ವಿಜಯಪುರ: ಮಹಾನಗರ ಪಾಲಿಕೆಯ ೨೧ನೇ ಅವಧಿಗೆ ವಿವಿಧ ನಾಲ್ಕು ಸ್ಥಾಯಿ ಸಮಿತಿಗಳಿಗೆ ಸದಸ್ಯರ ಆಯ್ಕೆಗೆ ಚುನಾವಣೆ ನಡೆಸಲು ಮಹಾನಗರ ಪಾಲಿಕೆಯ ಸ್ಥಾಯಿ ಸಮಿತಿ ಚುನಾವಣೆ ಅಧ್ಯಕ್ಷಾಧಿಕಾರಿಗಳಾದ ಬೆಳಗಾವಿ ವಿಭಾಗದ ಪ್ರಾದೇಶಿಕ ಆಯುಕ್ತರಾದ ಎಸ್.ಬಿ.ಶೆಟ್ಟೆಣ್ಣವರ ದಿನಾಂಕ ನಿಗದಿಗೊಳಿಸಿದ್ದಾರೆ.
ಸ್ಥಾಯಿ ಸಮಿತಿ ಸದಸ್ಯರ ಆಯ್ಕೆಗಾಗಿ ದಿನಾಂಕ : ೧೨-೦೩-೨೦೨೪ ರಂದು ಮಧ್ಯಾಹ್ನ ೧ ಗಂಟೆಗೆ ವಿಜಯಪುರ ಮಹಾನಗರ ಪಾಲಿಕೆ ಸಭಾ ಭವನದಲ್ಲಿ ಚುನಾವಣೆ ನಡೆಸಲು ನಿಗದಿಗೊಳಿಸಲಾಗಿದ್ದು, ಚುನಾವಣಾ ವೇಳಾಪಟ್ಟಿಯಂತೆ ದಿನಾಂಕ : ೧೨-೦೩.-೨೦೨೪ ರಂದು ಬೆಳಿಗ್ಗೆ ೯ ರಿಂದ ೧೧ ಗಂಟೆಯವರೆಗೆ ನಾಮ ಪತ್ರಗಳ ಸ್ವೀಕಾರ, ಮಧ್ಯಾಹ್ನ ೧ ಗಂಟೆಗೆ ಸಭೆ ಪ್ರಾರಂಭ ಹಾಗೂ ಮಧ್ಯಾಹ್ನ ೧ ಗಂಟೆಯ ನಂತರ ಚುನಾವಣಾ ಪ್ರಕ್ರಿಯೆ ಆರಂಭಗೊಳ್ಳಲಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment
