Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಪ್ರತಿಭಾ ಕಾರಂಜಿ & ಕಲೋತ್ಸವ ಉದ್ಘಾಟಿಸಿದ ಶಾಸಕ ಬಸನಗೌಡ ಪಾಟೀಲ ಸ್ಪಷ್ಠನೆ ವಿಜಯಪುರ: ಕಳೆದ 11 ಅಧಿವೇಶನದಲ್ಲಿ ಕೊನೆಗೆ ಒಂದು ದಿನ ಕಾಟಾಚಾರಕ್ಕೆ ಎಂಬಂತೆ ಉತ್ತರ ಕರ್ನಾಟಕ ಬಗ್ಗೆ ಚರ್ಚಿಸಲಾಗುತ್ತಿತ್ತು. ಈ ಬಾರಿ ಮೊದಲ ದಿನವೇ ನಾನು ಗಟ್ಟಿ ಧ್ವನಿ ಎತ್ತಿದ್ದರಿಂದ ಮೊದಲ ವಾರದಲ್ಲೇ ಸಮಗ್ರವಾಗಿ ಚರ್ಚಿಸಲು ಅವಕಾಶ ದೊರಕಿತು ಎಂದು ನಗರ ಶಾಸಕ ಬಸನಗೌಡ ರಾ.ಪಾಟೀಲ ಯತ್ನಾಳ ಅವರು ಹೇಳಿದರು.ನಗರದ ಸಿದ್ಧೇಶ್ವರ ಸಂಸ್ಥೆಯ ಅಟಲ್ ಬಿಹಾರಿ ವಾಜಪೇಯಿ ಶಾಲೆಯಲ್ಲಿ ಶನಿವಾರ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ನಗರ ವಲಯ ಹಾಗೂ ಅಟಲ್ ಬಿಹಾರಿ ವಾಜಪೇಯಿ ಶಾಲೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳ ತಾಲ್ಲೂಕು ಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.ಅಧಿವೇಶನದಲ್ಲಿ ಮೂರು ದಿನಗಳ ಕಾಲ ಕೈಗಾರಿಕೆ, ವಿಮಾನ ನಿಲ್ದಾಣ, ಕೋಲ್ಡ್ ಸ್ಟೋರೇಜ್, ನೀರಾವರಿ ಸೇರಿದಂತೆ ವಿವಿಧ ಯೋಜನೆಗಳಲ್ಲಿ ಹಾಗೂ ರಾಜಕೀಯವಾಗಿ ಉತ್ತರ ಕರ್ನಾಟಕ ಭಾಗಕ್ಕೆ ಆಗಿರುವ ಅನ್ಯಾಯದ ಕುರಿತಂತೆ ಗಮನಸೆಳೆದು, ಅಭಿವೃದ್ಧಿ ಒತ್ತು ನೀಡಲು…
ದತ್ತಿ ಉಪನ್ಯಾಸ | ಶಂಕರಶ್ರೀ ದತ್ತಿನಿಧಿ ಪ್ರಶಸ್ತಿ ಪ್ರಧಾನ | ಇಂದುಮತಿ ಲಮಾಣಿ ಅವರ ’ಮಠ’ ಕಾದಂಬರಿ ಲೋಕಾರ್ಪಣೆ ಬಸವನಬಾಗೇವಾಡಿ: ೧೨ ನೇ ಶತಮಾನದ ಬಸವಾದಿ ಶರಣರು ನಿಸ್ವಾರ್ಥ ಕಾಯಕ, ದಾಸೋಹಕ್ಕೆ ಹೆಚ್ಚು ಮಹತ್ವ ನೀಡುವ ಈ ಸಿದ್ಧಾಂತವನ್ನು ಸಮಾಜಕ್ಕೆ ಕೊಡುಗೆಯಾಗಿ ನೀಡಿದ್ದಾರೆ ಎಂದು ಬಸವನಬಾಗೇವಾಡಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಡಾ. ಎನ್.ಬಿ.ಹೊಸಮನಿ ಹೇಳಿದರು.