ಆಲಮೇಲ: ಮಹಿಳೆಯರು ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂದರೆ ಪುರುಷರ ಸಹಕಾರ ಇದ್ದರೆ ಮಾತ್ರ ಸಾದ್ಯ. ಹೆಣ್ಣು ಹೆಣ್ಣಿಗೆ ವೈರಿಗಳಾಗಬಾರದು, ಮಹಿಳೆಯರ ಶೋಷಣೆ ಮಹಿಳೆಯರಿಂದಲೆ ನಡೆಯುತ್ತಿದೆ ಅದಕ್ಕೆ ಪುರುಷರ ಹೆಸರು ಮುಂದೆ ಬರುತ್ತಿದೆ ಎಂದು ಶಾಸಕ ಅಶೋಕ ಮನಗೂಳಿ ಪತ್ನಿ ನಾಗರತ್ನ ಮನಗೂಳಿ ಹೇಳಿದರು.
ಸೋಮವಾರ ಪಟ್ಟಣದ ನಿರ್ಮಲಾಲಯ ಸಮಾಜ ಸೇವಾ ಸಂಸ್ಥೆಯ, ಭಾಂದವ್ಯ ಮಹಿಳಾ ಸ್ವ-ಸಹಾಯ ಸಂಘಗಳ ಒಕ್ಕೂಟ, ಭೀಮಬಾಯಿ ದೇವದಾಸಿ ಮಹಿಳಾ ತಾಲೂಕ ಒಕ್ಕೂಟ, ನವಜ್ಯೋತಿ ಮಹಿಳಾ ಸ್ವ-ಸಹಾಯ ಸಂಘಗಳ ಒಕ್ಕೂಟ ಇವರ ಸಹಯೋಗದಲ್ಲಿ ಹಮ್ಮಿಕೊಂಡ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮಹಿಳೆ ಮತ್ತು ಪುರುಷ ಇಬ್ಬರು ಸಮಾನರಾಗಿ ಸಹಕಾರದಿಂದ ಹೋಗಬೇಕಾಗಿದೆ. ಅದಕ್ಕೆ ಯಾರನ್ನೂ ದೂರುವುದು ಸರಿಯಲ್ಲ. ಮಹಿಳಾ ಸ್ವಸಹಾಯ ಸಂಘಕ್ಕೆ ಸರ್ಕಾರ ಸಾಕಷ್ಟು ಅನುಕೂಲ ಕಲ್ಪಿಸಿದ್ದು ಅದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಇಂಜಿನಿಯರ ಶ್ರೀಶೈಲ ಮಠಪತಿ ಮಾತನಾಡಿದರು.
ವಿಜಯಪುರದ ಮಿಷನ್ ಸುಪೀರಿಯರ್ ಫ್ರಾನ್ಸಿಸ್ ಮಿನೇಜಸ್ ಎಸ್.ಜೆ. ಮಾತನಾಡಿದರು.
ಬೆಂಗಳೂರಿನ ಕರ್ನಾಟಕ ಮಹಿಳಾ ಹಕ್ಕುಗಳ ಕಾರ್ಯಕರ್ತೆ, ಗಮನ ಮಹಿಳಾ ಸಮೂಹದ ಮುಖ್ಯಸ್ಥೆ ಮಮತಾ ಯಜಮಾನ, ಅಧ್ಯಕ್ಷತೆ ವಹಿಸಿದ ಭಾಂದವ್ಯ ಮಹಿಳಾ ಸ್ವಸಹಾಯ ಸಂಘಗಳ ಒಕ್ಕೂಟದ ಅಧ್ಯಕ್ಷೆ ಶಾಂತಾಬಾಯಿ ಪೂಜಾರಿ ಮಾತನಾಡಿದರು.
ನಿರ್ಮಲಾಲಯ ಸಮಾಜ ಸೇವಾ ಸಂಸ್ಥೆಯ ಮುಖ್ಯಸ್ಥೆ ಸಿಸ್ಟರ್ ಒಲಿವಾ, ರಾಮನಹಳ್ಳಿ ಗ್ರಾ.ಪಂ. ಪಿಡಿಒ ಪ್ರಭಾವತಿ ಕುಂಬಾರ, ನಿರ್ಮಲಾಲಯ ಶಾಲೆಯ ಮುಖ್ಯ ಶಿಕ್ಷಕಿ ಸಿಸ್ಟರ ಸಿಸಿಲಿಯಾ ಟಿರ್ಕಿ, ಪತ್ರಕರ್ತ ಅವಧೂತ ಬಂಡಗಾರ, ಯಲ್ಲವ್ವ ಬಡಿಗೇರ, ರೇಣುಕಾ ಎಂಟಮಾನ ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

