Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಮುದ್ದೇಬಿಹಾಳ: ತಾಲೂಕಿನ ನೂತನ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ಆಗಮಿಸಿದ ಬಸಪ್ಪ ಸಾವಳಗಿ ಅವರನ್ನು ಇಲ್ಲಿನ ಕಚೇರಿಯ ಸಿಬ್ಬಂದಿ, ಶಿಕ್ಷಕರ ಸಂಘಟನೆಯ ಪದಾಧಿಕಾರಿಗಳು ಪುಸ್ತಕ ನೀಡಿ ಬರಮಾಡಿಕೊಂಡರು.ಈ ವೇಳೆ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಿ.ಎಚ್.ಮುದ್ನೂರ, ಕಾರ್ಯುದರ್ಶಿ ಎನ್.ಎಚ್.ತುಡಗಿ, ಉಪಾಧ್ಯಕ್ಷರುಗಳಾದ ಶಾಂತು ಬಿರಾದಾರ ಮತ್ತು ಶ್ರೀಮತಿ ಆರ್.ಎಸ್.ಹಿರೇಮಠ, ಬಿಇಓ ಪ್ರಭಾರ ವಹಿಸಿದ್ದ ಯು.ಬಿ.ಧರಿಕಾರ, ಇಸಿಓ ಸುರೇಶ ಹಿರೇಮಠ, ನೌಕರರ ಸಂಘದ ಕಾರ್ಯದರ್ಶಿ ಬಿ.ಎಸ್.ಹೊಳಿ, ಎ.ಎಚ್.ಖಾಜಿ, ಐ.ಎ.ಹಿರೇಮಠ, ಎಸ್.ಆರ್.ಪಾಟೀಲ, ಶಶಿಕಲಾ ಮೆರೆಖೋರ, ಜ್ಯೋತಿ ಕುಂದರಗಿ, ಶಾರದಾ ಚಿನಿವಾರ, ಮಹಾದೇವಿ ವಾಲಿ ಸೇರಿದಂತೆ ಮತ್ತೀತರರು ಇದ್ದರು.
ಮುದ್ದೇಬಿಹಾಳ ಕ್ರಿಕೆಟ್ ಪ್ರೀಮಿಯರ್ ಲೀಗ್ ಸೀಸನ್-೬ ನಲ್ಲಿ ಜಿಪಂ ಮಾಜಿ ಉಪಾಧ್ಯಕ್ಷ ಪ್ರಭುಗೌಡ ಅಭಿಮತ ಮುದ್ದೇಬಿಹಾಳ: ಮೊಬೈಲ್ ನ ಹಾವಳಿಯಿಂದಾಗಿ ದೇಹವನ್ನು ದಂಡಿಸುವ ಕ್ರೀಡೆಗಳು ಕಣ್ಮರೆಯಾಗುತ್ತಿವೆ. ಕ್ರೀಡೆಗಳು ಕೇವಲ ಮನರಂಜನೆಗಾಗಿ ಅಲ್ಲ. ಮನರಂಜನೆಯ ಜೊತೆಗೆ ಆರೋಗ್ಯದ ಮೇಲೆ ಸಾಕಷ್ಟು ಉತ್ತಮ ಪ್ರಭಾವಗಳನ್ನು ಬೀರುತ್ತವೆ ಅನ್ನೋ ಸತ್ಯವನ್ನು ಈಗಿನ ಯುವಕರು ತಿಳಿದುಕೊಳ್ಳಬೇಕು ಎಂದು ಜಿಲ್ಲಾ ಪಂಚಾಯತ್ ನ ಮಾಜಿ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ ಹೇಳಿದರು.ಪಟ್ಟಣದ ವಿಬಿಸಿ ಹೈಸ್ಕೂಲ್ ಮೈದಾನದಲ್ಲಿ ಕಳೆದ ಒಂದು ತಿಂಗಳಿನಿಂದ ನಡೆದ ಮುದ್ದೇಬಿಹಾಳ ಪ್ರೀಮಿಯರ್ ಲೀಗ್ ಸೀಜನ್-೬ ಕ್ರಿಕೇಟ್ ಪಂದ್ಯಾವಳಿಯ ಕೊನೆಯ ಪಂದ್ಯದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.ಸಧ್ಯದ ಪರೀಸ್ಥಿತಿಯಲ್ಲಿ ಯಾವ ಯುವಕರನ್ನು ನೋಡಿದರೂ ಅವರ ಕೈಯಲ್ಲೊಂದು ದೊಡ್ಡ ಮೊಬೈಲ್ ಇರುತ್ತೆ. ಸಂಜೆಯಾದರೆ ಸಾಕು ಅಲ್ಲಲ್ಲಿ ಕುಳಿತು ಕಣ್ಣು ಮುಚ್ಚದೇ ಮೊಬೈಲ್ ನೋಡುತ್ತ ತಲೆ ಹೊರಳಾಡಿಸುತ್ತ ಕುಳಿತಿರುತ್ತಾರೆ. ಇದರಿಂದ ಕಣ್ಣುಗಳು ಮಾತ್ರವಲ್ಲದೇ ಮನಸ್ಸು ಕೂಡ ಹಾಳಾಗುತ್ತದೆ. ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುವಂತಹ ಆಟಗಳನ್ನು ಬಿಟ್ಟು ದೇಹವನ್ನು ದಂಡಿಸುವ ಆಟಗಳನ್ನಾಡಲು…
ಮುದ್ದೇಬಿಹಾಳ: ಪಟ್ಟಣದ ಪ್ರಮುಖ ರಸ್ತೆಗಳು ಸೇರಿದಂತೆ ಎಲ್ಲಂದರಲ್ಲಿ ದ್ವಿಚಕ್ರ ವಾಹನಗಳಿಗೆ ಕರ್ಕಶ ಶಬ್ಧಮಾಡುವ ಸೈಲೆನ್ಸ್ರ್ ಗಳನ್ನು ಅಳವಡಿಸಿಕೊಂಡು ಸಾರ್ವಜನಿಕರಿಗೆ ತೊಂದರೆ ಕೊಡುತ್ತಿದ್ದವರಿಗೆ ಇಲ್ಲಿನ ಪಿಎಸ್‌ಐ ಸಂಜೀವ್ ತಿಪರೆಡ್ಡಿ ಮತ್ತೊಮ್ಮೆ ಶಾಕ್ ನೀಡಿದ್ದಾರೆ.ಕಳೆದ ಕೆಲವು ದಿನಗಳ ಹಿಂದೆಯೇ ಕರ್ಕಶ ಶಬ್ಧ ಮಾಡುವ ಸೈಲೆನ್ಸ್ರ್ ಗಳನ್ನು ಕಳಚುವಂತೆ ಮತ್ತು ಕಳಚದವರಿಗೆ ಸೂಕ್ತ ಶಿಕ್ಷೆ ವಿಧಿಸುವದಾಗಿ ಮಾಧ್ಯಮದ ಮೂಲಕ ಎಚ್ಚರಿಕೆ ನೀಡಿದ್ದರು. ಇದಕ್ಕೆ ಕ್ಯಾರೇ ಎನ್ನದ ಎರಡು ಕರ್ಕಶ ಶಬ್ಧ ಮಾಡುವ ವಾಹನಗಳನ್ನು ಗುರುವಾರ ಸೀಸ್ ಮಾಡಿದ್ದಾರೆ. ಠಾಣೆಯಲ್ಲಿಯೇ ಶಬ್ಧ ಮಾಡುವ ಸೈಲೆನ್ಸ್ರ್ ಗಳನ್ನು ಕಳಚಿಸಿ ದಂಡದ ಬಿಸಿ ಮುಟ್ಟಿಸಿದ್ದಾರೆ.ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಪಿಎಸ್‌ಐ ಸಂಜೀವ, ಇಂತಹ ಅನ್ನೂ ಹಲವು ಪುಂಡರ ವಾಹನಗಳು ಪೊಲೀಸರ ಕಣ್ತಪ್ಪಿಸರ ಕಣ್ತಪ್ಪಿಸಿ ಅಲ್ಲಲ್ಲಿ ಓಡಾಡುತ್ತಿವೆ. ನಮ್ಮ ಸಿಬ್ಬಂದಿ ತಂಡ ಈಗಾಗಲೇ ಈ ಪುಂಡರಿಗೆ ಬಲೆ ಬೀಸಿದೆ. ಸಿಕ್ಕಲ್ಲಿ ಯಾರೇ ಇದ್ದರೂ ನಿರ್ದಾಕ್ಷಣ್ಯವಾಗಿ ಕಾನೂನು ಕ್ರಮ ಕೈಗೊಂಡು ನೇರವಾಗಿ ನ್ಯಾಯಾಲಯಕ್ಕೇ ಕಳುಹಿಸುವದಾಗಿ ಮತ್ತು ಈ ರೀತಿ ಕಾನೂನು ಬಾಹಿರವಾದ ಸೈಲೆನ್ಸ್ರ್…
ಸಿಂದಗಿ: ಪಟ್ಟಣದ ಹೊರವಲಯದ ರಾಷ್ಟ್ರೀಯ ಹೆದ್ದಾರಿ-೫೦ರ ರಸ್ತೆಯಲ್ಲಿ ಗುರುವಾರ ನಸುಕಿನ ಜಾವದಲ್ಲಿ ಟಾಟಾ ಏಸ್ ವಾಹನ ಪಲ್ಟಿಯಾದ ಪರಿಣಾಮ ೧೫ಜನರು ಅಪಘಾತದಲ್ಲಿ ಗಾಯಗೊಂಡಿದ್ದಾರೆ.ಇವರು ಹುನಗುಂದ ತಾಲೂಕಿನ ಬೆವಿನಾಳ ಗ್ರಾಮದಿಂದ ಅಫಜಲಪುರ ತಾಲೂಕಿನ ಘತ್ತರಗಿ ಭಾಗ್ಯವಂತಿದೇವಿ ದೇವಾಲಯಕ್ಕೆ ಜವಳ ತೆಗೆಯುವ ಕಾರ್ಯಕ್ರಮಕ್ಕೆ ಟಾಟಾ ಏಸ್ ಗೂಡ್ಸ್ ವಾಹನದಲ್ಲಿ ಹೊರಟಿರುವ ಸಂದರ್ಭದಲ್ಲಿ ಪಟ್ಟಣದ ಹೊರವಲಯದ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಅಪಘಾತ ಸಂಭವಿಸಿದೆ. ಈ ಅಪಘಾತದಲ್ಲಿ ಸಣ್ಣ ಪುಟ್ಟ ಗಾಯಗಳಾಗಿವೆ.ಈ ವೇಳೆ ಲಕ್ಷ್ಮೀ ಚೇತನ ಸೇಗುಣಸಿ, ದ್ರಾಕ್ಷಾಯಿಣಿ ಮರತುಜಾ ಹಿರೇಮಠ, ಅನುರಾದಾ ದೇವಪ್ಪ ಮೇಟಿ, ನಿಲವ್ವ ಬಸಪ್ಪ ಮೇಟಿ ಸೇರಿದಂತೆ ಮಕ್ಕಳು ಸೇರಿ ೧೫ಜನರು ಗಾಯಗೊಂಡಿದ್ದಾರೆ. ಅಪಘಾತದಲ್ಲಿ ಗಾಯಗೊಂಡವರಿಗೆ ಚಿಕಿತ್ಸೆಗಾಗಿ ಸಿಂದಗಿ ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ದಾಖಲೆ ಮಾಡಲಾಗಿದೆ. ಸಿಂದಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಅಪಘಾತ ಸಂಭವಿಸಿದೆ.
