Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಹೊನ್ನಳ್ಳಿಯಲ್ಲಿ ಜೆಜೆಎಂ ಕಾಮಗಾರಿಗೆ ಭೂಮಿಪೂಜೆ ಸಲ್ಲಿಸಿದ ಗ್ರಾಪಂ ಅಧ್ಶಕ್ಷ ಸಂಗನಗೌಡ ಅಭಿಮತ ಬ್ರಹ್ಮದೇವನಮಡು: ಗ್ರಾಮೀಣ ಪ್ರದೇಶದ ಜನರಿಗೆ ಸಮಪ೯ಕ ಕುಡಿಯುವ ನೀರು ಪೂರೈಸುವ ಮಹತ್ತರ ಯೋಜನೆಯನ್ನು ಕೇಂದ್ರ ಹಾಗೂ ರಾಜ್ಶ ಸರಕಾರ ಜಾರಿಗೊಳಿಸಿದ್ದು, ಪ್ರತಿಯೊಬ್ಬರೂ ಅದರ ಸದುಪಯೋಗ ಪಡೆಯಬೇಕು ಎಂದು ಗ್ರಾಪಂ ಅಧ್ಶಕ್ಷ ಸಂಗನಗೌಡ ಬಿರಾದಾರ (ಕರವಿನಾಳ) ಹೇಳಿದರು.ಸಿಂದಗಿ ತಾಲೂಕಿನ ಹೊನ್ನಳ್ಳಿ ಗ್ರಾಮದಲ್ಲಿ ೧ ಕೋಟಿ ೪ ಲಕ್ಷ ರೂ.ವೆಚ್ಚದ ಜಲ ಜಿವನ ಮಿಷನ್ ಯೋಜನೆ ಕಾಮಗಾರಿಗೆ ಶನಿವಾರ ಭೂಮಿಪೂಜೆ ಅವರು ಮಾತನಾಡಿದರು.ಈ ಯೋಜನೆಯ ಮೂಲಕ ಗ್ರಾಮೀಣ ಭಾಗದಲ್ಲಿನ ಪ್ರತಿಯೊಂದು ಮನೆಗೂ ನೀರಿನ ಸೌಲಭ್ಶ ಕಲ್ಪಿಸಲಾಗುವುದು. ೨೦೨೨-೨೩ನೇ ಸಾಲಿನ ಕೇಂದ್ರ ಹಾಗೂ ರಾಜ್ಶ ಸರಕಾರದ ಮಹತ್ವಾಕಾಂಕ್ಷೆ ಯೋಜನೆಯಾದ ಜಲ ಜಿವನ ಮಿಷನ್ ಯೋಜನೆಯಡಿ ಪ್ರತಿ ಮನೆಗೆ ನಳ ಸಂಪಕ೯ ಕಲ್ಪಿಸಿ ನೀರಿನ ಸಮಸ್ಶೆ ನಿವಾರಿಸಲಾಗುವುದು ಎಂದರು.ಈ ವೇಲೆ ನಾಯ್ಕೋಡಿ, ಯುವ ಮುಖಂಡ ಹಣಮಂತ್ರಾಯಗೌಡ ಬಿರಾದಾರ, ಬಸನಗೌಡ ಉಳ್ಳೆಸೂರ, ಡಾ.ಎನ್.ಪಿ.ನಾಯ್ಕೋಡಿ, ಹೊಬು ಚವ್ಹಾಣ, ಹಿರೆಮಾನ ಚವ್ಹಾಣ, ಸಲಿವ್ಹಾಣ. ಮೇಲಿನಮನಿ, ಪ್ರಭಾಕರ ಪತ್ತಾರ, ಕೆ.ಬಿ.ಮನಗೂಳಿ,…