ಪಟ್ಟಣದ ಹುಡ್ಕೋ ಕಾಲನಿ ಹತ್ತಿರವಿರುವ ಇಂದುಮತಿ ಲಮಾಣಿ ಅವರ ತೋಟದ ಮನೆಯಲ್ಲಿ ತಾಲೂಕು ಶರಣ ಸಾಹಿತ್ಯ ಪರಿಷತ್ತು, ವಿಜಯಪುರದ ಮಹಿಳಾ ಸ್ನೇಹ ಸಾಹಿತ್ಯ ಸಂಗಮದ ಸಹಯೋಗದಲ್ಲಿ ಗುರುವಾರ ದಿ.ಶಂಕರ ಡಾಕಪ್ಪ ಲಮಾಣಿ ಸ್ಮರಣಾರ್ಥ ಹಮ್ಮಿಕೊಂಡಿದ್ದ ದತ್ತಿ ಉಪನ್ಯಾಸ ಕಾರ್ಯಕ್ರಮ ಹಾಗೂ ಶಂಕರಶ್ರೀ ದತ್ತಿನಿಧಿ ಪ್ರಶಸ್ತಿ ಪ್ರಧಾನ ಹಾಗೂ ಇಂದುಮತಿ ಲಮಾಣಿ ಅವರ ಬರೆದ ಮಠ ಕಾದಂಬರಿ ಲೋಕಾರ್ಪಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಶರಣರು ಸಮಾಜದಲ್ಲಿರುವ ಅನಿಷ್ಟ ಪದ್ಧತಿಗಳನ್ನು ಹೋಗಲಾಡಿಸಲು ಶ್ರಮಿಸಿದರು. ನಾಡಿನಲ್ಲಿ ಶರಣ ಸಾಹಿತ್ಯ ಪರಿಷತ್ತು ನಿರಂತರವಾಗಿ ಬಸವಾದಿ ಶರಣರ ವಿಚಾರಗಳನ್ನು ಸಮಾಜಕ್ಕೆ…
ಡಿ.೧೭ರ ಪ್ರತಿಭಟನೆಗೆ ಬೆಂಬಲಿಸಲು ಡಾ.ವಿಷ್ಣುವರ್ಧನ್ ಅಭಿಮಾನಿಗಳ ಬೆಂಗಳೂರು ಪಯಣ ಮುದ್ದೇಬಿಹಾಳ: ಸಾಹಸಸಿಂಹ ಡಾ.ವಿಷ್ಣುವರ್ಧನ್ ಅವರ ಅಭಿಮಾನಿಗಳ ಒಕ್ಕೂಟ ಡಿ.೧೭ ರಂದು ಬೆಂಗಳೂರಿನ ಸ್ವಾತಂತ್ರ ಉದ್ಯಾನವನದಲ್ಲಿ ನಡೆಸುತ್ತಿರುವ ಪ್ರತಿಭಟನೆಗೆ ತಾಲೂಕಿನ ವಿಷ್ಣು ಅಭಿಮಾನಿಗಳು ಬೆಂಬಲ ಸೂಚಿಸಲು ಶನಿವಾರ ರಾತ್ರಿ ಇಲ್ಲಿನ ವಿಬಿಸಿ ಹೈಸ್ಕೂಲ್ ಮೈದಾನದಿಂದ ಬಸ್ ಮೂಲಕ ತೆರಳಿದರು.ಈ ವೇಳೆ ಮಾತನಾಡಿದ ಅಭಿಮಾನಿಗಳ ಮುಖಂಡ ಶಿವು ಕಣಕಾಲ, ವಿಷ್ಣು ನಮ್ಮನ್ನು ಅಗಲಿ ೧೪ ವರ್ಷಗಳು ಗತಿಸಿವೆ. ಇಷ್ಟು ವರ್ಷಗಳ ಕಾಲ ಅವರ ಪುಣ್ಯಭೂಮಿಯನ್ನು ನಿರ್ಲಕ್ಷಿಸಿರುವದು ನಮ್ಮ ಆಕ್ರೋಷಕ್ಕೆ ಕಾರಣವಾಗಿದೆ. ಪುಣ್ಯಭೂಮಿಗಾಗಿ ಡಿ.೧೭ ರಂದು ರಾಜ್ಯದಾದ್ಯಂತ ಅಪಾರ ವಿಷ್ಣು ಅಭಿಮಾನಿಗಳು ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸುತ್ತಿದ್ದು ನಾವೂ ಕೂಡ ಭಾಗಿಯಾಗುತ್ತಿದ್ದೇವೆ. ಯಾವುದೇ ಕಾರಣಕ್ಕೂ ವಿಷ್ಣು ಪುಣ್ಯಭೂಮಿಯನ್ನು ಬಿಡಲು ಸಿದ್ಧರಿಲ್ಲ ಎಂದರು.ಜಿ.