ಇಂಡಿ: ಕನ್ನಡ ಭಾಷಾ ರಕ್ಷಣೆಗೆ ಕನ್ನಡ ಶಾಲೆಗಳು ಅಭಿವೃದ್ದಿ ಪಡಿಸುವುದು ಅತೀ ಮುಖ್ಯ. ಮಕ್ಕಳ ಮನಸ್ಸು ಹೂವಿನ ಹಾಗೆ ಇದ್ದು, ಅದನ್ನು ಉತ್ತಮ ರೀತಿಯಲ್ಲಿ ಸಮಾಜಕೆ ನೀಡುವುದರಲ್ಲಿ ಕನ್ನಡ ಶಾಲೆಗಳ ಪಾತ್ರ ಬಹಳ ಮುಖ್ಯವಾಗಿದೆ ಎಂದು ಎಸ್ ಡಿ ಎಮ್ ಸಿ ಅಧ್ಯಕ್ಷ ರಾಜಶೇಖರ ಪಾತಾಳಿ ಮಾತನಾಡಿದರು.
ತಾಲೂಕಿನ ಹಿರೇಬೇವನೂರ ಗ್ರಾಮದ ಸರಕಾರಿ ಎಮ್ ಪಿ ಎಸ್ ಶಾಲೆಯ ೭ನೇ ವರ್ಗದ ವಿದ್ಯಾರ್ಥಿಗಳ ಬೀಳ್ಕೊಡುವ ಹಾಗೂ “ದೀಪದಾನ” ಸಮಾರಂಭದಲ್ಲಿ ಪ್ರತಿಜ್ಞಾವಿಧಿಯನ್ನು ಬೋಧಿಸಿ ಮಾತನಾಡತ್ತಿದ್ದರು.
ಮುಖ್ಯ ಅತಿಥಿ ವೇ ದಯಾನಂದ ಹಿರೇಮಠ ಮಾತನಾಡಿದ ಅವರು, ಭವ್ಯ ಸಂಸ್ಕೃತಿಯ ಉಳಿವು ಕನ್ನಡ ಶಾಲೆಗಳಿಂದ ಮಾತ್ರ ಸಾಧ್ಯ.
ಶಿಕ್ಷಕರು ಹಾಗೂ ಶಿಕ್ಷಣ ನಮ್ಮನ್ನು ಮನುಷ್ಯರನ್ನಾಗಿ ರೂಪಿಸುತ್ತಾರೆ. ನಾವು ಕಲಿತ ಶಿಕ್ಷಣ ಕೇವಲ ಹಣಗಳಿಕೆ ಮಾತ್ರವಲ್ಲದೆ, ಅದು ಉತ್ತಮ ಬದುಕು ಬದುಕಲಿಕ್ಕೆ ಸಹಕಾರಿಯಾದಾಗ ಮಾತ್ರ ಶಿಕ್ಷಣದ ಉದ್ದೇಶ ಈಡೇರುತ್ತದೆ, ಮಾತಪಿತರನ್ನು, ಪಾಲಕರನ್ನು ಗೌರವದಿಂದ ಕಾಣುವುದರ ಮೂಲಕ ನಾವು ಅವರ ಸೇವೆಯನ್ನು ಮಾಡಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ಸಮಾರಂಭದ ಮುಖ್ಯ ಅತಿಥಿ ದಯಾನಂದ ಹಿರೇಮಠ, ಸೋಮಶೇಖರ್ ಪಾತಾಳಿ, ಆರ್ ಡಿ ಪಾಟೀಲ,ಬಿ ಎಸ್ ಭಾಸಗಿ, ಶರಣಪ್ಪ ನಾವಿ” ಭಾಗವಹಿಸಿದ್ದರು.
ಮುಖ್ಯ ಗುರು ಆರ್ ಸಿ ರಾಠೋಡ್ ಸಹಶಿಕ್ಷಕರು ಹಾಗೂ ಮಕ್ಕಳು ಉಪಸ್ಥಿತರಿದ್ದರು. ಸ್ವಾಗತ ಎನ್ ಎಲ್ ಹಚಡದ, ನಿರೂಪಣೆ ಶಿವುಕುಮಾರ ಕೌಲಗಿ, ಯು ಬಿ ಬಜಂತ್ರಿ ವಂದಿಸಿದರು.
Subscribe to Updates
Get the latest creative news from FooBar about art, design and business.
Related Posts
Add A Comment

