Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಬಸವನಬಾಗೇವಾಡಿ: ತಾಲೂಕಿನ ಹೂವಿನಹಿಪ್ಪರಗಿ ಗ್ರಾಮದ ಸಾಹಿತಿ ಭೀಮರಾಯ ಹೂಗಾರ ಅವರು ರಚಿಸಿರುವ ಸಾಹಿತ್ಯ ಸಮ್ಮೇಳನ ಹೇಗಿರಬೇಕು, ಲಕ್ಷ ನುಡಿಮುತ್ತುಗಳು ಎಂಬ ಪುಸ್ತಕಗಳು ಮಾ.೨೩ ಮತ್ತು ೨೪ ರಂದು ವಿಜಯಪುರದಲ್ಲಿ ನಡೆಯಲಿರುವ ಜಿಲ್ಲಾ ೧೯ ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಲೋಕಾರ್ಪಣೆಯಾಗಲಿವೆ. ಕಳೆದ ೨೫ ವರ್ಷಗಳಿಂದ ಸಾಹಿತ್ಯ ಕೃಷಿ ಮಾಡುತ್ತಿರುವ ಭೀಮರಾಯ ಹೂಗಾರ ಅವರು ೪೦ ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಒಂದು ಲಕ್ಷ ನುಡಿಮುತ್ತುಗಳನ್ನು ಒಳಗೊಂಡ ಪುಸ್ತಕವನ್ನು ಸಾವಿರಾರು ಜನರಿಗೆ ಭೀಮರಾಯ ಹೂಗಾರ ಅವರು ಅಂಚೆಮೂಲಕ ಕಳುಹಿಸಿಕೊಟ್ಟಿದ್ದಾರೆ.ಜಿಲ್ಲಾ ೧೯ ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ನನ್ನ ಸಾಹಿತ್ಯ ಸಮ್ಮೇಳನ ಹೇಗಿರಬೇಕು ಎಂಬ ವಿನೂತನ ಪುಸ್ತಕ ಬಿಡುಗಡೆ ಮಾಡಲು ಕಸಾಪ ತಾಲೂಕಾಧ್ಯಕ್ಷ, ಜಿಲ್ಲಾ ಕಸಾಪ ಅಧ್ಯಕ್ಷರು ಅವಕಾಶ ನೀಡುತ್ತಿರುವುದು ಸಂತಸ ತಂದಿದೆ ಎಂದು ಸಾಹಿತಿ ಭೀಮರಾಯ ಹೂಗಾರ ಹೇಳಿದರು.
ವಿಜಯಪುರ: ಇಂಡಿ ವಿಭಾಗದ ೩೩/೧೧ ಕೆವಿ ತಾಂಬಾ ಉಪಕೇಂದ್ರದಲ್ಲಿ ಸಿಟಿ ಬದಲಾವಣೆಯ ತುರ್ತು ನಿರ್ವಹಣೆ ಕಾಮಗಾರಿ ನಡೆಯುತ್ತಿರುವುದರಿಂದ ಮಾ.೨೧ ರಂದು ಬೆಳಗ್ಗೆ ೧೦ರಿಂದ ಸಂಜೆ ೫ ಘಂಟೆಯ ವರೆಗೂ ೩೩/೧೧ ಕೆವಿ ತಾಂಬಾ ಉಪಕೇಂದ್ರದಿಂದ ಹೊರಡುವ ೧೧ ಕೆವಿ ಮಾರ್ಗಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಆದ ಕಾರಣ ಸದರಿ ಮಾರ್ಗಗಳಲ್ಲಿ ಬರುವ ಸಾರ್ವಜನಿಕರು, ಗ್ರಾಹಕರು