ವಿಜಯಪುರ: ಸಾಧಿಸಬೇಕೆಂಬ ಛಲ ಹಾಗೂ ಗುರಿ ಇದ್ದಾಗ ಮಾತ್ರ ಜೀವನದಲ್ಲಿ ಸಾಧಿಸಲು ಸಾಧ್ಯ ಎಂದು ಪಿ.ಎಸ್.ಐ ಸರಸ್ವತಿ ಪರಸಪ್ಪನವರ ಹೇಳಿದರು.
ರವಿವಾರ ಬೆಳಿಗ್ಗೆ ಗಣೇಶ ನಗರದ ಶ್ರೀ ಲಕ್ಷ್ಮೀ ದೇವಸ್ಥಾನದಲ್ಲಿ ಶ್ರೀ ಪಾವನಗಂಗಾ ಮಹಿಳಾ ಸ್ವಸಹಾಯ ಸಂಘ ಹಾಗೂ ಸತ್ಯವತಿ ಮೀನುಗಾರ ಮಹಿಳಾ ಸಂಘ ವಿಜಯಪುರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ ಅಂತರಾಷ್ಟ್ರೂಯ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ತಂದೆ-ತಾಯಂದಿರಿಗೆ ಗಂಡು ಹಾಗೂ ಹೆಣ್ಣು ಎಂಬ ಮನೋಬಾವ ಇರಬಾರದು. ಗಂಡು ಮಗುವಿಗೆ ಎಷ್ಟು ಪ್ರೋತ್ಸಾಹ ನೀಡುತ್ತೇವೆ ಅಷ್ಟೆ ಹೆಣ್ಣು ಮಕ್ಕಳಿಗೆ ನೀಡಬೇಕು. ಅವರಲ್ಲಿಯೂ ಕೂಡ ಹಲವಾರು ಗುರಿಗಳು ಇರುತ್ತವೆ, ಮುಕ್ತ ಮನಸ್ಸಿನಿಂದ ನಮ್ಮಲ್ಲಿ ಹಂಚಿಕೊಳ್ಳದೆ ಇರಬಹುದು, ಆದರೆ ಅವರಿಗೂ ಸ್ವತಂತ್ರವಾಗಿ ಬೆಳೆಯಬೇಕು ಮುಂದುವರೆಯಬೇಕು ಸಾಧಿಸಬೇಕು ಎಂಬ ಬಾವನೆ ಇದ್ದೇ ಇರುತ್ತದೆ. ಅವುಗಳನ್ನು ಅರಿತು ನಾವು ಹೆಣ್ಣು ಮಕ್ಕಳಿಗೂ ಪ್ರೊತ್ಸಾಹಿಸಬೇಕು. ಸಮಾಜದಲ್ಲಿ ಅವರಿಗೂ ಗೌರವ ಸ್ಥಾನಮಾನ ಹೊಂದುವಂತೆ ಪ್ರೇರೆಪಿಸಬೇಕು ಎಂದು ಹೇಳಿದರು.
ಅಲ್ಪಸಂಖ್ಯಾತರ ಬಾಲಕಿಯ ವಸತಿ ಶಾಲೆಯ ಪ್ರಾಂಶುಪಾಲೆ ಕು. ರೇಖಾ ಎನ್ ಬಾರ್ಕಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ಇನ್ನೋರ್ವ ಅತಿಥಿ ಶಿಲ್ಪಾ ಕುದುರಗೊಂಡ ಮಾತನಾಡಿದರು.
ಕಾರ್ಯಕ್ರಮಕದಲ್ಲಿ ಕಮಲಾಬಾಯಿ ಪಿರಾಪೂರ, ಯು ಜೆ ಎಮ್ ಪಿ. ವಿಕಾಸ ಶಾಲೆ ಪ್ರಾಂಶುಪಾಲರಾದ ಮಂಜುಳಾ ಎಚ್ ತನಶ್ಯಾಳ, ನೀಲಮ್ಮ ಯಡ್ರಾವಿ, ವಿಮಲಾ ಓತಿಹಾಳ, ಶಾಂತಾಬಾಯಿ ನಾಟೀಕರ, ಮೀನಾಕ್ಷಿ ದೊಡವಾಡ, ಪಾರ್ವತಿ ಚಿಗರಿ. ಮಂಜುಳಾ ಹಿಪ್ಪರಗಿ. ಶ್ರೀ ಪಾವನಗಂಗಾ ಮಹಿಳಾ ಸ್ವಸಹಾಯ ಸಂಘ ಅಧ್ಯಕ್ಷೆ ದಾನಮ್ಮ ಕೋಳಿ, ಶ್ರೀಮತಿ ಗಂಗೂಬಾಯಿ ದುಮಾಳ, ರೂಪ ಜಂಬೆರಾಳ, ಪೂಜಾ ಕೋಳಿ, ಕವಿತಾ ತಳವಾರ, ರೇಣುಕಾ ತಳವಾರ, ವಿಜಯಲಕ್ಷ್ಮಿ ತಳವಾರ, ಉಷಾ ಅಂಬಿಗೇರ ಇಂದ್ರಾಬಾಯಿ. ವಾಲಿಕಾರ, ಪಾವನಗಂಗಾ ಮಹಿಳಾ ಸ್ವಸಹಾಯ ಸಂಘ ಹಾಗೂ ಸತ್ಯವತಿ ಮೀನುಗಾರ ಮಹಿಳಾ ಸಂಘದ ಸದಸ್ಯರು ಹಾಗೂ ಇತರರು ಉಪಸ್ಥಿತರಿದ್ದರು.
ದೀಪಾ ಬಿರಾದಾರ ಸ್ವಾಗತಿಸಿದರು, ಸರಳಾ ಕೋಳಿ ವಂದಿಸಿದರು.
Subscribe to Updates
Get the latest creative news from FooBar about art, design and business.
Related Posts
Add A Comment

