Subscribe to Updates
Get the latest creative news from FooBar about art, design and business.
Author: editor.udayarashmi@gmail.com
ದೇವರಹಿಪ್ಪರಗಿ: ಬಿಜೆಪಿ ಹಿಂದುಳಿದ ವರ್ಗವನ್ನು ಸದಾ ಕಡೆಗಣಿಸುತ್ತಲೇ ಬಂದಿದ್ದು, ಕೇವಲ ಮತ ಬ್ಯಾಂಕ್ ರಾಜಕಾರಣಕ್ಕಾಗಿ ಬಳಸಿಕೊಂಡು ಬಿಸಾಕುತ್ತಿದೆ. ಲೋಕಸಭಾ ಚುನಾವಣೆಯಲ್ಲಿ ರಾಜ್ಯದ ಎರಡು ಪ್ರಬಲ ಸಮುದಾಯಗಳಿಗೆ ಟಿಕೆಟ್ ನೀಡದೆ ಮೋಸ ಮಾಡಿದೆ ಎಂದು ಕೋಲಿ ಕಬ್ಬಲಿಗ ಯುವವೇದಿಕೆ ರಾಜ್ಯಾಧ್ಯಕ್ಷ ಶಿವಾಜಿ ಮೆಟಗಾರ ಆರೋಪಿಸಿದ್ದಾರೆ.ಈ ಕುರಿತು ಪ್ರಕಟಣೆ ನೀಡಿರುವ ಅವರು, ಲೋಕಸಭಾ ಚುನಾವಣೆಯಲ್ಲಿ ಹಾವೇರಿಯಿಂದ ಕೆ.ಎಸ್. ಈಶ್ವರಪ್ಪನವರ ಮಗನಿಗೆ ಟಿಕೆಟ್ ನೀಡಲಾಗುವುದೆಂದು ಹೇಳಿ ಮೋಸ ಮಾಡಲಾಯಿತು. ಅದರಂತೆ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ ಪ್ರಮೋದ ಮದ್ವರಾಜ ಅವರಿಗೆ ಟಿಕೆಟ್ ನೀಡದೇ ಹಿಂದುಳಿದ ವರ್ಗವನ್ನು ತುಳಿಯುವ ಕೆಲಸ ಬಿಜೆಪಿ ಮಾಡುತ್ತಿದೆ. ಅಹಿಂದ್ ವರ್ಗವನ್ನು ಕೇವಲ ವ್ಹೋಟ್ ಬ್ಯಾಂಕ ರಾಜಕಾರಣಕ್ಕಾಗಿ ಬಳಸಿಕೊಂಡು ಅಧಿಕಾರ ನೀಡುವಾಗ ಕೇವಲ ಮೇಲ್ವರ್ಗದವರಿಗೆ ನೀಡುತ್ತಿರುವುದು ಹಲವಾರು ನಿದರ್ಶನಗಳಿವೆ.ರಾಜ್ಯದಲ್ಲಿ ಸುಮಾರು ೭೦ಲಕ್ಷ ಕುರುಬ ಸಮುದಾಯವಿದ್ದು, ಅವರಿಗೂ ಒಂದು ಟಿಕೆಟ್ ಇಲ್ಲದಂತಾಗಿದೆ. ಅದರಂತೆ ಸುಮಾರು ೫೦ಲಕ್ಷದಷ್ಟಿರುವ ಕೋಲಿ ಕಬ್ಬಲಿಗ, ಮೀನುಗಾರರು, ಸೇರಿದಂತೆ ೩೭ ರ‍್ಯಾಯ ಪದಗಳ ಸೇರಿ ಈ ಸಮುದಾಯದವರಿಗೂ ಟಿಕೆಟ್ ವಂಚಿತರನ್ನಾಗಿ ಮಾಡಿದ್ದು, ಬಿಜೆಪಿಯ…