ಸಹಕರಿಸಬೇಕು ಎಂದು ಇಂಡಿ ಕಾರ್ಯ ನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಜಯಪುರ: ಲೋಕಸಭೆ ಚುನಾವಣೆಗಾಗಿ ಜಿಲ್ಲೆಯಲ್ಲಿ ಮತದಾನದ ಶೇಕಡವಾರು ಪ್ರಮಾಣ ಹೆಚ್ಚಿಸಲು ಮತದಾನ ಜಾಗೃತಿಯ ವಿವಿಧ ಚಟುವಟಿಕೆಗಳನ್ನು ಕೈಗೊಳ್ಳಬೇಕು ಎಂದು ಜಿಲ್ಲಾ ಸ್ವೀಪ್ ಸಮಿತಿಯ ಅಧ್ಯಕ್ಷರೂ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಕ ಅಧಿಕಾರಿ ರಿಶಿ ಆನಂದ ತಿಳಿಸಿದರು.ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಇಂದು ನಡೆದ ಜಿಲ್ಲಾ ಸ್ವೀಪ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮತದಾನವನ್ನು ಪಾರದರ್ಶಕವಾಗಿ ಹಾಗೂ ವ್ಯವಸ್ಥಿತವಾಗಿ ನಡೆಸುವಂತೆ ಮತ್ತು ಮತದಾನದ ಪ್ರಾಮುಖ್ಯತೆಯನ್ನು ಅರಿಯುವಂತೆ ಮಾಡಲು ಸ್ವೀಪ್ ಸಮಿತಿ ಕಾರ್ಯನ್ಮೋಖವಾಗಬೇಕು. ಕಡಿಮೆ ಮತದಾನ ಆಗಿರುವ ಬೂತ್‌ಗಳನ್ನು ಗುರುತಿಸಿ ಮತದಾನ ಪ್ರಮಾಣ ಹೆಚ್ಚಳ ಮಾಡುವಂತೆ ಎಲ್ಲಾ ಇಲಾಖೆಯ ಅಧಿಕಾರಿಗಳು ಆಧ್ಯತೆ ನೀಡಿ ಸಮನ್ವಯದಿಂದ ಕಾರ್ಯನಿರ್ವಹಿಸಬೇಕು. ದುಡಿಯಲು ಬೇರೆ ಜಿಲ್ಲೆ, ರಾಜ್ಯಕ್ಕೆ ವಲಸೆ ಹೋಗಿರುವವರನ್ನು ಗುರುತಿಸಿ ಅವರು ಕೂಡಾ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಲು ಪ್ರೇರೇಪಿಸಬೇಕು ಎಂದರು.ಆಸ್ಪತ್ರೆ, ಬಸ್ ನಿಲ್ದಾಣ, ಶಾಲಾ-ಕಾಲೇಜು ಸಾರ್ವಜನಿಕ ಸ್ಥಳಗಳಲ್ಲಿ ಮತದಾನದ ಮಹತ್ವ ಸಾರುವ ಭಿತ್ತಿಪತ್ರ ಪ್ರದರ್ಶಿಸಬೇಕು. ಮತದಾನದ ಪ್ರಮಾಣ ಗಣನೀಯವಾಗಿ ಹೆಚ್ಚಿಸಲು ಸಾರ್ವಜನಿಕರಿಗೆ ಮತದಾನದ ಮಹತ್ವ ತಿಳಿಸಲು…
