ವಿಜಯಪುರ: ಸರ್ಕಾರಿ ನೌಕರರು ಕರ್ತವ್ಯ ನಿಭಾಯಿಸಲು ಉತ್ತಮ ಆರೋಗ್ಯ ಹೊಂದಿರಬೇಕು. ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ನೌಕರರಿಗೆ ಏರ್ಪಡಿಸಿದ ಈ ಕ್ರೀಡಾಕೂಟ ಸಹಕಾರಿಯಾಗಿದೆ ಎಂದು ಜಿಲ್ಲಾಧಿಕಾರಿ ಟಿ.ಭೂಬಾಲನ ಹೇಳಿದರು.
ನಗರದ ಡಾ.ಬಿ.ಆರ್.ಅಂಬೇಡ್ಕರ ಕ್ರೀಡಾಂಗಣದಲ್ಲಿ ಗುರುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಜಿಲ್ಲಾ ಘಟಕದ ಸಹಯೋಗದೊಂದಿಗೆ ನಡೆದ ಜಿಲ್ಲಾ ಮಟ್ಟದ ರಾಜ್ಯಾ ಸರ್ಕಾರಿ ನೌಕರರ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳ ಉದ್ಘಾಟನಾ ಸಮಾರಂಭದಲ್ಲಿ ಜ್ಯೋತಿ ಬೆಳಗಿಸುವ ಮೂಲಕ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಪ್ರತಿಯೊಬ್ಬರಲ್ಲಿ ಒಂದು ಪ್ರತಿಭೆ ಇದ್ದೆ ಇರುತ್ತದೆ. ಆದರೆ ಪ್ರತಿಭೆ ಹೊರ ಹಾಕಲು ಅವಕಾಶಗಳು ಬಹಳ ಸಿಗುವದಿಲ್ಲ. ನೌಕರರಿಗೆ ಇದು ಒಳ್ಳೆಯ ಅವಕಾಶ. ಬಹುತೇಕ ಇಲಾಖೆಗಳಲ್ಲಿ ಮೂನ್ನೂರ ದಿನ ಕರ್ತವ್ಯ ಇರುತ್ತದೆ. ಹಗಲು ರಾತ್ರಿ ನೌಕರರು ಜವಾಬ್ದಾರಿಯಿಂದ ಕರ್ತವ್ಯ ಮಾಡುತ್ತಾರೆ. ಸಧ್ಯ ಚುನಾವಣೆ ಕರ್ತವ್ಯಕ್ಕೆ ಸಿದ್ದತೆ ನಡೆದಿದೆ. ಸರ್ಕಾರಿ ನೌಕರರ ಜೊತೆ ಅವರ ಕುಟುಂಬಗಳಿಗೂ ಕ್ರೀಡಾಕೂಟದಲ್ಲಿ ಭಾಗವಹಿಸುವ ಅವಕಾಶ ಸಿಗಬೇಕು. ರಾಷ್ಟ್ರ ಮಟ್ಟದಲ್ಲಿ ಭಾಗವಹಿಸಿ ಬಂದು ನಮ್ಮ ಜಿಲ್ಲೆಯ ಹೆಮ್ಮೆಯ ನೌಕರರು ಆಗಿದ್ದಾರೆ. ಒಳ್ಳೆಯ ಹೆಸರು ತರಬೇಕು, ಕೆಲಸದ ಜೊತೆ ನಿಮ್ಮ ಆರೋಗ್ಯದ ಕಡೆ ಗಮನ ಹರಿಸಬೇಕು. ಕುಟುಂಬದೊಂದಿಗೆ ಕೂಡಾ ಖುಷಿಯಿಂದ ಇರಬೇಕು ಎಂದು ಹೇಳಿದರು.
ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಿಷಿ ಅನಂದ ಮಾತನಾಡಿದರು.
ಕಾರ್ಯಕ್ರಮದಲ್ಲಿ ರಾಷ್ಟ್ರ ಯುವ ಪ್ರಶಸ್ತಿ ಪುರಸ್ಕೃತ ಡಾ.ಜಾವೀದ ಜಮಾದಾರ, ಎಸ್ಸಿ.ಎಸ್ಟಿ ದೌರ್ಜನ್ಯ ತಡೆ ಸಲಹಾ ಸಮಿತಿ ಸದಸ್ಯ ಅಡಿವೆಪ್ಪ ಸಾಲಗಲ್, ನ್ಯಾಯವಾದಿ ನಾಗರಾಜ ಲಂಬು, ಯುವ ಸಬಲಿಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಕೆ.ಹೊಂಗಯ್ಯ, ನೌಕರ ಸಂಘದ ಜಿಲ್ಲಾ ಖಜಾಂಚಿ ಜುಬೇರ ಕೇರೂರ, ವಿಜಯಕುಮಾರ ಹತ್ತಿ, ವಿಶ್ವನಾಥ ಬೆಳೆನ್ನವರ, ಗಂಗಾಧರ ಜೇವೂರ, ನೀಜು ಮೇಲಿನಕೇರಿ, ಶಿವರಾಜ ಬಿರಾದಾರ, ಶಿವಾನಂದ ಮಂಗನವರ, ರವಿ ಬಿರಾದಾರ, ಚನ್ನಯ್ಯ ಮಠಪತಿ, ಬಿ.ಎಸ್.ಮಜ್ಜಗಿ ಇದ್ದರು.
ನಿರೂಪಣೆಯನ್ನು ಶಿಲ್ಪಾ ಬಾಸ್ಮೆ ಹಾಗೂ ಎಚ್.ಎ.ಮಮದಾಪುರ, ಪ್ರಾರ್ಥನೆಯನ್ನು ಶಕುಂತಲಾ ಹಿರೇಮಠ, ಸ್ವಾಗತವನ್ನು ರಾಜಶೇಖರ ದೈವಾಡಿ, ವಂದನಾರ್ಪಣೆಯನ್ನು ರವಿ ಉಗಾರ ನೆರವೇರಿಸಿದರು.
Subscribe to Updates
Get the latest creative news from FooBar about art, design and business.
Related Posts
Add A Comment

