Author: editor.udayarashmi@gmail.com

ವಿಜಯಪುರ: ಜಗತ್ತಿನ ಶೇ.80 ರಷ್ಟು ಜನರು ದೃಷ್ಟಿದೋಷದಿಂದ ಬಳಲುತ್ತಿದ್ದಾರೆ. ಇದಕ್ಕೆ ಸೂಕ್ತ ಚಿಕಿತ್ಸೆ ಪಡೆಯದಿದ್ದರೆ ನರಗಳ ದೌರ್ಬಲ್ಯ ಕುರುಡುತನಕ್ಕೆ ಕಾರಣವಾಗಬಹುದು ಎಂದು ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ಶ್ರೀ ಬಿ. ಎಂ. ಪಾಟೀಲ್ ಆಸ್ಪತ್ರೆ ನೇತ್ರ ವಿಭಾಗದ ಮುಖ್ಯಸ್ಥೆ ಡಾ. ರೇಖಾ ಮುಧೋಳ ಹೇಳಿದ್ದಾರೆ.ಬಿ.ಎಲ್.ಡಿ.ಇ ಡಿಮ್ಡ್ ವಿವಿಯ ಶ್ರೀ ಬಿ. ಎಂ. ಪಾಟೀಲ್ ವೈದ್ಯಕಿಯ ಕಾಲೆಜು, ಆಸ್ಪತ್ರೆಯಲ್ಲಿ ಮಂಗಳವಾರ ನಡೆದ ಗ್ಲೊಕೋಮಾ ಕಾಯಿಲೆ ಜಾಗೃತಿ ಕಾರ್ಯಾಗಾರದಲ್ಲಿ ಮಾತನಾಡಿದರು.ಭಾರತದಲ್ಲಿ 4.50 ಮಿಲಿಯನ್ ಮತ್ತು ಜಗತ್ತಿನಲ್ಲಿ 80 ಮಿಲಿಯನ್ ಜನರು ಗ್ಲೊಕೋಮಾ ಕಾಯಿಲೆಯಿಂದ ಬಳಲುತ್ತಿದ್ದಾರೆ. ಈ ಕಾಯಿಲೆಯನ್ನು ನಿರ್ಲಕ್ಷಿಸದೆ ಸೂಕ್ತ ಚಿಕಿತ್ಸೆ ಪಡೆದುಕೊಳ್ಳಬೇಕು. ಇಲ್ಲದಿದ್ದರೆ ಕಣ್ಣಿನ ಪೊರೆ ನಂತರ ನರಗಳ ದೌರ್ಬಲ್ಯದಿಂದ ಕುರುಡರಾಗಬಹುದು. ಗ್ಲೊಕೋಮಾ ಕಾಯಿಲೆ ಹೊಂದಿರುವ ರೋಗಿಗಳಲ್ಲಿ ತಲೆನೋವು, ದೃಷ್ಟಿ ಕ್ಷೀಣಿಸುವುದು ಹಾಗೂ ಕೆಲವರಲ್ಲಿ ಲಕ್ಷಣಗಳು ಕಂಡು ಬರದಿರಬಹುದು. ಈ ಕಾಯಿಲೆಯು 40ವರ್ಷಕ್ಕಿಂತ ಮೇಲ್ಪಟ್ಟ ಜನರ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತದೆ. ಅಧಿಕ ರಕ್ತದೊತ್ತಡ, ಮಧುಮೇಹ ರೊಗಿಗಳಲ್ಲಿ ಹಾಗೂ ದಪ್ಪ ಕನ್ನಡಕವನ್ನು ಬಳಸುವವರಲ್ಲಿ ಹೆಚ್ಚಾಗಿ…

Read More

ಅಂಗಾಂಗ ದಾನದ ಕುರಿತು ಜನಜಾಗೃತಿ ಅಗತ್ಯ ಡಾ. ಎಸ್. ಬಿ. ಪಾಟೀಲ ಬಿ.ಎಲ್.ಡಿ.ಇ ಸೂಪರ್ ಸ್ಪೇಷಾಲಿಟಿ ಆಸ್ಪತ್ರೆ ಮೂತ್ರ ಶಾಸ್ತ್ರದ ವಿಭಾಗದ ಮುಖ್ಯಸ್ಥರು, ವಿಜಯಪುರ ಭಾರತದಲ್ಲಿ ಪ್ರತಿವರ್ಷ ಮೂತ್ರಪಿಂಡ ಕಸಿ ಅಗತ್ಯವಿರುವ 2 ಲಕ್ಷ ಹೊಸ ರೋಗಿಗಳು ಪತ್ತೆಯಾಗುತ್ತಿದ್ದಾರೆ. ಆದರೆ 250 ಆಸ್ಪತ್ರೆಗಳಲ್ಲಿ ಕೇವಲ 7500 ರೋಗಿಗಳಿಗೆ ಮಾತ್ರ ಮೂತ್ರಪಿಂಡ ಕಸಿ ಸಾಧ್ಯವಾಗುತ್ತಿದೆ. ಅಗತ್ಯಕ್ಕಿಂತ ಕಡಿಮೆ ರೋಗಿಗಳಿಗೆ ಈ ಚಿಕಿತ್ಸೆ ಸಿಗುತ್ತಿರುವುದರಿಂದ ಉಳಿದವರಿಗೆ ಮೂತ್ರಪಿಂಡ ಕಸಿ ಅಥವಾ ನಿಯಮಿತ ಡಯಾಲಿಸಿಸ್ ಸೌಲಭ್ಯವೂ ಸಿಗದ ಕಾರಣ ಈ ರೋಗಿಗಳಲ್ಲಿ ಹೆಚ್ಚಿನವರು 2-3 ವರ್ಷಗಳಲ್ಲಿ ರೋಗಕ್ಕೆ ತುತ್ತಾಗುತ್ತಾರೆ. ಮೂತ್ರಪಿಂಡ ವೈಫಲ್ಯದಿಂದ ಬಳಲುತ್ತಿರುವ ರೋಗಿಗಳು ಗುಣಮಟ್ಟದ ಜೀವನ ಸಾಗಿಸಲು ಸಾಧ್ಯವಾಗದೇ ಹಲವಾರು ಸವಾಲುಗಳನ್ನು ಎದುರಿಸುತ್ತಾರೆ. ಇದು ರೋಗಿಗಳು ಮತ್ತು ಅವರ ಕುಟುಂಬದ ಮೇಲೆ ಸಾಮಾಜಿಕ, ಭಾವನಾತ್ಮಕ ಮತ್ತು ಆರ್ಥಿಕ ಪರಿಣಾಮವನ್ನು ಬೀರುತ್ತದೆ. ಮೂತ್ರಪಿಂಡದ ವೈಫಲ್ಯದ ರೋಗಿಗಳು ವಾರಕ್ಕೆ 2-3 ಬಾರಿ ಡಯಾಲಿಸಿಸ್ಗೆ ಒಳಗಾಗಬೇಕಾಗುತ್ತದೆ, ಕಟ್ಟುನಿಟ್ಟಾದ ಆಹಾರ ಪದ್ದತಿ ಮತ್ತು ನಿಯಮಿತ ಔಷಧಿ ಪಡೆದುಕೊಂಡು ಜೀವನವನ್ನು ನಡೆಸಬೇಕು.…

