Subscribe to Updates
Get the latest creative news from FooBar about art, design and business.
Author: editor.udayarashmi@gmail.com
ವಿಜಯಪುರ: ಜಿಲ್ಲೆಯಲ್ಲಿ ಅರಿವು ಕೇಂದ್ರ ಗ್ರಾಮ ಪಂಚಾಯತ ಗ್ರಂಥಾಲಯ ಮೇಲ್ವಿಚಾರಕರ ಸಂಘದ ವತಿಯಿಂದ ಬೇಡಿಕೆಗಳು, ಕುಂದು ಕೊರತೆಗಳನ್ನು ಜಿಲ್ಲಾ ಪಂಚಾಯತ ಸಿಇಓ ರಿಷಿ ಆನಂದ ಅವರಿಗೆ ಮನವಿ ಸಲ್ಲಿಸುವ ಮೂಲಕ ಮನವರಿಕೆ ಮಾಡಲಾಯಿತು.೨೦೨೦ ರ ಮಾರ್ಚ್ ತಿಂಗಳಿನಿಂದ ಇಲ್ಲಿಯವರೆಗೆ ಬಹುತೇಕ ಕಡೆಗೆ ಗ್ರಂಥಾಲಯಗಳ ಪತ್ರಿಕೆ ಬಿಲ್ ನೀಡದೇ ಇರುವುದು, ೬ ತಿಂಗಳಿನಿಂದ ವೇತನ ಜಮಾ ಇದ್ದರೂ ನೀಡದೇ ಇರುವದು, ಇ-ಅಟೆಂಡೆನ್ಸ ಮಾಡುವಲ್ಲಿ ಮುತುವರ್ಜಿ ವಹಿಸದೇ ಇರುವದು, ಗ್ರಂಥಾಲಯಗಳಿಗೆ ಅವಶ್ಯಕ ರಿಜಿಸ್ಟರ್, ರಶೀದಿ ಪುಸ್ತಕ, ಸೀಲು,ಕುರ್ಚಿ, ಪೀಠೋಪಕರಣ, ಡಿಜಿಟಲ್ ಗ್ರಂಥಾಲಯ ಗಳಿಗೆ ಅವಶ್ಯಕ ಪರಿಕರಗಳು, ವೈಫೈ , ಇಂಟರ್ನೆಟ್ ವ್ಯವಸ್ಥೆ ಕಲ್ಪಿಸುವುದು, ವರ್ಗಾವಣೆ, ಅನುಕಂಪದ ನೌಕರಿ ಸೇರಿದಂತೆ ಅನೇಕ ವಿಷಯಗಳ ಕುರಿತು ಸಿಇಓ ಅವರಿಗೆ ಮನವಿಯ ಮೂಲಕ ಗಮನಕ್ಕೆ ತರಲಾಯಿತು.ಮನವಿ ಸ್ವೀಕರಿಸಿದ ಸಿಇಓ ಕೂಡಲೆ ತಮ್ಮ ಸಮಸ್ಯೆಗಳನ್ನು ಪರಿಹರಿಸುವುದಾಗಿ ಭರವಸೆ ನೀಡಿದರು.ಅರಿವು ಕೇಂದ್ರ ಗ್ರಾಮ ಪಂಚಾಯತ ಗ್ರಂಥಾಲಯ ಹಾಗೂ ಮಾಹಿತಿ ಕೇಂದ್ರದ ಮೇಲ್ವಿಚಾರಕ ಸಂಘದ ಜಿಲ್ಲಾ ಅಧ್ಯಕ್ಷ ಶಿವಾನಂದ ದೇಸಾಯಿ, ಪ್ರಧಾನಕಾರ್ಯದರ್ಶಿ ಶಿವಶಂಕರ…