ಮೋರಟಗಿ: ಮಾನವ ಎಷ್ಟು ವರ್ಷ ಬದುಕಿದ್ದಾನೆ ಎನ್ನುವುದು ಮುಖ್ಯವಲ್ಲ, ಎಷ್ಟು ಸದೃಡ ಮತ್ತು ಆರೋಗ್ಯವಾಗಿ ಬದುಕುತ್ತಾನೆ ಎನ್ನುವುದು ಮುಖ್ಯ. ಆರೋಗ್ಯ ಭಾಗ್ಯಕಿಂತ ಇನ್ನೊಂದು ಭಾಗ್ಯವಿಲ್ಲ, ಸುಖಿಕರ ಜೀವನಕ್ಕೆ ಅರೋಗ್ಯವೇ ಭಾಗ್ಯ ಎಂದು ಡಾ.ಮಂಜುನಾಥ್ ಟಿ.ಡಿ ಹೇಳಿದರು.ತಾಲೂಕಿನ ಮೋರಟಗಿ ಗ್ರಾಮದ ಸಮುದಾಯ ಅರೋಗ್ಯ ಕೇಂದ್ರದಲ್ಲಿ ಜುವಾರಿ ಫರ್ಮ್ ಹಬ್ ಲಿಮಿಟೆಡ್ ಜೈಕಿಸಾನ್ ಜಂಕ್ಷನ್ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ ಉಚಿತ ಅರೋಗ್ಯ ಶಿಬಿರ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.ಅರೋಗ್ಯದಿಂದ ಜೀವನ ಕಳೆಯುವ ಒಬ್ಬ ಸಾಮಾನ್ಯ ವ್ಯಕ್ತಿ ಜೀವನದಲ್ಲಿ ಏನನ್ನಾದರೂ ಸಾಧಿಸಬಹುದು. ಅನಾರೋಗ್ಯಕ್ಕೆ ತುತ್ತಾದರೆ ನೆಮ್ಮದಿಯ ಜೀವನ ಕಳೆಯಲು ಸಾಧ್ಯವಿಲ್ಲ. ಸಾರ್ವಜನಿಕರು ಆದಷ್ಟು ಆರೋಗ್ಯದ ಕಡೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಮಕ್ಕಳನ್ನು ದುಶ್ಚಟಗಳಿಂದ ದೂರವಿಡಬೇಕು. ತಮ್ಮೆಲ್ಲರ ಅರೋಗ್ಯ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಸರಕಾರ ಹತ್ತು ಹಲವಾರು ಯೋಜನೆಗಳು ಉಚಿತವಾಗಿ ನೀಡುತ್ತಿದೆ. ಅದರ ಸದುಪಯೋಗವನ್ನು ಸಾರ್ವಜನಿಕರು ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.ಈ ವೇಳೆ ನುರಿತ ವೈದ್ಯರಿಂದ ರಕ್ತ, ಬಿಪಿ, ಶುಗರ್ ಹಾಗೂ ಕಣ್ಣಿನ ತಪಾಸಣೆಯನ್ನು ೨೦೦ಕ್ಕೂ ಅಧಿಕ ಜನರಿಗೆ…
ಸಿಂದಗಿ: ಈ ಬಾರಿ ರಾಜ್ಯದಲ್ಲಿ ಭರದ ಛಾಯೆ ಮೂಡಿದೆ. ದನ ಕರುಗಳಿಗೆ ಮೇವಿನ ಅವಶ್ಯಕತೆಯಿದೆ ಎಂದು ಶ್ರೀ ಸಂಗಮೇಶ್ವರ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘದ ಅಧ್ಯಕ್ಷ ಶರದ ನಾಡಗೌಡ ಹೇಳಿದರು.