ಮೋರಟಗಿ: ವಿದ್ಯುತ್ ಕಳ್ಳತನ ಮಹಾ ಅಪರಾಧ ಎಂದು ಹಲವಾರು ಬಾರಿ ಗ್ರಾಮದಲ್ಲಿ ಡಂಗುರ ಸಾರುವ ಮೂಲಕ ಜಾಗ್ರತಿ ಮೂಡಿಸಿದರೂ ಕೂಡಾ ರಾತ್ರಿವೇಳೆ ನೇರವಾಗಿ ಎಲ್ ಟಿ ಲೈನ್ ಗೆ ಹುಕ್ಕು ಹಾಕುತ್ತಿರುವ ಮಾಹಿತಿಗಳು ಕೇಳಿ ಬರುತ್ತಿವೆ ವಿದ್ಯುತ್ ಕಳ್ಳತನ ಮಾಡುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಶಾಖಾಧಿಕಾರಿ ಆನಂದ ಕವಲಗಿ ಹೇಳಿದರು.ಗುರುವಾರ ಸಮೀಪದ ನಾಗಾವಿ, ಗೊರವಗುಂಡಗಿ, ಕೆರೂರ, ಬಂಟನೂರ, ಗುತ್ತರಗಿ, ಗ್ರಾಮಗಳಲ್ಲಿ ವಿದ್ಯುತ್ ಬಾಕಿ ವಸೂಲಿ ಹಾಗೂ ಅನಧಿಕೃತ ವಿದ್ಯುತ್ ಕಾರ್ಯಾಚರಣೆಯಲ್ಲಿ ಹೀಟರ್, ವೈಯರ್, ವಶಪಡಿಸಿಕೊಂಡು ಅವರು ಮಾತನಾಡಿದರು.ಇಂದಿನ ತಂತ್ರಜ್ಞಾನ ಯುಗದಲ್ಲಿ ವಿದ್ಯುತ್ ಬಹಳಷ್ಟು ಅವಶ್ಯಕತೆ ಇದ್ದು ಅದನ್ನು ಮಿತವಾಗಿ ಬಳಸಿ ಅವಶ್ಯಕತೆ ಮಾತ್ರ ಉಪಯೋಗಿಸಿ ಅನವಶ್ಯಕವಾಗಿ ಹಗಲಿನಲ್ಲಿ ಬಲ್ಬ ಬಳಸುವುದು ನಿಲ್ಲಿಸಿ ಮತ್ತು ನಿಗದಿ ಪಡಿಸಿರುವ ದಿನಾಂಕದಂದು ವಿದ್ಯುತ್ ಬಾಕಿ ಹಣ ಸಂದಾಯ ಮಾಡಬೇಕು. ಮೆನ್ ಲೈನ್ ಅಥವಾ ಎಲ್ ಟಿ ಲೈನ್ ತಂತಿಗಳ ಹತ್ತಿರ ಗಿಡ ಮರ ಬೆಳೆಯದ ಹಾಗೆ ನೋಡಿಕೊಳ್ಳಬೇಕು. ಹಾಗೇನಾದರೂ ಗಿಡ ಮರಗಳು ತಂತಿಗೆ…
ಮುದ್ದೇಬಿಹಾಳ: ಸರ್ವಜ್ಞೇಂದ್ರ ಸರಸ್ವತೀ ಪ್ರತಿಷ್ಠಾನ, ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನ ಶಿರಸಿ ಮತ್ತು ಜ್ಞಾನ ಭಾರತಿ ವಿದ್ಯಾ ಮಂದಿರ ಸಮೂಹ ಶಿಕ್ಷಣ ಸಂಸ್ಥೆ ಇವರ ಸಹಯೋಗದಲ್ಲಿ ನಡೆಯುತ್ತಿರುವ ತಾಲೂಕು ಮಟ್ಟದ ಭಗವದ್ಗೀತಾ ಅಭಿಯಾನ-ಕರ್ನಾಟಕ-೨೦೨೩ ಸಪ್ತಾಹದ ೨ನೇ ದಿನದ ಪಠಣ ಮತ್ತು ಉಪನ್ಯಾಸ ಕಾರ್ಯಕ್ರಮವನ್ನು ಡಿ.೮ ಶುಕ್ರವಾರ ಸಂಜೆ ೫.೩೦ ಗಂಟೆಗೆ ಪಟ್ಟಣದ ಪಿ.ಕೆ.ನಗರದ ಜ್ಞಾನ ಭಾರತಿ ವಿದ್ಯಾ ಮಂದಿರದಲ್ಲಿ ನಡೆಯಲಿದೆ. ಸಾರ್ಥಕ ಜೀವನಕ್ಕೆ ಭಗವದ್ಗೀತೆ ಎನ್ನುವ ವಿಷಯದ ಮೇಲೆ ಶಿಕ್ಷಣ ಸಂಯೋಜಕಿ ವಿಜಯಲಕ್ಷ್ಮೀ ಚಿಲ್ಲಾಳಶೆಟ್ಟಿ ವಿಶೇಷ ಉಪನ್ಯಾಸ ನೀಡಲಿದ್ದಾರೆ. ಶಾಲಾ ಮಾತೆಯವರು ಸೇರಿ ಕಾರ್ತಿಕ ದೀಪೋತ್ಸವ ನಡೆಸಿಕೊಡಲಿದ್ದಾರೆ.ಕಾರ್ಯಕ್ರಮ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ ಬಿ.ಪಿ.ಕುಲಕರ್ಣಿ ವಹಿಸಿಕೊಳ್ಳಲಿದ್ದು, ಮುಖ್ಯ ಅತಿಥಿಯಾಗಿ ಪುಸಭೆಯ ನಾಮನಿರ್ದೇಶಕ ಸದಸ್ಯರಾದ ರಾಜಶೇಖರ ಹೊಳಿ ಹಾಗೂ ಸಂಸ್ಥೆಯ ನಿರ್ದೇಶಕಿ ಲೀಲಾ ಭಟ್ಟ, ಆಡಳಿತಾಧಿಕಾರಿ ಶಾಂತಾ ಭಟ್ಟ ಸೇರಿದಂತೆ ಇತರರು ಉಪಸ್ಥಿತರಿರಲಿದ್ದಾರೆ ಎಂದು ಅಭಿಯಾನದ ಸಂಚಾಲಕ ರಾಮಚಂದ್ರ ಹೆಗಡೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಜಯಪುರ: ಕರ್ನಾಟಕ ರಾಜ್ಯ 38ನೇ ರೇಡಿಯಾಲಾಜಿ- ಐಆರ್‌ಐಎ ಸಮ್ಮೇಳನ ನಗರದ ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದಲ್ಲಿ ಡಿಸೆಂಬರ್ 8 ರಿಂದ 10ರ ವರೆಗೆ ಮೂರು ದಿನಗಳ ಕಾಲ ನಡೆಯಲಿದೆ.ಕಟಿಂಗ್ ಎಡ್ಜ್ ಆಂಡ್ ಅಡ್ವಾನ್ಸಸ್ ವಿಷಯದಡಿ ಈ ಬಾರಿ ಸಮ್ಮೇಳನ ನಡೆಯುತ್ತಿದ್ದು, ಡಿಸೆಂಬರ್ 9 ರಂದು ಬೆಳಿಗ್ಗೆ 11 ಗಂಟೆಗೆ ವೈದ್ಯಕೀಯ ಕಾಲೇಜಿನ ಗ್ರಂಥಾಲಯ ಸಭಾಂಗಣದಲ್ಲಿ ಉದ್ಘಾಟನೆ ಕಾರ್ಯಕ್ರಮ ನಡೆಯಲಿದೆ. ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಕರ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಸಮ್ಮೇಳನ ಉದ್ಘಾಟಿಸಲಿದ್ದಾರೆ.ಈ ಸಂದರ್ಭದಲ್ಲಿ ಆರೋಗ್ಯ ಸಚಿವ ದಿನೇಶ ಗುಂಡೂರಾವ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ. ವಿವಿ ಸಮಕುಲಾಧಿಪತಿ ಡಾ. ವೈ. ಎಂ. ಜಯರಾಜ, ಕುಲಪತಿ ಡಾ. ಆರ್. ಎಸ್. ಮುಧೋಳ, ಸಮಕುಲಪತಿ ಡಾ. ಅರುಣ ಚಂ. ಇನಾಮದಾರ, ರಜಿಸ್ಟ್ರಾರ್ ಡಾ. ಆರ್. ವಿ. ಕುಲಕರ್ಣಿ, ಐ.ಆರ್.ಐಎ ರಾಷ್ಟ್ರೀಯ ಅಧ್ಯಕ್ಷ ಡಾ. ಉಮೇಶ ಕೃಷ್ಣಮೂರ್ತಿ, ರಾಜ್ಯಾಧ್ಯಕ್ಷ ಡಾ. ಪಿ. ಬಿ. ಶೆಟ್ಟಿ, ರಾಜ್ಯ ಕಾರ್ಯದರ್ಶಿ ಡಾ. ರವಿ,…
೨೦೦೦ಕಿ.ಮೀ ದೂರ | ೫೫ ದಿನಗಳ ಪಯಣ | ಸತತ ೪೫ ವರ್ಷಗಳಿಂದ ಮಾಲೆಧಾರಣೆ | ೨೪ ವರ್ಷದಿಂದ ಪಾದಯಾತ್ರೆ ಸಿಂದಗಿ: ನಿರಂತರವಾಗಿ ೨೪ ವರ್ಷಗಳಿಂದ ಸುಮಾರು ೨೦೦೦ಕಿ.ಮೀ ೫೫ ದಿನಗಳವರೆಗೆ ಬರಿಗಾಲಿನಲ್ಲಿ ಪಾದಯಾತ್ರೆಯ ಮೂಲಕ ಶಬರಿಮಲೆಯ ಅಯ್ಯಪ್ಪ ಸ್ವಾಮಿಯ ದರುಶನ ಪಡೆಯುವ ಭಕ್ತರೊಬ್ಬರು ಸಿಂದಗಿ ನಗರಕ್ಕೆ ಗುರುವಾರ ಆಗಮಿಸಿದ್ದರು.ಅವರನ್ನು ಪಟ್ಟಣದ ಎಪಿಎಂಸಿ ಯಾರ್ಡಿನ್ ಧರ್ಮಶಾಸ್ತಾ ಸನ್ನಿಧಾನಂನ ಅಯ್ಯಪ್ಪಸ್ವಾಮಿ ಮಾಲಾಧಾರಿ ಕಿರಣ ಶಿವಸಿಂಪಿ ಗುರುಸ್ವಾಮಿ ಹಾಗೂ ವ್ರತಧಾರಿಗಳು ಅವರನ್ನು ಸ್ವಾಗತಿಸಿ, ಭಕ್ತಿಪೂರ್ವಕವಾಗಿ ಬೀಳ್ಕೊಟ್ಟರು.ಉಪೇಂದ್ರಸ್ವಾಮಿ ಪೂಜಾರಿ ಎಂಬುವವರು ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಸರಪಾಡಿ ಗ್ರಾಮದ ನಿವಾಸಿ. ಇವರೇ ಈ ಯಾತ್ರೆಯ ಭಕ್ತರು. ಹಲವು ವರ್ಷಗಳ ಹಿಂದಯೇ ಜೀವನೋಪಾಯಕ್ಕಾಗಿ ಉದ್ಯೋಗವನ್ನು ಅರಸಿಕೊಂಡು ದೂರದ ಮುಂಬೈ ಪಟ್ಟಣಕ್ಕೆ ತೆರಳಿದ್ದರು. ೧೯೮೯ರಲ್ಲಿ ಮುಂಬೈನಲ್ಲಿ ಯಾರೋ ಶಬರಿಮಲೆ ಸ್ವಾಮಿ ಅಯ್ಯಪ್ಪನ ವ್ರತ ಆಚರಣೆ ಮಾಡು, ಮಾಲೆ ಧರಿಸು ಎಂದು ಹೇಳಿದ್ದಕ್ಕಾಗಿ ಭಕ್ತಿಯಿಂದ ಮಾಲೆ ಧರಿಸಿ ಸು.೩-೪ ವರ್ಷಗಳವರೆಗೆ ಶಬರಿಗೆ ಹೋಗಿ ಬಂದಿದ್ದರು. ೪೫ ವರ್ಷಗಳಿಂದ…