Read More

ವಿಜಯಪುರ: ರಾಜ್ಯ ಸರ್ಕಾರ ಪಠ್ಯಪುಸ್ತಕವನ್ನು ರಾಜಕೀಯಗೊಳಿಸುತ್ತಿರುವುದು ದುರಂತ, ಪಠ್ಯ ಪುಸ್ತಕ ವಿಚಾರದಲ್ಲಿ ಶಿಕ್ಷಣ ಸಚಿವರು ಸಂಪೂರ್ಣವಾಗಿ ವಿಫಲರಾಗಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಅರುಣ ಶಹಾಪೂರ ಗಂಭಿರವಾಗಿ ಆರೋಪಿಸಿದರು.ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಠ್ಯಪುಸ್ತಕ ರಚನೆ ಒಂದು ಸ್ವಾಯುತ್ತ ಸಂಸ್ಥೆ ಅಂದರೆ ಡಿ.ಎಸ್.ಇ.ಆ.ರ್.ಟಿ.ಯಿಂದ ಆಗಬೇಕು, ಸಾರ್ವಜನಿಕ ಚರ್ಚೆಗೆ ಒಳಪಡಬೇಕು, ಆದರೆ ಈಗಿನ ಸರ್ಕಾರ ಮಕ್ಕಳ ಓದಿನಲ್ಲಿಯೂ ರಾಜಕೀಯ ಬೆರೆಸಲು ಹೊರಟಿರುವುದು ದುರಂತ, ಪ್ರಥಮ ಬಾರಿಗೆ ಪಠ್ಯ ಪುಸ್ತಕವನ್ನು ರಾಜಕೀಕರಣಗೊಳಿಸಿದ ಖ್ಯಾತಿ ಕಾಂಗ್ರೆಸ್ ಗೆ ಸಲ್ಲುತ್ತದೆ ಎಂದು ಆಕ್ರೋಶ ಹೊರಹಾಕಿದರು.ಪಠ್ಯ ಪರಿಷ್ಕರಣೆ ಸಮಿತಿ ಶಿಫಾರಸ್ಸಿನ ಮೇರೆಗೆ ಪಠ್ಯ ಪರಿಷ್ಕರಿಸಿ ಬಿಡುಗಡೆಗೊಳಿಸಲಾಗುತ್ತಿದೆ ಎಂದು ಶಿಕ್ಷಣ ಸಚಿವರು ಹೇಳಿದ್ದಾರೆ. ಆದರೆ, ಪರಿಷ್ಕರಣೆ ಮಾಡುವ ಪಠ್ಯ ಯಾವುದು, ಪರಿಷ್ಕರಿಸಲು ಕಾರಣವೇನು? ಎಂಬುದನ್ನು ಶಿಕ್ಷಣ ಸಚಿವರು ಯಾವ ವಿಷಯವನ್ನು ಸ್ಪಷ್ಟವಾಗಿ ಹೇಳಿಲ್ಲ, ಹೀಗಾಗಿ ಒಂದು ರೀತಿ ಗೊಂದಲದ ಗೂಡಾಗಿ ಪರಿಗಣಿತವಾಗಿದೆ, ಕೂಡಲೇ ಎಲ್ಲ ವಿವರಗಳನ್ನು ಸಮಗ್ರವಾಗಿ ಶಿಕ್ಷಣ ಸಚಿವರು ಬಹಿರಂಗಗೊಳಿಸಬೇಕು ಎಂದರು.ಕೆಲವೇ ಕೆಲವು ವಿಚಾರವಾದಿ ಹಾಗೂ ಎಡಪಂಥಿಯರನ್ನು ಇಟ್ಟುಕೊಂಡು…