ದೇವರಹಿಪ್ಪರಗಿ: ಕಾಂಗ್ರೆಸ್ ಪಕ್ಷದ ಜಿಲ್ಲಾ ಉಪಾಧ್ಯಕ್ಷ ಸಂಗನಗೌಡ ಹರನಾಳ ಆರೋಪ ದೇವರಹಿಪ್ಪರಗಿ: ಅನುದಾನ, ಯೋಜನೆಗಳ ಕುರಿತು ಸ್ಪಷ್ಟ ಮಾಹಿತಿ ನೀಡದೇ, ಎಲ್ಲವುಗಳಿಗೆ ನಾನೇ ಕಾರಣ ಎಂಬ ಹೇಳಿಕೆ ನೀಡಿ ಶಾಸಕರು ಸಣ್ಣತನ ತೋರುತ್ತಿದ್ದಾರೆ ಇದು ಶಾಸಕ ಸ್ಥಾನಕ್ಕೆ ಶೋಭೆ ತರುವಂಥದ್ದಲ್ಲ ಎಂದು ಕಾಂಗ್ರೆಸ್ ಪಕ್ಷದ ಜಿಲ್ಲಾ ಉಪಾಧ್ಯಕ್ಷ ಸಂಗನಗೌಡ ಹರನಾಳ ಗಂಭೀರವಾಗಿ ಆರೋಪಿಸಿದ್ದಾರೆ.ಶುಕ್ರವಾರ ಈ ಕುರಿತು ಪತ್ರಿಕೆಯೊಂದಿಗೆ ಮಾತನಾಡಿದ ಕಾಂಗ್ರೆಸ್ ಉಪಾಧ್ಯಕ್ಷರು, ಜಿಲ್ಲೆಯ ಉಸ್ತುವಾರಿ ಸಚಿವರ ಸಹಕಾರ ಹಾಗೂ ಆಸಕ್ತಿಯಿಂದ ಮತಕ್ಷೇತ್ರಕ್ಕೆ ಅಗತ್ಯವಾದ ಅನುದಾನ ತರುವಲ್ಲಿ ಮಾಜಿಶಾಸಕ ಶರಣಪ್ಪ ಸುಣಗಾರ ಸೇರಿದಂತೆ ಕಾಂಗ್ರೆಸ್ ಪಕ್ಷದ ಪ್ರಮುಖ ನಾಯಕರು ಸಾಕಷ್ಟು ಶ್ರಮವಹಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷ ತಾಲ್ಲೂಕು ಕೇಂದ್ರಕ್ಕೆ ಅಗತ್ಯವಾದ ಕಚೇರಿಗಳ ಆರಂಭಕ್ಕೆ ಸರ್ಕಾರದ ನೆರವು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ಸಹಕಾರದೊಂದಿಗೆ ಅಗತ್ಯ ಪ್ರಯತ್ನದಲ್ಲಿದೆ. ಆದರೆ ಕ್ಷೇತ್ರದ ಶಾಸಕರು ಮಾತ್ರ ಗ್ರಾಮ ಪಂಚಾಯಿತಿ ಮಟ್ಟದ ಸಭೆ ಹಾಗೂ ಯೋಜನೆಗಳಲ್ಲಿ ಅನಗತ್ಯ ಹಸ್ತಕ್ಷೇಪ ಕೈಗೊಳ್ಳುತ್ತಿದ್ದಾರೆ. ಅಲ್ಲದೆ ಹಿಂದಿನ ಶಾಸಕರ ಹಾಗೂ ಸರ್ಕಾರದ…
ಇಂಗಳಗಿ ಕೆರೆಗೆ ನೀರು ಪೂರೈಸುವ ಕಾಲುವೆ ಒಡೆದ ಪ್ರದೇಶಕ್ಕೆರೈತರ ಭೇಟಿ | ಪ್ರತಿಭಟನೆ ಎಚ್ಚರಿಕೆ ದೇವರಹಿಪ್ಪರಗಿ: ಗ್ರಾಮೀಣ ಕೆರೆಗಳಿಗೆ ನೀರು ಪೂರೈಸುವ ಕಾಲುವೆ ಒಡೆದು, ಪಡಗಾನೂರ ಗ್ರಾಮ ವ್ಯಾಪ್ತಿಯಲ್ಲಿನ ಕಲ್ಲು ಕ್ರಶರ್‌ಗಳ ಮಾಲೀಕರು ಅನಧಿಕೃತವಾಗಿ ನೀರು ಪಡೆಯುತ್ತಿರುವ ಪ್ರದೇಶಕ್ಕೆ ಇಂಗಳಗಿ ಗ್ರಾಮದ ರೈತರು ತೆರಳಿ ಆಕ್ರೋಶ ವ್ಯಕ್ತಪಡಿಸಿದರು.