ಝಳಕಿ: ಸಮೀಪದ ಗುಂದವಾನ ಗ್ರಾಮದ ಗ್ರಾಮ ದೇವತೆ ಗುಪ್ತೇಶ್ವರಿದೇವಿಯ ಜಾತ್ರಾ ಮಹೋತ್ಸವ ಮಾ.15 ರಂದು ಶುಕ್ರವಾರ 8 ಗಂಟೆಗೆ ಕಳಸಾರೋಹಣ ನಂತರ ರಾತ್ರಿ 9 ಗಂಟೆಗೆ ದೇವಿಗೆ ಗಂಧ ಏರಿಸುವುದು, 10 ಗಂಟೆಗೆ ಚಿತ್ರ ವಿಚಿತ್ರ ಮದ್ದು ಸುಡುವುದು, ಅದೇ ದಿವಸ ರಾತ್ರಿ 10:30 ಗಂಟೆಗೆ ಅಪ್ಪಾಜಿ ಮೆಲೋಡಿಸ್ ಹಿರೇಮಸಳಿ ಇವರಿಂದ “ಸರಮಂಜರಿ ಕಾರ್ಯಕ್ರಮ”.
ಮಾ.16 ರಂದು ಶನಿವಾರ ಬೆಳಗ್ಗೆ 8 ಗಂಟೆಯಿಂದ ಸಾಯಂಕಾಲ 5 ಗಂಟೆಯವರೆಗೆ ಹರದೇಶಿ-ನಾಗೇಶಿ ಇವರಿಂದ ಗೀ ಗೀ ಪದಗಳು,ಮಧ್ಯಾಹ್ನ 1 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ದೇವಿಗೆ ನೈವೇದ್ಯ, ರಾತ್ರಿ 10:30 ಗಂಟೆಗೆ ಗಲೀಫ ಏರಿಸುವುದು.
ಮಾ. 17 ರಂದು ರವಿವಾರ ರಾತ್ರಿ 10:30 ಗಂಟೆಗೆ ಬಸವೇಶ್ವರ ನಾಟ್ಯ ಸಂಘದಿಂದ ಬಂಡಿಗಣಿ ಇವರಿಂದ ಸುಂದರ ಸಾಮಾಜಿಕ ನಾಟಕ “ದುಡ್ಡು ದಾರಿ ಬಿಡಿಸಿತು ಅರ್ಥಾತ್ ರೈತನ ಕಣ್ಣೀರು” ಜರಗುತ್ತದೆ ಎಂದು ಜಾತ್ರ ಕಮೀಟಿ ಅಧ್ಯಕ್ಷ ಹಣಮಂತ ಖಡೆಖಡೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment

