ವಿಜಯಪುರ: ಚೇತನ ಪೌಂಡೇಶನ್, ಕರ್ನಾಟಕ ವತಿಯಿಂದ ಇದೇ ರವಿವಾರ ೦೩ ಮಾರ್ಚ್ ೨೦೨೪ ರಂದು ಧಾರವಾಡದ ಕನ್ನಡ ಸಾಹಿತ್ಯ ಪರಿಷತ್ತಿನ ಭವನದಲ್ಲಿ ಸಂಗೀತ ಸಾಮ್ರಾಟ ಗಾನವಿಶಾರದ ಡಾ. ಪಂಡಿತ ಪುಟ್ಟರಾಜ ಕವಿಗವಾಯಿಗಳ ೧೧೦ ನೇ ಜಂಯಂತ್ಯೋತ್ಸವದ ಪ್ರಯುಕ್ತ ಏರ್ಪಡಿಸಿದ ಸಂಗೀತ ಸೌರಭ ಕಾರ್ಯಕ್ರಮದಲ್ಲಿ ವಿಜಯಪುರದ ಬಾಲಿಕೆಯರ ಸರಕಾರಿ ಪದವಿ ಪೂರ್ವ ಕಾಲೇಜಿನ ಹಿರಿಯ ಕನ್ನಡ ಉಪನ್ಯಾಸಕ ಪ್ರೊ. ಸಿದ್ದು ಸಾವಳಸಂಗ ಅವರಿಗೆ ಶಿಕ್ಷಣ ಮತ್ತು ಸಾಹಿತ್ಯದಲ್ಲಿ ಮಾಡಿದ ಉತ್ತಮ ಸೇವೆಯನ್ನು ಪರಿಗಣಿಸಿ “ಪದ್ಮಭೂಷಣ ಪುಟ್ಟರಾಜ ಕವಿಗವಾಯಿ ರಾಷ್ಟ್ರೀಯ ಪ್ರಶಸ್ತಿ” ಪ್ರದಾನ ಮಾಡಲಾಯಿತು.
ಚೇತನ ಪೌಂಡೇಶನ್ ಅಧ್ಯಕ್ಷ ಚಂದ್ರಶೇಖರ ಮಾಡಲಗೇರಿ, ಸಂಗೀತ ಸೌರಭ ಕಾರ್ಯಕ್ರಮದ ಅಧ್ಯಕ್ಷ ನೀ ಶ್ರೀಶೈಲ, ಹಿರಿಯ ಕವಿಗಳು ಹಾಗೂ ನೂರಾರು ಜನ ಪ್ರೇಕ್ಷಕರ ನಡುವೆ ಪ್ರೊ. ಸಿದ್ದು ಸಾವಳಸಂಗ ಅವರಿಗೆ ಈ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
Subscribe to Updates
Get the latest creative news from FooBar about art, design and business.
Related Posts
Add A Comment