ತಾಲ್ಲೂಕಿನ ಇಂಗಳಗಿ ಗ್ರಾಮದ ರೈತರು ತಮ್ಮ ಕೆರೆಗೆ ನೀರು ಪೂರೈಸುವ ಕಾಲುವೆಗೆ ಗುರುವಾರ ತೆರಳಿ ವಾಸ್ತವಿಕ ಸ್ಥಿತಿ ನೋಡಿ ಕೃಷ್ಣಾ ಭಾಗ್ಯ ಜಲನಿಗಮದ ಅಧಿಕಾರಿಗೆ ಮಾಹಿತಿ ನೀಡಿ ವಾಗ್ವಾದ ನಡೆಸಿದರು. ಹಾಗೂ ತಾಲ್ಲೂಕು ಆಡಳಿತ ಹಾಗೂ ಜನಪ್ರತಿನಿಧಿಗಳ ವಿರುದ್ಧ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.ಈ ಸಂದರ್ಭದಲ್ಲಿ ರೈತರಾದ ಸಂತೋಷ ಬಿರಾದಾರ, ಮಂಜುನಾಥ ಕೊಕಟನೂರ ಮಾತನಾಡಿ, ಪಡಗಾನೂರ ಗ್ರಾಮದ ಪ್ರಭಾವಿ ನಾಯಕರು ಸೇರಿದಂತೆ ವಿವಿಧ ಕ್ರಶರ್‌ಗಳು ಅಕ್ರಮವಾಗಿ ನೀರು ಪಡೆಯುತ್ತಿವೆ. ಇದನ್ನು ಕೃಷ್ಣಾ ಭಾಗ್ಯ ಜಲ ನಿಗಮದ ಅಧಿಕಾರಿಗಳು ನೋಡಿದ್ದರು ಸಹ ಜಾಣ ಕುರುಡರಂತೆ ವರ್ತಿಸುತ್ತಿದ್ದಾರೆ. ಈ ಕುರಿತು ಪ್ರಶ್ನಿಸಿದರೆ ಅಧಿಕಾರಿ ರೈತರೊಂದಿಗೆ ಬೇಕಾಬಿಟ್ಟಿಯಾಗಿ ಮಾತನಾಡುತ್ತಾರೆ. ಜನ,…
ದೇವರಹಿಪ್ಪರಗಿ: ಮಾ.೧೬ ರಂದು ಶನಿವಾರ(ಇಂದು) ಬೆಳಿಗ್ಗೆ ೧೦ ಘಂಟೆಗೆ ದೇವರಹಿಪ್ಪರಗಿ ಇಂಡಿ ರಸ್ತೆಯಲ್ಲಿಯ ಹೆಸ್ಕಾಂ ಉಪವಿಭಾಗೀಯ ಕಚೇರಿಯಲ್ಲಿ ವಿದ್ಯುತ್ ಗ್ರಾಹಕರ ಕುಂದು ಕೊರತೆ ಸಭೆ ಹಮ್ಮಿಕೊಳ್ಳಲಾಗಿದೆ.ತಾಲ್ಲೂಕಿನ ಎಲ್ಲಾ ಗ್ರಾಹಕರು ಸಭೆಗೆ ಆಗಮಿಸಿ ತಮ್ಮ ಕುಂದುಕೊರತೆಗಳನ್ನು ವ್ಯಕ್ತಪಡಿಸಿ ಪರಿಹಾರ ಕಂಡುಕೊಳ್ಳಬೇಕೆಂದು ಕಾರ್ಯ ಮತ್ತು ಪಾಲನೆ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಪ್ರಕಟಣೆ ಮೂಲಕ ತಿಳಿಸಿದ್ದಾರೆ
ದೇವರಹಿಪ್ಪರಗಿ: ಕೋರವಾರ ಗ್ರಾಮದಲ್ಲಿ ದಿ.೧೭ ಭಾನುವಾರದಂದು ಉಚಿತ ಕಣ್ಣಿನ ತಪಾಸಣೆ ಹಾಗೂ ಶಸ್ತçಚಿಕಿತ್ಸಾ ಶಿಬಿರವನ್ನು ಏರ್ಪಡಿಸಲಾಗಿದೆ.ತಾಲ್ಲೂಕಿನ ಕೋರವಾರ ಗ್ರಾಮದ ಸರಸ್ವತಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ವಿಜಯಪುರ ನಗರದ ಡಾ.ಪ್ರಭುಗೌಡ ಲಿಂಗದಳ್ಳಿ(ಚಬನೂರ)ರವರ ಅನುಗ್ರಹ ಕಣ್ಣಿನ ಆಸ್ಪತ್ರೆ, ಅನುಗ್ರಹ ವ್ಹಿಜನ್ ಫೌಂಡೇಷನ್ ಟ್ರಸ್ಟ್ ಹಾಗೂ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸಹಯೋಗದಲ್ಲಿ ಬೆಳಿಗ್ಗೆ ೦೯ರಿಂದ ಮದ್ಯಾಹ್ನ ೦೩ ಗಂಟೆಯವರೆಗೆ ನಡೆಯುವ ಶಿಬಿರದಲ್ಲಿ ವಿಜಯಪುರದ ಅನುಗ್ರಹ ಕಣ್ಣಿನ ಆಸ್ಪತ್ರೆ ಮುಖ್ಯಸ್ಥ ಡಾ. ಪ್ರಭುಗೌಡ ಲಿಂಗದಳ್ಳಿ ಹಾಗೂ ಅವರ ತಂಡ ತಪಾಸಣೆ ನಡೆಸಲಿದೆ.ಅರ್ಹ ರೋಗಿಗಳಿಗೆ ಉಚಿತವಾಗಿ ಕರೆದುಕೊಂಡು ಹೋಗಿ ಕಣ್ಣಿನ ಪೊರೆಯ ಶಸ್ತ್ರಚಿಕಿತ್ಸೆ ಮಾಡಿ ಕಳಿಸಲಾಗುವುದು. ಕೋರವಾರ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಸಾರ್ವಜನಿಕರು ಈ ಶಿಬಿರದ ಸದುಪಯೋಗ ಪಡೆದುಕೊಳ್ಳಬೇಕು. ಹೆಚ್ಚಿನ ಮಾಹಿತಿಗಾಗಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಸಂಗಮೇಶ ಛಾಯಾಗೋಳ ಸಂಪರ್ಕ ಸಂಖ್ಯೆ:೯೭೪೨೩೦೪೫೬೫ ಹಾಗೂ ನಜೀರ್ ಚಾಂದಕವಟೆ ಸಂಪರ್ಕ ಸಂಖ್ಯೆ:೭೩೫೩೫೧೫೩೮೦ ಇವರನ್ನು ಸಂಪರ್ಕಿಸುವಂತೆ ಶಿಬಿರದ ಪ್ರಕಟಣೆ ತಿಳಿಸಿದೆ.
ದೇವರಹಿಪ್ಪರಗಿ: ಪಟ್ಟಣದ ಹುಸೇನಸಾಬ್ ಗೌಂಡಿ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾ ಉಪಾಧ್ಯಕ್ಷರಾಗಿ ಹಾಗೂ ಮುಳಸಾವಳಗಿ ಗ್ರಾಮದ ದಾವಲಸಾಬ್ ಇನಾಮದಾರ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾ ಪ್ರಧಾನಕಾರ್ಯದರ್ಶಿಯಾಗಿ ನೇಮಕಗೊಂಡಿದ್ದಾರೆ.ಪಕ್ಷದ ಸಂಘಟನಾತ್ಮಕ ದೃಷ್ಠಿಯಿಂದ ಮಾಜಿಶಾಸಕ ಸೋಮನಗೌಡ ಪಾಟೀಲ(ಸಾಸನೂರ) ಹಾಗೂ ಜಿಲ್ಲಾಧ್ಯಕ್ಷ ಆರ್.ಎಸ್.ಪಾಟೀಲ(ಕುಚಬಾಳ) ಸೂಚನೆಯ ಮೇರೆಗೆ ಇವರ ನೇಮಕ ಮಾಡಲಾಗಿದೆ ಎಂದು ಪಕ್ಷದ ಪ್ರಕಟಣೆ ತಿಳಿಸಿದೆ.
