Author: editor.udayarashmi@gmail.com

“ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ ” ವಿವೇಕಾನಂದ. ಎಚ್. ಕೆ, ಬೆಂಗಳೂರು ಶೂನ್ಯದಿಂದ ಪ್ರಾರಂಭವಾಗುವ ಜೀವನದ ಪಯಣ 100 ನಿಲ್ದಾಣಗಳನ್ನು ತಲುಪುತ್ತದೆ ಎಂದು ಹೇಳಲಾಗುತ್ತದೆ. ಆದರೆ ವಾಸ್ತವ ಅನುಭವದಲ್ಲಿ 60 ರಿಂದ 80 ರ ನಡುವಿನ ಯಾವುದಾದರೂ ನಿಲ್ದಾಣದಲ್ಲಿ ಪ್ರಯಾಣ ಮುಗಿಯುವ ಸಾಧ್ಯತೆಯೇ ಹೆಚ್ಚು.. ಜೀವ ಅಂಕುರವಾಗುವ ಘಳಿಗೆಯಿಂದ ಉಸಿರು ನಿಲ್ಲುವವರೆಗೆ ಇರುವ ಕಾಲವನ್ನು ಸರಳವಾಗಿ ಜೀವನ ಎಂದು ಪರಿಗಣಿಸಲಾಗುತ್ತದೆ. ನಮ್ಮ ದೇಹಕ್ಕೆ ನಾವೇ ಅಧಿಪತಿಯಾದರು ನಮ್ಮ ಜೀವನ ಮಾತ್ರ ಬಹುತೇಕ ಪರಿಸ್ಥಿತಿಯ ಕೂಸು. ಬದುಕಿಗಾಗಿ ಹೋರಾಡುತ್ತಾ ಖಚಿತವಾಗಿರುವ ಸಾವಿಗೆ ಶರಣಾಗುವುದೇ ಅಂತಿಮ ಸತ್ಯ.. ವ್ಯಾವಹಾರಿಕ ಜಗತ್ತಿನಲ್ಲಿ ಫಲಿತಾಂಶದ ಆಧಾರದಲ್ಲಿಯೇ ಯಶಸ್ಸನ್ನು ನಿರ್ಧರಿಸಲಾಗುತ್ತದೆ. ಭಾರತೀಯ ಸಮಾಜವನ್ನು ಹಿನ್ನೆಲೆಯಾಗಿಟ್ಟುಕೊಂಡು ನೋಡುವುದಾದರೆ ಅಧಿಕಾರ, ಹಣ, ಅಂತಸ್ತು, ಜನಪ್ರಿಯತೆಗಳನ್ನೇ ಮಾನದಂಡಗಳಾಗಿ ಬಳಸಿ ಇವತ್ತಿನ ಯಶಸ್ಸನ್ನು ನಿರ್ಧರಿಸಲಾಗುತ್ತದೆ. ಅವರೇ ಆದರ್ಶ ವ್ಯಕ್ತಿಗಳು. ಅವರೇ ಬಹುತೇಕ ಜನಸಾಮಾನ್ಯರು ಜೀವನ ರೂಪಿಸಿಕೊಳ್ಳಲು ಪ್ರೇರೆಪಿಸುವ ಕನಸುಗಾರರು. ತಂದೆ ತಾಯಿಗಳು, ಶಿಕ್ಷಕರು, ಸುತ್ತಲ ಸಮುದಾಯ ಎಲ್ಲರೂ ಇವರನ್ನೇ ಉದಾಹರಣೆ ನೀಡಿ ನೀವು ಅವರಂತೆ…

Read More

ಆಲಮಟ್ಟಿ: ಪ್ರವಾಸಿ ತಾಣವಾಗಿ ಬೆಳೆಯುತ್ತಿರುವ ಆಲಮಟ್ಟಿ ರೈಲು ನಿಲ್ದಾಣಕ್ಕೆ ಮೂರು ಎಕ್ಸ್ ಪ್ರೆಸ್ ರೈಲು ನಿಲುಗಡೆಗೆ ಆದೇಶಿಸಿ ರೈಲ್ವೆ ಮಂಡಳಿ ಅನುಮೋದನೆ ನೀಡಿದೆ.ವಾರಕೊಮ್ಮೆ ಬರುವ ಮೈಸೂರು- ಶಿರಡಿ (16217), ಪ್ರತಿನಿತ್ಯ ಚಲಿಸುವ ಹೊಸಪೇಟೆ- ಮುಂಬೈ (11140), ವಾರಕ್ಕೆರೆಡು ಬಾರಿ ಚಲಿಸುವ ಯಶವಂತಪುರ-ಬಿಕಾನೇರ್ (16587) ರೈಲಿಗೆ ಒಂದು ನಿಮಿಷ ನಿಲುಗಡೆ ಕಲ್ಪಿಸಿದೆ.ಆಲಮಟ್ಟಿಗೆ ಕೆಲವು ಎಕ್ಸಪ್ರೆಸ್ ರೈಲು ಮಾತ್ರ ನಿಲ್ಲುತ್ತಿದ್ದವು. ಆಲಮಟ್ಟಿಯ ಮೂಲಕವೇ ಹಾದು ಹೋಗುವ ಈ ಮೂರು ರೈಲನ್ನು ನಿಲ್ಲಿಸಬೇಕೆಂಬ ಕಳೆದ ಐದು ವರ್ಷಗಳಿಂದ ಈ ಭಾಗದ ಜನರು ಸಾಕಷ್ಟು ಬಾರಿ ಮನವಿ ಅರ್ಪಿಸಿದ್ದರು. ಸಂಸದ ರಮೇಶ ಜಿಗಜಿಣಗಿ ಅವರ ಮೇಲೆಯೂ, ನೈರುತ್ಯ ರೇಲ್ವೆ ವಲಯದ ಜನರಲ್ ಮ್ಯಾನೇಜರ್ ಅವರಿಗೂ ಹಲವಾರು ಬಾರಿ ಮನವಿ ಸಲ್ಲಿಸಿದರು.ಈ ರೈಲು ನಿಲ್ದಾಣದ ರೈಲ್ವೆ ಟಿಕೆಟ್ ಆದಾಯವನ್ನು ಗಮನಿಸಿ, ಜನರ ಒತ್ತಡದ ಕಾರಣ, ಕಳೆದ ನಾಲ್ಕು ತಿಂಗಳ ಹಿಂದಷ್ಟೇ ನೈರುತ್ಯ ರೇಲ್ವೆ ವಲಯದ ಅಧಿಕಾರಿಗಳು ರೈಲ್ವೆ ಮಂಡಳಿಗೆ ಪತ್ರ ಬರೆದು ರೈಲು ನಿಲುಗಡೆಗೆ ಅನುಮತಿ ಕೋರಿದ್ದರು.*ಹರ್ಷ:* ನಮ್ಮ…

Read More

ಸಹಸ್ರಾರು ಭಕ್ತರ ಲಗ್ಗೆ | ಶೋಭಾಯಾತ್ರೆ | ಅಹೋರಾತ್ರಿ ಸಂಗೀತ ಕಾರ್ಯಕ್ರಮ | ತೆರದ ಬಂಡಿ ಸ್ಪರ್ಧೆ ಆಲಮಟ್ಟಿ: ಏಳೂರು ಒಡೆಯ ಯಲಗೂರೇಶ್ವರನ ಕಾರ್ತಿಕೋತ್ಸವ ಶನಿವಾರ, ಸಹಸ್ರಾರು ಭಕ್ತರ ಭಾವಪರವಶದ ಮಧ್ಯೆ ಚಾಲನೆ ದೊರೆಯಿತು.ನಸುಕಿನ ಜಾವದಿಂದಲೇ ಸಹಸ್ರಾರು ಸಂಖ್ಯೆಯ ಭಕ್ತರು ಯಲಗೂರದತ್ತ ಲಗ್ಗೆ ಇಟ್ಟಿತು. ಪಾದಯಾತ್ರೆಯ ಮೂಲಕ ಬಂದ ಭಕ್ತರಿಗೆ ನಾನಾ ಕಡೆ ಅಲ್ಪೋಪಹಾರದ ವ್ಯವಸ್ಥೆಯನ್ನು ಮಾಡಲಾಗಿತ್ತು.ವಿವಿಧ ಆಚಾರ್ಯರ ನೇತೃತ್ವದ ತಂಡ ವೇದಘೋಷಗಳೊಂದಿಗೆ ಪೂಜಾ ಕಾರ್ಯಕ್ರಮ ನೆರವೇರಿಸಿದರು.ಅವಳಿ ಜಿಲ್ಲೆಗಳಿಂದ ಬಂದಿದ್ದ ನೂರಾರು ಮಹಿಳೆಯರು, ಹಲವಾರು ಭಜನಾ ತಂಡಗಳು ಶೋಭಾಯಾತ್ರೆಯಲ್ಲಿ ಪಾಲ್ಗೊಂಡವು. ಭಜನೆಯೊಂದಿಗೆ ಮೆರವಣಿಗೆ ಸಾಗಿತು. ಗ್ರಾಮದ ತುಂಬೆಲ್ಲಾ ಶೋಭಾಯಾತ್ರೆಯಲ್ಲಿ ಮಹಿಳೆಯರ ಕೋಲಾಟ ಗಮನಸೆಳೆಯಿತು. ವಿಜಯಪುರ, ಬಾಗಲಕೋಟೆ, ಮುದ್ದೇಬಿಹಾಳ, ಬಸವನ ಬಾಗೇವಾಡಿ, ತೆಲಗಿ, ಹುಬ್ಬಳ್ಳಿ, ಬೆಳಗಾವಿ, ಆಲಮಟ್ಟಿ , ಯಲಗೂರ ಸೇರಿದಂತೆ ವಿವಿಧ ಭಜನಾ ಮಂಡಳಿಗಳಿಂದ ಎರಡು ದಿನಗಳಕಾಲ ನಿರಂತರ ಭಜನಾ ನಿನಾದ ಸದ್ದು ಝೇಂಕರಿಸಿತು.ಸಂಗೀತಕ್ಕೆ ಚಾಲನೆ:ಹದಿದಾಸ ಸಂಗೀತ ಸಾಹಿತ್ಯ ವೇದಿಕೆ ವತಿಯಿಂದ ಸಂಘಟಿಸಿರುವ ಅಹೋರಾತ್ರಿ ಸಂಗೀತ ಕಾರ್ಯಕ್ರಮಕ್ಕೆ ವಿ.ಬಿ. ಕುಲಕರ್ಣಿ, ಗೋಪಾಲ…

