ಆಲಮಟ್ಟಿ: ಶಾಲಾ ಮಕ್ಕಳ ಬುದ್ಧಿಮತ್ತೆಯ ವಿಕಸನದಲ್ಲಿ ಚಿತ್ರಕಲಾ ಶಿಕ್ಷಣ ಮಹತ್ವದ ಪಾತ್ರವಹಿಸುತ್ತದೆ ಎಂದು ಗದುಗಿನ ತೋಂಟದಾರ್ಯ ವಿದ್ಯಾಪೀಠ ಹಾಗೂ ಆಲಮಟ್ಟಿಯ ಎಸ್.ವ್ಹಿ.ವ್ಹಿ.ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ, ಶಿಕ್ಷಣ ತಜ್ಞ ಪ್ರೊ,ಶಿವಾನಂದ ಪಟ್ಟಣಶೆಟ್ಟರ ಅಭಿಪ್ರಾಯಿಸಿದರು.
ಗುರುವಾರ ಸ್ಥಳೀಯ ಆರ್.ಬಿ.ಪಿ.ಜಿ.ಹಳಕಟ್ಟಿ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ಡ್ರಾಯಿಂಗ್ ಲೋಹರ,ಹೈಯರ್ ಗ್ರೇಡ್ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ಗೈದ ಮಕ್ಕಳಿಗೆ ಅಂಕಪಟ್ಟಿ ಪ್ರಮಾಣ ಪತ್ರ ವಿತರಣಾ ಕಾರ್ಯಕ್ರಮದಲ್ಲಿ ಅವರು ಪ್ರಶಸ್ತಿ ಪತ್ರ ವಿತರಿಸಿ ಮಾತನಾಡಿದರು.
ವಿಚಾರಧಾರೆಯ ಕಲೆಯಾಗಿರುವ ಚಿತ್ರಕಲೆ ನಮ್ಮ ದೇಶಿ ಸಂಸ್ಕೃತಿಯ ಪ್ರತೀಕವಾಗಿದೆ. ಇದಕ್ಕೆ ಬೆಲೆಕಟ್ಟಲಾಗದು. ಇದು ಬಹುವಿಧ ಜ್ಞಾನ ಭಂಡಾರದ ಪ್ರಭೆಯಾಗಿದೆ ಎಂದರು. ಚಿತ್ರಕಲಾಭ್ಯಾಸದಿಂದ ಜ್ಞಾನದ ಮೆರಗು ವೃದ್ಧಿಸುತ್ತದೆ. ಚಿತ್ರಕಲಾ ಶಿಕ್ಷಣ ಇತರೆ ಬೋಧನಾ ವಿಷಯದ ವಿಧಾನಗಳಿಗೆ ಪ್ರೇರಣೆಯಾಗಿದೆ.ಮಕ್ಕಳ ಕಲಿಕಾ ಆಸಕ್ತಿ ಹೆಚ್ಚಿಸುವಲ್ಲಿ ಈ ಕಲೆ ಪ್ರಾಮುಖ್ಯತೆ ಹೊಂದಿದೆ ಎಂದರು.
ಚಿತ್ರಕಲೆ ಅಕ್ಷರಾಭ್ಯಾಸ, ಭಾಷಾಭ್ಯಾಸಕ್ಕೆ ವೈವಿಧ್ಯತೆ ತೋರುತ್ತದೆ. ಸೌಹಾರ್ದತೆಯ ಆದರ್ಶತನ ಚಿತ್ರಕಲೆಗಿದೆ. ಚೈತನ್ಯಮಯ, ಸೌಂದರ್ಯವನ್ನು ಒಳಗೊಂಡದೆ.ಸೃಜನಶೀಲ ವ್ಯಕ್ತಿತ್ವ ರೂಪಧಾರಣೆಗೆ ಪೂರಕವಾಗಿದೆ. ಹೀಗಾಗಿ ಈ ಆನಂದದಾಯಕ ಚಿತ್ರಕಲಾ ವಿಷಯ ಮಕ್ಕಳ ಮನಮುಟ್ಟುವಂತೆ ಬೋಧಿಸಿ ಇನ್ನಷ್ಟು ಉತ್ತೇಜಿಸಬೇಕು. ಚಿತ್ರಕಲೆ ಮಕ್ಕಳೆಡೆಗೆ ಕೊಂಡೊಯ್ಯಬೇಕು ಎಂದರು.
