ಹೊನ್ನಳ್ಳಿಯಲ್ಲಿ ಜೆಜೆಎಂ ಕಾಮಗಾರಿಗೆ ಭೂಮಿಪೂಜೆ ಸಲ್ಲಿಸಿದ ಗ್ರಾಪಂ ಅಧ್ಶಕ್ಷ ಸಂಗನಗೌಡ ಅಭಿಮತ
ಬ್ರಹ್ಮದೇವನಮಡು: ಗ್ರಾಮೀಣ ಪ್ರದೇಶದ ಜನರಿಗೆ ಸಮಪ೯ಕ ಕುಡಿಯುವ ನೀರು ಪೂರೈಸುವ ಮಹತ್ತರ ಯೋಜನೆಯನ್ನು ಕೇಂದ್ರ ಹಾಗೂ ರಾಜ್ಶ ಸರಕಾರ ಜಾರಿಗೊಳಿಸಿದ್ದು, ಪ್ರತಿಯೊಬ್ಬರೂ ಅದರ ಸದುಪಯೋಗ ಪಡೆಯಬೇಕು ಎಂದು ಗ್ರಾಪಂ ಅಧ್ಶಕ್ಷ ಸಂಗನಗೌಡ ಬಿರಾದಾರ (ಕರವಿನಾಳ) ಹೇಳಿದರು.
ಸಿಂದಗಿ ತಾಲೂಕಿನ ಹೊನ್ನಳ್ಳಿ ಗ್ರಾಮದಲ್ಲಿ ೧ ಕೋಟಿ ೪ ಲಕ್ಷ ರೂ.ವೆಚ್ಚದ ಜಲ ಜಿವನ ಮಿಷನ್ ಯೋಜನೆ ಕಾಮಗಾರಿಗೆ ಶನಿವಾರ ಭೂಮಿಪೂಜೆ ಅವರು ಮಾತನಾಡಿದರು.
ಈ ಯೋಜನೆಯ ಮೂಲಕ ಗ್ರಾಮೀಣ ಭಾಗದಲ್ಲಿನ ಪ್ರತಿಯೊಂದು ಮನೆಗೂ ನೀರಿನ ಸೌಲಭ್ಶ ಕಲ್ಪಿಸಲಾಗುವುದು. ೨೦೨೨-೨೩ನೇ ಸಾಲಿನ ಕೇಂದ್ರ ಹಾಗೂ ರಾಜ್ಶ ಸರಕಾರದ ಮಹತ್ವಾಕಾಂಕ್ಷೆ ಯೋಜನೆಯಾದ ಜಲ ಜಿವನ ಮಿಷನ್ ಯೋಜನೆಯಡಿ ಪ್ರತಿ ಮನೆಗೆ ನಳ ಸಂಪಕ೯ ಕಲ್ಪಿಸಿ ನೀರಿನ ಸಮಸ್ಶೆ ನಿವಾರಿಸಲಾಗುವುದು ಎಂದರು.
ಈ ವೇಲೆ ನಾಯ್ಕೋಡಿ, ಯುವ ಮುಖಂಡ ಹಣಮಂತ್ರಾಯಗೌಡ ಬಿರಾದಾರ, ಬಸನಗೌಡ ಉಳ್ಳೆಸೂರ, ಡಾ.ಎನ್.ಪಿ.ನಾಯ್ಕೋಡಿ, ಹೊಬು ಚವ್ಹಾಣ, ಹಿರೆಮಾನ ಚವ್ಹಾಣ, ಸಲಿವ್ಹಾಣ. ಮೇಲಿನಮನಿ, ಪ್ರಭಾಕರ ಪತ್ತಾರ, ಕೆ.ಬಿ.ಮನಗೂಳಿ, ಸುರೇಶ ಕೆಂಭಾವಿ, ಮರೆಪ್ಪ ಚಲುವಾದಿ, ಅನೀಲ ಖಾನಾಪೂರ, ದಸ್ತಗೀರಬಾಷಾ ಇದ್ದರು.