Read More

‍ಚಡಚಣ: ಪಟ್ಟಣದಲ್ಲಿ ಭಾನುವಾರ ನಡೆವ ಪಲ್ಸ್‌ ಪೋಲಿಯೋ ಕಾರ್ಯಕ್ರಮ ನಿಮಿತ್ಯ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಎಚ್ ಪಿ ಎಸ್. ನಂ:02 ಶಾಲೆಯ ವತಿಯಿಂದ ಶನಿವಾರ ಪಲ್ಸ್‌ ಪೋಲಿಯೋ ಜಾಥಾ ನಡೆಸಲಾಯಿತು.ಚಡಚಣ ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ: ಜಾನ್ ಕಟವಟೆ ಮಾತನಾಡಿ, ಮಾ.03 ರಂದು ಪಲ್ಸ್‌ ಪೋಲಿಯೋ ಲಸಿಕಾ ಕಾರ್ಯಕ್ರಮ ಇದ್ದು ಐದು ವರ್ಷದ ಒಳಗಿನ ಎಲ್ಲಾ ಮಕ್ಕಳಿಗೆ ಎಲ್ಲರೂ ಪಲ್ಸ್‌ ಪೋಲಿಯೋ ಲಸಿಕೆ ಹಾಕಿಸಬೇಕು ಎಂದರು.ಇದೇ ಸಂದರ್ಭದಲ್ಲಿ ಚಡಚಣ ಸಮುದಾಯ ಆರೋಗ್ಯ ಕೇಂದ್ರದ ಸಿಬ್ಬಂದಿಗಳಾದ ಆರ್ ಬಿ ಲಾಳಸಂಗಿ, ಎಮ್ ಬಿ ತೇಲಿ, ಸುರೇಶ ವಾಲಿಕಾರ, ಪಿ ವೈ ಕುರಿ, ಶ್ರೀಶೈಲ್ ಯಳಮೇಲಿ, ಶ್ರೀಧರ್ ಬಂಡಗರ, ಎಮ್ ಎಲ್ ಮುಲ್ಲಾ, ಚೇತನ್ ಅಳುರ್, ಸಚಿನ್ ತೇಲಿ, ವಿ ಸಿ ಬಳಮಕರ, ಆರ್ ಡಿ ಕಿಟ್ಟದ್, ಡಿ ಎಸ್ ಕದರಿ, ಪ್ರಶಾಂತ್ ಸಾಳುಂಕೆ, ರಾಜು. ಎಸ್ ಓ ಹಿರೇಕುರುಬರ, ಸಂಜು ರೂಗಿ ಮತ್ತು ಆಶಾ ಕಾರ್ಯಕರ್ತೆಯರು, ಪಟ್ಟಣ ಪಂಚಾಯಿತಿ…

Read More

ವಿಜಯಪುರ: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮೀತಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಅನುಮೋದನೆಯ ಮೇರೆಗೆ ವಿಜಯಪುರ ಜಿಲ್ಲಾ ಕಾಂಗ್ರೆಸ್ ಸಮೀತಿಯ ಉಪಾಧ್ಯಕ್ಷರನ್ನಾಗಿ ಡಿ.ಎಲ್.ಚವ್ಹಾಣ ಇವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ನೇಮಕಾತಿ ಮಾಡಲಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಸಂತ ಹೊನಮೊಡೆ ಪತ್ರಿಕೆಗೆ ತಿಳಿಸಿದ್ದಾರೆ.