ಜ್ಞಾನ ಪ್ರಸರಣಾ ಸಾಮಥ್ರ‍್ಯ ಹೊಂದಿರುವ ಚಿತ್ರಕಲೆ ಆಧುನಿಕತೆಯ ಪ್ರಭಾವದಿಂದ ಇಂದು ದೂರ ಉಳಿಯುತ್ತಿರುವುದು ವಿಷಾಧನೀಯ. ಭಾವನೆಯನ್ನು ಅಭಿವ್ಯಕ್ತಗೊಳಿಸುವ ಈ ವಿಶೇಷ ಕಲೆ ಕಲಾ ಮಕ್ಕಳ ಮನಸಾಕ್ಷಿಗೆ ಮೆಚ್ಚುಗೆಯಾಗಿದೆ. ಅದನ್ನು ಪ್ರೋತ್ಸಾಹಿಸುವ ಗುಣ ಹೊಂದಬೇಕು. ಮನೋಲ್ಲಾಸ ನೀಡುವ ಚಿತ್ರಕಲೆ ಬಗ್ಗೆ ಉದಾಸೀನ ಮನೋಭಾವ ಸಲ್ಲದು ಎಂದರು.
ಶಿಕ್ಷಣದಲ್ಲಿ ಚಿತ್ರಕಲೆ ಅನುಸರಣೆಗೆ ಹೆಚ್ಚಿನ ಪ್ರಾಧಾನ್ಯತೆ ದೊರಕಬೇಕು. ಮಕ್ಕಳ ಬೌದ್ಧಿಕ ಬೆಳವಣಿಗೆ, ಏಕಾಗ್ರತೆ, ವೀಕ್ಷಣಾ ,ಚಿಂತನಾ ಶಕ್ತಿಗೆ ಹಾಗೂ ಸ್ವಯಂ ಅಭಿವ್ಯಕ್ತಿಗೆ ಚಿತ್ರಕಲೆಯು ಕಲ್ಪನೆ ಭಾವ ಮೀರಿ ಚಿಂತನೆ ಬೀರುತ್ತದೆ. ಅಂಥ ಅದ್ಭುತ ಶಕ್ತಿ ಚಿತ್ರಾಭ್ಯಾಸಕ್ಕಿದೆ. ವೈಶಿಷ್ಟ್ಯ ಹೂರಣಗಳಿಂದ ಕೂಡಿರುವ ಚಿತ್ರಕಲೆ ಜೀವನ ಮೌಲ್ಯಗಳನ್ನು ಬಿಂಬಿಸುತ್ತದೆ ಎಂದು ಶಿಕ್ಷಣ ತಜ್ಞ ಪ್ರೊ, ಶಿವಾನಂದ ಪಟ್ಟಣಶೆಟ್ಟರ ಅಭಿಪ್ರಾಯಿಸಿದರು.
