ಇಂಡಿ: ಮಕ್ಕಳನ್ನು ಪ್ರೀತಿಸುವ ಪ್ರವೃತ್ತಿ ಪಾಲಕರು ಹಾಗೂ ಶಿಕ್ಷಕರಲ್ಲಿ ಆರಂಭವಾದಾಗಲೇ ಮಕ್ಕಳಲ್ಲಿ ಪ್ರಗತಿ ಕಾಣಲು ಸಾಧ್ಯ ಎಂದು ಪಿಡಿಓ ಬಸವರಾಜ ಬಬಲಾದ ಹೇಳಿದರು.
ಅವರು ತಾಲೂಕಿನ ಹಿರೇರೂಗಿ ಗ್ರಾಮದ ಕೆಬಿಎಸ್,
ಕೆಜಿಎಸ್ ಶಾಲೆಯ ವತಿಯಿಂದ ಹಮ್ಮಿಕೊಂಡ ಸಿರಿ ಸಂಭ್ರಮ-ಶಾಲಾ ವಾರ್ಷಿಕೋತ್ಸವ ಹಾಗೂ ವಿದ್ಯಾರ್ಥಿಗಳ ಬೀಳ್ಕೊಡುವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಪಾಲಕರು ಮಕ್ಕಳ ಅಭ್ಯಾಸದ ಕಡೆ ಗಮನಿಸಬೇಕು. ಅವರನ್ನು ಧನಾತ್ಮಕವಾಗಿ ಪ್ರೋತ್ಸಾಹಿಸಬೇಕು. ಟಿವಿ ಮತ್ತು ಮೊಬೈಲ್ ಗಳಿಂದ ಮಕ್ಕಳನ್ನು ದೂರವಿಟ್ಟು ಪ್ರತಿದಿನ ಶಾಲೆಗೆ ಕಳುಹಿಸಬೇಕು ಎಂದರು.
ಶಿಕ್ಷಕ ಸಂತೋಷ ಬಂಡೆ ಮಾತನಾಡಿ, ಮಾನವನ ಸರ್ವಾಂಗೀಣ ಪ್ರಗತಿಗೆ ಶಿಕ್ಷಣ ಮುಖ್ಯ. ಕಠಿಣ ಪರಿಶ್ರಮ, ಪ್ರಾಮಾಣಿಕತೆಯಿಂದ ಮಕ್ಕಳು ಅಭ್ಯಸಿಸಬೇಕು. ನಮ್ಮ ನಾಗರಿಕತೆಯ ಶ್ರೀಮಂತ ಪರಂಪರೆ ಮತ್ತು ಮೌಲ್ಯಗಳನ್ನು ಇಂದಿನ ಪೀಳಿಗೆ ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಮುಖ್ಯ ಶಿಕ್ಷಕ ಅನಿಲ ಪತಂಗಿ, ಶಿಕ್ಷಕಿ ಎಸ್ ಡಿ ಬಿರಾದಾರ ವರದಿ ವಾಚಿಸಿದರು.
ಪಿಡಿಓ ಬಸವರಾಜ ಬಬಲಾದ, ಯುವ ಮುಖಂಡರಾದ ಪರಶುರಾಮ ಹೊಸಮನಿ, ಸಂತೋಷ ಕೋಟಗೊಂಡ ಅವರನ್ನು ಶಾಲೆಯ ವತಿಯಿಂದ ಸನ್ಮಾನಿಸಲಾಯಿತು.
ಶಿಕ್ಷಕ ಎಸ್ ಆರ್ ಚಾಳೇಕರ ಕಾರ್ಯಕ್ರಮ ನಿರ್ವಹಿಸಿದರು.
ಎಸ್ ಡಿ ಎಂ ಸಿ ಅಧ್ಯಕ್ಷರಾದ ಮಾಳಪ್ಪ ಪೂಜಾರಿ, ಸುದರ್ಶನ ಬೇನೂರ, ಉಪಾಧ್ಯಕ್ಷರಾದ ಪರಶುರಾಮ ಹೊಸಮನಿ, ಸದಸ್ಯ ಜಟ್ಟೆಪ್ಪ ಮರಡಿ ಹಾಗೂ ಎಸ್ ಡಿ ಎಂ ಸಿ ಎಲ್ಲ ಸದಸ್ಯರು ಮತ್ತು ಮುಖ್ಯ ಶಿಕ್ಷಕರಾದ ವ್ಹಿ ವೈ ಪತ್ತಾರ, ಎ ಎಂ ಬೆದ್ರೇಕರ, ಶಿಕ್ಷಕರಾದ ಎಸ್ ಎಂ ಪಂಚಮುಖಿ, ಎಸ್ ಬಿ ಕುಲಕರ್ಣಿ, ಜೆ ಎಂ ಪತಂಗಿ, ಸಾವಿತ್ರಿ ಸಂಗಮದ, ಎಸ್ ಎನ್ ಡಂಗಿ, ಎಫ್ ಎ ಹೊರ್ತಿ, ಜೆ ಸಿ ಗುಣಕಿ, ಎಸ್ ವ್ಹಿ ಬೇನೂರ, ಶಾಂತೇಶ ಹಳಗುಣಕಿ ಸೇರಿದಂತೆ ಶಾಲೆಯ ಎಲ್ಲ ಶಿಕ್ಷಕರು, ಮಕ್ಕಳು ಭಾಗವಹಿಸಿದ್ದರು.
ವಿವಿಧ ಸ್ಪರ್ಧೆಯಲ್ಲಿ ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.
Subscribe to Updates
Get the latest creative news from FooBar about art, design and business.
Related Posts
Add A Comment

