ಆಲಮಟ್ಟಿ: ಪ್ರವಾಸಿ ತಾಣವಾಗಿ ಬೆಳೆಯುತ್ತಿರುವ ಆಲಮಟ್ಟಿ ರೈಲು ನಿಲ್ದಾಣಕ್ಕೆ ಮೂರು ಎಕ್ಸ್ ಪ್ರೆಸ್ ರೈಲು ನಿಲುಗಡೆಗೆ ಆದೇಶಿಸಿ ರೈಲ್ವೆ ಮಂಡಳಿ ಅನುಮೋದನೆ ನೀಡಿದೆ.
ವಾರಕೊಮ್ಮೆ ಬರುವ ಮೈಸೂರು- ಶಿರಡಿ (16217), ಪ್ರತಿನಿತ್ಯ ಚಲಿಸುವ ಹೊಸಪೇಟೆ- ಮುಂಬೈ (11140), ವಾರಕ್ಕೆರೆಡು ಬಾರಿ ಚಲಿಸುವ ಯಶವಂತಪುರ-ಬಿಕಾನೇರ್ (16587) ರೈಲಿಗೆ ಒಂದು ನಿಮಿಷ ನಿಲುಗಡೆ ಕಲ್ಪಿಸಿದೆ.
ಆಲಮಟ್ಟಿಗೆ ಕೆಲವು ಎಕ್ಸಪ್ರೆಸ್ ರೈಲು ಮಾತ್ರ ನಿಲ್ಲುತ್ತಿದ್ದವು. ಆಲಮಟ್ಟಿಯ ಮೂಲಕವೇ ಹಾದು ಹೋಗುವ ಈ ಮೂರು ರೈಲನ್ನು ನಿಲ್ಲಿಸಬೇಕೆಂಬ ಕಳೆದ ಐದು ವರ್ಷಗಳಿಂದ ಈ ಭಾಗದ ಜನರು ಸಾಕಷ್ಟು ಬಾರಿ ಮನವಿ ಅರ್ಪಿಸಿದ್ದರು. ಸಂಸದ ರಮೇಶ ಜಿಗಜಿಣಗಿ ಅವರ ಮೇಲೆಯೂ, ನೈರುತ್ಯ ರೇಲ್ವೆ ವಲಯದ ಜನರಲ್ ಮ್ಯಾನೇಜರ್ ಅವರಿಗೂ ಹಲವಾರು ಬಾರಿ ಮನವಿ ಸಲ್ಲಿಸಿದರು.
ಈ ರೈಲು ನಿಲ್ದಾಣದ ರೈಲ್ವೆ ಟಿಕೆಟ್ ಆದಾಯವನ್ನು ಗಮನಿಸಿ, ಜನರ ಒತ್ತಡದ ಕಾರಣ, ಕಳೆದ ನಾಲ್ಕು ತಿಂಗಳ ಹಿಂದಷ್ಟೇ ನೈರುತ್ಯ ರೇಲ್ವೆ ವಲಯದ ಅಧಿಕಾರಿಗಳು ರೈಲ್ವೆ ಮಂಡಳಿಗೆ ಪತ್ರ ಬರೆದು ರೈಲು ನಿಲುಗಡೆಗೆ ಅನುಮತಿ ಕೋರಿದ್ದರು.
*ಹರ್ಷ:* ನಮ್ಮ ನಿರಂತರ ಪ್ರಯತ್ನ, ನೂರಕ್ಕೂ ಹೆಚ್ಚು ಬಾರಿ ಪತ್ರ ಬರೆದು ನಡೆಸಿದ ಮನವಿ, ಸಂಸದ ರಮೇಶ ಜಿಗಜಿಣಗಿ ಅವರೂ ಕೈಜೋಡಿಸಿದ್ದ ಪರಿಣಾಮ ರೈಲು ನಿಲುಗಡೆಗೆ ಆದೇಶವಾಗಿದೆ. ಇದೇ ಮಾ.5 ರಿಂದಲೇ ಈ ರೈಲು ನಿಲುಗಡೆ ಆರಂಭಗೊಳ್ಳಲಿದೆ, ಇದು ಜನರ ಹೋರಾಟಕ್ಕೆ ಸಂದ ಜಯವಾಗಿದ್ದು, ನಮಗೆ ಹರ್ಷ ತಂದಿದೆ ಎಂದು ರೈಲ್ವೆ ಬಳಕೆದಾರರ ವಿಭಾಗೀಯ ಸಲಹಾ ಸಮಿತಿ ಸದಸ್ಯ ದಾಮೋದರ ರಾಠಿ, ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಶಿವಾನಂದ ಅವಟಿ, ರಮೇಶ ಆಲಮಟ್ಟಿ, ಮಹಾಂತೇಶ ಹಿರೇಮಠ, ಶಂಕರ ಜಲ್ಲಿ, ಮತ್ತೀತರರು ತಿಳಿಸಿದ್ದು, ರೈಲ್ವೆ ಅಧಿಕಾರಿಗಳಿಗೆ ಸಂಸದರಿಗೆ ಅಭಿನಂದನೆ ಸಲ್ಲಿಸಿದ್ದಾರೆ.
Subscribe to Updates
Get the latest creative news from FooBar about art, design and business.
ಆಲಮಟ್ಟಿ: ಮೂರು ಎಕ್ಸ್ ಪ್ರೆಸ್ ರೈಲು ನಿಲುಗಡೆಗೆ ಆದೇಶ :ಹರ್ಷ
Related Posts
Add A Comment

