ಸಿಂದಗಿ: ಬಿಜೆಪಿ ಪಕ್ಷದ ಮಾಜಿ ಶಾಸಕರು ಮಾ.೫ರಂದು ಗಂಗಾ ಕಲ್ಯಾಣ ಯೋಜನೆಯಲ್ಲಿ ಅರ್ಹ ರೈತ ಫಲಾನುಭವಿಗಳ ಹೆಸರನ್ನು ರದ್ದುಗೊಳಿಸಿದ್ದಾರೆ ಎಂದು ಹೇಳಿ ಅದರ ವಿರುದ್ಧ ಪ್ರತಿಭಟನೆ ಮಾಡುತ್ತೇವೆ ಎಂದಿದ್ದಾರೆ. ಆದರೆ ಪ್ರತಿಭಟನೆ ಮಾಡುವ ಮೊದಲು ಫಲಾನುಭವಿಗಳನ್ನು ಸರಕಾರ ರದ್ದುಗೊಳಿಸಿರುವ ಆದೇಶವಿದ್ದರೆ ಅದನ್ನು ಪ್ರದರ್ಶಿಸಿ ಪ್ರತಿಭಟನೆ ಮಾಡಲಿ ಎಂದು ಸಿಂದಗಿ ಬ್ಲಾಕ್ ಕಾಂಗ್ರೆಸ್ ತಾಲೂಕಾಧ್ಯಕ್ಷ ಸುರೇಶ ಪೂಜಾರ ಗುಡುಗಿದ್ದಾರೆ.
ಸರಕಾರ ಆದೇಶ ಮಾಡಿರುವ ಆದೇಶವಿಲ್ಲದೆ ಸುಖಾ ಸುಮ್ಮನೆ ಪ್ರತಿಭಟನೆ ಮಾಡಿ ಜನರ ದಾರಿ ತಪ್ಪಿಸುವ ಹುನ್ನಾರ ಮತ್ತು ಸಾರ್ವಜನಿಕರಿಗೆ ತಪ್ಪು ಸಂದೇಶ ಕಲ್ಪಿಸಿಕೊಟ್ಟಿರುವಂತಾಗುತ್ತದೆ.
ಈ ಹಿಂದಿನ ೨೦೨೧ರ ಅಧಿಕಾರದ ಅವಧಿಯಲ್ಲಿ ಮಾಜಿ ಶಾಸಕರು ಸಿಂದಗಿಗೆ ೫೦೦೦, ಆಲಮೇಲ ಪಟ್ಟಣಕ್ಕೆ ೨೦೦೦ ಮನೆಗಳನ್ನು ತಂದಿದ್ದೇವೆ ಎಂದು ಹೇಳಿದ್ದಾರೆ. ತಂದಿರುವುದಕ್ಕೆ ನಾವು ದಾಖಲೆ ಕೇಳಿದ್ದೇವೆ. ಆದರೆ ಇಲ್ಲಿಯವರೆಗೂ ಯಾವುದೇ ಸೂಕ್ತ ದಾಖಲೆಗಳನ್ನು ಪ್ರಸ್ತುತ ಪಡಿಸಿಲ್ಲ. ಅನುದಾನದ ವಿಚಾರದಲ್ಲಿ ನೀವು ಹೇಳಿದ ಹಾಗೆ ನಾವು ದಾಖಲೆ ನೀಡಿದ್ದೇವೆ. ನೀವು ಸೂಕ್ತ ದಾಖಲೆ ನೀಡುತ್ತೀರೆಂಬ ನಿರಿಕ್ಷೇಯಲ್ಲಿದ್ದೇವೆ ಎಂದಿದ್ದಾರೆ.
ಮಾಜಿ ಶಾಸಕರು ಜನತೆಯಲ್ಲಿ ಗೊಂದಲ ಮೂಡಿಸುವ ಹೇಳಿಕೆ ನೀಡುತ್ತಿರುವುದು ಶೋಭೆ ತರುವುದಿಲ್ಲ ಎಂದು ಸುರೇಶ ಪೂಜಾರ ಪ್ರಕಟಣೆ ಮೂಲಕ ತಿಳಿಸಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment

