಿಷ್ಣು ಸಂಗಮೇಶ ತಿಳಿಸಿದ್ದಾರೆ.ಶನಿವಾರ ಈ ಕುರಿತು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ ಅವರು, ಕನ್ನಡ ಚಿತ್ರರಂಗ ಕಂಡ ಮೇರು ನಟ ಡಾ. ವಿಷ್ಣುವರ್ಧನ್ 30 12 2009ರಂದು ಇಹಲೋಕ ತ್ಯಜಿಸಿ 14 ವರ್ಷ ಕಳೆದರೂ ಇದುವರೆಗೂ ಪುಣ್ಯಭೂಮಿ ನಿರ್ಮಾಣ ಕಾರ್ಯ ನೆರವೇರಿಲ್ಲ. ಕೋಟ್ಯಾಂತರ ಅಭಿಮಾನಿಗಳು ಪಡೆದ ಕೋಟಿಗೊಬ್ಬ ಯಜಮಾನ್ರ ಅಂತ್ಯಕ್ರಿಯೆ ನಡೆದ ಸ್ಥಳದಲ್ಲಿ ಪುಣ್ಯಭೂಮಿ ನಿರ್ಮಿಸಲು ಭೂಮಿ ನೀಡುವಲ್ಲಿ ಸರ್ಕಾರಗಳು ಇಂದಿಗೂ ಅಂತಿಮ ನಿರ್ಧಾರ ತೆಗೆದುಕೊಳ್ಳುವಲ್ಲಿ ವಿಫಲವಾಗಿರುವುದು ಬೇಸರದ ಸಂಗತಿ ಎಂದಿದ್ದಾರೆ.ಡಾಕ್ಟರ್ ವಿಷ್ಣು ಸೇನಾ ಸಮಿತಿ ಅಧ್ಯಕ್ಷ ವೀರಕಪುತ್ರ ಶ್ರೀನಿವಾಸ್ ಅವರ ನೇತೃತ್ವದಲ್ಲಿ ಹಮ್ಮಿಕೊಳ್ಳಲಾದ ಪುಣ್ಯಭೂಮಿ ಸ್ಥಾಪನೆಗೆ ಸರಕಾರಕ್ಕೆ ಅಂತಿಮ ಎಚ್ಚರಿಕೆ ನೀಡಲು ಮತ್ತು ಕಾನೂನು ಪ್ರಕ್ರಿಯೆ ಹೋರಾಟಕ್ಕೆ ನಾಡಿನ ಎಲ್ಲ ಕನ್ನಡಪರ ಹೋರಾಟಗಾರರು, ರೈತ ಪರ ಹೋರಾಟಗಾರರು…
