ಚಡಚಣ: ಮಾ.24ರಂದು ವಿಜಯಪುರ -ಬಾಗಲಕೋಟ ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟದ ನಿರ್ದೇಶಕರ ಸ್ಥಾನಕ್ಕೆ ಜರುಗಲಿರುವ ಚುನಾವಣೆಗೆ ಚಡಚಣ -ಇಂಡಿ ತಾಲೂಕಿನ ಎರಡು ಸ್ಥಾನಗಳಿಗೆ ತಾಲೂಕಿನ ಸಂತೋಷಕುಮಾರ ಪಾಟೀಲ ಮಂಗಳವಾರ ನಾಮಪತ್ರ ಸಲ್ಲಿಸಿದರು.
ನಾಮಪತ್ರ ಸಲ್ಲಿಸುವ ಮುಂಚೆ ನಡೆದ ಸಭೆಯಲ್ಲಿ ಮುಖಂಡ ಎಂ ಆರ್ ಪಾಟೀಲ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಜನಪರ ಪಂಚ ಯೋಜನೆಗಳು ಜಾರಿಯಾಗಿದ್ದರಿಂದ ಜನಪರ ಸರಕಾರಕ್ಕೆ ಜನರ ಬೆಂಬಲವಿದೆ. ಆದ್ದರಿಂದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಸಂತೋಷಕುಮಾರ ಅವರನ್ನು ಅತೀ ಹೆಚ್ಚು ಮತಗಳು ಹಾಕುವದರ ಮೂಲಕ ಜಯಶಾಲಿಯಾಗುವಂತೆ ಶ್ರಮಿಸಬೇಕು ಎಂದರು.
ಅಭ್ಯರ್ಥಿ ಸಂತೋಷಕುಮಾರ ಮಾತನಾಡಿ, ತಾಲ್ಲೂಕಿನ ರೈತರ ಪರವಾಗಿ ಹಾಗೂ ಹಾಲು ಉತ್ಪಾದಕರ ಸಂಘದ ಪರವಾಗಿ ತಮ್ಮ ಬೆಂಬಲಕ್ಕೆ ಯಾವುತ್ತು ಇರುತ್ತೇನೆ. ನನ್ನ ಗೆಲುವಿಗೆ ತಮ್ಮ ಅಮೂಲ್ಯ ಮತ ಅವಶ್ಯಕತೆ ಇದೆ ಆದಕಾರಣ ತಾವುಗಳು ನನ್ನನ್ನು ಬೆಂಬಲಿಸಿ ಅತೀ ಹೆಚ್ಚು ಮತಗಳ ಮೂಲಕ ನನ್ನನ್ನು ಆಯ್ಕೆ ಮಾಡಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ತಾ ಪಂ ಮಾಜಿ ಸದಸ್ಯ ಸಾಹೇಬಗೌಡ ಬಿರಾದಾರ, ಕಾಮೇಶ ಪಾಟೀಲ, ರವಿಗೌಡ ಬಿರಾದಾರ, ಮಹಾದೇವ ಅಂಕಲಗಿ, ಗ್ರಾ ಪಂ ಸುರೇಶಗೌಡ ಪಾಟೀಲ, ಅಮಸಿದ್ದ ಪೂಜಾರಿ ಜಗದೇವ ಜಿತ್ತಿ, ಅನಿಲಗೌಡ ಪಾಟೀಲ, ಗಿರೀಶಗೌಡ ಬಿರಾದಾರ ಸೇರಿದಂತೆ ಇತರರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

