ಸಿಂದಗಿ: ಈ ಬಾರಿ ರಾಜ್ಯದಲ್ಲಿ ಭರದ ಛಾಯೆ ಮೂಡಿದೆ. ದನ ಕರುಗಳಿಗೆ ಮೇವಿನ ಅವಶ್ಯಕತೆಯಿದೆ ಎಂದು ಶ್ರೀ ಸಂಗಮೇಶ್ವರ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘದ ಅಧ್ಯಕ್ಷ ಶರದ ನಾಡಗೌಡ ಹೇಳಿದರು.
ಪಟ್ಟಣದ ಸಂಗಮೇಶ್ವರ ದೇವಾಸ್ಥಾನ ಹಿಂದುಗಡೆ ಇರುವ ಶ್ರೀಕೃಷ್ಣಾ ಗೋರಕ್ಷಾ ಕೇಂದ್ರಕ್ಕೆ ಮೇವು ದೇಣಿಗೆ ನೀಡಿ ಮಾತನಾಡಿದ ಅವರು, ಈ ಬಾರಿ ಭೀಕರ ಬರಗಾಲ ಎದುರಾಗಿದೆ. ಮಾನವನಿಗೆ ಮಾತನಾಡಲೂ ಬಾಯಿ ಇದೆ. ಆದರೆ ಮುಖ ಪ್ರಾಣಿಗಳಿಗೆ ಹೇಳಲು ಬಾಯಿಲ್ಲ. ಅವುಗಳಿಗೆ ಮೇವು ದೇಣಿಗೆ ನೀಡುವುದು ನಮ್ಮ ಕರ್ತವ್ಯ. ಇರುವವರು ಆದಷ್ಟೂ ಮೇವು ದೇಣಿಗೆ ನೀಡಿ ಗೋವುಗಳನ್ನು ಸಂರಕ್ಷಿಸಿ ಎಂದರು.
ಈ ವೇಳೆ ಶ್ರೀಕೃಷ್ಣಾ ಗೋರಕ್ಷಾ ಕೇಂದ್ರ ಸಂಚಾಲಕ ರಾಕೇಶ ಮಠ, ಸಂಘದ ಉಪಾಧ್ಯಕ್ಷ ಡಾ.ಗಿರೀಶ ಕುಲಕರ್ಣಿ, ಕಾರ್ಯದರ್ಶಿ ಮುತ್ತು ಪಟ್ಟಣಶೆಟ್ಟಿ, ಸದಸ್ಯರಾದ ರಾಜೀವ ಬೈರಿ, ಡಾ.ಸುನೀಲ ಪಾಟೀಲ, ಅನೀಲ ಪಟ್ಟಣಶೆಟ್ಟಿ, ಶಿವು ವಾರದ, ನವೀನ ಶಹಾಪೂರ, ಪ್ರಕಾಶ ಹಿರೇಕುರುಬರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