ಪಟ್ಟಣದ ಸಂಗಮೇಶ್ವರ ದೇವಾಸ್ಥಾನ ಹಿಂದುಗಡೆ ಇರುವ ಶ್ರೀಕೃಷ್ಣಾ ಗೋರಕ್ಷಾ ಕೇಂದ್ರಕ್ಕೆ ಮೇವು ದೇಣಿಗೆ ನೀಡಿ ಮಾತನಾಡಿದ ಅವರು, ಈ ಬಾರಿ ಭೀಕರ ಬರಗಾಲ ಎದುರಾಗಿದೆ. ಮಾನವನಿಗೆ ಮಾತನಾಡಲೂ ಬಾಯಿ ಇದೆ. ಆದರೆ ಮುಖ ಪ್ರಾಣಿಗಳಿಗೆ ಹೇಳಲು ಬಾಯಿಲ್ಲ. ಅವುಗಳಿಗೆ ಮೇವು ದೇಣಿಗೆ ನೀಡುವುದು ನಮ್ಮ ಕರ್ತವ್ಯ. ಇರುವವರು ಆದಷ್ಟೂ ಮೇವು ದೇಣಿಗೆ ನೀಡಿ ಗೋವುಗಳನ್ನು ಸಂರಕ್ಷಿಸಿ ಎಂದರು.ಈ ವೇಳೆ ಶ್ರೀಕೃಷ್ಣಾ ಗೋರಕ್ಷಾ ಕೇಂದ್ರ ಸಂಚಾಲಕ ರಾಕೇಶ ಮಠ, ಸಂಘದ ಉಪಾಧ್ಯಕ್ಷ ಡಾ.ಗಿರೀಶ ಕುಲಕರ್ಣಿ, ಕಾರ್ಯದರ್ಶಿ ಮುತ್ತು ಪಟ್ಟಣಶೆಟ್ಟಿ, ಸದಸ್ಯರಾದ ರಾಜೀವ ಬೈರಿ, ಡಾ.ಸುನೀಲ ಪಾಟೀಲ, ಅನೀಲ ಪಟ್ಟಣಶೆಟ್ಟಿ, ಶಿವು ವಾರದ, ನವೀನ ಶಹಾಪೂರ, ಪ್ರಕಾಶ ಹಿರೇಕುರುಬರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಸಿಂದಗಿ: ಬಸವಣ್ಣನವರ ತತ್ವಾದರ್ಶಗಳು, ಮೌಲ್ಯಗಳು ವಿದ್ಯಾರ್ಥಿಗಳು ಜೀವನದಲ್ಲಿ ಅಳವಡಿಸಿಕೊಳ್ಳಿ ಎಂದು ಪ್ರಚಾರ್ಯ ಎಂ.ಎಸ್.ಹೈಯಾಳಕರ ಹೇಳಿದರು.ಪಟ್ಟಣದ ಶ್ರೀಪದ್ಮರಾಜ ಮಹಿಳಾ ಪಪೂ ಕಾಲೇಜಿನಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ತಾಲೂಕು ಘಟಕ ಸಿಂದಗಿ ವತಿಯಿಂದ ಹಮ್ಮಿಕೊಂಡ ದತ್ತಿ ಉಪನ್ಯಾಸ ಕಾರ್ಯಕ್ರಮವನ್ನು ಬಸವಣ್ಣನವರ ಭಾವಚಿತ್ರಕ್ಕೆ ಪುಷ್ಪಾರ್ಷನೆ ಮಾಡುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಧಾರ್ಮಿಕ, ಆರ್ಥಿಕ ಸಾಮಾಜಿಕ ಕ್ರಾಂತಿಯಿಂದ ಬಸವಣ್ಣನವರು ಹೆಸರುವಾಸಿಯಾದರು. ಬಸವಣ್ಣ ಜನ್ಮವೆತ್ತುವ ಸಮಯದಲ್ಲಿ ಕ್ರಾಂತಿ ಮಾಡಿರುವುದು ಒಂದು ಇತಿಹಾಸ. ಬಸವ ಧರ್ಮ ಜಗತ್ತಿನ ಯಾವ ದೇಶದಲ್ಲಿಯೂ ದೊರೆಯುದಿಲ್ಲ. ಸ್ತ್ರೀಯರಿಗೆ ಸಮಾನ ಅವಕಾಶ ಕಲ್ಪಿಸಿಕೊಟ್ಟಿದ್ದೇ ಬಸವಣ್ಣ. ಮಕ್ಕಳು ವಚನಗಳನ್ನು ಪಠಣ ಮಾಡುವುದರ ಜೊತೆಗೆ ಸಾರಾಂಶವನ್ನು ತಿಳಿದುಕೊಳ್ಳುವುದು ಮುಖ್ಯವಾಗಿದೆ. ಸಮ ಸಂಸ್ಕೃತಿ ಸಮಾಜ ಲಿಂಗಾಯತ ಧರ್ಮ ಇದು ವಿಶ್ವಧರ್ಮವಾಗಬೇಕು. ಇದರ ಜವಾಬ್ದಾರಿ ಇಂದಿನ ಯುವಕರ ಮೇಲಿದೆ ಎಂದರು.ಈ ವೇಳೆ ಉಪನ್ಯಾಸ ನೀಡಲು ಆಗಮಿಸಿದ ಎಚ್.ಜಿ.ಕಾಲೇಜಿನ ಉಪನ್ಯಾಸಕಿ ಮುಕ್ತಾಯಕ್ಕ ಕತ್ತಿ ಮಾತನಾಡಿ, ಬಸವಣ್ಣನವರು ಅನುಭವ ಮಂಟಪದ ಮೂಲಕ ಪ್ರಜಾಪ್ರಭುತ್ವದ ಬುನಾದಿ ಹಾಕಿದವರು. ಜಾತ್ಯಾತೀತ, ವರ್ಗ ರಹಿತ…
ವಿಜಯಪುರ: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ಯಾಪ್ತಿಯ ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಅಧ್ಯಕ್ಷರಾಗಿ ಸಿಂದಗಿಯ ಹಿರಿಯ ಸಾಹಿತಿ, ಕಥೆಗಾರ, ನಿವೃತ್ತ ಪ್ರಾಚಾರ್ಯ ಡಾ. ಚನ್ನಪ್ಪ ಕಟ್ಟಿ ಹಾಗೂ ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯರಾಗಿ ಆಯ್ಕೆಯಾದ ಜಾನಪದ ವಿದ್ವಾಂಸ, ನಿವೃತ್ತ ಪ್ರಾಧ್ಯಾಪಕ ಡಾ.ಎಂ.ಎಂ.ಪಡಶೆಟ್ಟಿ ಅವರನ್ನು ಶಾಸಕ ಅಶೋಕ ಮನಗೂಳಿ ಸನ್ಮಾನಿಸಿ ಗೌರವಿಸಿದರು.ಈ ವೇಳೆ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಹಾಗೂ ಮೇಲ್ವಿಚಾರಣೆಯ ಸದಸ್ಯ ರವಿರಾಜ್ ದೇವರಮನಿ, ರವಿ ಗೋಲಾ, ಚನ್ನು ಪಡಶೆಟ್ಟಿ ಸೇರಿದಂತೆ ಅನೇಕರು ಇದ್ದರು
