ಇಂಡಿ: ಸರಕಾರಿ ಶಾಲೆಗಳ ಅಭಿವೃದ್ದಿಗೆ ಸ್ಥಳೀಯ ಮತ್ತು ಸಾರ್ವಜನಿಕರ ಸಹಕಾರ ಅಗತ್ಯವಾಗಿದೆ ಎಂದು ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಬೃಹತ್ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ ಹೇಳಿದರು.
ತಾಲೂಕಿನ ಅಥರ್ಗಾ ಗ್ರಾಮದ ಸರಕಾರಿ ಗಂಡು ಮಕ್ಕಳ ಶಾಲೆಗೆ ನವೀಕೃತ ಕಟ್ಟಡ ಲೋಕಾರ್ಪಣೆ ಮಾಡಿ, ಗುರುವಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಂಸದ ರಮೇಶ ಜಿಗಜಿಣಗಿಯವರು ಕಲಿತ ಶಾಲೆಗೆ ಒಂದು ಕೋಟಿ ರೂ ಅನುದಾನ, ಶಾಸಕ ಯಶವಂತರಾಯಗೌಡ ಪಾಟೀಲರು, ಗ್ರಾ.ಪಂ ಅಧ್ಯಕ್ಷರು, ಸದಸ್ಯರು ಹಾಗೂ ಗ್ರಾಮದ ಶಿಕ್ಷಣ ಪ್ರೇಮಿಗಳು ಹಳೆಯ ಶಾಲೆಗೆ ಹೊಸ ರೂಪ ಕೊಟ್ಟಿರುವುದನ್ನು ಪ್ರಶಂಸಿದರು.
ಪೂಜ್ಯ ಶ್ರೀ ಸಿದ್ದೇಶ್ವರ ಶ್ರೀಗಳು ಈ ಭಾಗ ನೀರಾವರಿ ಆಗಬೇಕೆಂಬುದು ಅವರ ಕನಸಾಗಿತ್ತು. ಕಳೆದ ಬಾರಿ ನೀರಾವರಿ ಸಚಿವನಿದ್ದಾಗ ಪ್ರಯತ್ನ ಮಾಡಿದ್ದೇನೆ. ಈ ಬಾರಿಯೂ ಜಿಲ್ಲೆ ಎಲ್ಲ ಭಾಗಗಳಿಗೆ ಮತ್ತು ಇಂಡಿ ತಾಲೂಕಿನ ಕೊನೆಯ ಭಾಗದವರೆಗೆ ನೀರು ಹರಿಸಲು ಪ್ರಯತ್ನ ಮಾಡುವುದಾಗಿ ತಿಳಿಸಿದರು.
ಗ್ರಾ.ಪಂ ಅಧ್ಯಕ್ಷ ನಾಗುಗೌಡ ಪಾಟೀಲ ಮಾತನಾಡಿದರು.
ಸಾನಿದ್ಯ ವಹಿಸಿದ ಅಥರ್ಗಾ ವಿರಕ್ತಿಮಠದ ಮುರಗೇಂದ್ರ ಶಿವಾಚಾರ್ಯರು ಮಾತನಾಡಿದರು.
ಗಣಪತಿ ಭಾಣಿಕೋಲ, ರಮೇಶ ಗೊಟ್ಯಾಳ, ಅಂಬು ಮೇತ್ರಿ ಮಾತನಾಡಿದರು.
ವೇದಿಕೆಯ ಮೇಲೆ ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಿಷಿ ಆನಂದ, ಕೆಆರ್ ಐಡಿಎಲ್ ಎಇಇ ಆನಂದ ಸ್ವಾಮಿ, ಎಚ್.ಎಸ್.ನಾಡಗೌಡ ವಕೀಲರು, ದಯಾಸಾಗರ ಪಾಟೀಲ, ಜಿ.ಪಂ ಉಪಾಧ್ಯಕ್ಷ ಸುಶಿಲಾಬಾಯಿ ರಾಠೋಡ, ಅಶೋಕಗೌಡ ಪಾಟೀಲ, ಎಸ್.ಡಿ.ಎಂ.ಸಿ ಅಧ್ಯಕ್ಷ ಬಸಲಿಂಗಪ್ಪ ಪೂಜಾರಿ ಮತ್ತಿತರಿದ್ದರು.
Subscribe to Updates
Get the latest creative news from FooBar about art, design and business.
ಸರಕಾರಿ ಶಾಲೆ ಅಭಿವೃದ್ಧಿಗೆ ಸಹಕಾರ ಅಗತ್ಯ :ಸಚಿವ ಎಂ.ಬಿ.ಪಾಟೀಲ
Related Posts
Add A Comment