ಪಂ ಮಾಜಿ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ ಮಾತನಾಡಿದರು.ಅಂದಾಜು ೩೫ ಅಭಿಮಾನಿಗಳನ್ನೊಳಗೊಂಡ ಬಸ್ ಗೆ ಧಾರವಾಡದ ಉಪ್ಪಿನ ಬೆಟಗೇರಿಯ ಪೂಜ್ಯ ವಿರೂಪಾಕ್ಷ ಮಹಾಸ್ವಾಮಿಗಳು ಚಾಲನೆ ನೀಡಿದರು. ಈ ವೇಳೆ ತಂಗಡಗಿಯ ಹಡಪದ ಅಪ್ಪಣ್ಣ ಶ್ರೀಗಳು, ಮುಖಂಡ ವಾಯ್.ಎಚ್.ವಿಜಯಕರ,…
ವಂಟಮೂರಿಯಲ್ಲಿ ಮಹಿಳೆ ವಿವಸ್ತ್ರಗೊಳಿಸಿ ದೌರ್ಜನ್ಯ ನಡೆಸಿದ ಘಟನೆಗೆ ಖಂಡನೆ ವಿಜಯಪುರ: ಬೆಳಗಾವಿ ತಾಲ್ಲೂಕು ವಂಟಮೂರಿ ಗ್ರಾಮದ ಪರಿಶಿಷ್ಟ ಪಂಗಡದ ಅಮಾಯಕ ಮಹಿಳೆಯನ್ನು ವಿವಸ್ತ್ರಗೊಳಿಸಿ ನಡೆದಿರುವ ದೌರ್ಜನ್ಯ ಖಂಡಿಸಿ ವಿಜಯಪುರ ನಗರದ ಸಿದ್ಧೇಶ್ವರ ದೇವಸ್ಥಾನದ ಎದುರಿಗೆ ಬೃಹತ್ ಪ್ರತಿಭಟನೆ ಹಮ್ಮಿಕೊಂಡು ಕಾಂಗ್ರೇಸ್ ವಿರುದ್ಧ ಘೋಷಣೆ ಹಾಕುವುದರ ಮೂಲಕ ಪ್ರತಿಭಟಿಸಲಾಯಿತು.ಇದೇ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಆರ್.ಎಸ್.ಪಾಟೀಲ (ಕುಚಬಾಳ) ಮಾತನಾಡಿ, ವಂಟಮೂರಿ ಗ್ರಾಮದಲ್ಲಿ ನಡೆದ ಘಟನೆ ನಾಗರೀಕ ಸಮಾಜಕ್ಕೆ ಅಂಟಿದ ಕಪ್ಪುಚುಕ್ಕೆಯಾಗಿದ್ದು, ಅಮಾಯಕ ಮಹಿಳೆಯನ್ನು ಬೆತ್ತಲೆ ಗೊಳಿಸಿ ಕಂಬಕ್ಕೆ ಕಟ್ಟಿ ಹಾಕಿ ಥಳಿಸಿದ್ದು ಅತ್ಯಂತ ಹೇಯ ಕೃತ್ಯ, ಸದರಿ ಘಟನೆಯು ರಾಷ್ಟ್ರೀಯ ಮಟ್ಟದಲ್ಲಿ ಕರ್ನಾಟಕವು ತಲೆ ತಗ್ಗಿಸುವಂತೆ ಮಾಡಿದೆ. ಇಷ್ಟಾದರೂ ಮುಖ್ಯಮಂತ್ರಿಗಳು ಸೌಜನ್ಯಕ್ಕಾದರೂ ಸಂತ್ರಸ್ತೆಯನ್ನು ಭೇಟಿಯಾಗುವ ಮಾನವೀಯ ಕಾಳಜಿ ಇದುವರೆಗೂ ತೋರಿಲ್ಲ, ಕಾಟಾಚಾರಕ್ಕೆ ಗೃಹ ಸಚಿವರು ಭೇಟಿಯಾಗಿ ಸಾಂತ್ವನ ಹೇಳಿರುವುದನ್ನು ಬಿಟ್ಟರೆ ಇನ್ನಾರು ಈ ಕಡೆ ತಲೆಹಾಕಿದಂತಿಲ್ಲ ನಿನ್ನೆ ದಿನ ಹೈಕೋರ್ಟ್, ಈ ದುರ್ಘಟನೆ ನಡೆಯಲು ಸರ್ಕಾರ ಹೇಗೆ ಬಿಟ್ಟಿದೆ? ಪೊಲೀಸರ ಗಸ್ತು ಏಕೆ ಇರಲಿಲ್ಲ?…