Read More

ಚಡಚಣ: ತಾಲೂಕಿನ ಜೀಗಜೇವಣಿ ಗ್ರಾಮದ ರಾಮನಗೌಡ ಬಿರಾದಾರ ಅವರನ್ನು ಭಾರತೀಯ ಜನತಾ ಪಕ್ಷ (ಬಿಜೆಪಿ)ದ ವಿಜಯಪುರ ಜಿಲ್ಲಾ ರೈತ ಮೋರ್ಚಾ ಕಾರ್ಯದರ್ಶಿಯಾಗಿ ಆಯ್ಕೆ ಮಾಡಿ, ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ ಅವರು ಆದೇಶ ಹೊರಡಿಸಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ಕೆಂಭಾವಿ: ಗೆಳೆಯರ ಬಳಗ ಕೆಂಭಾವಿ ವತಿಯಿಂದ ಲಿಂ.ಗುರುಬಸಯ್ಯ ಚನ್ನಯ್ಯಸ್ವಾಮಿ ಚಿಕ್ಕಮಠರವರ ಜನ್ಮದಿನದ ಪ್ರಯುಕ್ತ ಸ.ಮಾ.ಪ್ರಾ.ಶಾಲೆ ಪರಸನಹಳ್ಳಿ ಶಾಲೆಗೆ ಸ್ಮಾರ್ಟ್ ಟಿ ವಿ ಕೊಡುಗೆಯಾಗಿ ನೀಡಲಾಯಿತು.

Read More

ಕೆಂಭಾವಿ: ಪಂಚಮಸಾಲಿ ಸಮಾಜದನೂತನ ಉಪಾಧ್ಯಕ್ಷರಾಗಿ ಆಯ್ಕೆಯಾದ ಹೊನಪ್ಪಗೌಡ ಮೇಟಿಗೌಡ ಇವರನ್ನು ಮುದನೂರಿನ ಹಿರಿಯ ಮುಖಂಡರು ಸೇರಿ ಸನ್ಮಾನಿಸಿದರು.ಈ ವೇಳೆ ನೂತನ ಉಪಾಧ್ಯಕ್ಷ ಹೊನ್ನಪ್ಪಗೌಡ ಮೇಟಿಗೌಡ ಮಾತನಾಡಿ, ಪಂಚಮಸಾಲಿ ಸಮಾಜದ ಏಳಿಗೆಗಾಗಿ ನಾವು ಎಲ್ಲರೂ ಒಂದಾಗಬೇಕಿದೆ. ಪಂಚಮಸಾಲಿ ಸಮಾಜಕ್ಕೆ ಅನ್ಯಾಯವಾದಾಗ ನಾವು ಹೋರಾಟ ಮಾಡಲು ಸದಾ ಸಿದ್ದರಿದ್ದೇವೆ. ನಮ್ಮ ಸಮಾಜಕ್ಕೆ 2ಎ ಮೀಸಲಾತಿ ನೀಡುವರೆಗೂ ನಾವು ಎಲ್ಲರೂ ಒಂದಾಗಿ ಹೋರಾಟ ಮಾಡಬೇಕಾಗುತ್ತದೆ ಎಂದರು.ಈ ಸಂಧರ್ಭದಲ್ಲಿ ಶಿವರೆಡ್ಡಿ ಯಡಹಳ್ಳಿ, ಸಿದ್ದನಗೌಡ ಗೌಡಪ್ಪಗೌಡ, ನಾಗರೆಡ್ಡಿ ಬುಸ್ಸಾ,ಈರಣ್ಣ ಚೌದ್ರಿ, ಪ್ರಭು ಬಳಿ, ಎಸ್. ಐ. ತನಶೆಟ್ಟಿ, ಬಸವರಾಜ್ ಸಜ್ಜನ್, ಗೌಸ್ ಪಟೇಲ್, ಡಾ.ಭಾಷಾಪಟೇಲ್, ಸೈಯದ್ ತಾಳಿಕೋಟಿ, ಹಾಗೂ ಇತರರು ಇದ್ದರು.