Read More

ಲೋಕಸಭೆ ಚುನಾವಣೆಗೂ ಮುನ್ನ ರಾಜ್ಯ ಸರ್ಕಾರದಿಂದ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ ಬೆಂಗಳೂರು: ಲೋಕಸಭೆ ಚುನಾವಣೆಗೂ ಮುನ್ನ ರಾಜ್ಯ ಸರ್ಕಾರ ತನ್ನ ನೌಕರರಿಗೆ ಸಿಹಿ ಸುದ್ದಿ ನೀಡಿದ್ದು, ತುಟ್ಟಿ ಭತ್ಯೆ(ಡಿಎ)ಯನ್ನು ಶೇ. 3.75ರಷ್ಟು ಹೆಚ್ಚಳ ಮಾಡಿ ಮಂಗಳವಾರ ಆದೇಶ ಹೊರಡಿಸಿದೆ.ಲೋಕಸಭೆ ಚುನಾವಣೆ ಅಧಿಸೂಚನೆ ಹೊರಡಿಸುವ ಮೊದಲೇ ಈ ಕುರಿತು ಸರ್ಕಾರ ಆದೇಶ ಹೊರಡಿಸಿದ್ದು, ರಾಜ್ಯ ಸರ್ಕಾರಿ ನೌಕರರ ತುಟ್ಟಿ ಭತ್ಯೆಯನ್ನು ಶೇ. 38.75 ರಿಂದ ಶೇ. 42.5ಕ್ಕೆ ಹೆಚ್ಚಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.ದಿನಾಂಕ 01/01/2024ರಿಂದಲೇ ಪೂರ್ವಾನ್ವಯವಾಗುವಂತೆ ತುಟ್ಟಿ ಭತ್ಯೆಯನ್ನು ಮಂಜೂರು ಮಾಡಿ ಆದೇಶ ಹೊರಡಿಸಲಾಗಿದೆ.ಇನ್ನು, ಕೇಂದ್ರ ವೇತನ ನೀತಿಯಂತೆ ವೇತನ ಪಡೆಯುವ ಸರ್ಕಾರಿ ನೌಕರರ ತುಟ್ಟಿ ಭತ್ಯೆಯನ್ನು ಶೇ.4ರಷ್ಟು ಏರಿಸಿದೆ. ಇದರಿಂದ ರಾಜ್ಯದ ಬೊಕ್ಕಸಕ್ಕೆ ಪ್ರತಿ ವರ್ಷ 1792.71 ಕೋಟಿ ರೂ. ಹೆಚ್ಚುವರಿ ಹೊರೆ ಬೀಳಲಿದೆ ಎಂದು ಹೇಳಲಾಗಿದೆ.ಕೆಲ ದಿನಗಳ ಹಿಂದಷ್ಟೇ ರಾಜ್ಯ ಸರ್ಕಾರಿ ನೌಕರರ ಸಂಘ ರಾಜ್ಯ ಸರ್ಕಾರದ ಮುಂದೆ ಶೇ.4ರಷ್ಟು ತುಟ್ಟಿ ಭತ್ಯೆಯನ್ನು ಹೆಚ್ಚಳ ಮಾಡುವಂತೆ ಬೇಡಿಕೆ ಇಟ್ಟಿತ್ತು.…

Read More

ಚಡಚಣ: 12 ನೇ ಶತಮಾನದಲ್ಲಿ ಕಾಯಕ ಶೃದ್ಧೆಯ ಮೂಲಕ ಬಾಳಿ ಬದುಕಿದ ಶರಣ ಹರಳಯ್ಯ ಹಾಗೂ ಕಲ್ಯಾಣಮ್ಮ ದಂಪತಿಗಳು. ಇವರ ಆದರ್ಶ ಜೀವನದ ಕಾಯಕ ಶೃದ್ಧೆಯನ್ನು ನಾವೆಲ್ಲರೂ ಜೀವನದುದ್ದಕ್ಕೂ ಅಳವಡಿಸಿಕೊಂಡು ಬದುಕಬೇಕಿದೆ ಎಂದು ಗ್ರಾ.ಪಂ ಅಧ್ಯಕ್ಷ ದಿಲೀಪ ಶಿವಶರಣ ಹೇಳಿದರು.ತಾಲ್ಲೂಕಿನ ದುಳಖೇಡ ಗ್ರಾಮದಲ್ಲಿ ಮಹಾಶಿವಶರಣ ಹರಳಯ್ಯ ಸಮುದಾಯದ ವತಿಯಿಂದ ಸೋಮವಾರದಂದು ಹಮ್ಮಿಕೊಂಡಿದ್ದ, ಮಹಾಶಿವಶರಣ ಹರಳಯ್ಯನವರ ಜಯಂತ್ಯೋತ್ಸವ ನಿಮಿತ್ತ ಹರಳಯ್ಯ ಹಾಗೂ ಕಲ್ಯಾಣಮ್ಮ ದಂಪತಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ, ಭವ್ಯ ಮೆರವಣಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಅವರು ಮಾತನಾಡಿದರು.ಹರಳಯ್ಯ ಹಾಗೂ ಕಲ್ಯಾಣಮ್ಮ ದಂಪತಿಗಳು ತಮ್ಮ ತೊಡೆಯ ಚರ್ಮದಿಂದ ವಿಶ್ವಗುರು ಬಸವಣ್ಣನಿಗೆ ಪಾದರಕ್ಷೆ ತಯಾರಿಸಿ ಕೊಟ್ಟ ಶ್ರೇಷ್ಠ ಶರಣ ದಂಪತಿ ಎಂದರು.ಬಳಿಕ ಗ್ರಾಮದ ಪ್ರಮುಖ ಬೀದಿಗಳಲ್ಲಿ ಶ್ರೀ ಶರಣ ಹರಳಯ್ಯ ದಂಪತಿಯ ಭಾವಚಿತ್ರದ ಭವ್ಯ ಮೆರವಣಿಗೆ ಡಿಜೆ ಸೌಂಡಿನೊಂದಿಗೆ ಸಮುದಾಯದ ನೂರಾರು ಯುವಕರು, ಹಿರಿಯರ ಸಮ್ಮುಖದಲ್ಲಿ ಸಂಭ್ರಮದಿಂದ ಸಂಚರಿಸಿತು.

Read More

ಮಹಿಳಾ ವಿವಿಯ ಪಿ.ಎಚ್.ಡಿ. ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ಪ್ರಕರಣ ವಿಜಯಪುರ: ಅಕ್ಕಮಹಾದೇವಿ ಮಹಿಲಾ ವಿವಿಯಲ್ಲಿ ಪಿಎಚ್.ಡಿ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಪ್ರೊ . ಮಲ್ಲಿಕಾರ್ಜುನ ಎನ್.ಎಲ್ ಇವರ ಮೇಲೆ ಶಿಸ್ತು ಕ್ರಮ ಕೈಗೊಂಡು ನೌಕರಿಯಿಂದ ವಜಾಗೊಳಿಸುವಂತೆ ಆಗ್ರಹಿಸಿ ಜಯ ಕರ್ನಾಟಕ ಸಂಘಟನೆಯ ವಿಜಯಪುರ ಜಿಲ್ಲಾ ಮಹಿಳಾ ಮೋರ್ಚಾ ವತಿಯಿಂದ ವಿಜಯಪುರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.ಈ ಸಂದರ್ಭದಲ್ಲಿ ಮಹಿಳಾ ಜಿಲ್ಲಾಧ್ಯಕ್ಷೆ ಶ್ರೀಮತಿ ವೀಣಾ ಕುಂದನಗಾರ ಮಾತನಾಡಿ, ಕಳೆದೆರಡು ವಾರಗಳ ಹಿಂದೆ ಪ್ರತಿಷ್ಠಿತ ಅಕ್ಕಮಹಾದೇವಿ ಮಹಿಳಾ ವಿವಿಯಲ್ಲಿ ಪಿಎಚ್.ಡಿ ಪದವಿ ಪಡೆಯುತ್ತಿರುವ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ವಿಶ್ವವಿದ್ಯಾಲಯದ ಮ್ಯಾನೇಜ್ ಮೆಂಟ್ ವಿಭಾಗದ ಮುಖ್ಯಸ್ಥ ಪ್ರೊ. ಮಲ್ಲಿಕಾರ್ಜುನ ಎನ್.ಎಲ್ . ಎಂಬುವವರು ಲೈಂಗಿಕ ಕಿರುಕುಳ ನೀಡಿರುವ ಆರೋಪ ಕೇಳಿಬಂದಿರುತ್ತದೆ. ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯವು ರಾಜ್ಯದಲ್ಲಿಯೇ ಏಕೈಕ ಮಹಿಳಾ ವಿಶ್ವವಿದ್ಯಾನಿಲಯವಾಗಿದ್ದು ಸದರಿ ವಿದ್ಯಾನಿಲಯದಲ್ಲಿ ಕಡು ಬಡವ ಹಾಗೂ ಗ್ರಾಮೀಣ ಭಾಗದ ವಿದ್ಯಾರ್ಥಿನಿಯರಿಗೆ ಅನುಕೂಲಕರವಾಗಿರಲಿ ಹಾಗೂ ಶಿಕ್ಷಣದಿಂದ ವಂಚಿತರಾಗಬಾರದೆಂದು ಮನಗಂಡ ಸರ್ಕಾರಗಳು ಪ್ರತಿಷ್ಠಿತ ವಿಶ್ವವಿದ್ಯಾನಿಲಯವನ್ನು…

Read More

ಝಳಕಿ: ಸಮೀಪದ ಗುಂದವಾನ ಗ್ರಾಮದ ಗ್ರಾಮ ದೇವತೆ ಗುಪ್ತೇಶ್ವರಿದೇವಿಯ ಜಾತ್ರಾ ಮಹೋತ್ಸವ ಮಾ.15 ರಂದು ಶುಕ್ರವಾರ 8 ಗಂಟೆಗೆ ಕಳಸಾರೋಹಣ ನಂತರ ರಾತ್ರಿ 9 ಗಂಟೆಗೆ ದೇವಿಗೆ ಗಂಧ ಏರಿಸುವುದು, 10 ಗಂಟೆಗೆ ಚಿತ್ರ ವಿಚಿತ್ರ ಮದ್ದು ಸುಡುವುದು, ಅದೇ ದಿವಸ ರಾತ್ರಿ 10:30 ಗಂಟೆಗೆ ಅಪ್ಪಾಜಿ ಮೆಲೋಡಿಸ್ ಹಿರೇಮಸಳಿ ಇವರಿಂದ “ಸರಮಂಜರಿ ಕಾರ್ಯಕ್ರಮ”.ಮಾ.16 ರಂದು ಶನಿವಾರ ಬೆಳಗ್ಗೆ 8 ಗಂಟೆಯಿಂದ ಸಾಯಂಕಾಲ 5 ಗಂಟೆಯವರೆಗೆ ಹರದೇಶಿ-ನಾಗೇಶಿ ಇವರಿಂದ ಗೀ ಗೀ ಪದಗಳು,ಮಧ್ಯಾಹ್ನ 1 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ದೇವಿಗೆ ನೈವೇದ್ಯ, ರಾತ್ರಿ 10:30 ಗಂಟೆಗೆ ಗಲೀಫ ಏರಿಸುವುದು.ಮಾ. 17 ರಂದು ರವಿವಾರ ರಾತ್ರಿ 10:30 ಗಂಟೆಗೆ ಬಸವೇಶ್ವರ ನಾಟ್ಯ ಸಂಘದಿಂದ ಬಂಡಿಗಣಿ ಇವರಿಂದ ಸುಂದರ ಸಾಮಾಜಿಕ ನಾಟಕ “ದುಡ್ಡು ದಾರಿ ಬಿಡಿಸಿತು ಅರ್ಥಾತ್‌ ರೈತನ ಕಣ್ಣೀರು” ಜರಗುತ್ತದೆ ಎಂದು ಜಾತ್ರ ಕಮೀಟಿ ಅಧ್ಯಕ್ಷ ಹಣಮಂತ ಖಡೆಖಡೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ಶ್ರೀ ಪದ್ಮರಾಜ ಶಿಕ್ಷಣ ಮಹಾವಿದ್ಯಾಲಯದಲ್ಲಿ ಕನ್ನಡ ಚಟುವಟಿಕೆಗಳ ಉದ್ಘಾಟನಾ ಸಮಾರಂಭ ಸಿಂದಗಿ: ಜಾನಪದ ಸಂಸ್ಕೃತಿಯ ಮುಖ್ಯ ಶಕ್ತಿಯೇ ಭಾವೈಕ್ಯತೆ. ಜಾನಪದ ಕಲೆಗಳು ಉಳಿಸಿ ಬೆಳೆಸುವ ಕಾಲ ಇಂದು ಕಡಿಮೆಯಾಗುತ್ತಿದೆ. ಜಾನಪದ ಉಳಿದರೆ ಮಾತ್ರ ಬದುಕಿಗೊಂದು ಅರ್ಥ ಬರುತ್ತದೆ ಎಂದು ಹಿರಿಯ ಸಾಹಿತಿ ಬಿ.