ವಿಜಯಪುರ: ಜಿಲ್ಲೆಯಲ್ಲಿ ಅರಿವು ಕೇಂದ್ರ ಗ್ರಾಮ ಪಂಚಾಯತ ಗ್ರಂಥಾಲಯ ಮೇಲ್ವಿಚಾರಕರ ಸಂಘದ ವತಿಯಿಂದ ಬೇಡಿಕೆಗಳು, ಕುಂದು ಕೊರತೆಗಳನ್ನು ಜಿಲ್ಲಾ ಪಂಚಾಯತ ಸಿಇಓ ರಿಷಿ ಆನಂದ ಅವರಿಗೆ ಮನವಿ ಸಲ್ಲಿಸುವ ಮೂಲಕ ಮನವರಿಕೆ ಮಾಡಲಾಯಿತು.
೨೦೨೦ ರ ಮಾರ್ಚ್ ತಿಂಗಳಿನಿಂದ ಇಲ್ಲಿಯವರೆಗೆ ಬಹುತೇಕ ಕಡೆಗೆ ಗ್ರಂಥಾಲಯಗಳ ಪತ್ರಿಕೆ ಬಿಲ್ ನೀಡದೇ ಇರುವುದು, ೬ ತಿಂಗಳಿನಿಂದ ವೇತನ ಜಮಾ ಇದ್ದರೂ ನೀಡದೇ ಇರುವದು, ಇ-ಅಟೆಂಡೆನ್ಸ ಮಾಡುವಲ್ಲಿ ಮುತುವರ್ಜಿ ವಹಿಸದೇ ಇರುವದು, ಗ್ರಂಥಾಲಯಗಳಿಗೆ ಅವಶ್ಯಕ ರಿಜಿಸ್ಟರ್, ರಶೀದಿ ಪುಸ್ತಕ, ಸೀಲು,ಕುರ್ಚಿ, ಪೀಠೋಪಕರಣ, ಡಿಜಿಟಲ್ ಗ್ರಂಥಾಲಯ ಗಳಿಗೆ ಅವಶ್ಯಕ ಪರಿಕರಗಳು, ವೈಫೈ , ಇಂಟರ್ನೆಟ್ ವ್ಯವಸ್ಥೆ ಕಲ್ಪಿಸುವುದು, ವರ್ಗಾವಣೆ, ಅನುಕಂಪದ ನೌಕರಿ ಸೇರಿದಂತೆ ಅನೇಕ ವಿಷಯಗಳ ಕುರಿತು ಸಿಇಓ ಅವರಿಗೆ ಮನವಿಯ ಮೂಲಕ ಗಮನಕ್ಕೆ ತರಲಾಯಿತು.
ಮನವಿ ಸ್ವೀಕರಿಸಿದ ಸಿಇಓ ಕೂಡಲೆ ತಮ್ಮ ಸಮಸ್ಯೆಗಳನ್ನು ಪರಿಹರಿಸುವುದಾಗಿ ಭರವಸೆ ನೀಡಿದರು.
ಅರಿವು ಕೇಂದ್ರ ಗ್ರಾಮ ಪಂಚಾಯತ ಗ್ರಂಥಾಲಯ ಹಾಗೂ ಮಾಹಿತಿ ಕೇಂದ್ರದ ಮೇಲ್ವಿಚಾರಕ ಸಂಘದ ಜಿಲ್ಲಾ ಅಧ್ಯಕ್ಷ ಶಿವಾನಂದ ದೇಸಾಯಿ, ಪ್ರಧಾನಕಾರ್ಯದರ್ಶಿ ಶಿವಶಂಕರ ಉಕುಮನಾಳ, ಬಸವನಬಾಗೇವಾಡಿ ತಾಲೂಕು ಅಧ್ಯಕ್ಷ ಭೀಮಸಿಂಗ್ ರಾಠೋಡ, ರಾಜು ಮೇಲಕೇರಿ, ಶಂಕರ ಅಗಸರ, ಶಂಕರ ಸಾರವಾಡ ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