Read More

ಕೆಂಭಾವಿ: ಪಟ್ಟಣದಲ್ಲಿ ಸಣ್ಣ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ದಿಮೆಗಳ ಸಚಿವ ಹಾಗೂ ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಾಪುರ ಅವರು ಶನಿವಾರ ವಿವಿಧ ಇಲಾಖೆಗಳ ನೂತನ ಕಟ್ಟಡ ಉದ್ಘಾಟಿಸಿ, ಲೋಕಾರ್ಪಣೆ ಮಾಡಿದರು.ಇಲ್ಲಿಯ ವಾರ್ಡ್ ನಂ 15 ರಲ್ಲಿ 66 ಲಕ್ಷ ರೂ. ವೆಚ್ಚದ ರೈತ ಸಂಪರ್ಕ ಕೇಂದ್ರ, 18 ಲಕ್ಷ ರೂ ವೆಚ್ಚದಲ್ಲಿನ ನಾಡ ಕಚೇರಿ,1.23 ಕೋಟಿ ರೂ. ಮೊತ್ತದ ಶತಮಾನ ಪೂರೈಸಿದ ಪೊಲೀಸ್ ಠಾಣೆ ಕಟ್ಟಡ ಹಾಗೂ ಅಂಗನವಾಡಿ ಕೇಂದ್ರ, ಶ್ರೀ ಹೇಮರೆಡ್ಡಿ ಮಲ್ಲಮ್ಮ ದೇವಸ್ಥಾನದ ಯಾತ್ರಿ ನಿವಾಸ ಮತ್ತು ನಮ್ಮ ಕ್ಲಿನಿಕ್ ಕೇಂದ್ರ ಸೇರಿ ಒಟ್ಟಾರೆಯಾಗಿ 3 ಕೋಟಿ ರೂ. ವೆಚ್ಚದ ಅಭಿವೃದ್ಧಿ ಕಾಮಗಾರಿಗಳನ್ನು ಲೋಕಾರ್ಪಣೆ ಮಾಡಿದರು.ಈ ಸಂದರ್ಭದಲ್ಲಿಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Read More

ಮುಮ್ಮೆಟಿಗುಡ್ಡದಲ್ಲಿ ರೂ.3.50 ಕೋಟಿ ವೆಚ್ಚದ ಸಮದಾಯ ಭವನ & ರೂ.25 ಲಕ್ಷ ವೆಚ್ಚದ ಯಾತ್ರಿ ನಿವಾಸ ಉದ್ಘಾಟನೆ | ಅಮೋಘಸಿದ್ಧ ಅವಧೂತ ಅಭಿಮತ ವಿಜಯಪುರ: ಶ್ರೀ ಅಮೋಘಸಿದ್ಧರ ಕೃಪೆಯಿಂದ ಮತ್ತಷ್ಟು ಒಳ್ಳೆಯ ದಿನಗಳು ಬರಲಿವೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಹೇಳಿದ್ದಾರೆ.ತಿಕೋಟಾ ತಾಲೂಕಿನ ಮುಮ್ಮೆಟಿಗುಡ್ಡ ಶ್ರೀ ಅಮೋಘಸಿದ್ಧ ದೇವಸ್ಥಾನದ ಬಳಿ ರೂ.3.50 ಕೋ. ವೆಚ್ಚದಲ್ಲಿ ನಿರ್ಮಿಸಲಾಗಿರುವ ಸಮದಾಯ ಭವನ ಮತ್ತು ರೂ. 25 ಲಕ್ಷ ವೆಚ್ಚದಲ್ಲಿ ಕಟ್ಟಲಾಗಿರುವ ಯಾತ್ರಿ ನಿವಾಸವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು‌.ಸಮುದಾಯ ಭವನ ನಿರ್ಮಾಣದಿಂದ ಈ ಭಾಗದ ಬಡವರು ಮತ್ತು ಮಧ್ಯಮ ವರ್ಗದ ಜನರ ಶುಭ ಕಾರ್ಯಗಳನ್ನು ಕೈಗೊಳ್ಳಲು ಅನುಕೂಲವಾಗಲಿದೆ. ಅಲ್ಲದೇ, ಯಾತ್ರಿ ನಿವಾಸ ನಿರ್ಮಾಣದಿಂದ ಭಕ್ತಾದಿಗಳಿಗೆ ಉಳಿದುಕೊಳ್ಳಲು ನೆರವಾಗಲಿದೆ. ಸಮುದಾಯ ಭವನ ನಿರ್ವಹಣೆಗೆ ಸಮಿತಿ ರಚಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.ಮುಮ್ಮೆಟಿಗುಡ್ಡ ಸಂಪರ್ಕಿಸುವ ರಸ್ತೆಗಳ ಅಗಲೀಕರಣಕ್ಕೆ ಈಗಾಗಲೇ ಟೆಂಡರ್ ಮಾಡಲಾಗಿದೆ.…

Read More