ಮುದ್ದೇಬಿಹಾಳ: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಮಾದಿಗ ದಂಡೋರ ಹೋರಾಟ ಸಮಿತಿಯ ಪದಾಧಿಕಾರಿಗಳು ಹಾಗೂ ವಿವಿಧ ದಲಿತಪರ ಸಂಘಟನೆಗಳ ಮುಖಂಡರು ಪಟ್ಟಣದಲ್ಲಿ ಪ್ರತಿಭಟನೆ ನಡೆಸುವ ಮೂಲಕ ತಹಶೀಲ್ದಾರ ಮುಖಾಂತರ ಮುಖ್ಯ ಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಅಂಬೇಡ್ಕರ್ ವೃತ್ತದಿಂದ ಶುರುವಾದ ಮೆರವಣಿಗೆ ಸಂಗೊಳ್ಳಿ ರಾಯಣ್ಣ ವೃತ್ತ, ಬಸವೇಶ್ವರ ವೃತ್ತ, ಕಿತ್ತೂರು ರಾಣಿ ಚನ್ನಮ್ಮ ವೃತ್ತ ಮಾರ್ಗವಾಗಿ ತಹಶೀಲ್ದಾರ ಕಚೇರಿಗೆ ಬಂದು ತಲುಪಿತು. ಅಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಪ್ರಮುಖರಾದ ಡಿ.ಬಿ.ಮುದೂರ, ಸಿ.ಜಿ.ವಿಜಯಕರ, ತಿಪ್ಪಣ್ಣ ದೊಡಮನಿ, ಬಾಲಚಂದ್ರ ಹುಲ್ಲೂರ, ಕೆ.ಬಿ.ದೊಡಮನಿ, ಡಿ.ವಾಯ್.ಹಂಗರಗಿ ಮತ್ತೀತರರು ಮಾತನಾಡಿ, ತಾಲೂಕಿನ ಕೆಲವು ಗ್ರಾಮಗಳಲ್ಲಿ ದಲಿತ ಸಮುದಾಯದ ಬಂಧುಗಳಿಗೆ ಯಾವುದೇ ಸ್ಮಶಾನ ಇಲ್ಲ. ಇನ್ನೂ ಕೆಲವು ಗ್ರಾಮಗಳಲ್ಲಿ ಅಸ್ಪಷ್ಯತೆ ವ್ಯವಸ್ಥೆ ಇದ್ದು ಸಮಾನತೆ ಇಲ್ಲ. ಈ ಬಗ್ಗೆ ಹಲವಾರು ಬಾರಿ ಹೋರಾಟಗಳನ್ನು ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಈ ಕೂಡಲೇ ಅಧಿಕಾರಿಗಳು ನಮ್ಮ ಬೇಡಿಕೆಗಳಿಗೆ ಸ್ಪಂದಿಸುವ ಕಾರ್ಯ ಮಾಡಬೇಕು ಎಂದರು.
ಚನ್ನಯ್ಯ ಭವನ ಮತ್ತು ಗಾರ್ಡನ ನಿರ್ಮಾಣ, ಪ್ರತಿ ಹಳ್ಳಿಯಲ್ಲಿ ಅಸ್ಪ್ರಷ್ಯತೆ ನಿವಾರಣೆ ಬಗ್ಗೆ ಫಲಕಗಳನ್ನು ಅಳವಡಿಸಬೇಕು. ಸದಾಶಿವ ಆಯೋಗದ ವರದಿ ಕೇಂದ್ರಕ್ಕೆ ಶಿಫಾರಸ್ಸು ಮಾಡಬೇಕು. ಪ್ರತೀ ಗ್ರಾಮಗಳಲ್ಲಿ ರುದ್ರಭೂಮಿ ನೀಡಬೇಕು ಹೀಗೆ ಒಟ್ಟು ೧೫ ಬೇಡಿಕೆಗಳು ಮತ್ತು ಹಕ್ಕೊತ್ತಾಯಗಳುಳ್ಳ ಮನವಿ ಪತ್ರವನ್ನು ತಹಶೀಲ್ದಾರ ಮೂಲಕ ಮುಖ್ಯಮಂತ್ರಿಗಳಿಗೆ ನೀಡಲಾಯಿತು.
ಹೋರಾಟದಲ್ಲಿ ಸಂಗಣ್ಣ ವಿಜಯಕರ, ರಾಮು ತಂಬೂರಿ, ಎಸ್.ಬಿ.ಬಸರಕೋಡ, ಮುತ್ತು ಪೂಜಾರಿ, ಹುಲಗಪ್ಪ ನಾಗರಬೆಟ್ಟ, ಕಾಶಪ್ಪ ತೊಗರಿ, ಡಿ.ಎಸ್.ಹೊಸಮನಿ, ಎಸ್.ಎಸ್.ಶಿವಪೂರ, ಬಿ.ಎ.ಹೊಸಮನಿ, ಬಸವರಾಜ ವನಕಿಹಾಳ, ಹೆಚ್.ವಾಯ್.ಮಾದರ, ಎಂ.ಎ.ಮಾದರ, ಜಿ.ಎಚ್.ಮಾದರ ಸೇರಿದಂತೆ ಮತ್ತೀತರರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

