ಚಡಚಣ: ಪಟ್ಟಣದಲ್ಲಿ ಭಾನುವಾರ ನಡೆವ ಪಲ್ಸ್ ಪೋಲಿಯೋ ಕಾರ್ಯಕ್ರಮ ನಿಮಿತ್ಯ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಎಚ್ ಪಿ ಎಸ್. ನಂ:02 ಶಾಲೆಯ ವತಿಯಿಂದ ಶನಿವಾರ ಪಲ್ಸ್ ಪೋಲಿಯೋ ಜಾಥಾ ನಡೆಸಲಾಯಿತು.
ಚಡಚಣ ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ: ಜಾನ್ ಕಟವಟೆ ಮಾತನಾಡಿ, ಮಾ.03 ರಂದು ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮ ಇದ್ದು ಐದು ವರ್ಷದ ಒಳಗಿನ ಎಲ್ಲಾ ಮಕ್ಕಳಿಗೆ ಎಲ್ಲರೂ ಪಲ್ಸ್ ಪೋಲಿಯೋ ಲಸಿಕೆ ಹಾಕಿಸಬೇಕು ಎಂದರು.
ಇದೇ ಸಂದರ್ಭದಲ್ಲಿ ಚಡಚಣ ಸಮುದಾಯ ಆರೋಗ್ಯ ಕೇಂದ್ರದ ಸಿಬ್ಬಂದಿಗಳಾದ ಆರ್ ಬಿ ಲಾಳಸಂಗಿ, ಎಮ್ ಬಿ ತೇಲಿ, ಸುರೇಶ ವಾಲಿಕಾರ, ಪಿ ವೈ ಕುರಿ, ಶ್ರೀಶೈಲ್ ಯಳಮೇಲಿ, ಶ್ರೀಧರ್ ಬಂಡಗರ, ಎಮ್ ಎಲ್ ಮುಲ್ಲಾ, ಚೇತನ್ ಅಳುರ್, ಸಚಿನ್ ತೇಲಿ, ವಿ ಸಿ ಬಳಮಕರ, ಆರ್ ಡಿ ಕಿಟ್ಟದ್, ಡಿ ಎಸ್ ಕದರಿ, ಪ್ರಶಾಂತ್ ಸಾಳುಂಕೆ, ರಾಜು. ಎಸ್ ಓ ಹಿರೇಕುರುಬರ, ಸಂಜು ರೂಗಿ ಮತ್ತು ಆಶಾ ಕಾರ್ಯಕರ್ತೆಯರು, ಪಟ್ಟಣ ಪಂಚಾಯಿತಿ ಸದಸ್ಯರಾದ ಮಲ್ಲಿಕಾರ್ಜುನ ಧೋತ್ರೆ, ಮುಖಂಡರಾದ ಮಹಾದೇವ ಯಂಕಂಚಿ ಹಾಗೂ ಶಿಕ್ಷಕರಾದ ಬಸವರಾಜ ಕರಜಗಿ, ಜಗದೀಶ್ ಚಲವಾದಿ, ಮಹಾದೇವ ಆದಿಗೊಂಡೆ, ಎಚ್ ಜೆ ಲೋಣಿ ಹಾಗೂ ಶಾಲಾ ಮಕ್ಕಳು ಹಾಜರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