ವಿಜಯಪುರ: ಕಲೆಯ ಮೂಲಕ ಕಲಿಕೆಯು ಮಕ್ಕಳಲ್ಲಿ ಸೃಜನಶೀಲತೆಯನ್ನು ಅನ್ವೇಷಿಸಲು ಮತ್ತು ಅವರ ಉತ್ತಮ ಕಲಿಕಾ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಲು ಸಹಾಯ ಮಾಡುತ್ತದೆ. ಇದು ಕಲಿಕೆಯ ಪ್ರೀತಿ ಮತ್ತು ಸಾಧನೆಯ ಪ್ರಜ್ಞೆಯನ್ನು ಸಹ ಬೆಳೆಸುತ್ತದೆ ಎಂದು ತುಮಕೂರಿನ ಸಂಪನ್ಮೂಲ ವ್ಯಕ್ತಿ ರುದ್ರಸ್ವಾಮಿ ಹೇಳಿದರು.ಅವರು ತಾಲೂಕಿನ ನಾಗಠಾಣ ಗ್ರಾಮದ ಶ್ರೀ ಮಲ್ಲಿಕಾರ್ಜುನ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪೂಜ್ಯಶ್ರೀ ಸಿದ್ದೇಶ್ವರ ಮಹಾಸ್ವಾಮಿಗಳ ಸ್ಮರಣಾರ್ಥ ಕಲೆಯ ಮೂಲಕ ಕಲಿಕೆ ವಿಶೇಷ ಪ್ರಾತ್ಯಕ್ಷಿಕೆ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.ಇದು ಮಕ್ಕಳಲ್ಲಿ ವಿಭಿನ್ನ ಸಂಸ್ಕೃತಿಗಳನ್ನು ಅರ್ಥಮಾಡಿಕೊಂಡು ಪ್ರಶಂಸಿಸಲು ಸಹಕರಿಸುತ್ತದೆ. ವಿದ್ಯಾರ್ಥಿಗಳಲ್ಲಿ ಸಾಮಾಜಿಕ-ಭಾವನಾತ್ಮಕ ಬೆಳವಣಿಗೆಯನ್ನು ಉಂಟುಮಾಡುತ್ತದೆ ಎಂದು ಹೇಳಿದರು.ಶಿಕ್ಷಕ ಸಾಹಿತಿ ಸಂತೋಷ ಬಂಡೆ ಮಾತನಾಡಿ, ಕಲೆಯ ಮೂಲಕ ಕಲಿಕೆಯು ಪ್ರಕೃತಿಯಲ್ಲಿ ಸಾವಯವವಾಗಿದ್ದು, ಶಾಲೆಗಳಲ್ಲಿ ಪ್ರೇರಕ ಕಲಿಕೆಯ ವಾತಾವರಣವನ್ನು ರಚಿಸಿ, ಶಿಕ್ಷಕರು ಮತ್ತು ಮಕ್ಕಳಲ್ಲಿ ಉತ್ತಮ ಶೈಕ್ಷಣಿಕ ಫಲಿತಾಂಶಗಳನ್ನು ತೋರಿಸುತ್ತದೆ ಎಂದು ಹೇಳಿದರು.ಶಾಲಾ ಮುಖ್ಯ ಶಿಕ್ಷಕ ಸುರೇಶಗೌಡ ಬಿರಾದಾರ ಮಾತನಾಡಿದರು.ಸಂಸ್ಥೆಯ ಅಧ್ಯಕ್ಷ ಶಂಕರ ಹುಣಶ್ಯಾಳ ಅಧ್ಯಕ್ಷತೆ ವಹಿಸಿದ್ದರು.ಕಾರ್ಯದರ್ಶಿ ಸುನಂದಾ ಹುಣಶ್ಯಾಳ, ಶಿಕ್ಷಕರಾದ ಎಂ ಎಸ್ ಪಾಪನಾಳಮಠ, ಭೀಮಾಶಂಕರ…
Udayarashmi kannada daily newspaper