“ಆರೋಗ್ಯ ಅಂಗಳ “- ಸಾಯಬಣ್ಣ ಮಾದರ (ಸಲಾದಹಳ್ಳಿ) ಬೇಸಿಗೆಯ ಬಿಸಿಲು ವಾತಾವರಣದಲ್ಲಿ ಏರಿಕೆಯಾಗಿದೆ ಬಿಸಿ ಗಾಳಿಯಿಂದ ಜನರ ತತ್ತರಿಸಿದ್ದಾರೆ. ಇದರಿಂದಾಗಿ ಹಲವಾರು ರೋಗಗಳು ಜನರಲ್ಲಿ ಕಂಡು ಬರುತ್ತಿವೆ. ಇಡೀ ವಾತಾವರಣ ಧೂಳು ಹಾಗೂ ಅತಿ ಉಷ್ಣಾಂಶಯಿಂದ ಕೂಡಿದು ರೋಗಗಳು ಕ್ರಿಯಾಶೀಲವಾಗುತ್ತಿವೆ, ಬೇಸಿಗೆಯ ಬಿಸಿ ಗಾಳಿಯಿಂದ ರೋಗಗಳು ಒಬ್ಬರಿಂದ ಒಬ್ಬರಿಗೆ ಬೇಗನೆ ಹರಡುತ್ತಿವೆ ಹೀಗಾಗಿ ಆರೋಗ್ಯದ ಬಗ್ಗೆ ಎಚ್ಚರಿಕೆ ಅಗತ್ಯವಾಗಿದೆ.ಕಾಲರ, ಟೈಪಾಯಾಡ್ನಂತ ಜ್ವರ, ಕಣ್ಣಿನ ಅಲರ್ಜಿ, ಕರುಳು ಬೇನೆ, ವಾಂತಿಬೇದಿ, ಮಕ್ಕಳಲ್ಲಿ ಬರುವ ಅಮ್ಮ ರೋಗ, ಅತಿ ಬಿಸಿಲಿನಿಂದ ತಲೆ ಸುತ್ತು, ಮೂಗಿನಲ್ಲಿ ರಕ್ತಸ್ರಾವ, ಚರ್ಮರೋಗ, ದಮ್ಮು, ಬೆವರು ಗುಳ್ಳಿ, ಕೀವು ತುಂಬಿದ ಗುಳಿ, ಉಷ್ಣದ ಕೆಮ್ಮು, ಅಂಗೈ -ಅಂಗಾಲು ಉರಿ, ಸರ್ಪ ಸುತ್ತು, ಉರಿ ಮೂರ್ತ, ಬೇಸಿಗೆಯಲ್ಲಿ ಸಾಮಾನ್ಯವಾಗಿ ಕಂಡುಬರುವ ಸಮಸ್ಯೆಗಳುಸಾರ್ವಜನಿಕರು ಆರೋಗ್ಯ ಕಾಪಾಡಿಕೊಳ್ಳಲು ಕೆಲವು ಮುನ್ನೆಚ್ಚರಿಕೆ ಅನುಸರಿಸುವುದು ಉತ್ತಮ.