ಆರ್.ಪೋಲಿಸಪಾಟೀಲ ಹೇಳಿದರು.ಅವರು ಪಟ್ಟಣದ ಶ್ರೀ ಪದ್ಮರಾಜ ಶಿಕ್ಷಣ ಮಹಾವಿದ್ಯಾಲಯದಲ್ಲಿ ಮಂಗಳವಾರ ಕನ್ನಡ ಸಂಘದಿಂದ ಹಮ್ಮಿಕೊಂಡ ಕನ್ನಡ ಚಟುವಟಿಕೆಗಳ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.ಭಾವೈಕ್ಯತೆ ನಮ್ಮ ರಕ್ತದಲ್ಲಿ ಇದೆ, ಆದರೆ ರಾಜಕೀಯ ವ್ಯವಸ್ಥೆಯಿಂದ ಅದು ದೂರವಾಗುತ್ತಿದೆ. ಎಲ್ಲಿಯವರೆಗೆ ರಾಜಕಾರಣವನ್ನು, ರಾಜಕೀಯ ವ್ಯಕ್ತಿಗಳಿಂದ ಆದಷ್ಟೂ ನಾವೇಲ್ಲರೂ ದೂರವಿರುತ್ತೇವೆ ಅಲ್ಲಿಯವರೆಗೂ ಭಾವೈಕ್ಯತೆ ಜೀವಂತವಾಗಿರುತ್ತದೆ. ಭಗವಂತನು ನೀಡಿದ ಪ್ರಕೃತಿಯನ್ನು ನಾವೂ ಉಳಿಸುವದಿಲ್ಲವೋ ನಮ್ಮ ಪ್ರಕೃತಿಯು ಸರಿಯಾಗಿ ಇರುವುದಕ್ಕೂ ಸಾಧ್ಯವಿಲ್ಲ ಎಂದ ಅವರು ವಿನಯವಿಲ್ಲದ ಶಿಕ್ಷಣ ವ್ಯರ್ಥವಾದ ಶಿಕ್ಷಣ ಶಿಕ್ಷಕರಾಗುವವರು ಮೊದಲು ತಾಯಿಯಾಗಬೇಕು. ಕ್ಷಮಾಗುಣ, ಸಮಾಧಾನ, ಕರುಣಾಮಯಿಯಾದ ಗುಣಗಳನ್ನು ಶಿಕ್ಷಕರಾದವರು ಬೆಳೆಸಿಕೊಳ್ಳಬೇಕು. ಶಿಕ್ಷಕರು ವಿಶೇಷವಾದ ಸೃಜನಾತ್ಮಕವಾದ ಜ್ಞಾನವನ್ನು ಪಡೆದುಕೊಂಡು ಮಕ್ಕಳನ್ನು ಕ್ರೀಯಾಶೀಲರನ್ನಾಗಿ ಮಾಡಬೇಕು ಎಂದರು.ಕಾರ್ಯಕ್ರಮವನ್ನು ಪ್ರೆಸ್‌ಕ್ಲಬ್…

