ಇಂಡಿ: ಮಹಿಳೆಯರು ಕುಟುಂಬ ಮತ್ತು ಸಮುದಾಯಗಳ ಬೆನ್ನೆಲುಬು. ತಮ್ಮ ಕುಟುಂಬಗಳಿಗೆ ಕಾಳಜಿ, ಬೆಂಬಲ ಮತ್ತು ಪೋಷಣೆಯನ್ನು ಒದಗಿಸಿ, ಮಕ್ಕಳ ವ್ಯಕ್ತಿತ್ವ ಬೆಳವಣಿಗೆಯಲ್ಲಿ ಅವರ
ಪಾತ್ರ ಅನನ್ಯ ಎಂದು ಅರಕೇರಿ ಅಲ್ಪಸಂಖ್ಯಾತ ಶಿಕ್ಷಣ ಇಲಾಖೆಯ ಪ್ರಾಚಾರ್ಯ ರೇಖಾ ಬಾರ್ಕಿ ಹೇಳಿದರು.
ಅವರು ನಗರದ ದಿ ಪ್ರೆಸಿಡೆನ್ಸಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಜರುಗಿದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.
ಜೀವನದಲ್ಲಿ ಎಷ್ಟೇ ಕಷ್ಟ ಬಂದರೂ ಹೆಣ್ಣು ಮಕ್ಕಳು ಶಿಕ್ಷಣವನ್ನು ಮೊಟಕುಗೊಳಿಸಬಾರದು. ವಿಶ್ವದಲ್ಲಿಯೇ ವಿಶಿಷ್ಟ ಸಂಸ್ಕೃತಿ, ಸಂಪ್ರದಾಯ, ಪರಂಪರೆ ಮತ್ತು ಆಚರಣೆ ಹೊಂದಿರುವ ಭಾರತೀಯ ಸಾಂಸ್ಕೃತಿಕ ವೈಭವವನ್ನು ಇಂದಿನ ಯುವ ಮಹಿಳಾ ಪೀಳಿಗೆಗೆ ಮನವರಿಕೆ ಮಾಡಿಕೊಡಬೇಕು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯೆ ಡಾ.ಎಸ್ ಟಿ ಬೋಳರೆಡ್ಡಿ ಮಾತನಾಡಿ, ಮಹಿಳೆಯರು ಮನೆಯ ನಾಲ್ಕು ಕೋಣೆಗೆ ಸೀಮಿತರಾಗದೇ, ಶಿಕ್ಷಣ ಮತ್ತು ಸಮಾಜಮುಖಿ ಕೆಲಸ-ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು. ಹೆಣ್ಣು ಮಕ್ಕಳಿಗೆ ಉನ್ನತ ಶಿಕ್ಷಣ ಕಲ್ಪಿಸಿ, ಉಜ್ವಲ ಭವಿಷ್ಯ ರೂಪಿಸಬೇಕು ಎಂದು ಹೇಳಿದರು.
ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಹನ್ನೊಂದು ಮಹಿಳೆಯರಿಗೆ ಸನ್ಮಾನಿಸಲಾಯಿತು. ಅಕ್ಕುಬಾಯಿ ನಾಯಕ-ಅಧ್ಯಕ್ಷರು ಕರ್ನಾಟಕ ಸಾವಿತ್ರಿಬಾಯಿ ಫುಲೆ ಸಂಸ್ಥೆ ವಿಜಯಪುರ, ಸುನಂದಾ ಪಾಟೀಲ-ಸಮಾಜ ಸೇವಕಿ, ಎಂ ಎ ಮುಲ್ಲಾ-ಅಂಚೆ ಮಹಿಳೆ ಬಿ ಎಲ್ ಡಿ ಇ ಆವರಣದ ಅಂಚೆ ಕಚೇರಿ ವಿಜಯಪುರ, ಸುಜಾತ ರೇಶ್ಮಿ ನಿರ್ದೇಶಕರು ಸ್ವಪ್ನ ಕಿವುಡ ಹಾಗೂ ಮೂಕ ಮಕ್ಕಳ ವಸತಿ ಶಾಲೆ ವಿಜಯಪುರ, ಜ್ಯೋತಿ ಹಿರೇಮಠ- ಮಹಿಳಾ ಮುಖ್ಯಪೇದೆ ಎಪಿಎಂಸಿ ಪೊಲೀಸ್ ಠಾಣೆ ವಿಜಯಪುರ, ಸಾವಿತ್ರಿ ಭಟ್- ಅಧ್ಯಕ್ಷರು ಪತಂಜಲಿ ಮಹಿಳಾ ಸ್ವಾಭಿಮಾನ ಸಮಿತಿ ವಿಜಯಪುರ, ಶರಣಮ್ಮ ಪಲ್ಕಿ- ರಾಷ್ಟ್ರೀಯ ಅಂಗವಿಕಲ ಕ್ರೀಡಾಪಟು ವಿಜಯಪುರ, ಸುಷ್ಮಾ ಚೆನ್ನವೀರ-ರಾಮನಗರ ಬಜ್ಜಿ ಅಡ್ಡ ವಿಜಯಪುರ, ಶಾರದಾ ತೊರವಿ-ಕೃಷಿಕ ಮಹಿಳಾ ಪಾಲಕರು, ಸಾವಂತ್ರವ್ವ ವಜ್ಜಲ- ಹುಬ್ಬಳ್ಳಿ ಅಜ್ಜಿ ಮೆಸ್ ವಿಜಯಪುರ ಹಾಗೂ ಅಣ್ಣಪೂರ್ಣ ದೇಸಾಯಿ-ಆಧ್ಯಾತ್ಮಿಕ ಚಿಂತಕರು ವಿಜಯಪುರ-ಅವರನ್ನು ಸನ್ಮಾನಿಸಲಾಯಿತು.
ಕುಮಾರಿ ರಶ್ಮಿ ನೇಗಿನಾಳ,ಚೈತ್ರ ನೀಲಗಾರ ನಿರೂಪಿಸಿದರು. ಕುಮಾರಿ ಛಾಯಾ ಲಮಾಣಿ, ಶ್ವೇತಾ ಪೂಜಾರಿ ಪ್ರಾರ್ಥಿಸಿದರು. ಕುಮಾರಿ ವೈಷ್ಣವಿ ನೀಲಗಾರ ಸ್ವಾಗತಿಸಿದರು. ಮಹಿಳಾ ಸಬಲೀಕರಣ ಘಟಕದ ಕಾರ್ಯಾಧ್ಯಕ್ಷೆ ಡಾ ಶ್ರೀಮತಿ ಶಾರದಾ ಮನುಮಿ ವಂದಿಸಿದರು.
ಕಾರ್ಯಕ್ರಮದಲ್ಲಿ ವಿ ಎಂ ಸಜ್ಜನ, ಪಿ ಆರ್ ಡೋನೂರ, ವಾಣಿಶ್ರೀ ಇರಬಾಶೆಟ್ಟಿ, ಡಾ ವಿಜಯಲಕ್ಷ್ಮಿ ಪವಾರ, ವಿನುತಾ ಪಾಟೀಲ, ವಾಣಿಶ್ರೀ ಬಂಡಿ, ಜಯಶ್ರೀ ಅಮೀನ್ಗಡ,ಪಿ ಎಂ ರೆಡ್ಡಿ, ರಿಯಾಜ್ ಫರೀದ್, ಶೋಭಾ ನಾವಿ, ಮಹಿಳಾ ಪ್ರತಿನಿಧಿಗಳಾದ ಸುರೇಖಾ ಗಿಣ್ಣಿ, ಶಾಂತಾ ಬೇನೂರ ಹಾಗೂ ಬಿಎಡ್ ಪ್ರಶಿಕ್ಷಣಾರ್ಥಿಗಳು ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