ಇಂಡಿ: ಕನ್ನಡ ಭಾಷಾ ರಕ್ಷಣೆಗೆ ಕನ್ನಡ ಶಾಲೆಗಳು ಅಭಿವೃದ್ದಿ ಪಡಿಸುವುದು ಅತೀ ಮುಖ್ಯ. ಮಕ್ಕಳ ಮನಸ್ಸು ಹೂವಿನ ಹಾಗೆ ಇದ್ದು, ಅದನ್ನು ಉತ್ತಮ ರೀತಿಯಲ್ಲಿ ಸಮಾಜಕೆ ನೀಡುವುದರಲ್ಲಿ ಕನ್ನಡ ಶಾಲೆಗಳ ಪಾತ್ರ ಬಹಳ ಮುಖ್ಯವಾಗಿದೆ ಎಂದು ಎಸ್ ಡಿ ಎಮ್ ಸಿ ಅಧ್ಯಕ್ಷ ರಾಜಶೇಖರ ಪಾತಾಳಿ ಮಾತನಾಡಿದರು.ತಾಲೂಕಿನ ಹಿರೇಬೇವನೂರ ಗ್ರಾಮದ ಸರಕಾರಿ ಎಮ್ ಪಿ ಎಸ್ ಶಾಲೆಯ ೭ನೇ ವರ್ಗದ ವಿದ್ಯಾರ್ಥಿಗಳ ಬೀಳ್ಕೊಡುವ ಹಾಗೂ “ದೀಪದಾನ” ಸಮಾರಂಭದಲ್ಲಿ ಪ್ರತಿಜ್ಞಾವಿಧಿಯನ್ನು ಬೋಧಿಸಿ ಮಾತನಾಡತ್ತಿದ್ದರು.ಮುಖ್ಯ ಅತಿಥಿ ವೇ ದಯಾನಂದ ಹಿರೇಮಠ ಮಾತನಾಡಿದ ಅವರು, ಭವ್ಯ ಸಂಸ್ಕೃತಿಯ ಉಳಿವು ಕನ್ನಡ ಶಾಲೆಗಳಿಂದ ಮಾತ್ರ ಸಾಧ್ಯ.ಶಿಕ್ಷಕರು ಹಾಗೂ ಶಿಕ್ಷಣ ನಮ್ಮನ್ನು ಮನುಷ್ಯರನ್ನಾಗಿ ರೂಪಿಸುತ್ತಾರೆ. ನಾವು ಕಲಿತ ಶಿಕ್ಷಣ ಕೇವಲ ಹಣಗಳಿಕೆ ಮಾತ್ರವಲ್ಲದೆ, ಅದು ಉತ್ತಮ ಬದುಕು ಬದುಕಲಿಕ್ಕೆ ಸಹಕಾರಿಯಾದಾಗ ಮಾತ್ರ ಶಿಕ್ಷಣದ ಉದ್ದೇಶ ಈಡೇರುತ್ತದೆ, ಮಾತಪಿತರನ್ನು, ಪಾಲಕರನ್ನು ಗೌರವದಿಂದ ಕಾಣುವುದರ ಮೂಲಕ ನಾವು ಅವರ ಸೇವೆಯನ್ನು ಮಾಡಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.ಸಮಾರಂಭದ ಮುಖ್ಯ ಅತಿಥಿ…
ವಿಜಯಪುರ: ಜಿಲ್ಲಾ ಅಧ್ಯಕ್ಷರ ಸೂಚನೆ ಮೇರೆಗೆ ಬಿಜೆಪಿ ನಗರ ಮಂಡಲದ ಯುವ ಮೋರ್ಚಾ, ಎಸ್.ಸಿ ಮೋರ್ಚಾ ಹಾಗೂ ಎಸ್.ಟಿ ಮೋರ್ಚಾ ಈ ಕೆಳಕಂಡ ಮುಖಂಡರನ್ನು ಪದಾಧಿಕಾರಿಗಳನ್ನಾಗಿ ನೇಮಕ ಮಾಡಿ ನಗರ ಮಂಡಲ ಅಧ್ಯಕ್ಷ ಶಂಕರ ಹೂಗಾರ ಆದೇಶ ಹೊರಡಿಸಿದ್ದಾರೆ.ಯುವ ಮೋರ್ಚಾ: ಉಪಾಧ್ಯಕ್ಷರು ದತ್ತಾ ಗೋಲಾಂಡೆ, ಗವಿಸಿದ್ದೇಶ ಅವಟಿ, ರಾಹುಲ್ ಗುಪ್ತಾ, ನೀತಿನಕುಮಾರ ಹಳ್ಳಿ, ವಿಜಯಕುಮಾರ್ ಆಜೂರ, ಕಾರ್ಯದರ್ಶಿಗಳು ಬಸವಕುಮಾರ ಕಾಂಬಳೆ, ವಿಠ್ಠಲ ಗಾಯಕವಾಡ, ಅವಿನಾಶ ಮಹಿಂದ್ರಕರ, ಪ್ರೇಮಕುಮಾರ ಕಲಕುಟಗಿ, ಸಚೀನ ಘಾಟಗೆ, ಕೋಶಾಧ್ಯಕ್ಷರು ಗಿರೀಶ ಬಿರಾದಾರ.