ವಿಜಯಪುರ ಡಿಡಿಪಿಐ ಕಚೇರಿಯ ವಿಷಯ ಪರಿವೀಕ್ಷಕ ಬಿ.ಕೆ.ಬಿರಾದಾರ, ಅಂತರಾಳದ ಭಾವ ಜ್ಞಾನೇಂದ್ರಿ ಅರಳಿಸಬಲ್ಲ ಚಿತ್ರಕಲೆ ಮಕ್ಕಳಿಗೆ ಬಲು ಇಷ್ಟ. ಯುವಜನತೆ ಟಿ.ವಿ.ಮೊಬೈಲ್ ದಿಂದ ದೂರವಿದ್ದು ಉತ್ತಮ ಹವ್ಯಾಸ ಬೆಳೆಸಿಕೊಳ್ಳಬೇಕು. ಈಗ ಎಸ್ಸೆಸ್ಸೆಲ್ಸಿ ಸೇರಿದಂತೆ ಪ್ರಾಥಮಿಕ, ಪ್ರೌಢಶಾಲಾ ಹಂತದ ಎಲ್ಲ ತರಗತಿಗಳ ವಾರ್ಷಿಕ ಪರೀಕ್ಷೆಗಳು ಸಮೀಪಿಸುತ್ತಿದ್ದು ಮಕ್ಕಳು ಪೂರ್ವ ತಯಾರಿಯೊಂದಿಗೆ ಸಿದ್ದರಾಗಿ ಪರೀಕ್ಷೆಯಲ್ಲಿ ಯಶಸ್ಸು ಕಾಣಬೇಕು ಎಂದರು.
ಡ್ರಾಯಿಂಗ್ ಲೋಯರ್, ಹೈಯರ್ ಗ್ರೇಡ್ ಪರೀಕ್ಷೆಯಲ್ಲಿ ನಾಲ್ಕು ಜನ ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ನಲ್ಲಿ ಉಳಿದವರು ಪ್ರಥಮ ಶ್ರೇಣಿಯಲ್ಲಿ ಪಾಸಾದ ಮಕ್ಕಳಗೆ ಅತಿಥಿಗಳು ಪ್ರಶಸ್ತಿ ಪ್ರಮಾಣ ಪತ್ರ ನೀಡಿ ಪ್ರೋತ್ಸಾಹಿಸಿದರು.
ಗದಗಿನ ಜೆಟಿವಿಪಿ ಸಂಸ್ಥೆಯ ಹಿರಿಯರಾದ ಎಸ್.ಎಸ್.ಕಳಸಾಪುರಶೆಟ್ರ, ಗದಗ ಜೆಟಿವಿಪಿ ಸಂಸ್ಥೆಯ ಸಂಸ್ಕೃತ ಪಾಠ ಶಾಲೆಯ ಹಿರಿಯ ಶಿಕ್ಷಕರು ಎಸ್.ಎಸ್.ನೀಲಗುಂದ, ಈರಣ್ಣ ಗುರುಪುತ್ರನವರ, ಎಂ.ಎಚ್.ಎಂ.ಪಪೂ ಕಾಲೇಜು ಪ್ರಾಂಶುಪಾಲ ಪ್ರಭುಸ್ವಾಮಿ ಹೇಮಗಿರಿಮಠ, ಡಿಗ್ರಿ ಕಾಲೇಜು ಪ್ರಾಂಶುಪಾಲ ಎಚ್.ಎನ್.ಕೆಲೂರ, ಜಿ.ಎಂ.ಕೋಟ್ಯಾಳ, ಎಸ್.ಆಯ್.ಗಿಡ್ಡಪ್ಪಗೋಳ, ಗುಲಾಬಚಂದ ಜಾಧವ, ಟಿ.ಬಿ.ಕರದಾನಿ, ಎಂ.ಎಸ್. ಸಜ್ಜನ, ಪಿ. ವಾಯ್.ಧನಶೆಟ್ಟಿ, ಎಸ್.ಎಚ್.ನಾಗಣಿ, ಮಮತಾ ಕರೆಮುರಗಿ, ತನುಜಾ ಪೂಜಾರಿ,ಕವಿತಾ ಮರಡಿ, ಧನರಾಜ ಸಿಂಗಾರೆ, ತಿಮ್ಮಣ್ಣ ದಾಸರ, ಶಾಂತು ತಡಸಿ ಇತರರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