ವಿಜಯಪುರ: ಜಿಲ್ಲೆಯ ೨೭೫೫ ವಿವಿಧ ಅಂಗನವಾಡಿಗಳಲ್ಲಿ ಡಿ.೧೬ ರಂದು ಪಾಲಕರ ಸಭೆ ಜರುಗಿದ್ದು, ಈ ಸಭೆಯಲ್ಲಿ ಅಂಗನವಾಡಿಗಳಲ್ಲಿ ದಾಖಲಾದ ೨,೨೦,೩೨೭ ಮಕ್ಕಳ ಪಾಲಕರಲ್ಲಿ ೪೯೨೨೧ ಪಾಲಕರು ವಿವಿಧ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಪನಿರ್ದೇಶಕ ಕೆ.ಕೆ.ಚವ್ಹಾಣ ಅವರು ತಿಳಿಸಿದ್ದಾರೆ.ವಿಜಯಪುರ ನಗರ ಯೋಜನೆಯ ಜೋರಾಪುರ ಪೇಟ ಅಂಗನವಾಡಿ ಕೇಂದ್ರ ನಡೆದ ಸಭೆಯಲ್ಲಿ ಭಾಗವಹಿಸಿದ್ದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ನ್ಯಾಯಾಧೀಶ ಸಂತೋಷ ಕುಂದರ, ಅವರು ಮಾತನಾಡಿ, ಪಾಲಕರು ಮಕ್ಕಳನ್ನು ಮೊಬೈಲ್- ಟಿವಿ ಬಳಕೆಯಿಂದ ಹಾಗೂ ಬೇಕರಿ ಪದಾರ್ಥಗಳಿಂದ ದೂರವಿಡಬೇಕು .ಇದರಿಂದ ಮಕ್ಕಳ ಮೇಲೆ ದುಷ್ಪರಿಣಾ ಬೀಳುವುದರಿಂದ ಮಕ್ಕಳ ಪೋಷಣೆಯಲ್ಲಿ ಜಾಗೃತರಾಗಿರಬೇಕು ಎಂದು ಕಿವಿಮಾತು ಹೇಳಿದರು.ಮಹಿಳೆಯರಿಗೆ ಉಚಿತವಾಗಿ ಸಿಗುವ ಕಾನೂನು ಸೇವೆಗಳ ಬಗ್ಗೆ ಹಾಗೂ ಕೌಟುಂಬಿಕ ದೌರ್ಜನ್ಯದಡಿಯಲ್ಲಿ ಪ್ರಕರಣ ದಾಖಲು ಮಾಡುವುದರ ಬಗ್ಗೆ ಸವಿವರವಾಗಿ ತಿಳಿಸಿದ ಅವರು, ಸಂವಿಧಾನದಲ್ಲಿ ಖಾತ್ರಿಪಡಿಸಿರುವ ಮಹಿಳೆಯರ ಹಕ್ಕುಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ರಕ್ಷಣೆ ಮಾಡುವುದು ಈ ಕಾಯ್ದೆಯ ಉದ್ದೇಶವಾಗಿದೆ. ಕುಟುಂಬದೊಳಗಾಗುವ…
ವಿಜಯಪುರ: ವಿಜಯಪುರ ನಗರ ವ್ಯಾಪ್ತಿಯಲ್ಲಿನ ನಗರ ವಸತಿ ರಹಿತರನ್ನು ಗುರುತಿಸಲು ಸ್ವಯಂ ಸೇವಾ ಸಂಸ್ಥೆಯಿಂದ ಡಿ.೧೫ ರಿಂದ ೩೧ರವರೆಗೆ ಎರಡು ದಿನಕ್ಕೊಮ್ಮೆ ವಸತಿ ರಹಿತರನ್ನು ಗುರುತಿಸಲು ರ‍್ಯಾಪಿಡ್ ಸಮೀಕ್ಷೆ ಕೈಗೊಳ್ಳಲಾಗುತ್ತಿದೆ ಎಂದು ಮಹಾನಗರ ಪಾಲಿಕೆ ಆಯುಕ್ತರು ತಿಳಿಸಿದ್ದಾರೆ.ಸಮೀಕ್ಷೆ ಅವಧಿಯಲ್ಲಿ ಸಾರ್ವಜನಿಕರಿಗೆ ನಗರ ವ್ಯಾಪ್ತಿಯಲ್ಲಿ ಯಾರಾದರೂ ವಸತಿ ರಹಿತರು ಕಂಡು ಬಂದಲ್ಲಿ ಕಾರ್ಯದರ್ಶಿ ಕರ್ನಾಟಕ ಹ್ಯೂಮನ್ ವೆಲಫೇರ್ & ಜನಾಭಿವೃದ್ದಿ ಸೊಸಾಯಿಟಿ (ರಿ) ವಿಜಯಪುರ ಇವರ ಮೊ: ೭೪೧೧೯೦೧೨೭೫ ಸಂಖ್ಯೆಗೆ ಸಂಪರ್ಕಿಸುವಂತೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಗಣಿತ ವಿಷಯ ಫೋನ್ ಇನ್ ಕಾರ್ಯಕ್ರಮ ಯಶಸ್ವಿ ವಿಜಯಪುರ: ಜಿಲ್ಲೆಯ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗಾಗಿ ಗಣಿತ ವಿಷಯದ ಕುರಿತಾಗಿ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ನಡೆದ ಫೋನ್ ಇನ್ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಯಿತು ಎಂದು ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆಯ ಉಪ ನಿರ್ದೇಶಕ ಎನ್.ಎಚ್.ನಾಗೂರ ಅವರು ತಿಳಿಸಿದ್ದಾರೆ.ಡಿ.೧೫ರಂದು ವಿಜಯಪುರದ ಉರ್ದು ಶಿಕ್ಷಕರ ತರಬೇತಿ ಸಂಸ್ಥೆಯ ಸಭಾಭವನದಲ್ಲಿ ಸಂಜೆ ೬ ರಿಂದ ರಾತ್ರಿ ೮ ಗಂಟೆಯವರೆಗೆ ನಡೆದ ಈ ಕಾರ್ಯಕ್ರಮದಲ್ಲಿ ಜಿಲ್ಲೆಯ ಹತ್ತನೇ ತರಗತಿ ವಿದ್ಯಾರ್ಥಿಗಳು ಕೆಲವು ಸಮಸ್ಯೆಗಳು, ವಿಷಯದ ಗೊಂದಲಗಳಿಗೆ ವಿಷಯ ತಜ್ಞ ಶಿಕ್ಷಕರಿಂದ ಪ್ರಶ್ನೆ ಕೇಳಿ ತಮ್ಮ ಸಮಸ್ಯೆಗೆ ಪರಿಹಾರ ಕಂಡುಕೊಂಡರು. ಜಿಲ್ಲೆಯ ೨೭೩ ವಿದ್ಯಾರ್ಥಿಗಳಿಂದ ೪೨೯ ಪ್ರಶ್ನೆಗಳಿಗೆ ಸಮರ್ಪಕ ಉತ್ತರ ನೀಡಲಾಯಿತು.ಫೋನ್ ಇನ್ ಕಾರ್ಯಕ್ರಮದಲ್ಲಿ ವಿವಿಧ ವಿದ್ಯಾರ್ಥಿಗಳಿಂದ ಕೇಳಲಾದ ಬಹುಪದೋಕ್ತಿ ಎಂದರೇನು?, ಹೆಚ್ಚು ಅಂಕಗಳನ್ನು ಗಳಿಸುವುದು ಹೇಗೆ?, ವೃತ್ತಗಳು ಬಗ್ಗೆ ತಿಳಿಸಿರಿ. ಅನ್ವಯಿಕ ಪ್ರಶ್ನೆಗಳನ್ನು ಹೇಗೆ ಬಿಡಿಸುವುದು?, ಯಾವ ಯಾವ ಅಧ್ಯಾಯದಲ್ಲಿ ಎಷ್ಟು ಅಂಕಗಳ ಪ್ರಶ್ನೆ ಬರುವವು?…
ವಿಜಯಪುರ: ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಕಾರ್ಯದರ್ಶಿಗಳಾದ ವಿಜಯಪುರ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ.ರಿಚರ್ಡ್ ವಿನ್ಸೆಂಟ್ ಡಿಸೋಜ ಅವರು ಡಿ.೨೧ ಹಾಗೂ ೨೨ ರಂದು ವಿಜಯಪುರ ಜಿಲ್ಲಾ ಪ್ರವಾಸ ಕೈಗೊಂಡು ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.ಡಿ.೨೧ ರಂದು ಬೆಳಿಗ್ಗೆ ೧೧ ಗಂಟೆಗೆ ತಾಳಿಕೋಟೆಗೆ ಆಗಮಿಸಿ, ಮತದಾರ ಪಟ್ಟಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಅಂಗವಾಗಿ ತಾಳಿಕೋಟೆ ತಾಲೂಕಿನ ವಿವಿಧ ಮತಗಟ್ಟೆಗಳಿಗೆ ಹಾಗೂ ಸಾರ್ವಜನಿಕರಿಗೆ ಭೇಟಿ ಮಾಡಲಿದ್ದಾರೆ. ಮಧ್ಯಾಹ್ನ ೩ ಗಂಟೆಗೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ವಿವಿಧ ರಾಜಕೀಯ ಪಕ್ಷಗಳ ಮುಖಂಡರೊಂದಿಗೆ ಸಭೆ ನಡೆಸಲಿದ್ದಾರೆ. ಮಧ್ಯಾಹ್ನ ೩-೩೦ಕ್ಕೆ ಜಿಲ್ಲಾ ಪಂಚಾಯತ್ ಕಚೇರಿ ಸಭಾಂಗಣದಲ್ಲಿ ಜಿಲ್ಲೆಯ ಅಧಿಕಾರಿಗಳೊಂದಿಗೆ ಜಿಲ್ಲಾ ಪ್ರಗತಿ ಪರಿಶೀಲನಾ ಸಭೆ ನಡೆಸಿ ವಿಜಯಪುರದಲ್ಲಿ ವಾಸ್ತವ್ಯ ಮಾಡಲಿದ್ದಾರೆ.ಡಿ.೨೨ರಂದು ಬೆಳಿಗ್ಗೆ ೭ ಗಂಟೆಗೆ ವಿಜಯಪುರದಿಂದ ಬೆಳಗಾವಿಗೆ ಪ್ರಯಾಣ ಬೆಳೆಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ವಿಜಯಪುರದಲ್ಲಿ ಜನಪರ ಉತ್ಸವಕ್ಕೆ ಚಾಲನೆ ನೀಡಿದ ಸಚಿವ ಎಂ.ಬಿ.ಪಾಟೀಲ ಅಭಿಮತ ವಿಜಯಪುರ: ಭವ್ಯವಾದ ಇತಿಹಾಸ ಹೊಂದಿದ ನಮ್ಮ ಸಂಸ್ಕೃತಿ ಹಾಗೂ ಕಲೆಗಳಿಗೆ ಪ್ರೊತ್ಸಾಹ ಹಾಗೂ ಉತ್ತೇಜನ ನೀಡುವ ನಿಟ್ಟಿನಲ್ಲಿ ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಲಭ್ಯ ಅಭಿವೃದ್ದಿ ಖಾತೆ ಸಚಿವ ಡಾ.ಎಂ.ಬಿ.ಪಾಟೀಲ ಅವರು ಹೇಳಿದರು.ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ನಗರದ ಕಂದಗಲ್ ಶ್ರೀ ಹನುಮಂತರಾಯ ರಂಗಮಂದಿರದ ಆವರಣದಲ್ಲಿ ಶನಿವಾರ ಸಂಜೆ ಹಮ್ಮಿಕೊಂಡ ಜನಪರ ಉತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಭಾರತ ದೇಶದ ಭವ್ಯವಾದ ಇತಿಹಾಸ, ಪರಂಪರೆ ಸಂಸ್ಕೃತಿಯನ್ನು ಅವಲೋಕಿಸಿದಾಗ ನಮ್ಮಲ್ಲಿರುವಂತಹ ಜಾನಪದ ಕಲೆ, ಸಂಗೀತ, ನಾಟಕ, ತನ್ನದೇ ಆದ ಸ್ಥಾನ ಹಾಗೂ ವಿಶಿಷ್ಠತೆಯನ್ನು ಪಡೆದುಕೊಂಡಿವೆ. ಪ್ರತಿಬಿಂಬವಾಗಿರುವ ಜನಪದ ಕಲೆಗಳು, ಜನಜೀವನದ ಹಾಸು ಹೊಕ್ಕಾಗಿರುವ ಸಾಂಸ್ಕೃತಿಕ ಪರಂಪರೆಯನ್ನು ಪ್ರತಿಬಿಂಬಿಸುವ ಕಲೆಗಳು ಗ್ರಾಮೀಣ ಭಾರತದ ಜೀವಾಳವಾಗಿವೆ. ಪ್ರತಿ ರಾಜ್ಯದಲ್ಲಿ ತಮ್ಮದೇ ವಿಭಿನ್ನವಾದ ಕಲೆ ಮತ್ತು ಸಂಸ್ಕೃತಿ ಇದೆ. ಸಾವಿರಾರು ವರ್ಷಗಳಿಂದ ಬಂದ ಈ ಜಾನಪದ ಕಲೆಗಳನ್ನು…
ಮುದ್ದೇಬಿಹಾಳ: ಧ್ಯಾನ, ಯೋಗ ಸಾಧನೆಯನ್ನು ಬಾಲ್ಯದಿಂದಲೇ ರೂಢಿಸಿಕೊಂಡಲ್ಲಿ ಜೀವನದ ಯಾವುದೇ ಹಂತದಲ್ಲಿ ಏನೇ ಸಮಸ್ಯೆಗಳು ಬಂದರೂ ನಾವು ಎದುರಿಸಬಹುದು ಎಂದು ತಂಗಡಗಿ ಸರಕಾರಿ ಪ್ರೌಢ ಶಾಲೆಯ ಮುಖ್ಯಗುರು ಶ್ರೀಮಾಣಿಕ್ ಕುಲಕರ್ಣಿ ಹೇಳಿದರು.ತಾಲೂಕಿನ ಬಿದರಕುಂದಿ ಗ್ರಾಮದ ಸರ್ವಪಲ್ಲಿ ಡಾ.ರಾಧಾಕೃಷ್ಣನ್ ಪಿ.ಯು. ಕಾಲೇಜಿನಲ್ಲಿ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ಯತಿವರೇಣ್ಯರಾದ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳು ಆಯೋಜಿಸಿರುವ ಭಗವದ್ಗೀತಾ ಅಭಿಯಾನ ಕರ್ನಾಟಕ-೨೦೨೩ರ ತಾಲೂಕಾ ಮಟ್ಟದ ಸಪ್ತಾಹದ ಸಮಾಪ್ತಿ ದಿನದ ಉಪನ್ಯಾಸಮಾಲಿಕೆ ಕಾರ್ಯಕ್ರಮದಲ್ಲಿ ವಿಶ್ವವಂದಿತೆ ಭಗವದ್ಗೀತೆಯೆ ಎನ್ನುವ ವಿಷಯದ ಮೇಲೆ ಅವರು ಉಪನ್ಯಾಸ ನೀಡಿದರು.ಭಾರತದಲ್ಲಿ ಸ್ವಾಮಿ ವಿವೇಕಾನಂದ, ಗಾಂಧೀಜಿಯವರಿಂದ ಹಿಡಿದು ಬಹುತೇಕ ಉನ್ನತಾದರ್ಶ ಹೊಂದಿದ ವ್ಯಕ್ತಿಗಳ ಬದುಕಿನ ಹಿಂದೆ ಭಗವದ್ಗೀತೆ ಪ್ರಭಾವ ಬೀರಿದೆ. ಅಷ್ಟೇ ಅಲ್ಲದೆ ಚಿಕಾಗೋ ವಿಶ್ವಧರ್ಮ ಸಮ್ಮೇಳನದಲ್ಲಿಯೇ ಸ್ವಾಮಿ ವಿವೇಕಾನಂದರು ಗೀತೆಯ ಮಹತ್ವವನ್ನು ಪ್ರಪಂಚಕ್ಕೆ ಸಾರಿ ಬಂದು ಶತಮಾನಗಳೇ ಸಂದುಹೋಗಿದೆ. ಆವತ್ತಿನ ದಿವಸ ಭಾರತಕ್ಕೆ ಅಮೇರಿಕಾ ರಾಷ್ಟ್ರ ಗೌರವಿಸಿರುವುದು ಭಾರತದ ಸಂಸ್ಕೃತಿಯ ಸಹೋದರತ್ವ ಭಾವನೆಗೆ ಗಾಂಧೀಜಿಯವರು ಗೀತೆಯೇ ನನ್ನ ತಾಯಿಯೆಂದು ನಿಲುಮೆ…