ಸಿಂದಗಿ: ಸಿಂದಗಿಯ ಮಾನವೀಯತೆಗೆ ಹೊಸ ಭಾಷೆ ಬರೆದ ಸಿಂದಗಿಯ ಸಿರಿ ಶಾಂತವೀರ ಪಟ್ಟಾಧ್ಯಕ್ಷರ ಬದುಕೇ ಒಂದು ಇತಿಹಾಸ ಎಂದು ಯಂಕಂಚಿ ಹಿರೇಮಠದ ಶ್ರೀ ಅಭಿನವ ರುದ್ರಮನಿ ಶಿವಾಚಾರ್ಯರು ಹೇಳಿದರು.ಪಟ್ಟಣದ ಊರಿನ ಹಿರಿಯಮಠದಲ್ಲಿ ಗುರುವಾರ ನಡೆದ ಲಿಂ.ಶ್ರೀ ಶಾಂತವೀರ ಪಟ್ಟಾಧ್ಯಕ್ಷರ ೪೪ನೆಯ ಪುಣ್ಯ ಸ್ಮರಣೋತ್ಸವ ಮತ್ತು ಗದುಗಿನ ತೋಂಟದಾರ್ಯ ಮಠದ ಲಿಂ.ಡಾ.ಸಿದ್ದಲಿಂಗ ಶ್ರೀಗಳ ೬ನೆಯ ಗುರು ಸ್ಮರಣೆ ಕಾರ್ಯಕ್ರಮದಲ್ಲಿಂ ಯುವ ಸಾಹಿತಿ ರೇಣುಕಾಚಾರ್ಯ ಹಿರೇಮಠ ಅವರ ಸಾಹಿತ್ಯದಲ್ಲಿ ಅಂತರಾಷ್ಟ್ರೀಯ ಹಿಂದೂಸ್ತಾನಿ ಸಂಗೀತ ಕಲಾವಿದ ಪಂ.ಶರಣ್ ಚೌಧರಿ ಅವರ ಸಂಗೀತ ನಿರ್ದೇಶನದ ಹಾಗೂ ಪಂಡಿತ ರಾಘವೇಂದ್ರ ಜೋಷಿ ಅವರ ಸಂಗೀತ ಸಂಯೋಜನೆಯಲ್ಲಿ ಮೂಡಿ ಬಂದ ’ಸಿಂದಗಿಯ ಶ್ರೀರಕ್ಷೆ’ ಎನ್ನುವ ಭಕ್ತಿಗೀತೆಯನ್ನು ಲೋಕಾರ್ಪಣೆ ಮಾಡಿ ಮಾತನಾಡಿದರು.ಈ ವೇಳೆ ಬೆಂಗಳೂರಿನ ಅಂತರಾಷ್ಟ್ರೀಯ ಹಿಂದುಸ್ತಾನಿ ಕಲಾವಿದ ಪಂ.ಶರಣ್ ಚೌಧರಿ, ತಬಲಾ ವಾದಕ ಪಂ.ರಾಘವೇಂದ್ರ ಜೋಷಿ, ಯುವ ಸಾಹಿತಿ ರೇಣುಕಾಚಾರ್ಯ ಹಿರೇಮಠ, ಹಾಸ್ಯ ಕಲಾವಿದ ಪ್ರಶಾಂತ ಚೌಧರಿ, ಡಾ.ಪ್ರಕಾಶ ರಾಗರಂಜನಿ, ಪೂಜಾ ಹಿರೇಮಠ ಅವರಿಗೆ ಶ್ರೀಮಠದಿಂದ ಗೌರವಿಸಲಾಯಿತು.ನಂತರ ರಾಗರಂಜನಿ ಸಂಗೀತ…
ಇಂಡಿ: ಮಹಾದೇವ ಬೈರಾಮಡಗಿ ಅವರು ಕೇವಲ ಶಿಕ್ಷಕರಾಗಿ ಸೇವೆ ಸಲ್ಲಿಸದೆ, ಇಡೀ ಮನುಕುಲದ ಬಗ್ಗೆ ಅತ್ಯಂತ ಕಾಳಜಿ ಸೇವಕರಾಗಿ ಕಾರ್ಯ ನಿರ್ವಹಿಸಿದ್ದಾರೆಂದು ತಳವಾರ ಪರಿವಾರ ಸಮಾಜ ಸೇವಾ ಸಂಘದ ಪ್ರಧಾನ ಕಾರ್ಯದರ್ಶಿ ಹುಚ್ಚಪ್ಪ ತಳವಾರ ಹೇಳಿದರು.ರವಿವಾರ ಪಟ್ಟಣದ ಎನ್ ಎ ಸಿ ಸಹಕಾರಿ ಸಂಘದ ಸಭಾಭವನದಲ್ಲಿ ಶಿಕ್ಷಕ ಮಹಾದೇವ ಬೈರಾಮಡಗಿ ಅವರ ಹೃದಯ ಪೂರ್ವಕ ನಮನ ಕಾರ್ಯಕ್ರಮದಲ್ಲಿ ಮಾತನಾಡಿದರು.ಶಿಕ್ಷಕ ಮಹಾದೇವ ಬೈರಾಮಡಗಿ ಅವರ ಅಕಾಲಿಕ ನಿಧನ ಸಮುದಾಯ, ಸಮಾಜಕ್ಕೆ ದೊಡ್ಡ ಪ್ರಮಾಣದ ಹಾನಿಯಾಗಿದೆ. ಅವರು ಅತ್ಯಂತ ಸರಳ ಸಜ್ಜನಿಕೆ ನಿಸ್ವಾರ್ಥ ಸೇವೆ ಮಾಡುತ್ತಿದ್ದರು.