ವಿಜಯಪುರ: ಚೇತನ ಪೌಂಡೇಶನ್, ಕರ್ನಾಟಕ ವತಿಯಿಂದ ಇದೇ ರವಿವಾರ ೦೩ ಮಾರ್ಚ್ ೨೦೨೪ ರಂದು ಧಾರವಾಡದ ಕನ್ನಡ ಸಾಹಿತ್ಯ ಪರಿಷತ್ತಿನ ಭವನದಲ್ಲಿ ಸಂಗೀತ ಸಾಮ್ರಾಟ ಗಾನವಿಶಾರದ ಡಾ. ಪಂಡಿತ ಪುಟ್ಟರಾಜ ಕವಿಗವಾಯಿಗಳ ೧೧೦ ನೇ ಜಂಯಂತ್ಯೋತ್ಸವದ ಪ್ರಯುಕ್ತ ಏರ್ಪಡಿಸಿದ ಸಂಗೀತ ಸೌರಭ ಕಾರ್ಯಕ್ರಮದಲ್ಲಿ ವಿಜಯಪುರದ ಬಾಲಿಕೆಯರ ಸರಕಾರಿ ಪದವಿ ಪೂರ್ವ ಕಾಲೇಜಿನ ಹಿರಿಯ ಕನ್ನಡ ಉಪನ್ಯಾಸಕ ಪ್ರೊ. ಸಿದ್ದು ಸಾವಳಸಂಗ ಅವರಿಗೆ ಶಿಕ್ಷಣ ಮತ್ತು ಸಾಹಿತ್ಯದಲ್ಲಿ ಮಾಡಿದ ಉತ್ತಮ ಸೇವೆಯನ್ನು ಪರಿಗಣಿಸಿ “ಪದ್ಮಭೂಷಣ ಪುಟ್ಟರಾಜ ಕವಿಗವಾಯಿ ರಾಷ್ಟ್ರೀಯ ಪ್ರಶಸ್ತಿ” ಪ್ರದಾನ ಮಾಡಲಾಯಿತು.ಚೇತನ ಪೌಂಡೇಶನ್ ಅಧ್ಯಕ್ಷ ಚಂದ್ರಶೇಖರ ಮಾಡಲಗೇರಿ, ಸಂಗೀತ ಸೌರಭ ಕಾರ್ಯಕ್ರಮದ ಅಧ್ಯಕ್ಷ ನೀ ಶ್ರೀಶೈಲ, ಹಿರಿಯ ಕವಿಗಳು ಹಾಗೂ ನೂರಾರು ಜನ ಪ್ರೇಕ್ಷಕರ ನಡುವೆ ಪ್ರೊ. ಸಿದ್ದು ಸಾವಳಸಂಗ ಅವರಿಗೆ ಈ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ಆಲಮೇಲ: ಸಿಂದಗಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಅಶೋಕ ಮನಗೂಳಿ ಅವರ ಅಭಿವೃದ್ದಿ ಕೆಲಸಗಳನ್ನು ಸಹಿಸಿಕೊಳ್ಳದೆ ಬಿಜೆಪಿಯವರು ಸುಳ್ಳು ಆರೋಪಗಳ ಮೂಲಕ ಪ್ರತಿಭಟನೆ ಹಮ್ಮಿಕೊಂಡಿರುವುದು ಖಂಡನೀಯ ಎಂದು ಆಲಮೇಲ ಬ್ಲಾಕ ಕಾಂಗ್ರೆಸ್ ಅಧ್ಯಕ್ಷ ಸಾಧೀಕ ಸುಂಬಡ ಹೇಳಿದರು.ಸೋಮವಾರ ಪಟ್ಟಣದ ಪ್ರವಾಸಿಮಂದಿರದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಬಿಜೆಪಿ ಮಾಜಿ ಶಾಸಕ ರಮೇಶ ಭೂಸನೂರರ ಅವಧಿಯಲ್ಲಿ ೨೦೨೨-೨೩ನೇ ಸಾಲಿನ ಕೃಷ್ಣಾ ಭಾಗ್ಯ ಜಲ ನಿಗಮದ(ಎಸ್ ಸಿಪಿ/ಟಿ ಎಸ್ ಪಿ) ಯೋಜನೆ ಅಡಿಯಲ್ಲಿ ಮಂಜೂರಾಗಿರುವ ೭೦ ಕೊಳವೆ ಬಾವಿಗಳನ್ನು ಹಾಲಿ ಶಾಸಕ ಅಶೋಕ ಮನಗೂಳಿಯವರು ರದ್ದುಗೊಳಿಸಲು ಪತ್ರ ನೀಡಿ ಅರ್ಹ ಫಲಾನುಭವಿಗಳಿಗೆ ಅನ್ಯಾಯವೆಸಗಿದ್ದಾರೆ ಎಂದು ಶಾಸಕ ಅಶೋಕ ಮನಗೂಳಿ ವಿರುದ್ದ ಮಾಜಿ ಶಾಸಕ ರಮೇಶ ಭೂಸನೂರ ನೇತೃತ್ವದಲ್ಲಿ ಬಿಜೆಪಿ ಬ್ರಹತ್ ಪ್ರತಿಭಟನೆ ಹಮ್ಮಿಕೊಂಡಿದ್ದಾರೆ. ಸುಳ್ಳು ಪ್ರತಿಭಟನೆ ನಡೆಸುವ ಮೂಲಕ ಕ್ಷೇತ್ರದ ಜನರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ.೭೦ ಕೊಳವೆ ಬಾವಿಗಳ ಪೈಕಿ ಕೆಲವು ಬದಲಾವಣೆಗೆ ಮಾಡಲು ಹೇಳಿರಬಹುದು, ಆದರೆ ಸಂಪೂರ್ಣವಾಗಿ ರದ್ದು ಮಾಡಿಲ್ಲ. ಈ ತರಹ…
ಬಸವನಬಾಗೇವಾಡಿ: ಪಾಲಕರು, ಶಿಕ್ಷಕರು ಮಕ್ಕಳಿಗೆ ಶಿಕ್ಷಣದೊಂದಿಗೆ ನೈತಿಕ ಮೌಲ್ಯಗಳನ್ನು ಕಲಿಸಿಕೊಡುವ ಅಗತ್ಯವಿದೆ ಎಂದು ಬಸವನಬಾಗೇವಾಡಿ ವಿಪಿಕೆಪಿಎಸ್ ಬ್ಯಾಂಕಿನ ಅಧ್ಯಕ್ಷ ಸಂಗನಗೌಡ ಚಿಕ್ಕೊಂಡ ಹೇಳಿದರು.ಪಟ್ಟಣದ ಇಕ್ಬಾಲ್ ನಗರದ ಬಸವೇಶ್ವರ ಶಿಕ್ಷಣ ಮತ್ತು ಗ್ರಾಮೀಣ ಅಭಿವೃದ್ಧಿ ಸಂಘದ ಬಸವೇಶ್ವರ ಕನ್ನಡ ಮತ್ತು ಆಂಗ್ಲ ಮಾಧ್ಯಮ ಪೂರ್ವ ಪ್ರಾಥಮಿಕ ಶಾಲೆಯು ಭಾನುವಾರ ಸಂಜೆ ಹಮ್ಮಿಕೊಂಡಿದ್ದ ವಾರ್ಷಿಕ ಸ್ನೇಹ ಸಮ್ಮೇಳನದ ಮುಖ್ಯ ಅತಿಥಿ ಸ್ಥಾನ ವಹಿಸಿ ಮಾತನಾಡಿದ ಅವರು, ಉತ್ತಮ ಮಕ್ಕಳನ್ನು ಬೆಳೆಸುವ ಜವಾಬ್ದಾರಿ ಪಾಲಕರ, ಶಿಕ್ಷಕರ ಮೇಲಿದೆ. ಪಾಲಕರು ತಮ್ಮ ಮಕ್ಕಳಿಗೆ ಬೇಕರಿ ತಿಂಡಿ-ತಿನಿಸುಗಳನ್ನು ಕೊಡದೇ ಪೌಷ್ಠಿಕಾಂಶ ಹೊಂದಿರುವ ಆಹಾರ ಪದಾರ್ಥಗಳನ್ನು ತಿನ್ನಿಸುವ ಮೂಲಕ ಆರೋಗ್ಯಯುತ ಮಾಡುವ ಜೊತೆಗೆ ಉತ್ತಮ ವಿದ್ಯಾಭ್ಯಾಸ ಮಾಡುವಂತೆ ಗಮನ ಹರಿಸಬೇಕಾದ ಅಗತ್ಯವಿದೆ. ಮಕ್ಕಳು ಚಿಕ್ಕವರಿದ್ದಾಗ ಅವರಿಗೆ ಉತ್ತಮ ಮಾರ್ಗದರ್ಶನ ನೀಡಿದರೆ ಖಂಡಿತ ಅವರು ಉತ್ತಮ ನಾಗರಿಕರಾಗುತ್ತಾರೆ. ಈ ಶಾಲೆಯ ಸಂಸ್ಥಾಪಕ ಎನ್.ಎನ್.ಅಂಗಡಿ ಅವರಿಗೆ ಕಾಲಿನಲ್ಲಿ ಅಷ್ಟು ಶಕ್ತಿ ಇರದೇ ಇದ್ದರೂ ಅವರು ದಿಟ್ಟತನದಿಂದ ಶಾಲೆಯ ಸರ್ವೋತ್ತಮವಾಗಿ ಪ್ರಗತಿಗೆ ಶ್ರಮಿಸುತ್ತಿರುವುದು ಶ್ಲಾಘನೀಯ.…
ಬಸವನಬಾಗೇವಾಡಿ: ತಾಲೂಕಿನ ಕಾನ್ನಾಳ ಗ್ರಾಮದ ಬಾಂದಾರಕ್ಕೆ ಭಾನುವಾರ ಸಂಜೆ ಮುಳವಾಡ ಏತನೀರಾವರಿ ಯೋಜನೆಯ ಸಂಕನಾಳ ಮುಖ್ಯ ಕಾಲುವೆಯಿಂದ ನೀರು ಬಿಡಲು ಅಽಕಾರಿಗಳು ನೀಡಿದ ಭರವಸೆಯಂತೆ ಅಧಿಕಾರಿಗಳ ಸಮ್ಮುಖದಲ್ಲಿ ಫೈಪ್ ಹಾಕುವ ಕಾರ್ಯ ನಡೆಯಿತು.ಗ್ರಾಮಸ್ಥರು ಶನಿವಾರ ಕುಡಿಯುವ ನೀರಿನ ತಾಪತ್ರಯ, ಜಾನುವಾರುಗಳಿಗೆ ನೀರು ಇಲ್ಲದಂತಾಗಿದೆ. ಗ್ರಾಮದಿಂದ ಕೇವಲ ಎರಡು ಕಿಲೋ ಮೀಟರ್ ಅಂತರದಲ್ಲಿರುವ ಈ ಕಾಲುವೆಯಿಂದ ಗ್ರಾಮದ ಬಾಂದಾರಕ್ಕೆ ನೀರು ಬಿಟ್ಟರೆ ಗ್ರಾಮದಲ್ಲಿ ಅಂತರ್ಜಲ ಮಟ್ಟಕ್ಕೆ ಪೂರಕವಾಗುತ್ತದೆ. ಕಾಲುವೆಯಿಂದ ನೀರು ಬಿಡಬೇಕೆಂದು ಆಗ್ರಹಿಸಿ ರಾಜ್ಯ ಬಿಜ್ಜಳ ಹೆದ್ದಾರಿಯಲ್ಲಿ ರಸ್ತೆ ತಡೆ ಮಾಡಿ ಪ್ರತಿಭಟನೆ ಮಾಡಿದ್ದರು. ಈ ಕಾಲುವೆಯಿಂದ ೧೦ ಇಂಚು -ಪ್ ಮೂಲಕ ನೀರು ಬಿಡುವ ಬಗ್ಗೆ ಅಧಿಕಾರಿಗಳು ಭರವಸೆ ನೀಡಿದ್ದರಿಂದ ಗ್ರಾಮಸ್ಥರು ತಮ್ಮ ಪ್ರತಿಭಟನೆ ಹಿಂಪಡೆದುಕೊಂಡಿದ್ದರು.ತಹಸೀಲ್ದಾರ ವೈ.ಎಸ್. ಸೋಮನಕಟ್ಟಿ, ಕೆಬಿಜೆಎನ್ಎಲ್ ಅಧಿಕಾರಿಗಳಾದ ಜಗದೀಶ ಹೊನ್ನಕಸ್ತೂರಿ, ಎನ್.ಎಸ್.ನರಸನಗೌಡರ, ಬಿ.ಟಿ.ದೊಡಮನಿ, ಪಿಐ ವಿಜಯಕುಮಾರ ಮರಗುಂಡಗಿ ಸಮ್ಮುಖದಲ್ಲಿ ಗ್ರಾಮಸ್ಥರು ತಮ್ಮ ಸ್ವಂತ ಖರ್ಚಿನಲ್ಲಿ ಈ ಕಾಲುವೆಯಿಂದ ಗ್ರಾಮದ ಬಾಂದಾರದವರೆಗೂ ತೆಗ್ಗು ಅಗೆದು ಫೈಪ್ ಅಳವಡಿಸುವ ಕಾರ್ಯ…
ಮುದ್ದೇಬಿಹಾಳ: ಮಾ.೯ ರಂದು ನಡೆಯಬೇಕಿದ್ದ ರಾಷ್ಟ್ರೀಯ ಲೋಕ್ ಅದಾಲತ್ ನ್ನು ಮಾ.೧೬ ಕ್ಕೆ ಮುಂದೂಡಿ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಜಯಶಂಕರ ಆದೇಶಿಸಿದ್ದಾರೆ.
ಮುದ್ದೇಬಿಹಾಳ: ತಾಲೂಕಿನ ಕುಂಟೋಜಿ ಸಂಸ್ಥಾನ ಹಿರೇಮಠದ ಡಾ.ಚನ್ನವೀರ ದೇವರ ಪಟ್ಟಾಧಿಕಾರ ಮಹೋತ್ಸವ ಮಾ.೫,೬ ಮತ್ತು ೭ ರಂದು ಅದ್ಧೂರಿಯಾಗಿ ನೆರವೇರಲಿದೆ. ಸಾಮೂಹಿಕ ವಿವಾಹ, ಜಗದ್ಗುರುಗಳ ಅಡ್ಡಪಲ್ಲಕ್ಕಿ, ನಾಟಕೋತ್ಸವ, ಜನಪದ ಕಲಾಮೇಳ, ಯುವಜನೋತ್ಸವ ಹೀಗೆ ವಿವಿಧ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಎಲ್ಲ ಭಕ್ತಾಧಿಗಳು ಭಾಗಿಯಾಗಿ ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸುವಂತೆ ಪಟ್ಟಾಧಿಕಾರ ಮಹೋತ್ಸವ ಸಮಿತಿಯ ಅಧ್ಯಕ್ಷರೂ ಆದ ಶಾಸಕ ಸಿ.ಎಸ್.ನಾಡಗೌಡರು ಮನವಿ ಮಾಡಿಕೊಂಡರು.ತಾಲೂಕಿನ ಕುಂಟೋಜಿ ಗ್ರಾಮದ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಪಟ್ಟಾಧಿಕಾರ ಮಹೋತ್ಸವ ಸಮಿತಿಯ ವತಿಯಿಂದ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.