ಎಸ್.ಸಿ ಮೋರ್ಚಾ: ಉಪಾಧ್ಯಕ್ಷರು ಮಡಿವಾಳ ಯಾಳವಾರ, ಮಾನಸಿಂಗ್ ರಾಠೋಡ, ಕೃಷ್ಣ (ಅಪ್ಪು) ಅಲಕುಂಟೆ, ಬಸವರಾಜ ಕಾಂಬಳೆ, ಸುಖದೇವ ಗಾಯಕವಾಡ, ಕಾರ್ಯದರ್ಶಿಗಳು ಶ್ರೀಕಾಂತ ಗಚ್ಚಿನಮನಿ, ಪರಶುರಾಮ ಕುಂಚಿಕೋರವರ, ಕಿಶೋರ ಚವ್ಹಾಣ, ಈರಪ್ಪ ಚಲವಾದಿ (ವಾಲಿಕಾರ), ಅನೀಲ ಬಂಡಿವಡ್ಡರ, ಸದಾನಂದ ಗುನ್ನಾಪೂರ, ಕೋಶಾಧ್ಯಕ್ಷರು ಶ್ರೀಮಂತ ಚವ್ಹಾಣ.ಎಸ್.ಟಿ ಮೋರ್ಚಾ: ಉಪಾಧ್ಯಕ್ಷರು ಉಮೇಶ ಗೊಳಸಂಗಿ, ಕೆ.ಎಚ್.ವೀರಣ್ಣ, ಕೃಷ್ಣಾ ರಾಠೋಡ, ಅಪ್ಪಾಸಿ ಕೋಲಕಾರ, ಹಣಮಂತ ಜಕ್ಕಣ್ಣವರ, ಕಾರ್ಯದರ್ಶಿಗಳು ವಿಶಾಲ ರೋಹಿತೆ, ಸಂತೋಷ ತಟಗಾರ,…
ವಿಜಯಪುರ: ೧೧೦ಕೆ.ವ್ಹಿ ವಿದ್ಯುತ್ ವಿತರಣಾ ಕೇಂದ್ರದೇವರ ಹಿಪ್ಪರಗಿ- ಸಿಂದಗಿ ಕಂಡಕ್ಟರ್ ಮತ್ತು ಟವರ್ ಬದಲಾವಣೆ ಕಾಮಗಾರಿ ಕೈಗೊಂಡಿರುವುದರಿಂದ, ೧೧೦ ಕೆ.ವ್ಹಿ ಸಿಂದಗಿ ವಿದ್ಯುತ್ ವಿತರಣಾ ಕೇಂದ್ರದಿಂದ ಸರಬರಾಜು ಆಗುವ ೧೧ ಕೆವಿ ಸುಂಗಠಾಣ ಐಪಿ, ೧೧ ಕೆವಿ ಸಿಂದಗಿ ನಗರ ಫೀಡರ್ ನಂ-೧ ಹಾಗೂ ೧೧ ಕೆವಿ ಯಂಕಚಿ ಐಪಿ ಮಾರ್ಗಗಳಲ್ಲಿ ಮಾ.೧೭ರಂದು ಬೆಳಗ್ಗೆ ೧೦.೦೦ ರಿಂದ ಸಾಯಂಕಾಲ ೦೫.೦೦ ಘಂಟೆಯವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದ್ದು, ಸದರೀ ಮಾರ್ಗಗಳ ಮೇಲೆ ಬರುವಗ್ರಾಹಕರು ಹಾಗೂ ಸಾರ್ವಜನಿಕರು ಸಹಕರಿಸಬೇಕಾಗಿ ಹೆಸ್ಕಾಂನ ಕಾರ್ಯನಿರ್ವಾಹಕ ಅಭಿಯಂತರರು (ವಿ) ಹೆಸ್ಕಾಂ, ಇಂಡಿರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಜಯಪುರ: ಚಡಚಣ ತಾಲೂಕಿನ ಬರಡೋಲಾ ಗ್ರಾಮದ ಸರ್ಕಾರಿ ಉರ್ದು ಕಿರಿಯ ಪ್ರಾಥಮಿಕ ಶಾಲಾ ಶಿಕ್ಷಕಿಯಾದ ಬೀಬಿಆಯಿಶಾ ಅಬ್ದುಲ್‌ಅಜೀಬ್ ಖಾಜಿ ಅವರು ದಿನಾಂಕ ೩೧-೦೫-೨೦೨೩ರಿಂದ ಶಾಲಾ ಕರ್ತವ್ಯಕ್ಕೆ ಅನಧಿಕೃತ ಗೈರು ಆಗಿದ್ದು, ಅವರು ಈ ಕೂಡಲೇ ಕರ್ತವ್ಯಕ್ಕೆ ಹಾಜರಾಗುವಂತೆ ಚಡಚಣ ಕ್ಷೇತ್ರ ಶಿಕ್ಷಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಜಯಪುರ: ನಗರರ ಕೇಂದ್ರ ಕಾರಾಗೃಹದ ತೋಟದ ವಿಭಾಗದಲ್ಲಿರುವ ಹುಣಸೆಹಣ್ಣಿನ ಬಹಿರಂಗ ಹರಾಜು ಪ್ರಕ್ರಿಯೆ ಮಾ.೨೭ರಂದು ಬೆಳಗ್ಗೆ ೧೧ ಗಂಟೆಗೆ ನಡೆಯಲಿದೆ. ಆಸಕ್ತರು ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಬಹುದು. ಹೆಚ್ಚಿನ ಮಾಹಿತಿಗಾಗಿ ಕೇಂದ್ರ ಕಾರಾಗೃಹದ ಅಧೀಕ್ಷಕ ಕಾರ್ಯಲಯ (೯೪೮೦೮೦೬೪೯೦)ನ್ನು ಸಂಪರ್ಕಿಸಬಹುದು ಎಂದು ಕೇಂದ್ರ ಕಾರಾಗೃಹದ ಅದೀಕ್ಷಕರಾದ ಡಾ. ಐ.ಜೆ. ಮ್ಯಾಗೇರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಜಯಪುರ: ಮುಳವಾಡ ಏತನೀರಾವರಿ ಯೋಜನೆಯ ಕಾಲುವೆ ಮೂಲಕ ನೀರನ್ನು ಹರಿಸಿ, ತಿಡಗುಂದಿ ಶಾಖಾ ಕಾಲುವೆಯ ಅರಕೇರಿ ಲಿಫ್ಟ್ನಿಂದ ವಿಜಯಪುರ ಶಾಖಾ ಕಾಲುವೆಯ ಮೂಲಕ ಭೂತನಾಳ ಕೆರೆಗೆ ನೀರನ್ನು ತುಂಬಿಸಬೇಕಾಗಿದ್ದು, ನೀರು ಪೋಲಾಗದಂತೆ ಮತ್ತು ನಿಗದಿತ ಅಂತರವನ್ನು ತಲುಪುವುದಕ್ಕಾಗಿ ಕಾಲುವೆಯ ೧೦೦ ಅಡಿ ಸುತ್ತಮುತ್ತ ಮಾ.೨೩ರವರೆಗೆ ೧೪೪ ಸೆಕ್ಷನ್ ಜಾರಿ ಮಾಡಿ ಜಿಲ್ಲಾಧಿಕಾರಿ ಟಿ.ಭೂಬಾಲನ್ ಆದೇಶ ಹೊರಡಿಸಿದ್ದಾರೆ.