ನ್ಯಾಯವಾದಿ ಎಸ್.ಬಿ. ಕೆಂಬೋಗಿ, ಪತ್ರಕರ್ತ ಶಂಕರಲಿಂಗ ಜಮಾದಾರ ಮಾತನಾಡಿದರು.ಈ ಸಂದರ್ಭದಲ್ಲಿ ಮಹಾಂತೇಶ ಬಡದಾಳ, ಮಲ್ಲಿಕಾರ್ಜುನ ಹೊರ್ತಿ, ಡಾ. ಸುರೇಶ ವಿಜಯಪುರ, ಜಟ್ಟಿಂಗರಾಯ ತಳವಾರ, ಸೋಮು ಜಮಾದಾರ, ಶಿಕ್ಷಕ ಬಿ ಎನ್ ಜಮಾದಾರ, ಆರ್.ಜ. ಗಬ್ಬೂರ, ಆರ್ ಕೆ ವಾಲಿಕಾರ, ಈರಣ್ಣ ಜಮಾದಾರ, ಸುರೇಶ್ ಡೊಂಗ್ರೊಜ, ರವಿ ರಾಯಜಿ, ಎಸ್ ಐ ಕೋಳಿ, ಅರವಿಂದ ದೊಡಮನಿ, ವಿಶ್ವನಾಥ ಮಣಗಿರಿ, ಸುನೀಲ…
ಇಂಡಿ: ಉತ್ತರ ಕರ್ನಾಟಕದ ಬಹುತೇಕ ಬಯಲು ಸೀಮೆ ಭೂಮಿಯಲ್ಲಿ ಕಬ್ಬು ಇಳುವರಿ ಹೆಚ್ಚಿಗೆ ಮತ್ತು ಉತ್ಕೃಷ್ಟತೆಯಿಂದ ಬರುತ್ತದೆ. ರೈತರು ಹೆಚ್ಚು ಕಬ್ಬು ಬೆಳೆ ಬೆಳೆಯಲು ಮುಂದಾಗಬೇಕು. ಕೃಷಿ ಇಲಾಖೆ ಯೋಜನೆಯಡಿ ಕಬ್ಬು ಬೆಳೆಯಲು ಅನೇಕ ಅನುಕೂಲತೆ ಇದೆ. ಇದರ ಪ್ರಯೋಜನ ಪಡೆಯಬೇಕು ಎಂದು ಅಥರ್ಗಾ ಗುರುದೇವ ಆಶ್ರಮದ ಈಶ ಪ್ರಸಾದ ಶ್ರೀಗಳು ಹೇಳಿದರು.ತಾಲೂಕಿನ ಬೆನಕನಹಳ್ಳಿ ಗ್ರಾಮದ ರಾಜಶೇಖರ ನಿಂಬರಗಿ ಇವರ ತೋಟದ ವಸ್ತಿಯಲ್ಲಿ ನಡೆದ ಒಂದು ಎಕರೆಗೆ ಕಬ್ಬು ೧೦೦ ಟನ್ ಇಳುವರಿ ಮತ್ತು ಸುಧಾರಿತ ನಿಂಬೆ ಬೆಳೆಯ ಕುರಿತು ನಡೆದ ವಿಚಾರ ಸಂಕೀರಣದಲ್ಲಿ ಮಾತನಾಡಿದರು.ಮಹಾಲಿಂಗಪುರ ರೋಹಣಿ ಬಯೋಟೆಕ್ ಎಂ.ವಾಯ್. ಕಟ್ಟಿಯವರು ಮಾತನಾಡಿ, ಕಬ್ಬು ಬೆಳೆ ಸಾಗಿಸಲು ತಾಲೂಕಿನಲ್ಲಿ ಮತ್ತು ಜಿಲ್ಲೆಯಲ್ಲಿ ಸಾಕಷ್ಟು ಕಾರ್ಖಾನೆಗಳಿವೆ. ಹೀಗಾಗಿ ಉತ್ತಮ ತಳಿಯ ಬೀಜಗಳನ್ನು ಪಡೆದು ಉತ್ತಮ ರೀತಿಯಲ್ಲಿ ಬೆಳೆ ಬೆಳೆದರೆ ಅಧಿಕ ಇಳುವರಿ ಸಾದ್ಯ ಎಂದ ಅವರು, ಮಹಾಲಿಂಗಪುರದಲ್ಲಿ ಸಿಗುವ ತಳಿಯಿಂದ ಒಂದು ಎಕರೆಗೆ ೧೦೦ ಟನ್ ಬೆಳೆದ ನೂರಾರು ಉದಾಹರಣೆಗಳಿವೆ. ರೈತರು ಹೆಚ್ಚಿನ…
