Subscribe to Updates
Get the latest creative news from FooBar about art, design and business.
Author: editor.udayarashmi@gmail.com
ವಿಜಯಪುರ: ಜೂನ್ ನಂತರ ಸರ್ಕಾರಿ ಶಾಲೆಗಳ ಪ್ರವೇಶ ದಾಖಲಾತಿಯಲ್ಲಿ ವಿಜಯಪುರ ನಗರ ಇತಿಹಾಸ ಸೃಷ್ಟಿಸುವಂತಾಗಬೇಕು ಎಂದು ನಗರ ಶಾಸಕ ಬಸನಗೌಡ ರಾ.ಪಾಟೀಲ ಯತ್ನಾಳ ಅವರು ಹೇಳಿದರು.ನಗರದ ವಾರ್ಡ ನಂ.೧೩ರಲ್ಲಿ ಬರುವ ಶಾಪೇಟೆ ಸರ್ಕಾರಿ ಕೆಬಿಎಸ್ ನಂ.೭ ಮತ್ತು ೮ ರಲ್ಲಿ ವಿವೇಕ ಶಾಲಾ ಕೊಠಡಿ ಯೋಜನೆಯಡಿ ನೂತನವಾಗಿ ನಿರ್ಮಾಣ ಮಾಡಲಾದ ೪ ಶಾಲಾ ಕೊಠಡಿಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.ನಗರದ ಸರ್ಕಾರಿ ಶಾಲೆಗಳಲ್ಲಿ ದಾಖಲೆ ಪ್ರಮಾಣದಲ್ಲಿ ಮಕ್ಕಳ ಪ್ರವೇಶ ಆಗುತ್ತಿದೆ ಎಂಬ ಸಂದೇಶ ಇಡೀ ರಾಜ್ಯಕ್ಕೆ ಹೋಗುವ ರೀತಿಯಲ್ಲಿ, ನಮ್ಮ ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿಪಡಿಸಿ, ಅತ್ಯುತ್ತಮ ಶಿಕ್ಷಣ ನೀಡುವ ನಿಟ್ಟಿನಲ್ಲಿ ಮಾಡೋಣ, ಬಡವರು, ಶ್ರೀಮಂತರು ಎನ್ನದೇ, ಎಲ್ಲಾ ಮಕ್ಕಳು ಸಹ ನಮ್ಮ ಸರ್ಕಾರಿ ಶಾಲೆಗಳಿಗೆ ಪ್ರವೇಶಕ್ಕೆ ಕ್ಯೂ ನಿಲ್ಲಬೇಕು ಎಂದರು.ಈಗಾಗಲೇ ನಗರದ ಬಹುತೇಕ ಸರ್ಕಾರಿ ಶಾಲೆಗಳಿಗೆ ಸಮರ್ಪಕವಾಗಿ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲಾಗಿದೆ. ಉಳಿದಿರುವ ಶಾಲೆಗಳ ಶಿಥಿಲ ಕೊಠಡಿಗಳನ್ನು ಮಕ್ಕಳ ಸುರಕ್ಷತೆ ದೃಷ್ಟಿಯಿಂದ ತೆರವುಗೊಳಿಸಿ, ಮರು ನಿರ್ಮಾಣ ಮಾಡಲಾಗುವುದು. ಶೌಚಾಲಯ, ಶುದ್ಧ ಕುಡಿಯುವ ನೀರಿನ…
ವಿಜಯಪುರ: ಸಾಧಿಸಬೇಕೆಂಬ ಛಲ ಹಾಗೂ ಗುರಿ ಇದ್ದಾಗ ಮಾತ್ರ ಜೀವನದಲ್ಲಿ ಸಾಧಿಸಲು ಸಾಧ್ಯ ಎಂದು ಪಿ.ಎಸ್.ಐ ಸರಸ್ವತಿ ಪರಸಪ್ಪನವರ ಹೇಳಿದರು.ರವಿವಾರ ಬೆಳಿಗ್ಗೆ ಗಣೇಶ ನಗರದ ಶ್ರೀ ಲಕ್ಷ್ಮೀ ದೇವಸ್ಥಾನದಲ್ಲಿ ಶ್ರೀ ಪಾವನಗಂಗಾ ಮಹಿಳಾ ಸ್ವಸಹಾಯ ಸಂಘ ಹಾಗೂ ಸತ್ಯವತಿ ಮೀನುಗಾರ ಮಹಿಳಾ ಸಂಘ ವಿಜಯಪುರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ ಅಂತರಾಷ್ಟ್ರೂಯ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.ತಂದೆ-ತಾಯಂದಿರಿಗೆ ಗಂಡು ಹಾಗೂ ಹೆಣ್ಣು ಎಂಬ ಮನೋಬಾವ ಇರಬಾರದು. ಗಂಡು ಮಗುವಿಗೆ ಎಷ್ಟು ಪ್ರೋತ್ಸಾಹ ನೀಡುತ್ತೇವೆ ಅಷ್ಟೆ ಹೆಣ್ಣು ಮಕ್ಕಳಿಗೆ ನೀಡಬೇಕು. ಅವರಲ್ಲಿಯೂ ಕೂಡ ಹಲವಾರು ಗುರಿಗಳು ಇರುತ್ತವೆ, ಮುಕ್ತ ಮನಸ್ಸಿನಿಂದ ನಮ್ಮಲ್ಲಿ ಹಂಚಿಕೊಳ್ಳದೆ ಇರಬಹುದು, ಆದರೆ ಅವರಿಗೂ ಸ್ವತಂತ್ರವಾಗಿ ಬೆಳೆಯಬೇಕು ಮುಂದುವರೆಯಬೇಕು ಸಾಧಿಸಬೇಕು ಎಂಬ ಬಾವನೆ ಇದ್ದೇ ಇರುತ್ತದೆ. ಅವುಗಳನ್ನು ಅರಿತು ನಾವು ಹೆಣ್ಣು ಮಕ್ಕಳಿಗೂ ಪ್ರೊತ್ಸಾಹಿಸಬೇಕು. ಸಮಾಜದಲ್ಲಿ ಅವರಿಗೂ ಗೌರವ ಸ್ಥಾನಮಾನ ಹೊಂದುವಂತೆ ಪ್ರೇರೆಪಿಸಬೇಕು ಎಂದು ಹೇಳಿದರು.ಅಲ್ಪಸಂಖ್ಯಾತರ ಬಾಲಕಿಯ ವಸತಿ ಶಾಲೆಯ ಪ್ರಾಂಶುಪಾಲೆ ಕು. ರೇಖಾ ಎನ್ ಬಾರ್ಕಿ ಮುಖ್ಯ ಅತಿಥಿಗಳಾಗಿ…
ವಿಜಯಪುರ: ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ವಿಜಯಪುರ ನಗರ ಘಟಕದ ಅಧ್ಯಕ್ಷರಾಗಿ ಸಂಗಪ್ಪ ಚಲವಾದಿ ಅವರಿಗೆ ಜಿಲ್ಲಾ ಕೇಂದ್ರ ಕಚೇರಿಯಲ್ಲಿ ಸಂಘದ ಗುರಿ ಹಾಗೂ ತತ್ವ ಸಿದ್ಧಾಂತಗಳನ್ನು ಹೇಳಿ ಜಿಲ್ಲಾಧ್ಯಕ್ಷ ಸಂಗಮೆಶ ಸಗರ ಅವರು ಆದೇಶ ಪ್ರತಿ ನೀಡಿದರು.ಬಳಿಕ ಮಾತನಾಡಿದ ಅವರು, ವಿಜಯಪುರ ನಗರದಲ್ಲಿ ಬರುವ ಎಲ್ಲಾ ವಾರ್ಡಗಳಲ್ಲಿ ರೈತ ಸಂಘದ ಹಿರಿಯ, ಯುವ, ಮಹಿಳಾ, ಕಾರ್ಮಿಕ ಸಂಘಟನೆಯನ್ನು ಮಾಡಿ ಎಲ್ಲಾ ರೈತರನ್ನು ಸಂಘಟನೆಗೆ ಕರೆತಂದು ಸರ್ಕಾರದ ಯೋಜನೆಗಳನ್ನು ತಿಳಿಸುತ್ತಾ, ಹೊಸ ಹೊಸ ತಂತ್ರಜ್ಞಾನಗಳನ್ನು ತಿಳಿಸುತ್ತಾ ಸಮಗ್ರ ಹಾಗೂ ಸಾವಯವ ಕೃಷಿ ಮಾಡುವಂತೆ ಪ್ರೇರೇಪಿಸಿ ರೈತರ ಆದಾಯವನ್ನು ದ್ವಿಗುಣಗೊಂಡು ಯಾರು ಆತ್ಮಹತೈ ಮಾಡಿಕೊಳ್ಳದಂತೆ ನಾವೆಲ್ಲರೂ ರೈತರ ಪರವಾಗಿ ಶ್ರಮಿಸೋಣ ಎಂದರು.ಈ ವೇಳೆ ಜಿಲ್ಲಾ ಸಂಚಾಲಕ ರಾಮನಗೌಡ ಪಾಟೀಲ (ಬ್ಯಾಲ್ಯಾಳ), ನಿಡಗುಂದಿ ಅಧ್ಯಕ್ಷ ಡಾ. ಎಂ.ಕೆ.ಬಿರಾದಾರ ಮುಖಂಡರಾದ ಹಾಜಿಲಾಲ ಕರ್ಜಗಿ ಸೇರಿದಂತೆ ಇತರರು ಇದ್ದರು.
ವಿಜಯಪುರ: ನೆಹರು ಯುವ ಕೇಂದ್ರ, ಜಿಲ್ಲಾ ಆಡಳಿತ ಜಿಲ್ಲಾ ಪಂಚಾಯತ್ ಹಾಗೂ ಸಖಿ ಮಹಿಳಾ ಸೇವಾ ಸಮಿತಿ ವತಿಯಿಂದ ಆಯೋಜಿಸಲಾದ ಮತದಾನ ಜಾಗತಿಕ ಹಾಗೂ ನೋಂದಣಿ ಕಾರ್ಯಕ್ರಮ ಮತ್ತು ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದ ಅಂಗವಾಗಿ ಸೋಮವಾರ ಶ್ರೀಮತಿ ಕುಮುದುಬಿನ್ ದರ್ಬಾರ್ ಕಾಲೇಜಿನಲ್ಲಿ ಎಲ್ಲ ಯುವ ಮಿತ್ರರೊಂದಿಗೆ ಸಂವಾದ ಕಾರ್ಯಕ್ರಮ ಜರುಗಿತು.ಈ ಕಾರ್ಯಕ್ರಮದಲ್ಲಿ ಸಖಿ ಸಂಸ್ಥೆಯ ಅದ್ಯಕ್ಷೆ ಪೂಜಾ ಬಾಗಿ ಮಾತನಾಡಿ, ಮತದಾನ ನಮ್ಮ ಹಕ್ಕು ಮತದಾನ ಮಾಡಿ ಪ್ರಜಾಪ್ರಭುತ್ವದ ಹಬ್ಬದಲ್ಲಿ ಎಲ್ಲರು ಬಾಗಿಯಾಗೋಣ, ಯುವ ಸಮೂಹ ದೇಶದ ಬದಲಾವಣೆಯಲ್ಲಿ ಬಹುಮುಖ್ಯ ಪಾತ್ರ ವಹಿಸುತ್ತದೆ ಎಂದು ಹೇಳಿದರು.ಮಹಾವಿದ್ಯಾಲಯದ ಪ್ರಾಂಶುಪಾಲ ಗ್ರಾಮ ಪುರೋಹಿತ್ & ಬಂದೆನವಾಜ ಕುರುಬು ಸರ್ ಅವರು ಅತಿಥಿ ಉಪನ್ಯಾಸ ಮಾಡಿದರು.ರಾಮಚಂದ್ರ ಚವ್ಹಾಣ ಪಾಲ್ಗೊಂಡಿದ್ದರು.
ಕಲಬುರ್ಗಿ ಫೌಂಡೇಶನ್ ಕೊಡಮಾಡುವ 2024 ನೆ ಸಾಲಿನ ‘ಸಾಹಿತ್ಯ ಸಿರಿ & ವಚನ ಸಿರಿ’ ಪ್ರಶಸ್ತಿ ಪ್ರದಾನ ವಿಜಯಪುರ: “ಸಾಹಿತ್ಯದ ಓದು ಮನುಷ್ಯ ಪ್ರಜ್ಞೆಯನ್ನು ಜಾಗ್ರತ ಗೊಳಿಸಿದರೆ ಕನ್ನಡ ನಾಡಿನ ಶಿವಶರಣರ ವಚನಗಳು ವೈಚಾರಿಕ ಪ್ರಜ್ಞೆಯನ್ನು ಬೆಳೆಸುವವು” ಎಂದು ಫ ಗು ಹಳಕಟ್ಟಿ ಸಂಶೋಧನಾ ಕೇಂದ್ರದ ಕಾರ್ಯದರ್ಶಿ ಡಾ. ಎಂ ಎಸ್ ಮದಭಾವಿ ಹೇಳಿದರು.ಕಲಬುರ್ಗಿ ಫೌಂಡೇಶನ್ ಕೊಡಮಾಡುವ 2024 ನೆಯ ಸಾಲಿನ ‘ ಸಾಹಿತ್ಯ ಸಿರಿ ‘ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು, “ಡಾ. ಎಂ ಎಂ ಕಲಬುರ್ಗಿ ಅವರು ಭಾರತದ ಶ್ರೇಷ್ಠ ಸಂಶೋಧಕರಲ್ಲಿ ಒಬ್ಬರು. ಅವರ ಸಂಶೋಧನಾ ಸಂಪುಟಗಳು ಓದುಗರಲ್ಲಿ ವೈಚಾರಿಕ ಪ್ರಜ್ಞೆಯನ್ನು ಬಿತ್ತಿ ಬೆಳೆಯುತ್ತವೆ. ಸಂಶೋಧಕ ತಪ್ಪಾಗಿ ಹೇಳಿರಬಹುದು, ಸುಳ್ಳು ಹೇಳಲಾರ’ ಎಂದು ಹೇಳಿದ ಕಲಬುರ್ಗಿ ಅವರ ಮಾತುಗಳೂ ಕೂಡಾ ಯುವ ಸಂಶೋಧಕರಿಗೆ ಮಾರ್ಗದರ್ಶನವಾಗಿವೆ. ವಿಜಯಪುರ ಫ ಗು ಹಳಕಟ್ಟಿ ಸಂಶೋಧನಾ ಕೇಂದ್ರವನ್ನು ರಾಷ್ಟ್ರ ಮಟ್ಟಕ್ಕೆ ತೆಗೆದುಕೊಂಡು ಹೋಗುವಲ್ಲಿ ಕಲಬುರ್ಗಿ ಅವರ ಪಾತ್ರ ಹಿರಿದಾಗಿದೆ. ನಮ್ಮ ಸಂಶೋಧನಾ ಕೇಂದ್ರಕ್ಕೆ…
ಜಗತ್ತಿನ ನಾನಾ ದಾಖಲೆ ಪುಟಗಳಲ್ಲಿ ಸೇರಿಸುವ ವಿಶ್ವದ ಮೊದಲ ವಿನೂತನ ಕಾರ್ಯಕ್ರಮಕ್ಕೆ ಸಚಿವ ಎಂ. ಬಿ. ಪಾಟೀಲ ಅವರಿಂದ ಚಾಲನೆ ವಿಜಯಪುರ: ನಗರದ ಪ್ರತಿಷ್ಠಿತ ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ಶ್ರೀ ಬಿ. ಎಂ. ಪಾಟೀಲ ವೈದ್ಯಕೀಯ ಕಾಲೇಜು, ಆಸ್ಪತ್ರೆ ಮತ್ತು ಸಂಶೋಧನೆ ಕೇಂದ್ರದ 1500 ವಿದ್ಯಾರ್ಥಿಗಳು ಸ್ವಾಸ್ಷ್ಟ ಸಂತುಲನ ರಂಗೋಲಿ ಮಹೋತ್ಸವದಲ್ಲಿ ಪಾಲ್ಗೋಂಡು ವೈದ್ಯಕೀಯ ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದ 250 ರಂಗೋಲಿ ಚಿತ್ರಗಳನ್ನು ಬಿಡಿಸಿ ಗಮನ ಸೆಳೆದರು. ತಲಾ ಐದಾರು ವೈದ್ಯಕೀಯ ವಿದ್ಯಾರ್ಥಿಗಳು ತಂಡದ ರೂಪದಲ್ಲಿ ತಮ್ಮ ವೈದ್ಯಕೀಯ ಪಠ್ಯಕ್ರಮಕ್ಕೆ ಸಂಬಂಧಿಸಿದ ರಂಗೋಲಿ ಚಿತ್ರಗಳನ್ನು ಬಿಡಿಸಿದರು. ಬಿ.ಎಲ್.ಡಿ.ಇ ವಿವಿಯ 24 ವಿಭಾಗಗಳ ವಿದ್ಯಾರ್ಥಿಗಳಿಗೆ ಕಾಲೇಜಿನ ಶಿಕ್ಷಕರು, 40 ಜನ ಮಾರ್ಗದರ್ಶಕರು ಮತ್ತು 20 ಜನ ಮೇಲ್ವಿಚಾರಕರು ಬನ್ನೆಲುಬಾಗಿ ನಿಂತಿದ್ದರು. ಒಟ್ಟು 50 ಸಾವಿರ ಚದುರ ಅಡಿ ಪ್ರದೇಶದಲ್ಲಿ 10 ಟನ್ ರಂಗೋಲಿ ಬಳಕೆಯಾಗುತ್ತಿದೆ. 10 ಅಡಿ ಉದ್ದ, 12 ಅಡಿ ಅಗಲ ಅಳತೆಯ 250 ರಂಗೋಲಿ ಚಿತ್ರಗಳನ್ನು ಬಿಡಿಸಲಾಯಿತು.ಮಾನವನ ಶರೀರ, ಅಂಗಾಂಗಗಳು,…
ವಿಜಯಪುರ: ಚಡಚಣ ತಾಲೂಕಿನ ಧೂಳಖೇಡ ಗ್ರಾಮದ ಶ್ರೀ ಭೀಮಾಶಂಕರ ಸಹಕಾರಿ ಸಕ್ಕರೆ ಕಾರ್ಖಾನೆ ಸೌಹಾರ್ದ ಬ್ಯಾಂಕಿನಲ್ಲಿ ನಡೆದ ಕಳ್ಳತನ ಪ್ರಕರಣವನ್ನು ಝಳಕಿ ಪೊಲೀಸರು ಭೇದಿಸಿದ್ದು, ಆರು ಜನ ಆರೋಪಿಗಳನ್ನು ಬಂಧಿಸಿದ್ದಾರೆ.ಈ ಕುರಿತು ಝಳಕಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಎಸ್ಪಿ ಋಷಿಕೇಶ ಸೋನಾವಣೆ, ಫೆ. 28 ರಂದು ಮಧ್ಯರಾತ್ರಿ ಸೌಹಾರ್ದ ಬ್ಯಾಂಕ್ ನಲ್ಲಿದ್ದ ರೂ. 19.45 ಲಕ್ಷ ಹಣವನ್ನು ಕಳ್ಳತನ ಮಾಡಲಾಗಿತ್ತು. ಈ ಪ್ರಕರಣ ಸಂಬಂಧ ತನಿಖೆ ನಡೆಸಿದ ಝಳಕಿ ಪೊಲೀಸರು 6 ಜನ ಆರೋಪಿಗಳನ್ನು ಕಳುವಾದ ಹಣ, ಕಳ್ಳತನ ಮಾಡಲು ಬಳಸಿದ ವಾಹನಗಳು ಹಾಗೂ ಮೊಬೈಲ್ ಗಳು ಸೇರಿದಂತೆ ಒಟ್ಟು ರೂ. 27.15 ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.ಈ ಸಂಬಂಧ ಮಹಾರಾಷ್ಟ್ರದ ಸೋಲಾಪುರ ತಾಲೂಕಿನ ಕುರಗೋಟ ಗ್ರಾಮದ ಮಲ್ಲಿಕಾರ್ಜುನ ಮುಕಿಂದ ಹೊನಮಾನೆ(29), ಲತೀಫ್ ಲಾಲಸಾಬ ಮಕಾನದಾರ(27), ಮಾಳಪ್ಪ ಗಂಗಾಧರ ಸಲಗರೆ(24), ಬಾಗಲಕೋಟೆಯ ನವನಗರದ ನಿತೇಶ ಸದಾನಂದ ನೀಲವಣಿ(23), ಹುಲಗಪ್ಪ ರಂಗಪ್ಪ ಪಾತ್ರೋಟ(26), ಅಬ್ದುಲ್ ಮೈನುದ್ದೀನ್ ಚೀನಿ(27) ಎಂಬುವರನ್ನು ಬಂಧಿಸಿದ್ದಾರೆ.ಈ ಆರೋಪಿಗಳ ವಿರುದ್ಧ…
ವಿಜಯಪುರ: ನಗರದ ಬಿ.ಎಲ್.ಡಿ.ಇ ಸಂಸ್ಥೆಯ ಆರ್ಥಿಕ ಸಹಾಯದಲ್ಲಿ ಜಿಲ್ಲಾ ಕೇಂದ್ರ ಕಾರಾಗೃಹ ಸಮಿಪ ನಿರ್ಮಿಸಲಾಗುತ್ತಿರುವ ಎನ್.ಸಿ.ಸಿ. ನೂತನ ಕಟ್ಟಡಕ್ಕೆ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ರವಿವಾರ ಭೂಮಿಪೂಜೆ ನೆರವೇರಿಸಿದರು.ಎನ್.ಸಿ.ಸಿಗೆ ಸೇರಿದ ಐದು ಎಕರೆ ಪ್ರದೇಶದಲ್ಲಿ 16000 ಚದುರ ಅಡಿ ಪ್ರದೇಶದಲ್ಲಿ ನೂತನ ಕಟ್ಟಡ ನಿರ್ಮಾಣವಾಗಲಿದ್ದು, ಒಂದು ಅಂತಸ್ತಿನ ಬಿಲ್ಡಿಂಗ್ ಇದಾಗಿದೆ. ಒಂಬತ್ತು ತಿಂಗಳಲ್ಲಿ ಈ ಕಟ್ಟಡ ನಿರ್ಮಿಸುವ ಗುರಿಯಿದೆ.ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಟಿ. ಭೂಬಾಲನ್, ಎಸ್ಪಿ ಋಷಿಕೇಶ ಸೋನಾವಣೆ, ಕನಲ್ ಗಿರೀಶ್ ಶಿಂಧೆ, ಸಬ್ ಮೇಜರ್ ಜಿ. ಎನ್. ಕುರಂದಳೆ, ಬಿ.ಎಲ್.ಡಿ.ಇ ಸಂಸ್ಥೆಯ ಮುಖ್ಯ ಆಡಳಿತಾಧಿಕಾರಿ ಡಾ. ಆರ್. ಬಿ. ಕೊಟ್ನಾಳ, ಸಂಸ್ಥೆಯ ಅಧೀಕ್ಷಕ ಎಸ್. ಎ. ಬಿರಾದಾರ(ಕನ್ನಾಳ), ಎಂಜಿನಿಯರ್ ಗಳಾದ ಆರ್. ಎಸ್. ಜಿರಲಿ, ಯು. ಎನ್. ಕರಡಿ, ಉಪಮೇಯರ್ ದಿನೇಶ ಹಳ್ಳಿ, ಡಾ. ಮಹಾಂತೇಶ ಬಿರಾದಾರ, ಸುರೇಶ ಘೊಣಸಗಿ ಮುಂತಾದವರು ಉಪಸ್ಥಿತರಿದ್ದರು.
ಐತಿಹಾಸಿಕ ಬೇಗಂ ತಾಲಾಬ್ ಗೆ ಭೇಟಿ ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಅಧಿಕಾರಿಗಳಿಗೆ ಸೂಚನೆ ವಿಜಯಪುರ: ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಅವರು ರವಿವಾರ ನಗರದ ಐತಿಹಾಸಿಕ ಬೇಗಂ ತಾಲಾಬ್ ಗೆ ಭೇಟಿ ನೀಡಿ ಆದಿಲ್ ಶಾಹಿ ಕಾಲದಲ್ಲಿ ನಗರಕ್ಕೆ ನೀರು ಪೂರೈಸಲಾಗುತ್ತಿದ್ದ ವ್ಯವಸ್ಥೆಯನ್ನು ಪರಿಶೀಲಿಸಿದರು.ಬೆಳಿಗ್ಗೆ ಬೇಗಂ ತಾಲಾಬ್ ಕೆರೆಗೆ ಭೇಟಿ ನೀಡಿದ ಅವರು, ಅಲ್ಲಿ 400 ವರ್ಷಗಳ ಹಿಂದೆ ಆದಿಲ್ ಶಾಹಿ ಕಾಲದಲ್ಲಿ ಪೈಪಲೈನ್ ಮೂಲಕ ನಗರದ ಸುಮಾರು 10 ಲಕ್ಷ ಜನಸಂಖ್ಯೆಗೆ ಕುಡಿಯಲು ನೀರು ಪೂರೈಸಲು ನಿರ್ಮಿಸಲಾಗಿರುವ ವ್ಯವಸ್ಥೆಯನ್ನು ವೀಕ್ಷಿಸಿ ಪರಿಶೀಲನೆ ನಡೆಸಿದರು. ಗಚ್ಚು ತಂತ್ರಜ್ಞಾನ ಬಳಸಿ ತಯಾರಿಸಲಾದ ಡೆಲಿವರಿ ಚೇಂಬರ್ ಮತ್ತು ನೀರು ಸ್ಥಗಿತಗೊಳಿಸಲು ಅಳವಡಿಸಲಾಗಿರುವ ಸಾಗವಾನಿ ಕಟ್ಟಿಗೆಯಿಂದ ನಿರ್ಮಿಸಲಾಗಿರುವ ಗೇಟು ವಾಲ್ವ್ ವೀಕ್ಷಿಸಿದರು. ಅಲ್ಲಲ್ಲಿ ತುಂಬಿರುವ ಹೂಳನ್ನು ತೆಗೆದು ಸ್ವಚ್ಚಗೊಳಿಸಿ ದುರಸ್ಥಿ ಮಾಡುವಂತೆ ಸಚಿವರು ಪೌರಾಯುಕ್ತರಿಗೆ ಸೂಚನೆ ನೀಡಿದರು.ಈ ಸಂದರ್ಭದಲ್ಲಿ ಸಚಿವರು ಆದಿಲ್ ಶಾಹಿ ಕಾಲದಲ್ಲಿ ಗುರುತ್ವಾಕರ್ಷಣ ಶಕ್ತಿಯ…
ಮೂಡಿಸುವ ಮತ್ತು ಜಗತ್ತಿನ ನಾನಾ ದಾಖಲೆ ಪುಟಗಳಲ್ಲಿ ಸೇರಿಸುವ ವಿಶ್ವದ ಮೊದಲ ವಿನೂತನ ಕಾರ್ಯಕ್ರಮಕ್ಕೆ ಸಚಿವ ಎಂ. ಬಿ. ಪಾಟೀಲ ಅವರಿಂದ ಚಾಲನೆ ವಿಜಯಪುರ: ನಗರದ ಪ್ರತಿಷ್ಠಿತ ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ಶ್ರೀ ಬಿ. ಎಂ. ಪಾಟೀಲ ವೈದ್ಯಕೀಯ ಕಾಲೇಜು, ಆಸ್ಪತ್ರೆ ಮತ್ತು ಸಂಶೋಧನೆ ಕೇಂದ್ರದ 1500 ವಿದ್ಯಾರ್ಥಿಗಳು ಸ್ವಾಸ್ಷ್ಟ ಸಂತುಲನ ರಂಗೋಲಿ ಮಹೋತ್ಸವದಲ್ಲಿ ಪಾಲ್ಗೋಂಡು ವೈದ್ಯಕೀಯ ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದ 250 ರಂಗೋಲಿ ಚಿತ್ರಗಳನ್ನು ಬಿಡಿಸಿ ಗಮನ ಸೆಳೆದರು. ತಲಾ ಐದಾರು ವೈದ್ಯಕೀಯ ವಿದ್ಯಾರ್ಥಿಗಳು ತಂಡದ ರೂಪದಲ್ಲಿ ತಮ್ಮ ವೈದ್ಯಕೀಯ ಪಠ್ಯಕ್ರಮಕ್ಕೆ ಸಂಬಂಧಿಸಿದ ರಂಗೋಲಿ ಚಿತ್ರಗಳನ್ನು ಬಿಡಿಸಿದರು. ಬಿ.ಎಲ್.ಡಿ.ಇ ವಿವಿಯ 24 ವಿಭಾಗಗಳ ವಿದ್ಯಾರ್ಥಿಗಳಿಗೆ ಕಾಲೇಜಿನ ಶಿಕ್ಷಕರು, 40 ಜನ ಮಾರ್ಗದರ್ಶಕರು ಮತ್ತು 20 ಜನ ಮೇಲ್ವಿಚಾರಕರು ಬನ್ನೆಲುಬಾಗಿ ನಿಂತಿದ್ದರು. ಒಟ್ಟು 50 ಸಾವಿರ ಚದುರ ಅಡಿ ಪ್ರದೇಶದಲ್ಲಿ 10 ಟನ್ ರಂಗೋಲಿ ಬಳಕೆಯಾಗುತ್ತಿದೆ. 10 ಅಡಿ ಉದ್ದ, 12 ಅಡಿ ಅಗಲ ಅಳತೆಯ 250 ರಂಗೋಲಿ ಚಿತ್ರಗಳನ್ನು ಬಿಡಿಸಲಾಯಿತು.ಮಾನವನ…
