“ಆರೋಗ್ಯ ಅಂಗಳ “- ಸಾಯಬಣ್ಣ ಮಾದರ (ಸಲಾದಹಳ್ಳಿ)
ಬೇಸಿಗೆಯ ಬಿಸಿಲು ವಾತಾವರಣದಲ್ಲಿ ಏರಿಕೆಯಾಗಿದೆ ಬಿಸಿ ಗಾಳಿಯಿಂದ ಜನರ ತತ್ತರಿಸಿದ್ದಾರೆ. ಇದರಿಂದಾಗಿ ಹಲವಾರು ರೋಗಗಳು ಜನರಲ್ಲಿ ಕಂಡು ಬರುತ್ತಿವೆ. ಇಡೀ ವಾತಾವರಣ ಧೂಳು ಹಾಗೂ ಅತಿ ಉಷ್ಣಾಂಶಯಿಂದ ಕೂಡಿದು ರೋಗಗಳು ಕ್ರಿಯಾಶೀಲವಾಗುತ್ತಿವೆ, ಬೇಸಿಗೆಯ ಬಿಸಿ ಗಾಳಿಯಿಂದ ರೋಗಗಳು ಒಬ್ಬರಿಂದ ಒಬ್ಬರಿಗೆ ಬೇಗನೆ ಹರಡುತ್ತಿವೆ ಹೀಗಾಗಿ ಆರೋಗ್ಯದ ಬಗ್ಗೆ ಎಚ್ಚರಿಕೆ ಅಗತ್ಯವಾಗಿದೆ.
ಕಾಲರ, ಟೈಪಾಯಾಡ್ನಂತ ಜ್ವರ, ಕಣ್ಣಿನ ಅಲರ್ಜಿ, ಕರುಳು ಬೇನೆ, ವಾಂತಿಬೇದಿ, ಮಕ್ಕಳಲ್ಲಿ ಬರುವ ಅಮ್ಮ ರೋಗ, ಅತಿ ಬಿಸಿಲಿನಿಂದ ತಲೆ ಸುತ್ತು, ಮೂಗಿನಲ್ಲಿ ರಕ್ತಸ್ರಾವ, ಚರ್ಮರೋಗ, ದಮ್ಮು, ಬೆವರು ಗುಳ್ಳಿ, ಕೀವು ತುಂಬಿದ ಗುಳಿ, ಉಷ್ಣದ ಕೆಮ್ಮು, ಅಂಗೈ -ಅಂಗಾಲು ಉರಿ, ಸರ್ಪ ಸುತ್ತು, ಉರಿ ಮೂರ್ತ, ಬೇಸಿಗೆಯಲ್ಲಿ ಸಾಮಾನ್ಯವಾಗಿ ಕಂಡುಬರುವ ಸಮಸ್ಯೆಗಳು
ಸಾರ್ವಜನಿಕರು ಆರೋಗ್ಯ ಕಾಪಾಡಿಕೊಳ್ಳಲು ಕೆಲವು ಮುನ್ನೆಚ್ಚರಿಕೆ ಅನುಸರಿಸುವುದು ಉತ್ತಮ.
- ಬಿಳಿ ಛತ್ರಿಯನ್ನು ಬಳಸಬೇಕು
- ತೆಳುವಾದ ಹತ್ತಿ ಬಟ್ಟೆಯನ್ನು ಧರಿಸಬೇಕು ಬಿಳಿ ಬಣ್ಣದ ಬಟ್ಟೆಗಳು ಉತ್ತಮ
- ಹತ್ತಿ ಅಥವಾ ಟರ್ಬನ್ ಟೋಪಿ ಕೂಲಿಂಗ್ ಗ್ಲಾಸ್ ಧರಿಸಬೇಕು, ಮಕ್ಕಳು ಮತ್ತು ಹಿರಿಯರು ಹೆಚ್ಚು ನೀರನ್ನು ಕುಡಿಯಬೇಕು
- ಬೆಳಿಗ್ಗೆ 11 ರಿಂದ ಸಂಜೆ 4ರವರಿಗೆ ಹೊರಾಂಗಣ ದೈಹಿಕ ಚಟುವಟಿಕೆಗಳು ಕಡಿಮೆ ಮಾಡಲು ಪ್ರಯತ್ನಿಸಬೇಕು
- ಸಾಕಷ್ಟು ನೀರು ಕುಡಿಯಿರಿ, ಗ್ಲುಕೋಸ್ ಓ ಆರ್ ಎಸ್ ನಂತ ದ್ರವ ಪದಾರ್ಥಗಳು ಹೆಚ್ಚಾಗಿ ಸೇವಿಸಬೇಕು.
- ಹೀಟ್ ಸ್ಟ್ರೋಕ್ ಕಂಡು ಬಂದರೆ ತಂಪಾದ ಪ್ರದೇಶಕ್ಕೆ ತೆರಳಬೇಕು.
- ಶಾಖದ ಹೊಡೆತದಿಂದ ನರಳುವ ವ್ಯಕ್ತಿಗೆ ಕನಿಷ್ಠ ಬಟ್ಟೆಯನ್ನು ಹೊಂದಿರಬೇಕು ಆ ವ್ಯಕ್ತಿಗೆ ತಣ್ಣೀರಿನಿಂದ ಸ್ಪಂಜ್ ಮಾಡಬೇಕು ಸುಧಾರಣೆ ಕಂಡು ಬರದಿದ್ದರೆ ಅವರನ್ನು ತಕ್ಷಣ ಆಸ್ಪತ್ರೆಗೆ ಸ್ಥಳಾಂತರಿಸಬೇಕು
- ಬಿಸಿಲಿನಿಂದ ಮನೆಗೆ ಬಂದಾಗ ಮಜ್ಜಿಗೆ ಮತ್ತು ತಂಪಾದ ಪಾನಿ ಗಳನ್ನು ಕುಡಿಯಬೇಕು.