ಇಂಡಿ: ಪಟ್ಟಣದ ನಿವಾಸಿ, ಬಿಜೆಪಿ ಕಾರ್ಯಕರ್ತ ಶಾಂತು ಕಂಬಾರ ಅವರನ್ನು ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ಜಿಲ್ಲಾ ಕಾರ್ಯದರ್ಶಿಯಾಗಿ ಆಯ್ಕೆ ಮಾಡಿ ಹಿಂದುಳಿದ ವರ್ಗಗಳ ಮೋರ್ಚಾದ ವಿಜಯಪುರ ಜಿಲ್ಲಾ ಅಧ್ಯಕ್ಷ ಸಿದ್ದು ಬುಳ್ಳಾ ಆದೇಶ ಹೊರಡಿಸಿದ್ದಾರೆ.ಪಕ್ಷ ಸಂಘಟನೆಯಲ್ಲಿ ಸಕ್ರೀಯವಾಗಿ ತೊಡಗಿಕೊಂಡು ಕಾರ್ಯಕರ್ತರ ಪಡೆ ಕಟ್ಟಿ ಪಕ್ಷ ಅಧಿಕಾರಕ್ಕೆ ತರುವಲ್ಲಿ ಶ್ರಮಿಸಬೇಕೆಂದು ಆದೇಶದಲ್ಲಿ ತಿಳಿಸಲಾಗಿದೆ.
ಇಂಡಿ: ಮಕ್ಕಳನ್ನು ಪ್ರೀತಿಸುವ ಪ್ರವೃತ್ತಿ ಪಾಲಕರು ಹಾಗೂ ಶಿಕ್ಷಕರಲ್ಲಿ ಆರಂಭವಾದಾಗಲೇ ಮಕ್ಕಳಲ್ಲಿ ಪ್ರಗತಿ ಕಾಣಲು ಸಾಧ್ಯ ಎಂದು ಪಿಡಿಓ ಬಸವರಾಜ ಬಬಲಾದ ಹೇಳಿದರು.ಅವರು ತಾಲೂಕಿನ ಹಿರೇರೂಗಿ ಗ್ರಾಮದ ಕೆಬಿಎಸ್,ಕೆಜಿಎಸ್ ಶಾಲೆಯ ವತಿಯಿಂದ ಹಮ್ಮಿಕೊಂಡ ಸಿರಿ ಸಂಭ್ರಮ-ಶಾಲಾ ವಾರ್ಷಿಕೋತ್ಸವ ಹಾಗೂ ವಿದ್ಯಾರ್ಥಿಗಳ ಬೀಳ್ಕೊಡುವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.ಪಾಲಕರು ಮಕ್ಕಳ ಅಭ್ಯಾಸದ ಕಡೆ ಗಮನಿಸಬೇಕು. ಅವರನ್ನು ಧನಾತ್ಮಕವಾಗಿ ಪ್ರೋತ್ಸಾಹಿಸಬೇಕು. ಟಿವಿ ಮತ್ತು ಮೊಬೈಲ್ ಗಳಿಂದ ಮಕ್ಕಳನ್ನು ದೂರವಿಟ್ಟು ಪ್ರತಿದಿನ ಶಾಲೆಗೆ ಕಳುಹಿಸಬೇಕು ಎಂದರು.ಶಿಕ್ಷಕ ಸಂತೋಷ ಬಂಡೆ ಮಾತನಾಡಿ, ಮಾನವನ ಸರ್ವಾಂಗೀಣ ಪ್ರಗತಿಗೆ ಶಿಕ್ಷಣ ಮುಖ್ಯ. ಕಠಿಣ ಪರಿಶ್ರಮ, ಪ್ರಾಮಾಣಿಕತೆಯಿಂದ ಮಕ್ಕಳು ಅಭ್ಯಸಿಸಬೇಕು. ನಮ್ಮ ನಾಗರಿಕತೆಯ ಶ್ರೀಮಂತ ಪರಂಪರೆ ಮತ್ತು ಮೌಲ್ಯಗಳನ್ನು ಇಂದಿನ ಪೀಳಿಗೆ ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.ಮುಖ್ಯ ಶಿಕ್ಷಕ ಅನಿಲ ಪತಂಗಿ, ಶಿಕ್ಷಕಿ ಎಸ್ ಡಿ ಬಿರಾದಾರ ವರದಿ ವಾಚಿಸಿದರು.ಪಿಡಿಓ ಬಸವರಾಜ ಬಬಲಾದ, ಯುವ ಮುಖಂಡರಾದ ಪರಶುರಾಮ ಹೊಸಮನಿ, ಸಂತೋಷ ಕೋಟಗೊಂಡ ಅವರನ್ನು ಶಾಲೆಯ ವತಿಯಿಂದ ಸನ್ಮಾನಿಸಲಾಯಿತು.ಶಿಕ್ಷಕ ಎಸ್ ಆರ್ ಚಾಳೇಕರ…
ಅನಾರೋಗ್ಯದಿಂದ ಅಸ್ವಸ್ಥಗೊಂಡ ಅಪರಿಚಿತ ವಯೋವೃದ್ಧನನ್ನು ಆಸ್ಪತ್ರೆಗೆ ಸಾಗಿಸಿದ ಕರವೇ ಅಧ್ಯಕ್ಷ – ಬಸವರಾಜ ನಂದಿಹಾಳಬಸವನಬಾಗೇವಾಡಿ: ಪಟ್ಟಣದ ಸಮೀಪವಿರುವ ಬಸವನಹಟ್ಟಿ ಕ್ರಾಸಿನ ಬಸ್ತಂಗುದಾಣದಲ್ಲಿ ಕಳೆದ ಮೂರು ದಿನಗಳಿಂದ ಅನಾರೋಗ್ಯದಿಂದ ಅಸ್ವಸ್ಥಗೊಂಡ ಅಪರಿಚಿತ ವಯೋವೃದ್ಧನನ್ನು ಅಂಬ್ಯುಲೆನ್ಸ್ ಸಿಬ್ಬಂದಿಗಳ ಸಹಾಯದಿಂದ ಸರ್ಕಾರಿ ಆಸ್ಪತ್ರೆಗೆ ಸಾಗಿಸಿ ಒರ್ವ ವಯೋವೃದ್ಧನ ಜೀವ ಕಾಪಾಡಿದ ಮಾನವೀಯ ಘಟನೆ ಗುರುವಾರ ಜರುಗಿದೆ.ಕಳೆದ ಮೂರು ದಿನಗಳಿಂದ ಅಪರಿಚಿತ ಸುಮಾರು ೬೨ ವರ್ಷದ ವೃದ್ಧ ಬಸವನಹಟ್ಟಿ ಕ್ರಾಸಿನ ಬಸ್ ತಂಗುದಾಣದಲ್ಲಿದ್ದಾರೆ. ಇದನ್ನು ಗಮನಿಸಿದ ಬಸ್ ತಂಗುದಾಣದ ಹತ್ತಿರ ತೋಟದ ನಿವಾಸಿ ಅಸ್ತಾಪ ಬಾಗವಾನ ಅವರು ಸೇರಿದಂತೆ ಇತರರು ವೃದ್ದನಿಗೆ ಆಹಾರ, ನೀರು, ಜ್ಯೂಸ್ ನೀಡಿದ್ದಾರೆ. ತೀವ್ರ ಅನಾರೋಗ್ಯದಿಂದ ಅಸ್ವಸ್ಥಗೊಂಡ ವೃದ್ಧ ನಿತ್ರಾಣವಾಗಿ ಮಲಗಿಕೊಂಡಿದ್ದಾನೆ. ವಿಪರೀತ ಬಿಸಿಲಿನ ತಾಪವು ವೃದ್ಧನನ್ನು ಹೈರಾಣ ಮಾಡಿದೆ. ಇದನ್ನು ಕಂಡ ಅಸ್ತಾಪ ಬಾಗವಾನ ಅವರು ಕರ್ನಾಟಕ ರಕ್ಷಣಾ ವೇದಿಕೆಯ ಯುವ ಘಟಕದ ಅಧ್ಯಕ್ಷ ಅಶೋಕ ಹಾರಿವಾಳ ಅವರಿಗೆ ದೂರವಾಣಿ ಕರೆ ಮಾಡಿ ಈ ವಿಷಯ ತಿಳಿಸಿದ್ದಾರೆ.ವಿಷಯ ತಿಳಿದ ತಕ್ಷಣವೇ ಅಶೋಕ…
