ವಿಜಯಪುರ: ಒಂದು ನಿಲ್ಧಾಣ ಒಂದು ಉತ್ಪನ್ನ ವಿಜಯಪುರ ರೈಲ್ವೆ ನಿಲ್ಧಾಣದಲ್ಲಿ ಜಿಲ್ಲೆಯ ದ್ರಾಕ್ಷಿ ಬೆಳೆಯನ್ನು ಪ್ರಮಖ ಬೆಳೆಯನ್ನಾಗಿ ಗುರುತಿಸಿ ಮಾರಾಟದಿಂದ ಜಿಲ್ಲೆಯ ಅಭಿವೃದ್ಧಿ ಮತ್ತು ಔದ್ಯೋಗಿಕರಣಕ್ಕೆ ಸಹಕಾರಿಯಾಗಲಿದೆ ಎಂದು ಸಂಸದ ರಮೇಶ ಚ. ಜಿಗಜಿಣಗಿ ಹೇಳಿದರು.
ಮಂಗಳವಾರ ನಗರದ ರೈಲು ನಿಲ್ದಾಣದ ಆವರಣದಲ್ಲಿ ಆಯೋಜಿಸಿದ ಪ್ರಧಾನ ಮಂತ್ರಿಗಳು ೮೫೦೦೦ ಕೋಟಿ ರೂಗಳ ವಿವಿಧ ರೈಲ್ವೆ ಯೋಜನೆಗಳ ಶಂಕುಸ್ಥಾಪನೆ, ಲೋಕಾರ್ಪಣೆ ಹಾಗೂ ೧೦ ವಂದೇ ಭಾರತ್ ಎಕ್ಸಪ್ರೆಸ್‌ಗಳ ರೈಲುಗಳಿಗೆ ವರ್ಚುವಲ್ ಮೂಲಕ ಹಸಿರು ನಿಶಾನೆ ತೋರಿಸುವುದರೊಂದಿಗೆ ಚಾಲನೆ ನೀಡಿದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ದೇಶದ ಸುಮಾರು ೨೧ ರಾಜ್ಯಗಳಲ್ಲಿ ಒಂದು ನಿಲ್ಧಾಣ ಒಂದು ಉತ್ಪನ್ನದಿಂದ ಸ್ಥಳೀಯ ರೈತರು ಬೆಳೆದ ಉತ್ಪನ್ನಗಳನ್ನು ಸ್ಥಳೀಯ ರೈಲು ನಿಲ್ದಾಣಗಳಲ್ಲಿ ಮಾರಾಟ ಮಾಡುವುದರೊಂದಿಗೆ ರೈತರಿಗೆ ಉತ್ತೇಜನ ದೊರೆತು, ಜಿಲ್ಲೆಯ ಅಭಿವೃದ್ಧಿಗೆ ಹಾಗೂ ಔದ್ಯೋಗಿಕರಣಕ್ಕೆ ಹೆಚ್ಚು ಅನುಕೂಲವಾಗಲಿದೆ. ಜಿಲ್ಲೆಯಲ್ಲಿ ಅತೀ ಹೆಚ್ಚು ದ್ರಾಕ್ಷಿ ಬೆಳೆಯುತ್ತಿದ್ದು, ಜಿಲ್ಲೆಯ ರೈತರ ಆದಾಯ ಕೂಡ ವೃದ್ಧಿಯಾಗಲಿದೆ ಎಂದು ಹೇಳಿದರು.
ನೈರುತ್ಯ ರೈಲ್ವೇ ಹುಬ್ಬಳ್ಳಿ ವಿಭಾಗದಲ್ಲಿ ಎಸ್.ಎಸ್.ಎಸ್ ಹುಬ್ಬಳ್ಳಿ, ಧಾರವಾಡ, ಗುಡಗೇರಿ, ಖಾನಾಪುರ, ಬೆಳಗಾವಿ, ಘಟಪ್ರಭಾ, ಕುಡಚಿ, ರಾಯಬಾಗ, ಮುನಿರಾಬಾದ, ಹೊಸಪೇಟೆ, ತೋರಣಗಲ್ಲು, ಬಳ್ಳಾರಿ, ವಿಜಯಪುರ, ಬಾಗಲಕೋಟೆ, ವಾಸ್ಕೋ ಡ ಗಾಮಾ ಹಾಗೂ ಸಾಂವರ್ಡೆ ನಿಲ್ಧಾಣಗಳಲ್ಲಿ ಒಂದು ಉತ್ಪನ್ನ ಮಳಿಗೆಗಳು/ ಟ್ರಾಲಿಗಳು ಇಂದು ಸಮರ್ಪಿಸಲಾಗುತ್ತಿದೆ ವಿಜಯಪುರದಿಂದ ಸುಮಾರು ಒಂದು ದಿನದಲ್ಲಿ ೨೪ ರೈಲ್ವೇಗಳು ಚಲಿಸುತ್ತಿವೆ ದ್ವೀಪತ ರೈಲ್ವೇ ಹಳಿಗಳು ಜೋಡನೆ ಕಾಮಗಾರಿ ಪ್ರಗತಿಯಲ್ಲಿದೆ ೭ ರಾಷ್ಟ್ರೀಯ ಹೆದ್ದಾರಿಗಳು ಕೂಡ ವಿಜಯಪುರದಿಂದ ಹಾದು ಹೋಗುತ್ತವೆ ಇನ್ನಷ್ಟು ಅಭಿವೃದ್ಧಿ ಕಾರ್ಯಗಳನ್ನು ವೇಗವಾಗಿ ಕೈಗೆತ್ತಿಕೊಳ್ಳಲಾಗುವುದು ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಮಾಜಿ ವಿಧಾನ ಪರಿಷತ್ ಸದಸ್ಯರಾದ ಅರುಣ ಶಹಾಪುರ, ಉಮೇಶ ಕೊಳಕೂರ ರೈಲ್ವೇ ಅಧಿಕಾರಿಗಳಾದ ಸಿನಿಯನ್ ಡಿವಿಜನಲ್ ಫೈನಾನ್ಸಿಯಲ್ ಮ್ಯಾನೇಜರ್, ಜಿಬು ಜೇಕಬ್, ಡಿವಿಜನಲ್ ಇಲೆಕ್ಟಿçಕಲ್ ಇಂಜಿನೀಯರ್, ಚಾಣಕ್ಯ ಜೈನ್, ಡೆಪ್ಯೂಟಿ ಚೀಪ್ ಇಂಜಿನಿಯರ್ ಕನ್ಸಟ್ರಕ್ಷನ್, ವಿನಾಯಕ ಪಡಲ್ಕರ್ ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