ವಿಜಯಪುರ: ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರ ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಲ್ಲಿ ರೂ.೫ ಲಕ್ಷ ಅನುದಾನದಲ್ಲಿ ವಾರ್ಡ ನಂ.೧೧ ರಲ್ಲಿ ಬರುವ ಶ್ರೀ ಹನುಮಾನ ದೇವಸ್ಥಾನ ಜಿರ್ಣೋದ್ಧಾರ ಕಾಮಗಾರಿಗೆ ಶನಿವಾರ ಭೂಮಿಪೂಜೆ ನೆರವೇರಿಸಲಾಯಿತು.ಮಹಾನಗರ ಪಾಲಿಕೆ ಸದಸ್ಯರಾದ ವಿಠ್ಠಲ ಹೊಸಪೇಟ, ಮುಖಂಡರಾದ ಅಶೋಕ ಬೆಲ್ಲದ, ಶಂಕರ ಚಲವಾದಿ, ರಮೇಶ ಪಡಸಲಗಿ, ಭೀಮಸಿ ತಳಕೇರಿ, ಮಹೇಶ ವಾಂಡಕರ, ಆನಂದ ಚೋರಗಿ, ರಾಜು ರಣದೇವಿ, ಅಶೋಕ ಹಂಚಿನಾಳ, ಪ್ರದೀಪ ಚಲವಾದಿ, ಸದಾಶಿವ, ದತ್ತು, ಶ್ರೀಧರ ದೇವರ ಮತ್ತಿತರರು ಇದ್ದರು.
ಕೆರೆಗೆ ಬಾಗಿನ ಅರ್ಪಣೆ | ಗ್ರಾಮಸ್ಥರ ಹರ್ಷ | ಶಾಸಕ ಮನಗೂಳಿ ಭರವಸೆ ಮೋರಟಗಿ: ಗ್ರಾಮದ ಕೆರೆ ಅಭಿವೃದ್ಧಿಪಡಿಸಲು ೨ ಕೋಟಿ ರೂ.ಅನುದಾನ ಮಂಜೂರು ಮಾಡಿಸಲಾಗುವುದು ಎಂದು ಸಿಂದಗಿ ಶಾಸಕ ಅಶೋಕ ಮನಗೂಳಿ ಹೇಳಿದರು.ಶನಿವಾರ ಗ್ರಾಮದ ೧೪ ಎಕರೆ ೨೬ ಗುಂಟೆ ವಿಶಾಲ ಕೆರೆಗೆ ನೀರು ಹರಿಸಿದ ಪ್ರಯುಕ್ತ ಶನಿವಾರ ಬಾಗಿನ ಅರ್ಪಿಸಿ ಅವರು ಮಾತನಾಡಿದರು.ಬೇಸಿಗೆಯಲ್ಲಿ ಗ್ರಾಮಸ್ಥರ ಕುಡಿವ ನೀರಿನ ಬವಣೆ ತಪ್ಪಿಸಲು ಕೆರೆಗೆ ನೀರು ಹರಿಸುವಂತೆ ಗ್ರಾಪಂ ಅಧಿಕಾರಿಗಳು ಹಾಗೂ ಹಿರಿಯರು ವಿನಂತಿಸಿದ್ದರು. ಅವರ ಕೋರಿಕೆಯಂತೆ ಕೆರೆ ತುಂಬಿಸಲು ಕ್ರಮ ಕೈಗೊಳ್ಳಲಾಗಿದೆ. ಕಂದಾಯ ಇಲಾಖೆ ಅಧಿಕಾರಿಗಳು, ತಹಸೀಲ್ದಾರ್, ಗ್ರಾಪಂ ಅಧಿಕಾರಿಗಳು ಕೆರೆ ತುಂಬಿಸಲು ಸಾಕಷ್ಟು ಶ್ರಮಿಸಿದ್ದಾರೆ. ಚುನಾವಣೆ ನಂತರ ಅನುದಾನ ಮಂಜೂರು ಮಾಡಿಸಿ ಕೆರೆಯ ನಾಲ್ಕು ಬದಿಗೆ ಒಡ್ಡು ಹಾಕಿ ಅಭಿವೃದ್ಧಿಪಡಿಸುವ ಜತೆಗೆ ಕೆರೆ ದಾರಿ ಡಾಂಬರೀಕರಣಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದರು.ಕರ್ನಾಟಕದ ೨೩೬ ತಾಲೂಕುಗಳಲ್ಲಿ ೨೧೪ ತಾಲೂಕುಗಳನ್ನು ಸರ್ಕಾರ ಬರ ಪೀಡಿತ ಎಂದು ಘೋಷಿಸಿದೆ. ಇಂಥ ಸ್ಥಿತಿಯಲ್ಲಿ ಗ್ರಾಮೀಣ ಭಾಗದ…
ಬಿಸಿ ಗಾಳಿಗೆ ಜನ ಹೈರಾಣ | ಧಗೆ ತಣಿಸಲು ಪಾನೀಯಗಳ ಮೊರೆ | ರಸ್ತೆಗೆ ಇಳಿಯಲು ಜನರು ಹಿಂದೇಟು – ಇಲಿಯಾಸ್ ಪಟೇಲ್ .ಬಯಾದಗಿರಿ: ಗಿರಿನಾಡು ಎಂದೇ ಹೆಸರುವಾಸಿಯಾಗಿರುವ ಯಾದಗಿರಿ ಜಿಲ್ಲೆಯಲ್ಲಿ ಈ ಬಾರಿಯೂ ಬಿಸಿಲಿನ ತಾಪಮಾನ ಹೆಚ್ಚಾಗಿದ್ದು, ಸೂರ್ಯ ಜನರ ನೆತ್ತಿ ಸುಡುವುದರ ಜೊತೆಗೆ ಮೈಬೆವರನ್ನು ಇಳಿಸುತ್ತಿದ್ದಾನೆ.ಬೇಸಿಗೆ ಬಿಸಿಯ ಉಷ್ಣಾಂಶ ಹೆಚ್ಚಳವಾಗಿರುವ ಹಿನ್ನೆಲೆ ಬೇಸಿಗೆಯಿಂದ ಜನರು ದಣಿವಾರಿಸಿ ಕೊಳ್ಳಲು ತಂಪು ಪಾನೀಯ ಹಾಗೂ ಎಳನೀರಿನ ಮೊರೆ ಹೋಗುತ್ತಿದ್ದು, ಅವುಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ.ಯಾದಗಿರಿ, ಶಹಾಪುರ, ಸುರಪುರ, ಹುಣಸಗಿ ಹೀಗೆ ಹಲವಾರು ಕಡೆಯ ಜನತೆ ರಣ ಬಿಸಿಲಿಗೆ ತತ್ತರಿಸಿ ಹೋಗಿದ್ದಾರೆ ಅಂತಾನೇ ಹೇಳಬಹುದು. ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಸೂರ್ಯನ ಧಗೆ ಜನರ ನೆತ್ತಿಸುಡುತ್ತಿದೆ. ಇದರಿಂದ ಜನರು ನಿತ್ರಾಣವಾಗಿ ದಾಹ ನೀಗಿಸಿಕೊಳ್ಳಲು ತಂಪು ಪಾನೀಯಗಳಾದ ಕಬ್ಬಿನ ಹಾಲು, ಎಳೆನೀರು, ಮಜ್ಜಿಗೆ, ನಿಂಬೆಹಣ್ಣಿನ ಜ್ಯೂಸ್ ಗಳಂತಹ ಪಾನೀಯಗಳ ಮೊರೆ ಹೋಗುತ್ತಿದ್ದಾರೆ.ಬಿಸಿಲಿನ ಜೊತೆಗೆ ಬಿಸಿ ಗಾಳಿಯೂ ಸಹ ಜನರನ್ನು ತತ್ತರಿಸುವಂತೆ ಮಾಡಿದೆ. ನಾಗರಿಕರು ಬಿಸಿಲಿನ ತಾಪಕ್ಕೆ ದಣಿವಾರಿಸಲು…