Read More

ಸಿಂದಗಿ: ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ವಿಜಯಪುರ ಅಡಿಯಲ್ಲಿ ನಡೆಯುವ ಬಿ.ಎಸ್.ಡಬ್ಲೂ ಕೋರ್ಸಿನ ಪ್ರಸಕ್ತ ಸಾಲಿನ ಪರೀಕ್ಷೆಯಲ್ಲಿ ಸಿಂದಗಿಯ ಶ್ರೀ ಪದ್ಮರಾಜ ಮಹಿಳಾ ಪದವಿ ಮಹಾವಿದ್ಯಾಲಯವು, ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದಲ್ಲಿ ಜರುಗಿದ ೧೫ನೆಯ ಘಟಿಕೋತ್ಸವದಲ್ಲಿ ಬಿ.ಎಸ್.ಡಬ್ಲೂ ಪರೀಕ್ಷೆಯಲ್ಲಿ ಪ್ರಥಮ ರ‍್ಯಾಂಕ ಪಡೆದ ಪ್ರಯುಕ್ತ ಸಮಾರಂಭದಲ್ಲಿ ಶ್ರೀ ಪದ್ಮರಾಜ ಮಹಿಳಾ ಪದವಿ ಮಹಾವಿದ್ಯಾಲಯದ ಬಿ.ಎಸ್.ಡಬ್ಲೂ ವಿಭಾಗದ ವಿದ್ಯಾರ್ಥಿನಿ ಸುರೇಖಾ ಬಿರಾದಾರ ಚಿನ್ನದ ಪದಕವನ್ನು ಪಡೆದುಕೊಂಡು ಮಹಾವಿದ್ಯಾಲಯದ ಕೀರ್ತಿಯನ್ನು ಹೆಚ್ಚಿಸಿದ್ದಾರೆ.ವಿದ್ಯಾರ್ಥಿನಿಯ ನಿರಂತರ ಪರಿಶ್ರಮ, ಕಾಲೇಜಿನ ಉಪನ್ಯಾಸಕರ ಅತ್ಯುತ್ತಮ ಭೋಧನೆ ಪಾಲಕರ ಪ್ರೋತ್ಸಾಹಯಿಂದ ಈ ಚಿನ್ನದ ಪದಕ ಪಡೆದುಕೊಳ್ಳಲು ಸಾಧ್ಯವಾಗಿದೆ ಎಂದು ಶ್ರೀಪದ್ಮರಾಜ ವಿದ್ಯಾವರ್ಧಕ ಸಂಸ್ಥೆಯ ಚೇರಮನ್ನರಾದ ಪೂಜ್ಯ ಶ್ರೀಡಾ.ಪ್ರಭುಸಾರಂಗದೇವ ಶಿವಾಚಾರ್ಯರು ಪ್ರತಿಕ್ರಿಯಿಸಿ, ವಿದ್ಯಾರ್ಥಿಗೆ ಶುಭ ಹಾರೈಸಿದ್ದಾರೆ.ವಿದ್ಯಾರ್ಥಿನಿಯರ ಈ ಸಾಧನೆಗೆ ಸಂಸ್ಥೆಯ ಆಡಳಿತ ಮಂಡಳಿಯ ಎಲ್ಲಾ ನಿರ್ದೇಶಕ ಮಂಡಳಿ, ಪ್ರಾಚಾರ್ಯ ಎಸ್.ಎಂ.ಪೂಜಾರಿ, ಪತ್ರಿಕಾ ಪ್ರತಿನಿಧಿ ಮಹಾಂತೇಶ ನೂಲಾನವರ ಸೇರಿದಂತೆ ಮಹಾವಿದ್ಯಾಲಯದ ಬೋಧಕ-ಬೋಧಕೇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿನಿಯರಿಗೆ ಅಭಿನಂದಿಸಿ ಹರ್ಷ ವ್ಯಕ್ತಪಡಿಸಿದ್ದಾರೆ.

Read More