ಚಡಚಣ: 12 ನೇ ಶತಮಾನದಲ್ಲಿ ಕಾಯಕ ಶೃದ್ಧೆಯ ಮೂಲಕ ಬಾಳಿ ಬದುಕಿದ ಶರಣ ಹರಳಯ್ಯ ಹಾಗೂ ಕಲ್ಯಾಣಮ್ಮ ದಂಪತಿಗಳು. ಇವರ ಆದರ್ಶ ಜೀವನದ ಕಾಯಕ ಶೃದ್ಧೆಯನ್ನು ನಾವೆಲ್ಲರೂ ಜೀವನದುದ್ದಕ್ಕೂ ಅಳವಡಿಸಿಕೊಂಡು ಬದುಕಬೇಕಿದೆ ಎಂದು ಗ್ರಾ.ಪಂ ಅಧ್ಯಕ್ಷ ದಿಲೀಪ ಶಿವಶರಣ ಹೇಳಿದರು.
ತಾಲ್ಲೂಕಿನ ದುಳಖೇಡ ಗ್ರಾಮದಲ್ಲಿ ಮಹಾಶಿವಶರಣ ಹರಳಯ್ಯ ಸಮುದಾಯದ ವತಿಯಿಂದ ಸೋಮವಾರದಂದು ಹಮ್ಮಿಕೊಂಡಿದ್ದ, ಮಹಾಶಿವಶರಣ ಹರಳಯ್ಯನವರ ಜಯಂತ್ಯೋತ್ಸವ ನಿಮಿತ್ತ ಹರಳಯ್ಯ ಹಾಗೂ ಕಲ್ಯಾಣಮ್ಮ ದಂಪತಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ, ಭವ್ಯ ಮೆರವಣಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಅವರು ಮಾತನಾಡಿದರು.
ಹರಳಯ್ಯ ಹಾಗೂ ಕಲ್ಯಾಣಮ್ಮ ದಂಪತಿಗಳು ತಮ್ಮ ತೊಡೆಯ ಚರ್ಮದಿಂದ ವಿಶ್ವಗುರು ಬಸವಣ್ಣನಿಗೆ ಪಾದರಕ್ಷೆ ತಯಾರಿಸಿ ಕೊಟ್ಟ ಶ್ರೇಷ್ಠ ಶರಣ ದಂಪತಿ ಎಂದರು.
ಬಳಿಕ ಗ್ರಾಮದ ಪ್ರಮುಖ ಬೀದಿಗಳಲ್ಲಿ ಶ್ರೀ ಶರಣ ಹರಳಯ್ಯ ದಂಪತಿಯ ಭಾವಚಿತ್ರದ ಭವ್ಯ ಮೆರವಣಿಗೆ ಡಿಜೆ ಸೌಂಡಿನೊಂದಿಗೆ ಸಮುದಾಯದ ನೂರಾರು ಯುವಕರು, ಹಿರಿಯರ ಸಮ್ಮುಖದಲ್ಲಿ ಸಂಭ್ರಮದಿಂದ ಸಂಚರಿಸಿತು.
Subscribe to Updates
Get the latest creative news from FooBar about art, design and business.
Related Posts
Add A Comment