ಇದೊಂದು ಅಪರೂಪದ ಕಾರ್ಯಕ್ರಮ. ಅಂದಾಜು ೬೦ ಸಾವಿರ ಜನಕ್ಕೆ ಪ್ರಸಾದದ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಪ್ರತಿ ದಿನ ಅಂದಾಜು ೨೦ ಸಾವಿರ ಜನತೆ ಸೇರುವ ನಿರೀಕ್ಷೆ ಇದೆ. ಎಲ್ಲ ಭಕ್ತಾಧಿಗಳು ತನು, ಮನ, ಧನದಿಂದ ಭಾಗಿಯಾಗುವಂತೆ ಕೋರಿದರು.ಜಿಲ್ಲಾ ಪಂಚಾಯತ ಮಾಜಿ ಉಪಾಧ್ಯಕ್ಷರೂ ಮಹೋತ್ಸವ ಸಮಿತಿಯ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ ಅವರು ಮಾತನಾಡಿ, ಪಟ್ಟಾಧಿಕಾರ ಮಹೋತ್ಸವದಲ್ಲಿ ಭಾಗಿಯಾಗುವ ಅವಕಾಶ ಎಲ್ಲರಿಗೂ ಸಿಗುವದಿಲ್ಲ. ಸಿಕ್ಕಿದ್ದು ನಮ್ಮೆಲ್ಲರ ಭಾಗ್ಯ. ಗ್ರಾಮಸ್ಥರು,…
ಮುದ್ದೇಬಿಹಾಳ: ತಾಲೂಕಿನ ಯರಗಲ್ಲ ಗ್ರಾಮದ ಬಾಲಾಜಿ ಶುಗರ್ಸ ಕಾರ್ಖಾನೆ ೨೦೨೩-೨೪ ನೇ ಸಾಲಿನ ಕಬ್ಬು ನುರಿಸುವ ಕಾರ್ಯವನ್ನು ಮಾ.೯ ರಂದು ಮುಕ್ತಾಯಗೊಳಿಸುತ್ತಿದ್ದು, ಕಬ್ಬು ಬೆಳೆಗಾರರು ಕಾರ್ಖಾನೆಯೊಂದಿಗೆ ಕಬ್ಬು ಪೂರೈಕೆ ಕರಾರಿನಂತೆ ತಮ್ಮ ಎಲ್ಲ ಕಬ್ಬನ್ನು ಕಬ್ಬು ಕಟಾವು ಆದೇಶಗಳನ್ವಯ ಕಟಾವು ಮಾಡಿ ಮಾ.೮ ರ ರಾತ್ರಿ ೧೦ಗಂಟೆಯ ಒಳಗಾಗಿ ಕಾರ್ಖಾನೆಗೆ ಪೂರೈಸಬೇಕು. ಅವಧಿಯ ನಂತರ ಕಟಾವುಗೊಳ್ಳದೇ ಉಳಿಯುವ ಕಬ್ಬಿಗೆ ಕಾರ್ಖಾನೆಯು ಯಾವುದೇ ರೀತಿಯಿಂದ ಜವಾಬ್ದಾರ ಇರುವದಿಲ್ಲ ಎಂದು ಕಾರ್ಖಾನೆಯ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಜಯಪುರ: ಜಿಲ್ಲೆಯಲ್ಲಿ ಸೋಮವಾರ ನಡೆದ ದ್ವಿತೀಯ ಪಿಯುಸಿ ಪರೀಕ್ಷೆಯ ಗಣಿತ ಭಾಷಾ ಪರೀಕ್ಷೆಯಲ್ಲಿ ೧೧೫೧೧ ವಿದ್ಯಾರ್ಥಿಗಳು ನೊಂದಾಯಿಸಿಕೊಂಡಿದ್ದು, ೧೧೩೩೮ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿ ೧೭೩ ವಿದ್ಯಾರ್ಥಿಗಳು ಪರೀಕ್ಷೆಗೆ ಗೈರ ಹಾಜರಾಗಿದ್ದರು. ಅದರಂತೆ ಶಿಕ್ಷಣಶಾಸ್ತ್ರ ಭಾಷಾ ಪರೀಕ್ಷೆಗೆ ಜಿಲ್ಲೆಯಲ್ಲಿ ೭೬೧೦ ವಿದ್ಯಾರ್ಥಿಗಳು ನೊಂದಾಯಿಸಿಕೊಂಡು ೭೧೫೨ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿ ೪೫೮ ವಿದ್ಯಾರ್ಥಿಗಳು ಗೈರ ಹಾಜರಾಗಿದ್ದರು. ಒಟ್ಟಾರೆ ಜಿಲ್ಲೆಯಾದ್ಯಂತ ಇಂದು ನಡೆದ ಪರೀಕ್ಷೆಯಲ್ಲಿ ೬೩೧ ವಿದ್ಯಾರ್ಥಿಗಳು ಗೈರ ಹಾಜರಾಗಿದ್ದರು ಎಂದು ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಸಿ.ಕೆ.ಹೊಸಮನಿ ಅವರು ತಿಳಿಸಿದ್ದಾರೆ.
ವಿಜಯಪುರ: ಮಹಾನಗರ ಪಾಲಿಕೆಯ ೨೧ನೇ ಅವಧಿಗೆ ವಿವಿಧ ನಾಲ್ಕು ಸ್ಥಾಯಿ ಸಮಿತಿಗಳಿಗೆ ಸದಸ್ಯರ ಆಯ್ಕೆಗೆ ಚುನಾವಣೆ ನಡೆಸಲು ಮಹಾನಗರ ಪಾಲಿಕೆಯ ಸ್ಥಾಯಿ ಸಮಿತಿ ಚುನಾವಣೆ ಅಧ್ಯಕ್ಷಾಧಿಕಾರಿಗಳಾದ ಬೆಳಗಾವಿ ವಿಭಾಗದ ಪ್ರಾದೇಶಿಕ ಆಯುಕ್ತರಾದ ಎಸ್.ಬಿ.ಶೆಟ್ಟೆಣ್ಣವರ ದಿನಾಂಕ ನಿಗದಿಗೊಳಿಸಿದ್ದಾರೆ.ಸ್ಥಾಯಿ ಸಮಿತಿ ಸದಸ್ಯರ ಆಯ್ಕೆಗಾಗಿ ದಿನಾಂಕ : ೧೨-೦೩-೨೦೨೪ ರಂದು ಮಧ್ಯಾಹ್ನ ೧ ಗಂಟೆಗೆ ವಿಜಯಪುರ ಮಹಾನಗರ ಪಾಲಿಕೆ ಸಭಾ ಭವನದಲ್ಲಿ ಚುನಾವಣೆ ನಡೆಸಲು ನಿಗದಿಗೊಳಿಸಲಾಗಿದ್ದು, ಚುನಾವಣಾ ವೇಳಾಪಟ್ಟಿಯಂತೆ ದಿನಾಂಕ : ೧೨-೦೩.-೨೦೨೪ ರಂದು ಬೆಳಿಗ್ಗೆ ೯ ರಿಂದ ೧೧ ಗಂಟೆಯವರೆಗೆ ನಾಮ ಪತ್ರಗಳ ಸ್ವೀಕಾರ, ಮಧ್ಯಾಹ್ನ ೧ ಗಂಟೆಗೆ ಸಭೆ ಪ್ರಾರಂಭ ಹಾಗೂ ಮಧ್ಯಾಹ್ನ ೧ ಗಂಟೆಯ ನಂತರ ಚುನಾವಣಾ ಪ್ರಕ್ರಿಯೆ ಆರಂಭಗೊಳ್ಳಲಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
